ಬೆಂಗಳೂರು(ಅ.05): ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಇಂದು ಭಾರತದಲ್ಲಿ ಹೊಸ ಜಾಗ್ವಾರ್ F-PACE SVR ವಿತರಣೆಯನ್ನು ಆರಂಭಿಸಿದೆ. ಜಾಗ್ವಾರ್ SUV ಶ್ರೇಣಿಯ ಹೊಸ F-PACE SVR ಹಿಂದೆಂದಿಗಿಂತಲೂ ವೇಗವಾಗಿದೆ. ಮೋಟಾರ್‌ಸ್ಪೋರ್ಟ್‌ನಿಂದ ಪ್ರೇರಿತವಾದ ಬಾಹ್ಯ ವಿನ್ಯಾಸ, ಐಷಾರಾಮಿ ಒಳಾಂಗಣ ಮತ್ತು ಇತ್ತೀಚಿನ ಸಂಪರ್ಕಿತ ತಂತ್ರಜ್ಞಾನಗಳನ್ನು ಒಳಗೊಂಡಿದೆ.
ಹೊಚ್ಚ ಹೊಸ ಜಾಗ್ವಾರ್ ಐ ಪೇಸ್ BLACK ಎಡಿಶನ್ ಬುಕಿಂಗ್ ಆರಂಭ!
undefined
ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಮಾತನಾಡುತ್ತಾ, "ಭಾರತದಲ್ಲಿ F-PACE SVRನ ಆಗಮನವು ನಮಗೆ ಒಂದು ರೋಮಾಂಚಕಾರಿ ಕ್ಷಣವಾಗಿದೆ ಮತ್ತು ಗ್ರಾಹಕರು ಅದರ ಉಸಿರು ಬಿಗಿಹಿದಿಡುವ ಮತ್ತು ರೋಮಾಂಚಕ ಕಾರ್ಯಕ್ಷಮತೆಯನ್ನು ಸಂಪೂರ್ಣವಾಗಿ ಆನಂದಿಸುತ್ತಾರೆ ಎಂದು ನಮಗೆ ವಿಶ್ವಾಸವಿದೆ"
ಜಾಗ್ವಾರ್ F-PACE SVR 405 kW V8 ಸೂಪರ್‌ಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 700 Nm ಗರಿಷ್ಠ ಟಾರ್ಕ್ ನೀಡುತ್ತದೆ ಮತ್ತು 4.0 ಸೆಕೆಂಡುಗಳಲ್ಲಿ 0-100 km/h ವೇಗವನ್ನು ಹೆಚ್ಚಿಸುತ್ತದೆ. F-PACE SVR ನ ಕಾರ್ಯಕ್ಷಮತೆಯನ್ನು ಜಾಗ್ವಾರ್ SV ಯ ಎಂಜಿನಿಯರ್‌ಗಳಿಂದ ಥ್ರೊಟಲ್ ಪ್ರತಿಕ್ರಿಯೆ, ಸಸ್ಪೆನ್ಷನ್ ಮತ್ತು ಸ್ಟೀರಿಂಗ್‌ಗಾಗಿ ನಿರ್ದಿಷ್ಟ ಸಾಫ್ಟ್‌ವೇರ್ ಸೆಟ್ಟಿಂಗ್‌ಗಳಿಂದ ಸಕ್ರಿಯಗೊಳಿಸಲಾಗಿದೆ. ಇದನ್ನು ಜಾಗ್ವಾರ್‌ನ ಆಲ್-ವ್ಹೀಲ್ ಡ್ರೈವ್ ಜೊತೆ ಇಂಟೆಲಿಜೆಂಟ್ ಡ್ರೈವ್‌ಲೈನ್ ಡೈನಾಮಿಕ್ಸ್‌ನಿಂದ ಮತ್ತಷ್ಟು ವರ್ಧಿಸಲಾಗಿದೆ.
ಜಾಗ್ವಾರ್ F ಟೈಪ್R ಡೈನಮಿಕ್ ಬ್ಲ್ಯಾಕ್ ಕಾರು ಬುಕಿಂಗ್ ಆರಂಭ!
