Tata Offers ಟಾಟಾ ಮೋಟಾರ್ಸ್ ಆಯ್ದ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್, ಖರೀದಿ ಮತ್ತಷ್ಟು ಸುಲಭ!

Published : Feb 15, 2022, 06:35 PM ISTUpdated : Feb 15, 2022, 06:36 PM IST
Tata Offers ಟಾಟಾ ಮೋಟಾರ್ಸ್ ಆಯ್ದ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್, ಖರೀದಿ ಮತ್ತಷ್ಟು ಸುಲಭ!

ಸಾರಾಂಶ

ಟಾಟಾ ಸಫಾರಿ, ಹ್ಯಾರಿಯರ್, ನೆಕ್ಸಾನ್ ಕಾರಿಗೆ ಡಿಸ್ಕೌಂಟ್ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ಹಲವು ಆಫರ್ ಘೋಷಿಸಿದ ಟಾಟಾ ಟಾಟಾ ಆಫರ್ ಫೆಬ್ರವರಿ ತಿಂಗಳಿಗೆ ಮಾತ್ರ ಅನ್ವಯ

ನವದೆಹಲಿ(ಫೆ.15):  ಭಾರತದಲ್ಲಿ ಟಾಟಾ ಮೋಟಾರ್ಸ್ ಕಾರುಗಳ(Tata Motots Cars)  ಬೇಡಿಕೆ ಹೆಚ್ಚಾಗಿದೆ. ಕೈಗೆಟುಕುವ ದರ, 5 ಸ್ಟಾರ್ ಸೇಫ್ಟಿ, ಆಕರ್ಷಕ ವಿನ್ಯಾಸ, ಅತ್ಯುತ್ತಮ ಪರ್ಫಾಮೆನ್ಸ್ ಕಾರುಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ಮಾರಾಟದಲ್ಲೂ(Car Sales) ಹೊಸ ದಾಖಲೆ ಬರೆದಿದೆ. ಇದೀಗ ಫೇಸ್‌ಲಿಫ್ಟ್, ಡಾರ್ಕ್ ಎಡಿಶನ್, ಇವಿ ಸೇರಿದಂತೆ ಹೊಸ ಕಾರುಗಳ ಬಿಡುಗಡೆಗೆ ಟಾಟಾ ತಯಾರಿ ನಡೆಸಿದೆ. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್ ಆಯ್ದ ಕಾರುಗಳ ಮೇಲೆ ಡಿಸ್ಕೌಂಟ್ ಆಫರ್(Discounts Offers) ಆಘೋಷಿಸಿದೆ.

ಟಾಟಾ ಹ್ಯಾರಿಯರ್, ಟಾಟಾ ಸಫಾರಿ ಹಾಗೂ ಟಾಟಾ ನೆಕ್ಸಾನ್, ಟಾಟಾ ಟಿಯಾಗೋ, ಟಾಟಾ ಟಿಗೋರ್ ಕಾರಿನ ಮೇಲೆ ಡಿಸ್ಕೌಂಟ್ ಆಫರ್ ನೀಡಿದೆ. ಆದರೆ ಟಾಟಾ ಅಲ್ಟ್ರೋಜ್ ಹಾಗೂ ಟಾಟಾ ಪಂಚ್ ಕಾರಿನ ಮೇಲೆ ಆಫರ್ ಅನ್ವಯವಾಗುವುದಿಲ್ಲ. ಟಾಟಾ ಘೋಷಿಸಿದ ಆಫರ್‌, ಕ್ಯಾಶ್ ಡಿಸ್ಕೌಂಟ್, ಕಾರ್ಪೋರೇಟ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನ್ಸ ಸೇರಿವೆ.

IPL Auction 2022: ಟಾಟಾ ಪಂಚ್‌ ಕಾಝಿರಂಗ ಎಸ್‌ಯುವಿ ಹರಾಜು!

ಟಾಟಾ ಟಿಗೋರ್ ಹಾಗೂ ಟಿಯಾಗೋ(Tata Tiago and Tigor) ಕಾರಿಗೆ ಒಟ್ಟು 10,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದು ನಗದು ಡಿಸ್ಕೌಂಟ್ ಹಾಗೂ ಎಕ್ಸ್‌ಚೇಂಜ್ ಬೋನಸ್ ಒಳಗೊಂಡಿದೆ. ಆರೋಗ್ಯ ಕಾರ್ಯಕರ್ತರಿಗೆ 3,000 ರೂಪಾಯಿ ವಿಶೇಷ ಡಿಸ್ಕೌಂಟ್ ಆಫರ್ ನೀಡಿದೆ.

