*ಓಲಾದಿಂದ ಹೈಪರ್ ಚಾರ್ಜರ್‌ಗಳ ಅಳವಡಿಕೆ
* 2022ರ ವೇಳೆಗೆ 4000 ಚಾರ್ಜರ್ ಅಳವಡಿಕೆ ಗುರಿ
* ಸಾರ್ವಜನಿಕ ಸ್ಥಳಗಳಲ್ಲಿನ ಬಿಪಿಎಲ್‌ಸಿ ಪೆಟ್ರೋಲ್ ಪಂಪ್‌ಗಳಲ್ಲಿ ಅಳವಡಿಕೆ
ಬೆಂಗಳೂರು(ಡಿ.29): ಕೆಲ ತಿಂಗಳ ಹಿಂದಷ್ಟೇ ಓಲಾ ಸ್ಕೂಟರ್ ಬಿಡುಗಡೆ ಮಾಡಿ ಸದ್ದು ಮಾಡಿದ್ದ ಓಲಾ (Ola), ಈಗ ತನ್ನ ಗ್ರಾಹಕರ ಚಾರ್ಜಿಂಗ್ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಂದಾಗಿದೆ. ಓಲಾ ಎಲೆಕ್ಟ್ರಿಕ್, ಹೈಪರ್ ಚಾರ್ಜರ್ (hyper charger) ಎಂಬ ಚಾರ್ಜಿಂಗ್ ಸಂಪರ್ಕವನ್ನು ದೇಶಾದ್ಯಂತ ಅಳವಡಿಸಲು ಮುಂದಾಗಿದೆ. ಓಲಾ ಎಲೆಕ್ಟ್ರಿಕ್ ಇತ್ತೀಚೆಗಷ್ಟೇ ಎಸ್1 ಹಾಗೂ ಎಸ್1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆಗೊಳಿಸಿದ್ದು, ಒಂದು ಹಂತದ ಟೆಸ್ಟ್ ಡ್ರೈವ್ (test drive) ಮುಗಿದಿದೆ. ಹೊಸ ವರ್ಷದ ಮೊದಲ ತಿಂಗಳಿನಿಂದಲೇ ಸ್ಕೂಟರ್ಗಳ ವಿತರಣೆ ಆರಂಭವಾಗುವ ನಿರೀಕ್ಷೆಯಿದೆ.
ಹೈಪರ್ ಚಾರ್ಜರ್ ಅಳವಡಿಕೆ ಕುರಿತು ಓಲಾ ಎಲೆಕಟ್ರಿಕ್ನ ಸಿಇಒ ಹಾಗೂ ಸಹ-ಸಂಸ್ಥಾಪಕ ಭವೀಶ್ ಅಗರ್ವಾಲ್ (Bhaveesh agarwal) ಟ್ವೀಟ್ ಮಾಡಿದ್ದು, ಮುಂದಿನ ದಿನಗಳಲ್ಲಿ ಚಾರ್ಜಿಂಗ್ ಸೌಕರ್ಯಗಳನ್ನು ದೇಶಾದ್ಯಂತ ಹೆಚ್ಚಿಸುವುದಾಗಿ ಮಾಹಿತಿ ನೀಡಿದ್ದಾರೆ. ತಮ್ಮ ಟ್ವೀಟ್ನಲ್ಲಿ ಅವರು, ಹೊಸ ವರ್ಷದ ಅಂತ್ಯದೊಳಗೆ ದೇಶಾದ್ಯಂತ ಇಂತಹ 4 ಸಾವಿರಕ್ಕೂ ಹೆಚ್ಚು ಚಾರ್ಜರ್ಗಳನ್ನು ಅಳವಡಿಸಲು ಓಲಾ ಎಲೆಕ್ಟ್ರಿಕ್ ಗುರಿ ಹೊಂದಿದೆ ಎಂದು ಘೋಷಣೆ ಮಾಡಿದ್ದಾರೆ. ಸದ್ಯ ಹೈಪರ್ ಚಾರ್ಜರ್ಗಳನ್ನು ಬಿಪಿಸಿಎಲ್ಪೆ ಟ್ರೋಲ್ ಪಂಪ್ಗಳು, ಹಾಗೂ ವಸತಿ ಸಂಕೀರ್ಣಗಳಲ್ಲಿ ಕೂಡ ಹೈಪರ್ಚಾರ್ಜರ್ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಇದು ತಮ್ಮ ಎಸ್1 (S1) ಹಾಗೂ ಎಸ್1 ಪ್ರೋ (S1 pro) ಗ್ರಾಹಕರಿಗೆ ಚಾರ್ಜಿಂಗ್ ಸಮಸ್ಯೆ ಪರಿಹಾರಕ್ಕೆ ನೆರವಾಗುತ್ತದೆ ಎಂದಿದ್ದಾರೆ.
undefined
Ola Electric Scooter ಮುಂದಿನ ವಾರದಿಂದ ಹೊಸ ನಗರ, ಪಟ್ಟಣದಲ್ಲಿ ಸ್ಕೂಟರ್ ಲಭ್ಯ!
