ನವದೆಹಲಿ(ಫೆ.16): ರೆನಾಲ್ಟ್ ಡಸ್ಟರ್(Renault Duster) ಕಾರು ಭಾರತದಲ್ಲಿ ಅತ್ಯಂತ ಜನಪ್ರಿಯ ಕಾರಾಗಿದೆ. ಭಾರತದಲ್ಲಿ SUV ಕಾರುಗಳ ಟ್ರೆಂಡ್ ಹೆಚ್ಚಿಸಿದ, ಪ್ರತಿಯೊಬ್ಬರು SUV ಕಾರಿನತ್ತ ತಿರುಗಿನೋಡುವಂತೆ ಮಾಡಿದ ಕಾರು ರೆನಾಲ್ಟ್ ಡಸ್ಟರ್. 2012ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಡಸ್ಟರ್ ಮಾರಾಟದಲ್ಲಿ ಹಲವು ದಾಖಲೆ ಬರೆದಿದೆ. ಹಲವು ಅಪ್‌ಗ್ರೇಡ್‌ಗಳೊಂದಿಗೆ ಕಾರು ಬಿಡುಗಡೆಯಾಗುತ್ತಲೇ ಬಂದಿದೆ. ಇದೀಗ ಸರಿಸುಮಾರು ಒಂದು ದಶಕಗಳ ಬಳಿಕ ಡಸ್ಟರ್ ಕಾರು ಭಾರತದಲ್ಲಿ ಉತ್ಪಾದನೆ(Production) ಸ್ಥಗಿತಗೊಳಿಸಿದೆ.
ಡಸ್ಟರ್ ಕಾರಿನ(Duster Car sales Slump) ಬೇಡಿಕೆ ಕಡಿಮೆಯಾಗಿರುವುದೇ ಉತ್ಪಾದನೆ ಸ್ಥಗಿತಕ್ಕೆ ಕಾರಣವಾಗಿದೆ. ಜನವರಿ 2022ರಲ್ಲಿ ರೆನಾಲ್ಟ್ ಒಂದೇ ಒಂದು ಕಾರು ಮಾರಟವಾಗಿಲ್ಲ. ಇಷ್ಟೇ ಅಲ್ಲ ಬುಕಿಂಗ್ ಕೂಡ ಪಾತಾಳಕ್ಕಿಳಿದಿದೆ. ಇದೀಗ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ SUV ಕಾರುಗಳು ಮಾರುಕಟ್ಟೆಯಲ್ಲಿ(Car Market) ಲಭ್ಯವಿದೆ. ಪೈಪೋಟಿ ಹೆಚ್ಚಾಗಿದೆ. ಹೀಗಾಗಿ ಡಸ್ಟರ್ ಖರೀದಿಗೆ ಯಾರೂ ಮುಂದಾಗುತ್ತಿಲ್ಲ. ಪರಿಣಾಮ ಭಾರತದಲ್ಲಿ ರೆನಾಲ್ಟ್ ಡಸ್ಟರ್ ಕಾರಿನ ಉತ್ಪಾದನೆಯನ್ನು ರೆನಾಲ್ಟ್ ಸ್ಥಗಿತಗೊಳಿಸಿದೆ.
undefined
Renault India Milestone: 8 ಲಕ್ಷ ವಾಹನಗಳ ಮಾರಾಟದ ಮೈಲಿಗಲ್ಲು ತಲುಪಿದ ರೆನಾಲ್ಟ್ ಇಂಡಿಯಾ!
ಭಾರತದಲ್ಲಿ ಡಸ್ಟರ್ ಕಾರು ಜುಲೈ 2021ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಬಳಿಕ ಕಾಲಕ್ಕೆ ತಕ್ಕಂತೆ ಡಸ್ಟರ್ ಅಪ್‌ಗ್ರೇಡ್ ಆಗಿದೆ. 1.3 ಲೀಟರ್ ಟರ್ಬೋ ಎಂಜಿನ್ ವರ್ಶನ್ ಕೂಡ ಬಿಡುಗಡೆಯಾಗಿದೆ. ಎರಡು ಎಂಜಿನ್ ವೇರಿಯೆಂಟ್, ಇದರಲ್ಲಿ 7 ಟ್ರಿಮ್ ವೇರಿಯೆಂಟ್ ಹಾಗೂ 3 ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಡಸ್ಟರ್ ಕಾರು ಲಭ್ಯವಿದೆ.
