ಕಡಲ ಕಿನಾರೆ ಮರಳಿನಲ್ಲಿ ನಿಂತು ಹೋದ ಫೆರಾರಿ ಕಾರನ್ನು ಸಲೀಸಾಗಿ ಎಳೆದ ಎತ್ತಿನ ಗಾಡಿ!

By Chethan Kumar  |  First Published Dec 31, 2024, 2:58 PM IST

ಹೊಸ ವರ್ಷಾಚರಣೆ ವೇಳೆ ಕಡಲ ಕಿನಾರೆ, ನದಿ ತೀರದಲ್ಲಿ ಪಾರ್ಟಿ ಮಾಡುವ ಹವ್ಯಾಸಗಳು ಹೆಚ್ಚು. ಇದೀಗ ಕಡಲ ಕಿನಾರೆಗೆ ಬಂದ ದುಬಾರಿ ಮೌಲ್ಯದ ಫೆರಾರಿ ಕಾರಿನ ಚಕ್ರಗಳು ಮರಳಿನಲ್ಲಿ ಹೂತು ಹೋಗಿ ನಿಂತು ಬಿಟ್ಟಿದೆ. ಆದರ ಎತ್ತಿನ ಗಾಡಿ ಈ ಫೆರಾರಿ ಕಾರನ್ನು ಸಲೀಸಾಗಿ ಎಳೆದ ವಿಡಿಯೋ ಸಂಚಲನ ಸೃಷ್ಟಿಸಿದೆ.


ಬೀಚ್‌ನಲ್ಲಿ ಎಂಜಾಯ್ ಮಾಡಲು ತೆರಳುವ ಬಹುತೇಕರು ಕಡಲ ಕಿನಾರೆಗೆ ವಾಹನ ತೆಗೆದುಕೊಂಡು ಹೋಗುತ್ತಾರೆ. ಹಲವು ಕಡೆ ನಿರ್ಬಂಧ ವಿಧಿಸಲಾಗಿದೆ. ಆದರೂ ಪ್ರವಾಸಿಗರು ಕಡಲ ಕಿನಾರೆ ವರೆಗೆ ಕಾರಿನಲ್ಲಿ ತೆರಳಿ ಬಳಿಕ ಮಸ್ತಿ ಮಾಡುವ ದೃಶ್ಯಗಳು ಹೊಸದೇನಲ್ಲ. ಹೀಗೆ ಮಸ್ತಿ ಮಾಡಲು ಬೀಚ್‌ಗೆ ಬಂದ ಗುಂಪೊಂದು ನೇರವಾಗಿ ಕಾರನ್ನು ಕಡಲ ಕಿನಾರೆಗೆ ತಂದಿದೆ. ಆದರೆ ಮರಳಿನಿಂದ ಕೂಡಿದ ತೀರ ಪ್ರದೇಶದಲ್ಲಿ ಕಾರು ಮುಂದಕ್ಕೆ ಚಲಿಸದೆ ನಿಂತು ಬಿಟ್ಟಿದೆ. ಮರಳಿನಲ್ಲಿ ಚಕ್ರಗಳು ಹೂತು ಹೋಗಿದೆ. ಆದರೆ ಈ ಕಾರನ್ನು ಪಕ್ಕದಲ್ಲಿ ಸಾಗುತ್ತಿದ್ದ ಎತ್ತಿನ ಗಾಡಿ ಸಲಿಸಾಗಿ ಎಳೆದ ದೃಶ್ಯ ವೈರಲ್ ಆಗಿದೆ.

ಮುಂಬೈನ ಅಲಿಬಾಗ್ ಬೀಚ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮರಳಿನಲ್ಲಿ ಫೆರಾರಿ ಕ್ಯಾಲಿಫೋರ್ನಿಯಾ ಟಿ ಕಾರಿನ ಚಕ್ರಗಳು ಬಹುಚೇಕ ಹೂತು ಹೋಗಿದೆ. ಇದರಿಂದ ಫೆರಾರಿ ಕಾರು ಮುಂದಕ್ಕೆ ಚಲಿಸಲು ಸಾಧ್ಯವಾಗಿಲ್ಲ. ಯವಕರ ಗುಂಪು ಅದೆಷ್ಟೆ ಪ್ರಯತ್ನಿಸಿದರೂ ಫೆರಾರಿ ಕಾರನ್ನು ಮರಳಿನಿಂದ ಹೊರತೆಗೆಯಲು ಸಾಧ್ಯವಾಗಲಿಲ್ಲ.ಕಾರು ಸ್ಟಾರ್ಟ್ ಮಾಡಿ ಇನ್ನುಳಿದ ಯುವಕರು ತಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಇವರ ಯಾವ ಪ್ರಯತ್ನಗಳು ಕೈಗೂಡಲಿಲ್ಲ.