ಜಾಗ್ವಾರ್ F-PACE SVR ನ ಉದ್ದೇಶಿತ ಮತ್ತು ಓಟದ ಪ್ರೇರಿತ ಹೊರಭಾಗವು ಹೊಸ SVR- ಬ್ಯಾಡ್ಜ್ಡ್ ಗ್ರಿಲ್, ಪರಿಷ್ಕೃತ ಬಂಪರ್ ವಿನ್ಯಾಸ, ಸೂಪರ್-ಸ್ಲಿಮ್ ಆಲ್-LED ಕ್ವಾಡ್ ಹೆಡ್‌ಲೈಟ್‌ಗಳನ್ನು 'ಡಬಲ್ J' ಡೇಟೈಮ್ ರನ್ನಿಂಗ್ ಲೈಟ್ (DRL) ವೈಶಿಷ್ಟ್ಯಗಳು ಮತ್ತು ಅಡಾಪ್ಟಿವ್ ಡ್ರೈವಿಂಗ್ ಬೀಮ್ ಸಾಮರ್ಥ್ಯವನ್ನು ಹೊಂದಿದೆ.
ಜಾಗ್ವಾರ್ F-PACE SVR ನ ನಿಖರವಾದ ವಿನ್ಯಾಸವು ಹೊಸ ಡ್ರೈವ್ ಸೆಲೆಕ್ಟರ್, ಬೆಸ್ಪೋಕ್ SVR ಸ್ಪ್ಲಿಟ್-ರಿಮ್ ಸ್ಟೀರಿಂಗ್ ವೀಲ್, ಹೊಸ ಸ್ಪೋರ್ಟಿ ಸೆಂಟರ್ ಕನ್ಸೋಲ್, ಸೂಕ್ಷ್ಮವಾಗಿ ಇಂಟಿಗ್ರೇಟ್ ಆದ ಕೇಂದ್ರೀಯ ಅಳವಡಿಸಲಾದ 28.95 cm (11.4) ವಕ್ರ ಗಾಜು ಹೊಂದಿರುವ HD ಟಚ್‌ಸ್ಕ್ರೀನ್ ಜೊತೆ ಹೊಸ Pivi Pro ಇನ್ಫೋಟೈನ್ಮೆಂಟ್ ಮತ್ತು ಕ್ಯಾಬಿನ್ ಏರ್ ಅಯಾನೀಕರಣವನ್ನು ಹೊಂದಿದೆ.
ಜಾಗ್ವಾರ್ F-PACE SVR ನ ಹೊಸ ತಂತ್ರಜ್ಞಾನಗಳ ಸಂಗ್ರಹವು ಸಾಫ್ಟ್‌ವೇರ್-ಓವರ್-ದಿ-ಏರ್ (SOTA) ಸಾಮರ್ಥ್ಯ ಮತ್ತು ಇತ್ತೀಚಿನ 3D ಸರೌಂಡ್ ಕ್ಯಾಮೆರಾ ತಂತ್ರಜ್ಞಾನವನ್ನು ಒಳಗೊಂಡಿದೆ. ಭಾರತದಲ್ಲಿ ಜಾಗ್ವಾರ್ F-PACE SVRನ ಎಕ್ಸ್ ಶೋರೂಂ ಬೆಲೆ ₹ 151.2 ಲಕ್ಷದಿಂದ ಪ್ರಾರಂಭವಾಗುತ್ತಿದೆ.
ಭಾರತದಲ್ಲಿನ ಜಾಗ್ವಾರ್ ಲ್ಯಾಂಡ್ ರೋವರ್ ರಿಟೇಲರ್ ಜಾಲ
ಜಾಗ್ವಾರ್ ಲ್ಯಾಂಡ್ ರೋವರ್ ವಾಹನಗಳು ಭಾರತದಲ್ಲಿ 24 ನಗರಗಳಲ್ಲಿ ಲಭ್ಯವಿದೆ, ಅಹಮದಾಬಾದ್, ಔರಂಗಾಬಾದ್, ಬೆಂಗಳೂರು (3), ಭುವನೇಶ್ವರ, ಚಂಡೀಗಡ, ಚೆನ್ನೈ (2), ಕೊಯಮತ್ತೂರು, ದೆಹಲಿ, ಗುರ್ಗಾಂವ್, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಕೊಚ್ಚಿ , ಕರ್ನಾಲ್, ಲಕ್ನೋ, ಲುಧಿಯಾನ, ಮಂಗಳೂರು, ಮುಂಬೈ (2), ನೋಯ್ಡಾ, ಪುಣೆ, ರಾಯ್ಪುರ, ಸೂರತ್ ಮತ್ತು ವಿಜಯವಾಡ.