Narendra Modi New Car: ಮರ್ಸಿಡೀಸ್ ಮೇಬ್ಯಾಕ್ ಎಸ್ 650ಗೆ 12 ಕೋಟಿ ಅಲ್ಲ, ಕೇವಲ 3 ಕೋಟಿ!

By Suvarna News  |  First Published Dec 30, 2021, 7:26 AM IST

* ಮೋದಿ ಹೊಸ ಕಾರಿಗೆ 12 ಕೋಟಿ ಅಲ್ಲ, ಕೇವಲ 3 ಕೋಟಿ!
*6 ವರ್ಷ ಬಳಸಬೇಕಿದ್ದ ಹಳೆ ಕಾರು 8 ವರ್ಷ ಬಳಸಿದ್ದರು
*ಕಾರಿನ ಸೂಕ್ಷ್ಮ ವಿವರಗಳ ಬಹಿರಂಗ ಚರ್ಚೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ
*ಪ್ರಧಾನಿಗೆ ಕಾರು ನಿರ್ಧರಿಸೋದು ಎಸ್‌ಪಿಜಿ: ಅಧಿಕಾರಿ
 


ನವದೆಹಲಿ(ಡಿ. 30): ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕೇಂದ್ರ ಸರ್ಕಾರ ಹೊಸತಾಗಿ ಖರೀದಿಸಿದ ಮೇಬಾಕ್‌ ಎಸ್‌ 650 ಕಾರುಗಳ (Mercedes-Maybach S 650 Guard) ಬೆಲೆ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ 12 ಕೋಟಿ ರು. ಅಲ್ಲ, ಕೇವಲ 3 ಕೋಟಿ ರು. ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಅಲ್ಲದೆ, ಈ ಹಿಂದೆ ಪ್ರಧಾನಿ ಬಳಸುತ್ತಿದ್ದ ಬಿಎಂಡಬ್ಲ್ಯು ಕಾರಿನ ಉತ್ಪಾದನೆಯನ್ನು ಆ ಕಂಪನಿ ನಿಲ್ಲಿಸಿರುವುದರಿಂದ ಹೊಸ ಮರ್ಸಿಡಿಸ್‌ ಮೇಬಾಕ್‌ ಕಾರು ಖರೀದಿಸಲಾಗಿದೆಯೇ ಹೊರತು, ಕಡಿಮೆ ಬೆಲೆಯ ಕಾರು ಕೈಬಿಟ್ಟು ದುಬಾರಿ ಕಾರು ಖರೀದಿಸಿಲ್ಲ. ಇಷ್ಟಕ್ಕೂ ಪ್ರಧಾನಿ ಯಾವ ಕಾರು ಬಳಸಬೇಕು ಎಂಬುದನ್ನು ಪ್ರಧಾನಿ ನಿರ್ಧರಿಸುವುದಿಲ್ಲ. ಅವರಿಗೆ ಭದ್ರತೆ ನೀಡುವ ಎಸ್‌ಪಿಜಿ ನಿರ್ಧರಿಸುತ್ತದೆ. ಹೊಸ ಕಾರಿನ ಖರೀದಿಯಲ್ಲಿ ಪ್ರಧಾನಿಯ ಪಾತ್ರ ಏನೂ ಇರುವುದಿಲ್ಲ ಎಂದೂ ಮೂಲಗಳು ಹೇಳಿವೆ.

ಬಾಂಬ್‌ ಹಾಕಿದರೂ ಸ್ಫೋಟಿಸದ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯುಳ್ಳ 12 ಕೋಟಿ ರು. ಮೌಲ್ಯದ ಎರಡು ಕಾರುಗಳನ್ನು ಪ್ರಧಾನಿಗಾಗಿ ಖರೀದಿಸಲಾಗಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣ (Social Media) ಹಾಗೂ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಉನ್ನತಾಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.ಇನ್ನು ಇದಕ್ಕೂ ಮುನ್ನ ಮೋದಿ ಬಳಸುತ್ತಿದ್ದ ಕಾರುಗಳೆಂದರೆ, ರೇಂಜ್‌ ರೋವರ್‌ ವೋಗ್‌  (Range Rover Vogue)ಮತ್ತು ಟೊಯೋಟೊ ಲ್ಯಾಂಡ್‌ ಕ್ರೂಸರ್‌ (toyoto land Cruiser). ಮರ್ಸಿಡೀಸ್‌ ಮೇಬ್ಯಾಕ್‌ ಎಸ್‌ 650 ಇದರ ಪರಿಷ್ಕೃತ ಆವೃತ್ತಿಯಾಗಿದೆ. ಮರ್ಸಿಡೀಸ್‌ ಮೇಬ್ಯಾಕ್ ಎಸ್‌ 650 ತನ್ನ ಕಾರುಗಳಲ್ಲಿ ಅತ್ಯುನ್ನತ ಮಟ್ಟದ ಶಸ್ತ್ರಸಜ್ಜಿತ ರಕ್ಷಣೆ ಒದಗಿಸುತ್ತದೆ. ಈ ಸಲೂನ್‌ ಕಾರಿನ ಅಪ್‌ಗ್ರೇಡೆಡ್‌ ಕಿಟಕಿ ಗಾಜುಗಳು ಮತ್ತು ಇತರ ಭಾಗಗಳು ಎಕೆ-47 ರೈಫಲ್‌ ಸೇರಿದಂತೆ ಇತರ ಯಾವುದೇ ಬುಲೆಟ್‌ಗಳನ್ನು ತಡೆಯಬಲ್ಲದು.