ಎಲ್ಲೀ ಡೀಸೆಲ್ ವೇರಿಯೆಂಟ್ ನೆಕ್ಸಾನ್ ಕಾರಿಗೆ ಒಟ್ಟು 15,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಈ ಆಫರ್ ನೆಕ್ಸಾನ್ ಡಾರ್ಕ್ ಎಡಿಶನ್ ಕಾರಿಗೆ  ಅನ್ವಯವಾಗುವುದಿಲ್ಲ. ಡೀಸೆಲ್ ವೇರಿಯೆಂಟ್ ನೆಕ್ಸಾನ್ ಖರೀದಿಸುವ ಹೆಲ್ತ್ ಕೇರ್ ವರ್ಕರ್ಸ್‌ಗೆ 5,000 ರೂಪಾಯಿ ವಿಶೇಷ ಡಿಸ್ಕೌಂಟ್ ಹಾಗೂ ಪೆಟ್ರೋಲ್ ನೆಕ್ಸಾನ್ ವೇರಿಯೆಂಟ್ ಖರೀದಿಸುವ ಆರೋಗ್ಯ ಕಾರ್ಯಕರ್ತರಿಗೆ 3,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

Upcoming Car ಪಂಚ್ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೆ ಟಾಟಾ ತಯಾರಿ, ಕಡಿಮೆ ಬೆಲೆಗೆ EV ಕನಸು ನನಸು!

ನೆಕ್ಸಾನ್ ಡೀಸೆಲ್ ವೇರಿಯೆಂಟ್ ಕಾರು 1.5 ಲೀಟರ್ ಎಂಜಿನ್ ಹೊಂದಿದೆ. 108bhp ಪವರ್ ಹಾಗೂ 260Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ AMT ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ.

ಟಾಟಾ ಹ್ಯಾರಿಯರ್ ಹಾಗೂ ಟಾಟಾ ಸಫಾರಿ ಕಾರಿಗೆ ಗರಿಷ್ಠ ಡಿಸ್ಕೌಂಟ್ ನೀಡಲಾಗಿದೆ. ಸಫಾರಿ ಹಾಗೂ ಹ್ಯಾರಿಯರ್ ಕಾರಿಗೆ ಒಟ್ಟು 40,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಹ್ಯಾರಿಯರ್ ಹಾಗೂ ಸಫಾರಿ ಎಲ್ಲಾ ವೇರಿಯೆಂಟ್ ಕಾರುಗಳಿಗೆ ಅನ್ವಯವಾಗಲಿದೆ. ಗ್ರಾಮೀಣ ಭಾಗದಲ್ಲಿ ಹ್ಯಾರಿಯರ್ ಹಾಗೂ ಸಫಾರಿ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿಯಾಗಿ 5,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಟಾಟಾ ಘೋಷಿಸಿರುವ ಈ ಆಫರ್ ಫೆಬ್ರವರಿ ತಿಂಗಳಿಗೆ ಮಾತ್ರ ಅನ್ವಯವಾಗಲಿದೆ. 

Tata Car sales ಒಂದು ತಿಂಗಳಲ್ಲಿ 3,000 ಟಾಟಾ CNG ಕಾರು ಮಾರಾಟ, ಹೊಸ ದಾಖಲೆ!

ವಿಶೇಷ ಸೂಚನೆ: ಆಫರ್ ರಾಜ್ಯದಿಂದ ರಾಜ್ಯಕ್ಕೆ ನಗರ, ಪಟ್ಟಣಗಳಲ್ಲಿ ಬದಲಾಗಲಿದೆ. ಸದ್ಯ ನೀಡಿರುವ ಆಫರ್ ಡೀಲರ್‌ ಬಳಿ ಸ್ಟಾಕ್ ಮುಗಿಯುವ ವರೆಗೆ ಅಥವಾ ಫೆಬ್ರವರಿ 28ರ ವರೆಗೆ ಇರಲಿದೆ. ಹೀಗಾಗಿ ಆಫರ್ ಕುರಿತು ಸಮೀಪದ ಡೀಲರ್‌ಬಳಿ ಮಾಹಿತಿ ಖಚಿತಪಡಿಸಿಕೊಳ್ಳಿ.

ಟಾಟಾ ಮೋಟಾರ್ಸ್ ಕಾರಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಇದೀಗ ಕಾಯುವಿಕೆ ಸಮಯ ಕೂಡ ಹೆಚ್ಚಾಗಿದೆ. ಟಾಟಾ ನೆಕ್ಸಾನ್ ಹಾಗೂ ಟಾಟಾ ಪಂಚ್ ಕಾರಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಜನವರಿ ತಿಂಗಳಲ್ಲಿ ಟಾಟಾ ಮೋಟಾರ್ಸ್ 47,000 ಕಾರುಗಳನ್ನು ಮಾರಾಟ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಇನ್ನು 2021ರ ಡಿಸೆಂಬರ್ ತಿಂಗಳಲ್ಲಿ ಟಾಟಾ ಮಾರಾಟದಲ್ಲಿ ಹ್ಯುಂಡೈ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಹ್ಯುಂಡೈ 3ನೇ ಸ್ಥಾನಕ್ಕೆ ಕುಸಿದಿತ್ತು.

PREV
Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