Tap to resize

Latest Videos

ಸಮುದ್ರ ತೀರದಲ್ಲಿ ಯೋಗ ಮಾಡುತ್ತಿದ್ದ ಖ್ಯಾತ ನಟಿ ದುರಂತ ಅಂತ್ಯ, ದೈತ್ಯ ಅಲೆಗೆ ಬಲಿ!

ಇದೇ ವೇಳೆ ಬೀಚ್ ತೀರದಲ್ಲಿ ಸಾಗಿದ ಎತ್ತಿನ ಗಾಡಿಯಲ್ಲಿ ಮನವಿ ಮಾಡಿದ್ದಾರೆ. ಎತ್ತಿನ ಗಾಡಿಯದಲ್ಲಿ ಹಗ್ಗವನ್ನು ಫೆರಾರಿ ಕಾರಿಗೆ ಕಟ್ಟಲಾಗಿದೆ. ಎರಡು ಎತ್ತುಗಳು ದುಬಾರಿ ಮೌಲ್ಯದ ಫೆರಾರಿ ಕ್ಯಾಲಿಫೋರ್ನಿಯಾ ಟಿ ಕಾರನ್ನು ಸಲೀಸಾಗಿ ಎಳದಿದೆ. ಕಾರನ್ನು ಮರಳಿನ ತಟದಿಂದ ಎಳೆದುಕೊಂಡು ಹೋಗಿ ರಸ್ತೆವರೆಗೆ ತಂದು ಬಿಟ್ಟಿದೆ. ಎತ್ತಿನ ಗಾಡಿಗೆ ಹಗ್ಗ ಕಟ್ಟಿದ ಬಳಿಕ ಫೆರಾರಿ ಕಾರನ್ನು ಸ್ಟಾರ್ಟ್ ಮಾಡಲಾಗಿದೆ. ಬಳಿಕ ಎಳೆಯುವ ಪ್ರಯತ್ನ ಮಾಡಲಾಗಿದೆ. ಎತ್ತಿನ ಗಾಡಿ ಸಹಾಯದಿಂದ ಫೆರಾರಿ ಕಾರು ಸಂಕಷ್ಟದಿಂದ ಪಾರಾಗಿದೆ.

ಬೀಚ್ ತೀರ ಪ್ರದೇಶದಲ್ಲಿ ಪ್ರವಾಸಿಗರು ಇದೇ ರೀತಿ ವಾಹನ ತಂದು ಸಿಲುಕಿಕೊಂಡ ಘಟನೆಗೆಳು ಪದೇ ಪದೇ ನಡೆಯುತ್ತಿದೆ. ರಸ್ತೆ ಮೇಲಿನ ಸಾಮರ್ಥ್ಯವನ್ನು ಪರಿಗಣಿಸಿ, ಮರಳು, ಆಫ್ ರೋಡ್‌ಗಳಲ್ಲಿ ವಾಹನ ಪರೀಕ್ಷಿಸಬಾರದು. ಪ್ರಮುಖವಾಗಿ ಕಡಲ ಕಿನಾರೆಯಲ್ಲಿ ವಾಹನ ಸಿಲುಕಿಕೊಂಡರೆ ಅಪಾಯವೂ ಹಚ್ಚು. ಇದೇ ಕಾರಣದಿಂದ ಬೀಚ್ ತೀರ ಪ್ರದೇಶಕ್ಕೆ ವಾಹನ ಪ್ರವೇಶ ನಿರ್ಬಂಧಿಸಲಾಗುತ್ತದೆ.   ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಇದು ಫೆರಾರಿ ಕಾರು ಹಾಗೂ ಭಾರತದ ಅಸಲಿ ಲ್ಯಾಂಬೋರ್ಗಿನಿಯ ಸಮರ. ಇಲ್ಲಿ ಅಸಲಿ ಲ್ಯಾಂಬೋರ್ಗಿನಿ ಗೆದ್ದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

