ಇದೇ ಮೊದಲ ಬಾರಿಗೆ ಟಾಟಾ ಹ್ಯಾರಿಯರ್ ಕಾರಿನಲ್ಲಿ ರತನ್ ಟಾಟಾ ಪ್ರಯಾಣ, ವಿಡಿಯೋ ವೈರಲ್!

By Suvarna News  |  First Published Jul 30, 2023, 3:19 PM IST

ಭಾರತದ ಶ್ರೀಮಂತ ಉದ್ಯಮಿ ರತನ್ ಟಾಟಾ, ಕೋಟ್ಯಾಂತರ ಭಾರತೀಯರ ರೋಲ್ ಮಾಡೆಲ್. ಸರಳ ವ್ಯಕ್ತಿತ್ವದ ರತನ್ ಟಾಟಾ ಬಳಿ ಹಲವು ಐಷಾರಾಮಿ ಕಾರುಗಳಿವೆ. ಆದರೆ ರತನ್ ಟಾಟಾಗೆ ನೆಚ್ಚಿನ ನ್ಯಾನೋ ಎಲೆಕ್ಟ್ರಿಕ್ ಕಾರು ಪಂಚಪ್ರಾಣ. ಇದೀಗ ರತನ್ ಟಾಟಾ ಮೊದಲ ಬಾರಿಗೆ ಟಾಟಾ ಹ್ಯಾರಿಯರ್ ಎಸ್‌ಯುವಿಯಲ್ಲಿ ಕಾಣಿಸಿಕೊಂಡಿದ್ದಾರೆ.
 


ಪುಣೆ(ಜು.30) ಭಾರತದಲ್ಲಿ ಟಾಟಾ ಸಾಮ್ರಾಜ್ಯ ಕಟ್ಟಿ ವಿಶ್ವದ ಅತೀ ದೊಡ್ಡ ಉದ್ಯಮವನ್ನಾಗಿಸಿದ ರತನ್ ಟಾಟಾ ಅತ್ಯಂತ ಸರಳ ವ್ಯಕ್ತಿ. ಮಾತು, ವ್ಯಕ್ತಿತ್ವ, ಅವರ ಜೀವನ ಪಯಣ ಕೋಟ್ಯಾಂತರ ಭಾರತೀಯರಿಗೆ ಮಾದರಿಯಾಗಿದೆ. ರತನ್ ಟಾಟಾ ಬಳಿ ಹಲವು ಐಷಾರಾಮಿ ಕಾರುಗಳಿವೆ. ಇತ್ತ ರತನ್ ಟಾಟಾಗೆ ನೆಚ್ಚಿನ ಕಾರು ಎಂದು ನ್ಯಾನೋ. ರತನ್ ಟಾಟಾ ಪ್ರಯಾಣಿಸಲು ಮಾಡಿಫೈ ಮಾಡಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಬಳಸುತ್ತಾರೆ. ಇದೀಗ ರತನ್ ಟಾಟಾ ಮೊದಲ ಬಾರಿಗೆ ಟಾಟಾ ಹ್ಯಾರಿಯರ್ ಎಸ್‌ಯುವಿ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಪುಣೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರತನ್ ಟಾಟಾ ಬಿಳಿ ಬಣ್ಣದ ಟಾಟಾ ಹ್ಯಾರಿಯರ್ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ರತನ್ ಟಾಟಾ ಕರೆದೊಯ್ಯಲು ಹ್ಯಾರಿಯರ್ ಕಾರನ್ನು ತರಲಾಗಿತ್ತು. ಏರ್‌ಪೋರ್ಟ್ ಒಳಗಿನಿಂದ ಹೊರಬರಲು ರತನ್ ಟಾಟಾ ನಿಲ್ದಾಣ ಎಲೆಕ್ಟ್ರಿಕ್ ವಾಹನ ಬಳಸಿದ್ದಾರೆ. ನಿಲ್ದಾಣದ ಹೊರಭಾಗದಲ್ಲಿ ಹ್ಯಾರಿಯರ್ ಕಾರು ನಿಂತಿತ್ತು. ರತನ್ ಟಾಟಾ ಸಿಬ್ಬಂದಿಗಳು ರತನ್ ಟಾಟಾಗೆ ಕಾರು ಹತ್ತಲು ನೆರವು ನೀಡಿದ್ದಾರೆ.

Latest Videos

undefined

 

ಮಳೇಲಿ ಕಾರು ಕೆಳಗೆ ಆಶ್ರಯ ಪಡೆಯೋ ಬೆಕ್ಕು, ನಾಯಿ ಬಗ್ಗೆ ಇರಲಿ ಕಾಳಜಿ, ರತನ್ ಟಾಟಾ ಮನವಿ!

