Upcoming Cars 2022 ಹೊಸ ವರ್ಷದಲ್ಲಿ ಬಿಡುಗಡೆಯಾಗಲಿರುವ ಟಾಪ್ 4 MPV ಕಾರು!

By Suvarna News  |  First Published Dec 29, 2021, 8:33 PM IST
  • ಹೊಸ ವರ್ಷದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ ಹಲವು MPV ಕಾರು
  • ಕಿಯಾ ಕರೆನ್ಸ್, ಮಾರುತಿ ಎರ್ಟಿಗಾ ಸೇರಿದಂತೆ ಟಾಪ್ 4 ಕಾರು ಶೀಘ್ರದಲ್ಲಿ
  • 2022ರಲ್ಲಿ ಬಿಡುಗಡೆಯಾಗಲಿರುವ ಟಾಪ್ 4 MPV ಕಾರು

ಬೆಂಗಳೂರು(ಡಿ.29): ಹೊಸ ವರ್ಷದಲ್ಲಿ(New Year 2022) ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಯಾಗಲಿದೆ. ಕಾರಣ ಅತೀ ಹೆಚ್ಚು ಎಲೆಕ್ಟ್ರಿಕ್ ವಾಹನಗಳು(Electric Vehicle) ಬಿಡುಗಡೆಯಾಗಲಿದೆ. ಇದರ ನಡುವೆ MPV ಕಾರುಗಳು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಭಾರತದಲ್ಲಿ MPV ವಾಹನಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇದೀಗ ಹೊಸ ಹೊಸ ಕಾರುಗಳು ಬಿಡುಗಡೆಗೆ ಸಜ್ಜಾಗಿದೆ. 2022ರ ಮೊದಲ ಭಾಗದಲ್ಲಿ ಬಿಡುಗಡೆಯಾಗಲಿರುವ MPV ಕಾರುಗಳ ಪಟ್ಟಿ ಇಲ್ಲಿದೆ.

ಕಿಯಾ ಕರೆನ್ಸ್
ಕಿಯಾ ಸೆಲ್ಟೋಸ್, ಕಿಯಾ ಸೊನೆಟ್, ಕಿಯಾ ಕಾರ್ನಿವಲ್ ಮೂಲಕ ಭಾರತದಲ್ಲಿ ಭಾರಿ ಸಂಚಲ ಸೃಷ್ಟಿಸಿರುವ ಸೌತ್ ಕೊರಿಯಾ ಮೂಲದ ಕಾರು ಇದೇ ಡಿಸೆಂಬರ್‌ನಲ್ಲಿ ಕಿಯಾ ಕರೆನ್ಸ್(Kia Carens) MPV ಕಾರು ಅನಾವರಮಾಡಿದೆ. ಮೂರು ಸಾಲಿನ ಸೀಟುಗಳ ಸಾಮರ್ಥ್ಯದ ವಾಹನ ಇದಾಗಿದ್ದು, 7 ಸೀಟರ್ ಹೊಂದಿದೆ. ಅನಾವರಣದಲ್ಲಿ ಮನೆಸೂರೆಗೊಳಿಸಿರುವ ಕಿಯಾ ಕರೆನ್ಸ್  ಭಾರತದ MPV ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ. ಇದು ಭಾರತದ MPV ಕಾರು ಮಾರುಕಟ್ಟೆಯಲ್ಲಿ ಹೊಸತನಕ್ಕೆ ನಾಂದಿ ಹಾಡಲಿದೆ ಎಂದು ಹೇಳಲಾಗುತ್ತಿದೆ.

Latest Videos

undefined

Maruti Baleno Car ಹೊಸ ರೂಪ, ಹೊಸ ಎಂಜಿನ್, ಶೀಘ್ರದಲ್ಲೇ ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆ!

ಮಾರ್ಚ್ ತಿಂಗಳಲ್ಲಿ ಕಿಯಾ ಕರೆನ್ಸ್ ಬಿಡುಗಡೆಯಾಗುವ ಸಾಧ್ಯತೆ ಇದೆ. 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಹಾಗೂ 1.4 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಗಳು ಲಭ್ಯವಿದೆ. LED ಹೆಡ್‌ಲ್ಯಾಂಪ್ಸ್, 10.25 ಇಂಚಿನ ಟಚ್‌ಸ್ಕ್ರೀನ್ ಸೇರಿದಂತೆ ಹಲವು ವಿಶೇಷ ಫೀಚರ್ಸ್ ಈ ಕಾರಿನಲ್ಲಿದೆ. ಈ ಕಾರಿನ ಅಂದಾಜು ಬೆಲೆ 16 ರಿಂದ 10 ಲಕ್ಷ ರೂಪಾಯಿ(ಎಕ್ಸ್ ಶೋರೂಂ).

ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್
2018ರಲ್ಲಿ ಮಾರುತಿ ಸುಜುಕಿ ಎರ್ಟಿಗಾ ಸೆಕೆಂಡ್ ಜನರೇಶನ್ ಕಾರನ್ನು ಬಿಡುಗಡೆ ಮಾಡಿತ್ತು. ಇದೀಗ 2022ರಲ್ಲಿ ಮಾರುತಿ ಎರ್ಟಿಗಾ ಫೇಸ್‌ಲಿಫ್ಟ್ (Maruti Suzuki Ertiga facelift)ಕಾರು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಎರ್ಟಿಗಾ ಫೇಸ್‌ಲಿಫ್ಟ್ ರೋಡ್ ಟೆಸ್ಟ್ ನಡೆಸಿದೆ. ಹಲವು ಬಾರಿ ಟೆಸ್ಟಿಂಗ್ ವೇಳೆ ಪ್ರತ್ಯಕ್ಷವಾಗಿದೆ. ಕೆಲ ಬದಲಾವಣೆಗಳೊಂದಿಗೆ ನೂತನ ಎರ್ಟಿಗಾ ಫೇಸ್‌ಲಿಫ್ಟ್ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ವಿಶೇಷ ಅಂದರೆ 1.5 ಲೀಟರ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಎಂಜಿನ್ ಮೂಲಕ ನೂತನ ಎರ್ಟಿಗಾ ಕಾರು ಬಿಡುಗಡೆಯಾಗಲಿದೆ. 2022ರ ಮಧ್ಯಭಾಗದಲ್ಲಿ ಕಾರು ಬಿಡುಗಡೆಯಾಗಲಿದೆ. ಕಾರಿನ ಅಂದಾಜು ಬೆಲೆ 8.5 ಲಕ್ಷ ರೂಪಾಯಿಯಿಂದ 11.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

Top Cars of 2021: ಇಲ್ಲಿದೆ ಈ ವರ್ಷದ ಟಾಪ್ ಕಾರುಗಳ ಪಟ್ಟಿ: ನಿಮ್ಮ ಆಯ್ಕೆ ಯಾವುದು?

ಮಾರುತಿ ಸುಜುಕಿ XL6 ಫೇಸ್‌ಲಿಫ್ಟ್
ಕಾಂಪ್ರೆಹೆನ್ಸೀವ್ ಎರ್ಟಿಗಾ ಕಾರು ಎಂದೇ ಗುರುತಿಸಿಕೊಂಡಿರುವ ಮಾರುತಿ ಸುಜುಕಿ XL6 ಕಾರು(Maruti Suzuki XL6 facelift) ಇದೀಗ 2022ರಲ್ಲಿ ಫೇಸ್‌ಲಿಫ್ಟ್ ಅಪ್‌ಗ್ರೇಡ್ ಮೂಲಕ ಬಿಡುಗಡೆಯಾಗುತ್ತಿದೆ. ನೂತನ ಮಾರುತಿ ಸುಜುಕಿ XL6 ಫೇಸ್‌ಲಿಫ್ಟ್ ಕಾರು 6 ಸೀಟರ್ ಹಾಗೂ 7 ಸೀಟರ್ ಆಯ್ಕೆ ಹೊಂದಿದೆ. ಹೊಸ ಅಲೋಯ್ ವ್ಹೀಲ್ ಸೇರಿದಂತೆ ಕೆಲ ಬದಲಾವಣೆಗಳು ನೂತನ ಮಾರುತಿ ಸುಜುಕಿ XL6 ಫೇಸ್‌ಲಿಫ್ಟ್ ಕಾರಿನಲ್ಲಿದೆ. ನೂತನ ಕಾರು ಮೈಲ್ಡ್ ಹೈಬ್ರಿಡ್ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಕಾರಿನ ಅಂದಾಜು ಬೆಲೆ 10 ರಿಂದ 12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ರೆನಾಲ್ಟ್ ಟ್ರೈಬರ್ ಟರ್ಬೋ
ರೆನಾಲ್ಟ್ ಟ್ರೈಬರ್ ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ MPV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 1.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಟ್ರೈಬರ್ ಕಾರು ಇದೀಗ ಹೊಸತನದಲ್ಲಿ ಬಿಡುಗಡೆಯಾಗುತ್ತಿದೆ. ಎಂಜಿನ್ ಹಾಗೂ ಕೆಲ ಹೆಚ್ಚುವರಿ ಫೀಚರ್ಸ್ ಜೊತೆ ಕಾರು ಬಿಡುಗಡೆಯಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಟ್ರೈಬರ್ ಕಾರು 1.0 ಲೀಟರ್ 3 ಸಿಲಿಂಡರ್, 72hp ಪವರ್ ಹೊಂದಿದೆ. ನೂತನ ರೆನಾಲ್ಟ್ ಟ್ರೈಬರ್ ಟರ್ಬೋ ಕಾರಿನ(Renault Triber Turbo) ಅಂದಾಜು ಬೆಲೆ 7.5 ಲಕ್ಷ ರೂಪಾಯಿಯಿಂದ 9.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 
 

click me!