ನವದೆಹಲಿ(ಡಿ.29): ಪೆಟ್ರೋಲ್, ಡೀಸೆಲ್ ಬೆಲೆ(Petrol Diesel Price) ದುಬಾರಿಯಾಗಿದೆ. ವಾಹನ ಓಡಾಟ, ನಿರ್ವಹಣೆ ಜೇಬಿಗೆ ಹೊರೆಯಾಗಿದೆ. ಹೀಗಾಗಿ ಇದೀಗ ಇಂಧನಕ್ಕೆ ಪರ್ಯಾಯವಾಗಿ CNG ಕಾರುಗಳು ಹಾಗೂ ಎಲೆಕ್ಟ್ರಿಕ್ ಕಾರುಗಳು(Electric Car) ಬಿಡುಗಡೆಯಾಗುತ್ತಿದೆ. ಇದೀಗ ಟಾಟಾ ಮೋಟಾರ್ಸ್(Tata Motors) ತನ್ನ ಎರಡು ಕಾರುಗಳಾದ ಟಿಯಾಗೋ(Tata Tiago) ಹಾಗೂ ಟಿಗೋರ್(Tata Tigor) ಕಾರನ್ನು CNG ಕಾರಾಗಿ ಬಿಡುಗಡೆ ಮಾಡುತ್ತಿದೆ. ಹೊಸ ವರ್ಷದ(New Year 2022) ಆರಂಭದಲ್ಲಿ ಈ ಎರಡು ಕಾರುಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ.
ಕೊರೋನಾ(Coronavirus) ವಕ್ಕರಿಸಿದ ಬಳಿಕ ಜನರ ಬದುಕೇ ದುಸ್ತರವಾಗಿದೆ. ಇದರ ನಡುವೆ ಸಾರಿಗೆ ವೆಚ್ಚ ಅತ್ಯಂತ ದುಬಾರಿಯಾಗಿದೆ. ಇನ್ನು ಇಂಧನಕ್ಕೆ ಪರ್ಯಾಯವಾಗಿರುವ ಎಲೆಕ್ಟ್ರಿಕ್ ಕಾರುಗಳು ಕೈಗೆಟುಕುವ ದರದಲ್ಲಿಲ್ಲ. ಹೀಗಾಗಿ CNG ಕಾರು ಜನರ ಅತ್ಯುತ್ತಮ ಆಯ್ಕೆಯಾಗಿ ಮಾರ್ಪಟ್ಟಿದೆ. ಹ್ಯುಂಡೈ ಔರಾ CNG ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಟಿಗೋರ್ CNG ಕಾರು ಮಾರುಕಟ್ಟೆಗೆ ಲಗ್ಗೆ ಇಡಲಿದೆ.
undefined
ಕೊರೋನಾ ಸಂಕಷ್ಟದಲ್ಲಿ ದಾಖಲೆ ಬರೆದ ಮಾರುತಿ ವ್ಯಾಗನಆರ್ CNG ಕಾರು!
ಫ್ಯಾಕ್ಟರಿ ಫಿಟ್ಟೆಡ್ CNG ಟಿಗೋರ್ ಕಾರು ಆಕರ್ಷಕ ಬೆಲೆಯಲ್ಲಿ ಲಭ್ಯವಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಟಿಗೋರ್ CNG ಕಾರು 5.67 ಲಕ್ಷ ರೂಪಾಯಿಯಿಂದ 7.84 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆದರೆ ನೂತನ ಟಿಗೋರ್ CNG ಕಾರಿನ ಬೆಲೆ ಇನ್ನು ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಟಾಟಾ ಟಿಗೋರ್ ಕಾರು 1199 cc ಪೆಟ್ರೋಲ್ ಎಂಜಿನ್ ಹೊದಿದೆ. 3 ಸಿಲಿಂಡರ್ ಹೊಂದಿರುವ ಈ ಕಾರು 113Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಟಾಟಾ ಕಾರುಗಳು ಸುರಕ್ಷತೆಯಲ್ಲಿ ಮುಂಚೂಣಿಯಲ್ಲಿದೆ.