85 ವರ್ಷದ ರತನ್ ಟಾಟಾ ಈಗಲೂ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿದ್ದಾರೆ. ಪ್ರಾಣಿ ಪ್ರೇಮಿ, ಪರಿಸರ ಪ್ರೇಮಿಯಾಗಿರುವ ರತನ್ ಟಾಟಾ ಬೀದಿ ನಾಯಿಗಳ ರಕ್ಷಣೆಗೆ ವಿಶೇಷ ಅಭಿಯಾನ ಮಾಡುತ್ತಿದ್ದಾರೆ. ತಮ್ಮ ಟ್ರಸ್ಟ್ ಮೂಲಕ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಆದಾಯದ ಶೇಕಡಾ 65 ರಷ್ಟು ಭಾಗವನ್ನು ಚಾರಿಟಿಗೆ ದಾನ ಮಾಡಿದ್ದಾರೆ.  ಇದೀಗ ಪುಣೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರತನ್ ಟಾಟಾ, ಹ್ಯಾರಿಯರ್ ಕಾರಿನಲ್ಲಿ ತೆರಳಿದ್ದಾರೆ. ಟಾಟಾ ಕಾರುಗಳ ಪೈಕಿ ಹ್ಯಾರಿಯರ್ ಅತ್ಯಂತ ಯಶಸ್ವಿ ಹಾಗೂ ಭಾರಿ ಬೇಡಿಕೆಯ ಕಾರಾಗಿದೆ. ಸದ್ಯ ಟಾಟಾ ಹ್ಯಾರಿಯರ್ ಬೆಲೆ 15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತದೆ. ಇನ್ನು ಟಾಪ್ ಮಾಡೆಲ್ ಹ್ಯಾರಿಯರ್ ಕಾರಿನ ಬೆಲೆ 24.27 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ). 

2022ರಲ್ಲಿ ರತನ್ ಟಾಟಾಗೆ ಮಾಡಿಫೈ ಮಾಡಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಹಸ್ತಾಂತರಿಸಾಗಿತ್ತು. ಟಾಟಾ ಎಲೆಕ್ಟ್ರಿಕ್ ಮೋಟಾರ್ ‘ಎಲೆಕ್ಟ್ರಾ ಇವಿ’ ವಿಶೇಷವಾಗಿ ನಿರ್ಮಿಸಿದ ಎಲೆಕ್ಟ್ರಿಕ್‌ ಮಾದರಿ ಟಾಟಾ ನ್ಯಾನೋ ಕಾರನ್ನು ರತನ್ ಟಾಟಾ ಬಳಸುತ್ತಿದ್ದಾರೆ.  ಇದು ಈಗಾಗಲೇ ಉತ್ಪಾದನೆ ಸ್ಥಗಿತಗೊಂಡಿರುವ ನ್ಯಾನೋ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಮಾಡಿಫೈ ಮಾಡಲಾಗಿತ್ತು.  ಈ ಕಾರು ನಾಲ್ಕು ಸೀಟುಗಳನ್ನು ಒಳಗೊಂಡಿದ್ದು, 160 ಕಿ.ಮೀ ವೇಗದವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಇದು ಸೂಪರ್‌ ಪಾಲಿಮರ್‌ ಲಿಥಿಯಂ-ಅಯಾನ್‌ ಬ್ಯಾಟರಿಯ ಕಾರಾಗಿದೆ.

 

ರತನ್ ಟಾಟಾ ಡ್ರೀಮ್ ಕಾರ್ ಕೊಂಡಾಡಿದ ಶಾಂತನು ನಾಯ್ಡು, ಭಾವನಾತ್ಮಕ ಪೋಸ್ಟ್ ವೈರಲ್!

ರತನ್ ಟಾಟಾ ಇದೀಗ ಆರೋಗ್ಯ ಕ್ಷೇತ್ರದಲ್ಲಿನ ಸುಧಾರಣೆಗೆ ಕೆಲಸ ಮಾಡುತ್ತಿದ್ದಾರೆ. ಟಾಟಾ ಟ್ರಸ್ಟ್ ಮೂಲಕ ಹಲವು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದೆ. ಅಸ್ಸಾಂನಲ್ಲಿ ಟಾಟಾ ಕ್ಯಾನ್ಸರ್‌ ಕೇರ್‌ ಸೆಂಟರ್‌ ಸ್ಥಾಪಿಸಲಾಗಿದೆ.  7 ಕ್ಯಾನ್ಸರ್‌ ಆಸ್ಪತ್ರೆಗಳನ್ನು 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. 

click me!