 

मुंबईतून दोन पर्यटक फेरारी कंपनीची कार घेऊन अलिबागला सहलीसाठी आले होते. रेवदांडा समुद्र किनाऱ्यावर ही गाडी वाळूत रुतली. यावेळी समुद्र किनाऱ्यावर एकजण बैलगाडी हाकत जात होता. फेरारी गाडीला दोर लावून बैलगाडीला बांधण्यात आले. बैलांनी फेरारीला ओढून वाळूतून अलगद बाहेर काढले. pic.twitter.com/Xugy6r6p4R

— LoksattaLive (@LoksattaLive)

 

ಈ ವಿಡಿಯೋದಲ್ಲಿ ಫೆರಾರಿ  ಮರಳಿನಲ್ಲಿ ಸಿಲುಕಿದ್ದು ಮಾತ್ರವಲ್ಲ, ವಿಡಿಯೋ ಕೊನೆಯಲ್ಲಿ ಕೆಲ ವಾಹನಗಳು ಕಡಲ ತೆರೆ ಅಪ್ಪಳಿಸುವ ಜಾಗದಲ್ಲಿ ನಿಲ್ಲಿಸಲಾಗಿದೆ. ಇದು ಕೂಡ ಅತ್ಯಂತ ಅಪಾಯಕಾರಿಯಾಗಿದೆ. ಕಡಲ ತೀರ ಪ್ರದೇಶಕ್ಕೆ ವಾಹನ ಕೊಂಡೊಯ್ಯುವುದು ಅಪಾಯಕಾರಿಯಾಗಿದೆ. ವಾಹನ ಚಲಾಯಿಸುವಾಗ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ವಾಹನಗಳು ಮರಳಿನಡಿಯಲ್ಲಿ ಸಿಲುಕಿಕೊಳ್ಳುತ್ತದೆ. ಇಷ್ಟೇ ಅಲ್ಲ ಮರಳಿನ ಮೇಲೆ ಮಲಗಿ ವಿಶ್ರಾಂತಿ ಪಡೆಯುವವರ ಸಂಖ್ಯೆ ಹೆಚ್ಚಿರುತ್ತದೆ. ಇನ್ನು ಮಕ್ಕಳು ಸೇರಿದಂತೆ ಹಲವು ಆಟವಾಡುತ್ತಿರುತ್ತಾರೆ. ಇದರ ನಡುವೆ ವಾಹನ ಕೊಂಡೊಯ್ದರೆ ಅಪಾಯದ ತೀವ್ರತೆಯೂ ಹೆಚ್ಚಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಹಲವು ಕಡೆ ಬೀಚ್ ತೀರದಲ್ಲಿ ವಾಹನ ಪ್ರವೇಶ ನಿರ್ಬಂಧಿಸಲಾಗುತ್ತದೆ. 

ಇನ್ನು ಸಮುದ್ರದ ಉಪ್ಪು ನೀರಿ ವಾಹನ ಬಿಡಿ ಬಾಗಗಳನ್ನು ನಾಶ ಮಾಡುತ್ತದೆ. ಹೀಗಾಗಿ ಜನರು ಹಾಗೂ ವಾಹನ ಸುರಕ್ಷತೆ ದೃಷ್ಟಿಯಿಂದ ವಾಹನವನ್ನು ಪಾರ್ಕಿಂಗ್ ಸ್ಥಳ ಅಥವಾ ತೀರ ಪ್ರದೇಶದಿಂದ ಕೆಲ ದೂರದಲ್ಲಿ ಬಿಟ್ಟು ಸಮುದ್ರ ಕಿನಾರೆಯನ್ನು ಆನಂದಿಸುವುದು ಉತ್ತಮ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಥಾಯ್ಲೆಂಡ್ ಬೀಚ್‌ನಲ್ಲಿ ಎಂಎಸ್ ಧೋನಿ ಮಸ್ತಿ, ಸಿಎಸ್‌ಕೆ ರಿಟೇನ್ ಬೆನ್ನಲ್ಲೇ ಫ್ಯಾಮಿಲಿ ಜೊತೆ ಟ್ರಿಪ್!

click me!