ನಿಸಾನ್ ಮ್ಯಾಗ್ನೈಟ್ ಭಾರತದಲ್ಲಿ ಬಿಡುಗಡೆಯಾದ ಅತೀ ಕಡಿಮೆ ಬೆಲೆಯ ಉತ್ತಮ ಎಸ್‌ಯುವಿ ಕಾರು. ಇದೀಗ ಇದೇ ರೀತಿ ಅತೀ ಕಡಿಮೆ ಬೆಲೆಗೆ 5 ಸೀಟರ್ ಹಾಗೂ ಸೀಟರ್ ಎಸ್‌ಯುವಿ ಕಾರು ಬಿಡುಗಡೆ ಮಾಡುತ್ತಿದೆ. ಇದರ ವಿನ್ಯಾಸ ಲಕ್ಷುರಿ ಕಾರುಗಳನ್ನು ಹಿಂದಿಕ್ಕುವಂತಿದೆ.
ಬೆಂಗಳೂರು(ಮಾ.27) ಭಾರತದಲ್ಲಿ ನಿಸ್ಸಾನ್ ತನ್ನ ಮ್ಯಾಗ್ನೈಟ್ ಕಾರಿನ ಮೂಲಕ ಮತ್ತೆ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಮ್ಯಾಗ್ನೈಟ್ ಕಾರು ಭಾರತದಲ್ಲಿ ಬಿಡುಗಡೆಯಾದ ಅತೀ ಕಡಿಮೆ ಬೆಲೆಯ ಎಸ್‌ಯುವಿ ಕಾರು. ಇಷ್ಟೇ ಅಲ್ಲ 4 ಸ್ಟಾರ್ ಸೇಫ್ಟಿ ರೇಟಿಂಗ್ ಹೊಂದಿದೆ. ಇದೀಗ ಮ್ಯಾಗ್ನೈಟ್ ರೀತಿಯಲ್ಲೇ ಅತೀ ಕಡಿಮೆ ಬೆಲೆಗೆ ನಿಸ್ಸಾನ್ 5 ಸೀಟರ್ ಹಾಗೂ 7 ಸೀಟರ್ ಎಸ್‌ಯುವಿ ಕಾರು ಬಿಡುಗಡೆ ಮಾಡುತ್ತಿದೆ. ಇದು ಅತೀ ಕಡಿಮೆ ಬೆಲೆ ಮಾತ್ರವಲ್ಲ, ಅತ್ಯಾಕರ್ಷಕ ವಿನ್ಯಾಸ ಹೊಂದಿದೆ. ಲಕ್ಷುರಿ ಕಾರಗಳ ವಿನ್ಯಾಸದ ರೀತಿಯಲ್ಲೇ ಇರಲಿದೆ. ಜೊತೆಗೆ ಉತ್ತಮ ಪರ್ಫಾಮೆನ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.
ಜಪಾನ್ ನ ಯೊಕೊಹಾಮಾದಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಉತ್ಪನ್ನ ಪ್ರದರ್ಶನ ಸಮಾರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಎರಡು ಹೊಸ ಉತ್ಪನ್ನಗಳನ್ನು ಪ್ರದರ್ಶಿಸಿದೆ. ಈ ಮೂಲಕ ಭಾರತದಲ್ಲಿ ಗ್ರಾಹಕರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಮತ್ತು ಬಿ-ಎಂಪಿವಿ ಹಾಗೂ ಸಿ-ಎಸ್‌ಯುವಿ ವಿಭಾಗಗಳ ಬೇಡಿಕೆಗಳನ್ನು ಪೂರೈಸಲು ನಿಸ್ಸಾನ್ ಮುಂದಾಗಿದೆ. ಇದರ ಜೊತೆಗೆ ಬಿ-ಎಸ್‌ಯುವಿ ವಿಭಾಗದಲ್ಲಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಮುಂಚೂಣಿಯಲ್ಲಿ ಸಾಗುತ್ತಿದೆ.
5.99 ಲಕ್ಷ ರೂ ನಿಸಾನ್ ಮ್ಯಾಗ್ನೈಟ್ SUV ಕಾರಿನಲ್ಲಿ 6 ಏರ್‌ಬ್ಯಾಗ್ ಫೀಚರ್!
ನಿಸ್ಸಾನ್ ಭಾರತದ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಒಂದಾಗಿದೆ. ದೇಶೀಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು ರಫ್ತು ವಿಭಾಗದಲ್ಲಿ ಅಭಿವೃದ್ಧಿ ಸಾಧಿಸಿದೆ. ನಿಸ್ಸಾನ್ ನ ಹೊಸ ಉತ್ಪನ್ನಗಳಾದ 7 ಆಸನಗಳ ಬಿ-ಎಂಪಿವಿ (ಮಲ್ಟಿ-ಪರ್ಪಸ್ ವೆಹಿಕಲ್) ಆರ್ಥಿಕ ವರ್ಷ 25ರಲ್ಲಿ ಬಿಡುಗಡೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ಅನಾವರಣಗೊಂಡಿರುವ ಈ ಉತ್ಪನ್ನವು ನಿಸ್ಸಾನ್ ನ ಭಾರತದ ಉತ್ಪನ್ನಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ.
