ನವದೆಹಲಿ(ಫೆ.15): ಭಾರತದಲ್ಲಿ ಸಬ್‌ಕಾಂಪಾಕ್ಟ್ SUV ಕಾರುಗಳಿಗೆ ಬೇಡಿಕೆ ಹೆಚ್ಚಾದ ಸಂದರ್ಭದಲ್ಲಿ ಎಲ್ಲಾ ಆಟೋ ಕಂಪನಿಗಳು(Automobile) ಹಲವು SUV ಕಾರುಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಿಸಾನ್ ಹಾಗೂ ರೆನಾಲ್ಟ್ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಕೈಗೆಟುಕುವ ದರದಲ್ಲಿ ನಿಸಾನ್ ಮ್ಯಾಗ್ನೈಟ್( Nissan Magnite) ಹಾಗೂ ರೆನಾಲ್ಟ್ ಕಿಗರ್(Renault Kiger) ಕಾರು ಬಿಡುಗಡೆಯಾಗಿದೆ. ಈ ಕಾರು ಗ್ಲೋಬಲ್ NCAP ಸೇಫ್ಟಿ ಪರೀಕ್ಷೆಯಲ್ಲಿ(NCAP Crash Test) ತಲಾ 4 ಸ್ಟಾರ್ ಸಂಪಾದಿಸಿದೆ.
ನಿಸಾನ್ ಮ್ಯಾಗ್ನೈಟ್ ಕಾರು ಸುರಕ್ಷತೆಯಲ್ಲಿ 4 ಸ್ಟಾರ್(4 star rating) ಪಡೆದುಕೊಂಡಿದೆ. ಗ್ಲೋಬಲ್ NCAP ಸುರಕ್ಷತೆಯಲ್ಲಿ ಗರಿಷ್ಠ ರೇಟಿಂಗ್ 5 ಸ್ಟಾರ್ ಆಗಿದೆ. ಕಡಿಮೆ ಬೆಲೆಯ ಮ್ಯಾಗ್ನೈಟ್ 4 ಸ್ಟಾರ್ ಪಡೆದುಕೊಂಡಿದೆ. ಮೊದಲೇ ಭಾರಿ ಭೇಡಿಕೆ ವ್ಯಕ್ತವಾಗಿದ್ದ ಮ್ಯಾಗ್ನೈಟ್ ಕಾರಿಗೆ ಇದೀಗ ಬೇಡಿಕೆ ದುಪ್ಪಟ್ಟಾಗಿದೆ.
Tata Safety Cars ಭಾರತದಲ್ಲಿ 5 ಸ್ಟಾರ್ ಸುರಕ್ಷತೆ ಕಾರು, ಹೊಸ ಮಾನದಂಡ ಸ್ಥಾಪಿಸಿದ ಟಾಟಾ ಮೋಟಾರ್ಸ್!
2020ರಲ್ಲಿ ನಿಸಾನ್ ಮ್ಯಾಗ್ನೈಟ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಮ್ಯಾಗ್ನೈಟ್ ಕಾರಿನ ಬೆಲೆ 5.76 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಕೈಗೆಟುಕುವ ದರದಲ್ಲಿ ಲಭ್ಯವಿರುವ ಕಾರು ವಯಸ್ಕರ ಪ್ರಯಾಣಿಕರ ಸುರಕ್ಷತೆಯಲ್ಲಿ ಗರಿಷ್ಠ 17 ಅಂಕಗಳ ಪೈಕಿ 11.85 ಅಂಕ ಸಂಪಾದಿಸಿದೆ. ಮಕ್ಕಳು ಹಾಗೂ ವಯಸ್ಕರ ಪ್ರಯಾಣದಲ್ಲಿ ಮ್ಯಾಗ್ನೈಟ್ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.