ಜನವರಿ 2022ರಲ್ಲೇ ಟಾಟಾ ಟಿಗೋರ್ CNG ಕಾರು ಬಿಡುಗಡೆಯಾಗಲಿದೆ. ನವೆಂಬರ್ 2021ರಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯ ಮೊದಲ CNG ಕಾರು ಬಿಡುಗಡೆ ಮಾಡಲು ಟಾಟಾ ಮುಂದಾಗಿತ್ತು. ಆದರೆ ಚಿಪ್ ಕೊರತೆ ಕಾರಣ ನವೆಂಬರ್ ತಿಂಗಳಲ್ಲಿ ಟಾಟಾ ಟಿಗೋರ್ CNG ಕಾರು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಜನವರಿ 2022ರಲ್ಲಿ ಕಾರು ಬಿಡುಗಡೆಯಾಗುತ್ತಿದೆ.
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೋಟಾ ಇನೋವಾ ಕ್ರೈಸ್ಟಾ CNG ಕಾರು!
ಅಕ್ಟೋಬರ್ ತಿಂಗಳಲ್ಲಿ ಟಾಟಾ ಟಿಯಾಗೋ CNG ಕಾರು ಬುಕಿಂಗ್ ಅವಕಾಶ ಮಾಡಿಕೊಡಲಾಗಿತ್ತು. 11,000 ರೂಪಾಯಿ ನೀಡಿ ಟಿಗೋರ್ CNG ಕಾರು ಬುಕಿಂಗ್ ಮಾಡಿಕೊಳ್ಳಬಹುದಾಗಿದೆ. ಸದ್ಯ ಭಾರತದಲ್ಲಿ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಬ್ರ್ಯಾಂಡ್ CNG ಕಾರುಗಳನ್ನು ಬಿಡುಗಡೆ ಮಾಡಿದೆ. ಇದೀಗ ಈ ಸಾಲಿಗೆ ಟಾಟಾ ಮೋಟಾರ್ಸ್ ಸೇರಿಕೊಳ್ಳಲು ಸಜ್ಜಾಗಿದೆ.
ಟಾಟಾ ಟಿಯಾಗೋ CNG ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಸ್ಯಾಂಟ್ರೋ CNG, ಹ್ಯುಂಡೈ ಐ10 ಗ್ರ್ಯಾಂಡ್ CNG, ಮಾರುತಿ ಸುಜುಕಿ ವ್ಯಾಗನ್ಆರ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ನೂತನ ಟಿಯಾಗೋ CNG ಕಾರಿನ ಬೆಲೆ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಎಂಜಿನ್ ಟಿಯಾಗೋ ಕಾರಿನ ಬೆಲೆ 4.99 ಲಕ್ಷ ರೂಪಾಯಿಯಿಂದ 7.12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಟಾಟಾ ಟಿಯಾಗೋ 1199 cc ಪೆಟ್ರೋಲ್ ಎಂಜಿನ್ ಹೊಂದಿದೆ. ಮತ್ತೊಂದು ವಿಶೇಷ ಅಂದೆರೆ ಈ ಕಾರಿನ ಮೈಲೇಜ್ 23.84 kmpl. 3 ಸಿಲಿಂಡರ್ ಹೊಂದಿರುವ ಟಿಯಾಗೋ ಕಾರು 113Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. 170mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಪವರ್ ಸ್ಟೇರಿಂಗ್, ಎಬಿಎಸ್, ಡ್ರೈವರ್ ಏರ್‌ಬ್ಯಾಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಆಲೋಯ್ ವ್ಹೀಲ್, ಪ್ಯಾಸೆಂಜರ್ ಏರ್‌ಬ್ಯಾಗ್, ಫಾಗ್ ಲೈಟ್ಸ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