ದೇಶಾದ್ಯಂತ ಹೈಪರ್ ಚಾರ್ಜರ್ ಅಳವಡಿಕೆ ಆರಂಭಗೊಂಡಿದೆ. ಪ್ರಮುಖ ಬಿಪಿಸಿಎಲ್ ಪಂಪ್ಗಳು ಹಾಗೂ ವಸತಿ ಸಂಕೀರ್ಣಗಳಲ್ಲಿ. ಮುಂದಿನ ವರ್ಷದ ಅಂತ್ಯದೊಳಗೆ 4000ಕ್ಕೂ ಪಾಯಿಂಟ್ಗಳ ಅಳವಡಿಕೆ. ನಾವು ಇದನ್ನು ದೇಶಾದ್ಯಂತ ಅಳವಡಿಸುತ್ತಿದ್ದೇವೆ ಮತ್ತು 6-8 ವಾರಗಳಲ್ಲಿ ಅವುಗಳು ಕಾರ್ಯಾರಂಭಗೊಳ್ಳಲಿವೆ. ಜೂನ್ 22ರವರೆಗೆ ಎಲ್ಲಾ ಗ್ರಾಹಕರಿಗೆ ಉಚಿತ ಬಳಕೆ ಸೌಲಭ್ಯವಿರಲಿದೆ” ಎಂದು ಅಗರ್ವಾಲ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ನಲ್ಲಿ, ಓಲಾ ಎಲೆಕ್ಟ್ರಿಕ್ ತನ್ನ ಮೊದಲ ಹೈಪರ್ಚಾರ್ಜರ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. 400 ಭಾರತೀಯ ನಗರಗಳಲ್ಲಿ 100,000 ಕ್ಕೂ ಹೆಚ್ಚು ಸ್ಥಳಗಳು/ಟಚ್ಪಾಯಿಂಟ್ಗಳಲ್ಲಿ ಸ್ಥಾಪಿಸಲಾಗುವ 'ಹೈಪರ್ಚಾರ್ಜರ್' ಸೆಟಪ್ ಅಡಿಯಲ್ಲಿ ತನ್ನ ಗ್ರಾಹಕರಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸುವುದಾಗಿ ಕಂಪನಿಯು ಮೊದಲೇ ಘೋಷಿಸಿತ್ತು.
Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!
ಓಲಾ ಎಲೆಕ್ಟ್ರಿಕ್ನ ಹೈಪರ್ಚಾರ್ಜರ್ಗಳು ಇ-ಸ್ಕೂಟರ್ ಬ್ಯಾಟರಿಗಳನ್ನು ಕೇವಲ 18 ನಿಮಿಷಗಳಲ್ಲಿ 0 ರಿಂದ ಶೇ. 50ವರೆಗೆ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದ್ದು, ಇದು 75 ಕಿ.ಮೀ. ಹೋಮ್-ಚಾರ್ಜರ್ ಯುನಿಟ್ (home charger unit) ಆಗಿದೆ. ಓಲಾ ಹೈಪರ್ಚಾರ್ಜರ್ ಸ್ಕೂಟರ್ ಮಾಲೀಕರಿಗೆ ತಡೆರಹಿತ ಚಾರ್ಜಿಂಗ್ ಅನುಭವವನ್ನು ನೀಡುತ್ತದೆ. ಜನರು ಮಾಡಬೇಕಾದ್ದು ಏನೆಂದರೆ ಕೇವಲ ಈ ಹೈಪರ್ಚಾರ್ಜರ್ ನೆಟ್ವರ್ಕ್ನ ಯೂನಿಟ್ ಅನ್ನು ತಲುಪುವುದು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜಿಂಗ್ ಪಾಯಿಂಟ್ಗೆ ಪ್ಲಗ್ ಮಾಡುವುದು. ಓಲಾ ಎಲೆಕ್ಟ್ರಿಕ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನೈಜ ಸಮಯದಲ್ಲಿ ಚಾರ್ಜಿಂಗ್ ಸ್ಥಿತಿಗತಿಯನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ. ಈ ಆ್ಯಪ್ ಮೂಲಕ ಪಾವತಿ ಮಾಡುವ ಅವಕಾಶವೂ ಇದೆ.
18 ನಿಮಿಷದಲ್ಲಿ ಶೇ.50 ರಷ್ಟು ಚಾರ್ಚ್; ಓಲಾ ಸ್ಕೂಟರ್ ಮೊದಲ ಹೈಪರ್ ಚಾರ್ಚರ್ ಲಾಂಚ್!
ಕಂಪನಿಯ ವೆಬ್ಸೈಟ್ ನೆಟ್ವರ್ಕ್ ಸ್ಥಳಗಳನ್ನು ಚಾರ್ಜಿಂಗ್ ಮಾಡುವ ನಗರವಾರು ಯೋಜನೆಯನ್ನು ಪಟ್ಟಿ ಮಾಡುತ್ತದೆ ಮತ್ತು ಹೆಚ್ಚಾಗಿ ಒಂದು ಹಾಗೂ ಎರಡನೇ ಶ್ರೇಣಿಯ ನಗರಗಳಲ್ಲಿ ಹೆಚ್ಚಿನ ಚಾರ್ಜಿಂಗ್ ನೆಟ್ವರ್ಕ್ ಅಳವಡಿಕೆಯಾಗಲಿದೆ. ಈ ಮೂಲಕ ಓಲಾ ಎರಡನೇ ಹಂತದ ನಗರಗಳಲ್ಲಿ ಕೂಡ ತನ್ನ ವ್ಯಾಪ್ತಿಯನ್ನು ಪ್ರಬಲವಾಗಿ ವಿಸ್ತರಿಸಲು ಮುಂದಾಗಿದೆ. ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸಮಸ್ಯೆಯಿಂದ ಇದನ್ನು ಕಂಡುಕೊಳ್ಳಲು ಹಿಂದೆ ಮುಂದೆ ನೋಡುತ್ತಿರುವವರಿಗೆ ಈ ಕ್ರಮ ಒಂದು ಪರಿಹಾರ ಮಾರ್ಗವಾಗಲಿದೆ ಎಂಬ ವಿಶ್ವಾಸವನ್ನು ಓಲಾ ಕಂಪನಿ ವ್ಯಕ್ತಪಡಿಸಿದೆ.