Latest Videos

undefined

ಹಳೆ ಕಾರು ಬಳಸುತ್ತಿದ್ದುದಕ್ಕೆ ಆಕ್ಷೇಪ:

ಎಸ್‌ಪಿಜಿ ಭದ್ರತೆ ಪಡೆದಿರುವ ವ್ಯಕ್ತಿಯ ಕಾರುಗಳನ್ನು ಆರು ವರ್ಷಕ್ಕೊಮ್ಮೆ ಬದಲಿಸಬೇಕು. ಆದರೆ, ಮೋದಿ ಎಂಟು ವರ್ಷಗಳ ಹಳೆಯ ಕಾರನ್ನೇ ಬಳಸುತ್ತಿದ್ದರು. ಇದಕ್ಕೆ ಆಡಿಟ್‌ ಆಕ್ಷೇಪ ಬಂದಿತ್ತು. ಪ್ರಧಾನಿಯ ಭದ್ರತೆ ಜೊತೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿತ್ತು. ಇನ್ನು, ಪ್ರಧಾನಿ ಬಳಸುವ ಕಾರಿನ ವಿವರಗಳ ಬಗ್ಗೆ ಬಹಿರಂಗವಾಗಿ ಚರ್ಚಿಸುವುದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದುದು. ಇದರಿಂದ ಅನಗತ್ಯವಾಗಿ ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸಿದಂತಾಗುತ್ತದೆ. ಇದು ಎಸ್‌ಪಿಜಿ ಭದ್ರತೆ ಪಡೆದವರ ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂದು ಅಧಿಕಾರಿ ಹೇಳಿದ್ದಾರೆ.

ಪ್ರಧಾನಿಯ ಕಾರು ಬಳಸಿದ್ದ ಸೋನಿಯಾ:

ಕಾರಿನ ಆಯ್ಕೆಯಲ್ಲಿ ಪ್ರಧಾನಿ ಮೋದಿಗೆ ಯಾವುದೇ ಆದ್ಯತೆ ನೀಡಲಾಗಿಲ್ಲ. ಈ ಹಿಂದೆ ಡಾ.ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ಅವರಿಗಾಗಿ ಖರೀದಿಸಿದ್ದ ರೇಂಜ್‌ ರೋವರ್‌ ಕಾರುಗಳನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಬಳಸುತ್ತಿದ್ದರು ಎಂಬ ಕುತೂಹಲಕರ ಸಂಗತಿಯನ್ನೂ ಅಧಿಕಾರಿ ಬಿಚ್ಚಿಟ್ಟಿದ್ದಾರೆ.

ಕಾರಿನ ವಿಶೇಷತೆಗಳೇನು?

*ಎಕೆ-47 ರೈಫಲ್‌ನಿಂದ ದಾಳಿಯಾದರೂ ಕಾರಿನೊಳಗಿದ್ದವರಿಗೆ ರಕ್ಷಣೆ

*2 ಮೀಟರ್‌ ವ್ಯಾಪ್ತಿಯಲ್ಲಿ 15 ಕೇಜಿ ಟಿಎನ್‌ಟಿ ಸ್ಫೋಟವಾದರೂ ರಕ್ಷಣೆ

*ವಿಷಾನಿಲ ದಾಳಿಯಾದರೆ ಕಾರಿನಲ್ಲಿರುವವರಿಗೆ ಗಾಳಿ ಪೂರೈಕೆಗೆ ವ್ಯವಸ್ಥೆ

*ಕಾರಿನ ಮೇಲೆ ನೇರ ದಾಳಿ ನಡೆದರೂ ಹಾನಿಯಾಗದಂತೆ ರಕ್ಷಾಕವಚ

*ಏನೇ ಹಾನಿಯಾದರೂ ತ್ವರಿತ ಪಾರಾಗುವ ವಿಶೇಷ ರನ್‌-ಫ್ಲಾಟ್‌ ಟೈರ್‌

ಇದನ್ನೂ ಓದಿ:

1) Upcoming Cars 2022 ದುಬಾರಿ ಇಂಧನಕ್ಕೆ ಪರ್ಯಾಯವಾಗಿ ಶೀಘ್ರದಲ್ಲೇ ಟಾಟಾ ಟಿಗೋರ್, ಟಿಯಾಗೋ CNG ಕಾರು ಬಿಡುಗಡೆ!

2) Atmanirbhar Bharat: ಸಾಕಷ್ಟುಸಮಯ ಹಾಳಾಗಿದೆ, ಬೇಗ ಭಾರತವನ್ನು ಆತ್ಮನಿರ್ಭರ ಮಾಡಿ: ಮೋದಿ

3) Maruti Baleno Car ಹೊಸ ರೂಪ, ಹೊಸ ಎಂಜಿನ್, ಶೀಘ್ರದಲ್ಲೇ ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆ!

click me!