2012ರಲ್ಲಿ ಬಿಡುದಡೆಯಾದ ಮೊದಲ ವರ್ಷ 40,000 ಡಸ್ಟರ್ ಕಾರು ಮಾರಾಟವಾಗಿತ್ತು. 2014ರಲ್ಲಿ ಅಂದರೆ ಬಿಡುಗಡೆಯಾದ ಎರಡನೇ ವರ್ಷದಲ್ಲಿ ಡಸ್ಟರ್ 1 ಲಕ್ಷ ಮಾರಾಟ ದಾಖಲೆ ಕಂಡಿತ್ತು. 2016ರಲ್ಲಿ ಡಸ್ಟರ್ ಕಾರನ್ನು ಎಎಂಟಿ ಟ್ರಾನ್ಸ್‌ಮಿಶನ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಯಿತು. 2020ರಲ್ಲಿ ರೆನಾಲ್ಟ್ ಡಸ್ಟರ್ ಡೀಸೆಲ್ ಎಂಜಿನ್ ಕಾರು ಸ್ಥಗಿತಗೊಳಿಸಲಾಯಿತು. BS6 ನಿಯಮ ಜಾರಿಗೆ ಬಂದ ಹಿನ್ನಲೆಯಲ್ಲಿ ಡಸ್ಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಕೇವಲ ಪೆಟ್ರೋಲ್ ಎಂಜಿನ್ ಕಾರು ಉಳಿಸಿಕೊಂಡಿತು.
ಭಾರತದಲ್ಲಿ ಓಟ ನಿಲ್ಲಿಸಿದ ರೆನಾಲ್ಟ್ ಡಸ್ಟರ್ 85PS ಕಾರು!
1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ಉಳಿಸಿಕೊಂಡಿದ್ದ ಡಸ್ಟರ್ ಬಳಿಕ 1.3 ಲೀಟರ್ ಟರ್ಬೋ ಎಂಜಿನ್ ಆಯ್ಕೆಯನ್ನು ನೀಡಿತು. ಹೊಸತನಗಳನ್ನು ಮೈಗೂಡಿಸಿಕೊಂಡರೂ ಭಾರತದಲ್ಲಿ ಡಸ್ಟರ್ ತನ್ನ ಮೊದಲಿನ ಬೇಡಿಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಸರಿಸುಮಾರು 9 ವರ್ಷಗಳಲ್ಲಿ ಡಸ್ಟರ್ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡಿತು. ಭಾರತದ ಬಹುತೇಕ ಶೋ ರೂಂಗಳಲ್ಲಿ, ಡೀಲರ್‌ಗಳಲ್ಲಿ ಡಸ್ಟರ್ ಕಾರಿನ ಬುಕಿಂಗ್ ಕಾಣದೆ ಕೆಲ ತಿಂಗಳುಗಳೇ ಉರುಳಿದೆ.
ಇದೇ ಕಾರಣಕ್ಕೆ ಡಸ್ಟರ್ ಉತ್ಪಾದನೆ ಸ್ಥಗಿತಗೊಂಡಿದೆ. ಇದೀಗ ರೆನಾಲ್ಟ್ ಭಾರತದಲ್ಲಿ ಮಿಡ್ ಸೈಜ್ SUV ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ನೂತನ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಈ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಮತ್ತೆ ಅಧಿಪತ್ಯ ಸಾಧಿಸಲು ಪ್ಲಾನ್ ಹಾಕಿಕೊಂಡಿದೆ.
ರೆನಾಲ್ಟ್ ಈಗಾಗಲೇ ರೆನಾಲ್ಟ್ ಕಿಗರ್ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಿ ಯಶಸ್ಸು ಸಾಧಿಸಿದೆ. ರೆನಾಲ್ಟ್ ಕ್ವಿಡ್ ಕಾರಿನ ಬಳಿಕ ರೆನಾಲ್ಟ್ ಕಿಗರ್ ಕಾರು ಒಂದು ಹಂತಕ್ಕೆ ಯಶಸ್ಸು ತಂದುಕೊಟ್ಟಿದೆ. ಹೀಗಾಗಿ ಇತರ ಕಾರುಗಳಗಳ ಜೊತೆ ಪೈಪೋಟಿ ನೀಡಲು ರೆನಾಲ್ಟ್ ಹೊಸ ಕಾರಿನೊಂದಿಗೆ ಭಾರತದಲ್ಲಿ ಮತ್ತೆ ಸಂಚಲನ ಮೂಡಿಸಲು ಸಜ್ಜಾಗಿದೆ. 5 ವಿಚಾರಗಳನ್ನು ಮುಂದಿಟ್ಟುಕೊಂಡು ರೆನಾಲ್ಟ್ ಹೊಸ ಕಾರನ್ನು ಉತ್ಪಾದಿಸಲು ಮುಂದಾಗಿದೆ. ಅತ್ಯಂತ ಆಕರ್ಕ ವಿನ್ಯಾಸ, ಗರಿಷ್ಠ ಸುರಕ್ಷತೆ , ಮೈಲೇಜ್ ಜೊತೆಗೆ ಪರ್ಫಾಮೆನ್ಸ್ ಈ ವಿಚಾರಗಳನ್ನು ಮುಂದಿಟ್ಟು ಹೊಸ ಕಾರು ಬಿಡುಗಡೆ ತಯಾರಿ ನಡೆಸಿದೆ