ಇದರ ನಂತರ ಆರ್ಥಿಕ ವರ್ಷ 26ರ ಆರಂಭದಲ್ಲಿ ಈ ಹಿಂದೆಯೇ ಘೋಷಿಸಲಾಗಿರುವ 5 ಆಸನಗಳ ಸಿ-ಎಸ್‌ಯುವಿ (ಕಾಂಪ್ಯಾಕ್ಟ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಬಿಡುಗಡೆಯಾಗಲಿದೆ. ಈ ಕುರಿತಾಗಿ ಕಂಪನಿಯು ಇಂದು ಭಾರತದಲ್ಲಿ ಎರಡು ಹೊಸ ಟೀಸರ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಟೀಸರ್ ನಲ್ಲಿ ಎರಡೂ ವಾಹನಗಳ ಮಾಹಿತಿಯನ್ನು ಹಂಚಿಕೊಂಡಿದೆ. ನಿಸ್ಸಾನ್ ಮೋಟಾರ್ ಇಂಡಿಯಾ ಆರ್ಥಿಕ ವರ್ಷ 26ರ ವೇಳೆಗೆ ಭಾರತೀಯ ಗ್ರಾಹಕರಿಗಾಗಿ ಬಿ/ ಸಿ ಮತ್ತು ಡಿ-ಎಸ್‌ಯುವಿ ವಿಭಾಗಗಳಲ್ಲಿ 4 ಹೊಸ ಉತ್ಪನ್ನಗಳನ್ನು ಹೊಂದುವ ಯೋಜನೆ ರೂಪಿಸಿದೆ.
ಸಿ-ಎಸ್‌ಯುವಿಯನ್ನು ಭಾರತದಲ್ಲಿ ಈ ವಿಭಾಗದಲ್ಲಿ ಸಂಚಲನ ಸೃಷ್ಟಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಉತ್ತಮ ತಂತ್ರಜ್ಞಾನಗಳನ್ನು ಹೊಂದಿರುವ ಈ ಉತ್ಪನ್ನವು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಈ ಹೊಸ ಸಿ-ಎಸ್‌ಯುವಿ, ನಿಸ್ಸಾನ್ ಎಸ್‌ಯುವಿ ಡಿಎನ್‌ಎಯನ್ನು ಹೊಂದಿದೆ. ವಿಶ್ವಾಸಾರ್ಹತೆ, ಪ್ರೀಮಿಯಂ ಕರಕುಶಲತೆ ಮತ್ತು ತಂತ್ರಜ್ಞಾನವನ್ನು ಹೊಂದಿರುವ ನಿಸ್ಸಾನ್ ಎಸ್‌ಯುವಿ ಡಿಎನ್‌ಎ ಹೊಂದಿರುವ ಸಿ-ಎಸ್‌ಯುವಿ ಭಾರತೀಯ ರಸ್ತೆಗಳಿಗೆ ಸೂಕ್ತವಾಗಿ ಮೂಡಿಬಂದಿದೆ.
ಹೊಸ ನಿಸ್ಸಾನ್ ಮ್ಯಾಗ್ನೈಟ್‌ನ ಯಶಸ್ಸಿನ ಆಧಾರದ ಮೇಲೆ ನಿಸ್ಸಾನ್ ಹೊಸ ಸಿ-ಎಸ್‌ಯುವಿಯನ್ನು ಪರಿಚಯಿಸುತ್ತಿದೆ, ಇದನ್ನು ಭಾರತದಲ್ಲಿ ತಯಾರಿಸಿ ಜಾಗತಿಕವಾಗಿ ರಫ್ತು ಮಾಡಲಾಗುತ್ತದೆ. ಈ 5 ಆಸನಗಳ ಸಿ-ಎಸ್‌ಯುವಿ ಚೆನ್ನೈ ಘಟಕದಿಂದ ಬರುವ ಎರಡನೇ ಮಾದರಿಯಾಗಿದೆ.
ನಿಸಾನ್ ಮ್ಯಾಗ್ನೈಟ್ ಕಾರು ನಿರ್ವಹಣಾ ವೆಚ್ಚ ಕೇವಲ 39 ಪೈಸೆ, ಅಧಿಕೃತ ಘೋಷಣೆ!
ನಿಸ್ಸಾನ್ 7 ಆಸನಗಳ ಬಿ-ಎಂಪಿವಿ ಬಿಡುಗಡೆ ಮಾಡುವ ಮೂಲಕ ತನ್ನ ಗ್ರಾಹಕರಿಗೆ ಅತ್ಯುತ್ತಮ ಮೌಲ್ಯ, ಗುಣಮಟ್ಟ ಮತ್ತು ಸೌಲಭ್ಯವನ್ನು ಒದಗಿಸುತ್ತದೆ. ಈ ಬಿ-ಎಂಪಿವಿ ವಿಶಿಷ್ಟ ಶೈಲಿಯನ್ನು ಹೊಂದಿದ್ದು, ನಿಸಾನ್‌ನ ವಿಶಿಷ್ಟ ವಿನ್ಯಾಸ ತತ್ವಕ್ಕೆ ಪೂರಕವಾಗಿ ಸಿದ್ಧವಾಗಿದೆ. ಎಲ್ಲಾ ಸಾಲುಗಳಲ್ಲಿ ಕೂರುವ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸುವಂತೆ ಈ ಉತ್ಪನ್ನವನ್ನು ವಿನ್ಯಾಸಗೊಳಿಸಲಾಗಿದೆ. ನಿಸ್ಸಾನ್ ಭಾರತದಲ್ಲಿ ವಾರ್ಷಿಕವಾಗಿ ದೇಶೀಯವಾಗಿ ಮತ್ತು ರಫ್ತು ವಿಭಾಗದಲ್ಲಿ 1,00,000 ಯೂನಿಟ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. ಈ ಗುರಿಯನ್ನು ಸಾಧಿಸಲು ಕಂಪನಿಯು ಚೆನ್ನೈನ ಅಲಯನ್ಸ್ ಜೆವಿ ಘಟಕದಲ್ಲಿ ಎರಡೂ ಹೊಸ ಉತ್ಪನ್ನಗಳನ್ನು ಸ್ಥಳೀಯವಾಗಿ ತಯಾರಿಸಲಿದೆ.