Supreme Court ಏರ್‌ಬ್ಯಾಗ್ ಅಳವಡಿಸದ ಹ್ಯುಂಡೈಗೆ ಹಿನ್ನಡೆ, ಗ್ರಾಹಕನಿಗೆ ಪರಿಹಾರ ಪಾವತಿಸಲು ಸುಪ್ರೀಂ ತಾಕೀತು!

By Suvarna NewsFirst Published Apr 22, 2022, 4:19 PM IST
Highlights
  • ಏರ್‌ಬ್ಯಾಗ್ ಇಲ್ಲದ ಕಾರಣ ಅಪಘಾತದಲ್ಲಿ ಮಾಲೀಕನಿಗೆ ಗಾಯ
  • ಗ್ರಾಹಕ ಆಯೋಗಕ್ಕೆ ಮಾಲೀಕನ ದೂರು, 3 ಲಕ್ಷ ಪರಿಹಾರ ನೀಡಲು ಸೂಚನೆ
  • ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಹ್ಯುಂಡೈ ಇಂಡಿಯಾಗೆ ಹಿನ್ನಡೆ

ನವದೆಹಲಿ(ಏ.22): ಏರ್‌ಬ್ಯಾಗ್ ಅಳವಡಿಸದ ಹ್ಯುಂಡೈ ಕ್ರೆಟಾ ಕಾರಿನಿಂದ ಮಾಲೀಕ ಹಾಗೂ ಆತನ ಕುಟುಂಬಕ್ಕೆ ಅಪಘಾತದಲ್ಲಿ ಗಾಯಗಳಾಗಿವೆ. ಗ್ರಾಹಕರ ಸುರಕ್ಷತೆ ಮೊದಲ ಅದ್ಯತೆಯಾಗಿದೆ. ಹೀಗಾಗಿ ಗ್ರಾಹಕರ ಆಯೋಗ ಸೂಚಿಸಿದ ಪರಿಹಾರ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇದರಿಂದ ಇದೀಗ ಹ್ಯುಂಡೈ ಇಂಡಿಯಾ ಗ್ರಾಹಕನಿಗೆ 3 ಲಕ್ಷ ರೂಪಾಯಿ ಪರಿಹಾರ ನೀಡಬೇಕಾಗಿದೆ.

ಜಸ್ಟೀಸ್ ವಿನೀತ್ ಶರಣ್ ಹಾಗೂ ಅನಿರುದ್ಧ ಬೋಸೆ ಅವರನ್ನೊಳಗೊಂಡ ಪೀಠ ಈ ಮಹತ್ವದ ಆದೇಶ ನೀಡಿದೆ. ಉತ್ಪನ್ನ ನಿರೀಕ್ಷಿತ ಗುಣಟ್ಟಕ್ಕಿಂತ ಕಳಪೆಯಾಗಿದೆ. ಹೀಗಾಗಿ ಗ್ರಾಹಕರ ಹಾನಿಯನ್ನು ಪಾವತಿಸಲು ಕಂಪನಿ ಹೊಣೆಗಾರರಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ಹ್ಯುಂಡೈ ಇಂಡಿಯಾ ಮನವಿ ತಿರಸ್ಕರಿಸಿ ಗ್ರಾಹಕರನ ಪರವಾಗಿ ಆದೇಶ ನೀಡಿದೆ.

ನ್ಯಾನೋ ಕಾರಿನ ಪಾರ್ಕಿಂಗ್‌ಗೆ 91,000 ರೂ ದಂಡ; ಕೋರ್ಟ್ ಆದೇಶಕ್ಕೆ ಕಂಗಾಲಾದ ಒಡತಿ!

ಗ್ರಾಹಕರ 2015ರಲ್ಲಿ ಉತ್ಪಾದನೆಯಾದ ಹ್ಯುಂಡೈ ಕ್ರೆಟಾ 1.6 VTVT SX+ ಕಾರನ್ನು ಖರೀದಿಸಿದ್ದರು. ಈ ಮಾಡೆಲ್ ಕಾರು ಎರಡು ಏರ್‌ಬ್ಯಾಗ್‌ನಿಂದ ಕೂಡಿದ ವಾಹನವಾಗಿದೆ. 2017ರ ನವೆಂಬರ್ ತಿಂಗಳಲ್ಲಿ ದೆಹಲಿ ಪಾಣಿಪತ್ ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೀಡಾಗಿತ್ತು. ಈ ಅಪಘಾತದ ವೇಳೆ ಮಾಲೀಕನ ತಾಯಿ ಹಾಗೂ ಪುತ್ರಿ ಕಾರಿನಲ್ಲಿದ್ದರು.

ಅಪಘಾತದ ವೇಳೆ ಏರ್‌ಬ್ಯಾಗ್ ತೆರೆದುಕೊಂಡಿರಲಿಲ್ಲ. ಪರಿಣಾಮ ಮಾಲೀಕನ ಎದೆ, ಕೈ, ಹಲ್ಲುಗಳಿಗೆ ಗಾಯವಾಗಿತ್ತು. ಇತ್ತ ಮುಂಭಾಗದಲ್ಲಿ ಕುಳಿತಿದ್ದ ತಾಯಿಗೂ ಗಾಯವಾಗಿತ್ತು. ಅಪಘಾತದಲ್ಲಿ ತನ್ನ ಏರ್‌ಬ್ಯಾಗ್ ತೆರೆದುಕೊಂಡಿಲ್ಲ. ಹೀಗಾಗಿ ಪರಿಹಾರ ನೀಡಬೇಕು ಎಂದು ಮಾಲೀಕ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಗ್ರಾಹಕರ ಆಯೋಗ ತನಿಖೆಗೆ ಮುಂದಾಗಿದೆ. ಈ ತನಿಖೆಯಲ್ಲಿ ಕಾರಿನಲ್ಲಿ ಇರಬೇಕಿದ್ದ ಕನಿಷ್ಟ ಎರಡು ಏರ್‌ಬ್ಯಾಗ್ ಇರಲಿಲ್ಲ ಅನ್ನೋದು ಬಹಿರಂಗವಾಗಿದೆ. 

