2024ರಲ್ಲಿ ಗರಿಷ್ಠ ಮಾರಾಟವಾದ ಸೆಕೆಂಡ್‌ ಹ್ಯಾಂಡ್‌ ಕಾರು ಯಾವುದು?

Published : Jan 14, 2025, 04:38 PM ISTUpdated : Jan 14, 2025, 04:44 PM IST
2024ರಲ್ಲಿ ಗರಿಷ್ಠ ಮಾರಾಟವಾದ ಸೆಕೆಂಡ್‌ ಹ್ಯಾಂಡ್‌ ಕಾರು ಯಾವುದು?

ಸಾರಾಂಶ

ಯೂಸ್ಡ್ ಕಾರ್ ಮಾರ್ಕೆಟ್ ನಲ್ಲಿ ರೆನಾಲ್ಟ್‌ ಕ್ವಿಡ್ ಮೊದಲ ಸ್ಥಾನ ಪಡೆದಿದೆ. ಸ್ಪಿನ್ನಿ 2024ರ ವರದಿಯ ಪ್ರಕಾರ, ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರ್ಯಾಂಡ್ ಐ10 ಗಳನ್ನು ಹಿಂದಿಕ್ಕಿ ಕ್ವಿಡ್ ಮುನ್ನಡೆ ಸಾಧಿಸಿದೆ. ಬಳಕೆದಾರರು ಹೋಂಡಾ, ಮಾರುತಿ ಮತ್ತು ಹ್ಯುಂಡೈ ಕಾರುಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂದು ವರದಿ ತಿಳಿಸಿದೆ.

ಬೆಂಗಳೂರು (ಜ.14): ಭಾರತದ ಯೂಸ್ಡ್ ಕಾರ್ ಮಾರ್ಕೆಟ್ ನಲ್ಲಿ ರೆನಾಲ್ಟ್‌ ಕ್ವಿಡ್ ಮೊದಲ ಸ್ಥಾನ ಪಡೆದಿದೆ. ಸ್ಪಿನ್ನಿ 2024ರ ವರದಿಯ ಪ್ರಕಾರ, ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರ್ಯಾಂಡ್ ಐ10 ಗಳನ್ನು ಹಿಂದಿಕ್ಕಿ ಕ್ವಿಡ್ ಮುನ್ನಡೆ ಸಾಧಿಸಿದೆ. ಬಳಕೆದಾರರು ಹೋಂಡಾ, ಮಾರುತಿ ಮತ್ತು ಹ್ಯುಂಡೈ ಕಾರುಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂದು ವರದಿ ತಿಳಿಸಿದೆ. ಕಾಂಪ್ಯಾಕ್ಟ್ ಗಾತ್ರ ಮತ್ತು ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಹ್ಯಾಚ್ ಬ್ಯಾಕ್ ಗಳು ಜನಪ್ರಿಯವಾಗಿವೆ. ಮಾರುಕಟ್ಟೆಯಿಂದ ಹೊರಬಿದ್ದ ಫೋರ್ಡ್ ಇಕೋಸ್ಪೋರ್ಟ್ ನಂತಹ ಕಾಂಪ್ಯಾಕ್ಟ್ ಎಸ್ ಯುವಿಗಳು ಶೇ.20 ಬೆಳವಣಿಗೆ ಕಂಡಿವೆ.

ಯೂಸ್ಡ್ ಕಾರುಗಳ ಮಾರಾಟದಲ್ಲಿ ಬೆಂಗಳೂರು, ದೆಹಲಿ-ಎನ್ ಸಿ ಆರ್ ಮತ್ತು ಹೈದರಾಬಾದ್ ಮುಂಚೂಣಿಯಲ್ಲಿವೆ. ಖರೀದಿದಾರರಲ್ಲಿ ಶೇ. 76 ಮಂದಿ ಮ್ಯಾನುವಲ್ ಕಾರುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಿಳಿ, ಬೂದು ಮತ್ತು ಕೆಂಪು ಬಣ್ಣದ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕಳೆದ ವರ್ಷ ಯೂಸ್ಡ್ ಕಾರ್ ಮಾರುಕಟ್ಟೆಯಲ್ಲಿ ಶೇ.26 ಮಹಿಳೆಯರಿದ್ದರು. ಆಟೋಮ್ಯಾಟಿಕ್ ಹ್ಯಾಚ್ ಬ್ಯಾಕ್ ಗಳ ಮಾರಾಟ ಶೇ.60 ರಷ್ಟಿದೆ. ಶೇ.18 ಮಹಿಳೆಯರು ಕಾಂಪ್ಯಾಕ್ಟ್ ಎಸ್‌ಯುವಿ ಗಳನ್ನು ಖರೀದಿಸಿದ್ದಾರೆ.

ಎಲ್ಲಾ ಕಾರು ಖರೀದಿಗಳಲ್ಲಿ ಶೇ.82 ಪೆಟ್ರೋಲ್, ಶೇ. 12 ಡೀಸೆಲ್, ಶೇ.4 ಸಿ ಎನ್ ಜಿ ಮತ್ತು ಶೇ.2 ಎಲೆಕ್ಟ್ರಿಕ್ ಕಾರುಗಳಾಗಿವೆ. ಯೂಸ್ಡ್ ಕಾರ್ ಮಾರಾಟದಲ್ಲಿ ಬೆಂಗಳೂರು, ದೆಹಲಿ-ಎನ್ ಸಿ ಆರ್ ಮತ್ತು ಹೈದರಾಬಾದ್ ಮುಂಚೂಣಿಯಲ್ಲಿವೆ. ಕಳೆದ ವರ್ಷ ಶೇ.22 ಖರೀದಿದಾರರು ತಮ್ಮ ಕಾರುಗಳನ್ನು ಅಪ್ ಗ್ರೇಡ್ ಮಾಡಿಕೊಂಡಿದ್ದಾರೆ. ಶೇ.56 ಖರೀದಿದಾರರು ಫೈನಾನ್ಸ್ ಆಯ್ಕೆಗಳನ್ನು ಬಳಸಿದ್ದಾರೆ. ಶೇ.60 ಖರೀದಿದಾರರು 25 ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ.

Belagavi: ಸಂಕ್ರಮಣದ ಆಪತ್ತಿನಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾತ ಸ್ಥಳದಲ್ಲಿ ವಾಮಾಚಾರದ ಅನುಮಾನ

ಯೂಸ್ಡ್ ಕಾರ್ ಖರೀದಿದಾರರ ಸರಾಸರಿ ವಯಸ್ಸು 2023 ರಲ್ಲಿ 34 ರಿಂದ 2024 ರಲ್ಲಿ 32 ಕ್ಕೆ ಇಳಿದಿದೆ. ಶೇ.76 ಖರೀದಿದಾರರು ಮೊದಲ ಬಾರಿಗೆ ಕಾರು ಖರೀದಿಸಿದವರಾಗಿದ್ದಾರೆ. ಕಾರು ಮಾಲೀಕತ್ವದಲ್ಲಿ ಒಟ್ಟಾರೆ ಶೇ.4 ಹೆಚ್ಚಳ ಕಂಡುಬಂದಿದೆ, ವಿಶೇಷವಾಗಿ ಯುವ ಖರೀದಿದಾರರಲ್ಲಿ ಈ ಉತ್ಸಾಹ ಕಂಡುಬಂದಿದೆ.

ಮಾರುತಿ ಸ್ವಿಫ್ಟ್ ಕಾರಿಗೆ ಭರ್ಜರಿ ಡಿಸ್ಕೌಂಟ್, ಇದೀಗ ಕೈಗೆಟುಕವ ಬೆಲೆಯಲ್ಲಿ ಜನಪ್ರಿಯ ಕಾರು

PREV
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್