ಇದು ಹ್ಯುಂಡೈ ಕಂಪನಿಯಿಂದ ಆಗಿರುವ ಪ್ರಮಾದ. ಇನ್ನು ಗ್ರಾಹಕನ ಸುರಕ್ಷತೆ ಮೊದಲ ಆದ್ಯತೆಯಾಗಿದೆ. ಹೀಗಾಗಿ ಮಾಲೀಕನ ವೈದ್ಯಕೀಯ ವೆಚ್ಚ, ಆದಾಯ ನಷ್ಟಕ್ಕೆ ಪರಿಹಾರವಾಗಿ 2 ಲಕ್ಷ ರೂಪಾಯಿ, ಮಾನಸಿಕ ಸಂಕಟಕ್ಕೆ 50,000 ರೂಪಾಯಿ ಹಾಗೂ ವ್ಯಾಜ್ಯ ವೆಚ್ಚವಾಗಿ 50,000 ರೂಪಾಯಿ ಸೇರಿದಂತೆ ಒಟ್ಟು 3 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹ್ಯುಂಡೈಗೆ ಗ್ರಾಹಕರ ಆಯೋಗ ಸೂಚಿಸಿತ್ತು.

ಪಾರ್ಲೆ ಬ್ರಿಟಾನಿಯಾ ಸಮರ: ಜಾಹೀರಾತು ಬದಲಿಸುವಂತೆ ಪಾರ್ಲೆಗೆ ಹೈಕೋರ್ಟ್ ಆದೇಶ

ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹ್ಯುಂಡೈ ಇಂಡಿಯಾ, ಏರ್‌ಬ್ಯಾಗ್ ತೆರೆದುಕೊಂಡಿಲ್ಲ ಅನ್ನೋದು ತಾಂತ್ರಿಕ ಸಮಸ್ಯೆ. ಇಷ್ಟೇ ಅಲ್ಲ 2015ರಲ್ಲಿ ವಾಹನಕ್ಕೆ ಏರ್‌ಬ್ಯಾಗ್ ಕಡ್ಡಾವಲ್ಲ ಎಂದು ವಾದಿಸಿತ್ತು. ಆದರೆ ಹ್ಯುಂಡೈ ಮನವಿ ತಿರಿಸ್ಕರಿಸಿದ ಸುಪ್ರೀಂ ಕೋರ್ಟ್ ,  ಗ್ರಾಹಕರ ಆಯೋದ ಸೂಚಿಸಿದಂತೆ ಪರಿಹಾರ ಮೊತ್ತ ನೀಡುವಂತೆ ಹ್ಯುಂಡೈ ಇಂಡಿಯಾಗೆ ಸೂಚಿಸಿದೆ.

ಕಾರುಗಳಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯ
ಪ್ರಯಾಣಿಕ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಅಳವಡಿಸುವುದು ಕಡ್ಡಾಯ ಎಂದು ತನ್ನ ನೀತಿಗೆ, ಉದ್ಯಮ ವಲಯದ ತೀವ್ರ ವಿರೋಧದ ಹೊರತಾಗಿಯೂ ಅದೇ ನೀತಿಯನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.6 ಏರ್‌ಬ್ಯಾಗ್‌ ಅಳವಡಿಸಿದರೆ ಕಾರಿನ ದರ ಹೆಚ್ಚಾಗುತ್ತದೆ. ಇದು ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಕಾರು ಉತ್ಪಾದನಾ ಕಂಪನಿಗಳು ಆತಂಕ ವ್ಯಕ್ತಪಡಿಸಿವೆ. ಆದರೆ ಸುರಕ್ಷತೆಯ ವಿಷಯದಲ್ಲಿ ರಾಜಿ ಇಲ್ಲ ಎಂಬ ನಿರ್ಣಯಕ್ಕೆ ಬಂದಿರುವ ಸರ್ಕಾರ, 2022ರ ಅ.1ರಿಂದ ತಯಾರಾಗುವ ಎಲ್ಲಾ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯ ಮಾಡಿ ಶೀಘ್ರ ಆದೇಶ ಹೊರಡಿಸಲಿದೆ ಎನ್ನಲಾಗಿದೆ.ಕೇಂದ್ರ ಸರ್ಕಾರದ ಹೊಸ ನೀತಿಯ ಅನ್ವಯ, ಕಾರುಗಳ ಮುಂಬಾಗದಲ್ಲಿ 2, ಹಿಂಭಾಗದಲ್ಲಿ ಎರಡು ಮತ್ತು ಬದಿಯಲ್ಲಿ ಎರಡು ಏರ್‌ಬ್ಯಾಗ್‌ ಕಡ್ಡಾಯವಾಗಿರಲಿದೆ.
 

click me!