ರೆನಾಲ್ಟ್ ಕಿಗರ್
ರೆನಾಲ್ಟ್ ಕ್ವಿಡ್ ಬಳಿಕ ರೆನಾಲ್ಟ್ ಆಟೋ ಕಂಪನಿಗೆ ಹೊಸ ಚೈತನ್ಯ ನೀಡಿದ ಕಾರು ರೆನಾಲ್ಟ್ ಕಿಗರ್. ಕಿಗರ್ ಬೆಲೆ 5.79 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತದೆ. ಇದೀಗ ರೆನಾಲ್ಟ್ ಕಿಗರ್ ಕೂಡ ಸುರಕ್ಷತಾ ಪರೀಕ್ಷೆಯಲ್ಲಿ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ವಯಸ್ಕರ ಪ್ರಯಾಣ ಸುರಕ್ಷತಾ ಪರೀಕ್ಷೆಯ ಗರಿಷ್ಠ 17 ಅಂಕಗಳಲ್ಲಿ ಕಿಗರ್ 12.34 ಅಂಕಗಳಿಸಿದೆ. ಈ ಮೂಲಕ ಭಾರತದಲ್ಲಿ ರೆನಾಲ್ಟ್ ಸುರಕ್ಷತಾ ಕಾರಿನತ್ತೆ ಹೆಚ್ಚು ಗಮನ ಹರಿಸುತ್ತಿದೆ.
India safest cars ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ವರ್ಷದ ಬೆಸ್ಟ್ ಸೇಫ್ಟಿ ಕಾರು ಲಿಸ್ಟ್!
2014ರ ವೇಳೆಗೆ ಭಾರತದಲ್ಲಿ ಕಾರಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಇರಲಿಲ್ಲ. ಮೈಲೇಜ್ ಹಾಗೂ ಕಡಿಮೆ ದರದ ಕಾರುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಆದರೆ 2014ರ ಬಳಿಕ ಕಠಿಣ ನಿಯಮ, ಜಾಗೃತಿಗಳಿಂದ ಭಾರತ ಕಾರಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿತು. ಪರಿಣಾಣ ರೆನಾಲ್ಟ್ ಇದೀಗ ಉತ್ಪಾದಿಸುವ ಕಾರುಗಳು 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಕಿಗರ್ ಮೊದಲು ರೆನಾಲ್ಟ್ ಟ್ರೈಬರ್ ಕಾರು ಬಿಡುಗಡೆ ಮಾಡಿತ್ತು. ಈ ಕಾರು ಕೂಡ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.
2016ರಲ್ಲಿ ರೆನಾಲ್ಟ್ ಕ್ವಿಡ್ ಸುರಕ್ಷತಾ ಫಲಿತಾಂಶದಲ್ಲಿ ಶೂನ್ಯ ರೇಟಿಂಗ್ ಪಡೆದಿತ್ತು. 2016ರ ಅಂತ್ಯದಲ್ಲಿ ಇದೇ ಕ್ವಿಡ್ 1 ಸ್ಟಾರ್ ಪಡೆದುಕೊಂಡಿತು. ಇನ್ನು 2017ರಲ್ಲಿ ರೆನಾಲ್ಡ್ ಡಸ್ಟರ್ ಶೂನ್ಯ ರೇಟಿಂಗ್ ಪಡೆದಿತ್ತು. ಈ ಕಾರಿನಲ್ಲಿ ಡ್ರೈವರ್ ಏರ್‌ಬ್ಯಾಗ್ ಕೂಡ ಇರಲಿಲ್ಲ. ಇನ್ನು 2017ರ ಅಂತ್ಯದಲ್ಲಿ ಉತ್ಪಾದನೆಯಾದ ಡಸ್ಟರ್ ಡ್ರೈವರ್ ಏರ್‌ಬ್ಯಾಗ್ ಅಳವಡಿಸಿತ್ತು. ಇಷ್ಟೇ ಅಲ್ಲ 3 ಸ್ಟಾರ್ ರೇಟಿಂಗ್ ಪಡೆದುಕೊಂಡಿತು. ಇನ್ನು ಟ್ರೈಬರ್ ಹಾಗೂ ಇದೀಗ ಕಿಗರ್ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.
ಭಾರತದಲ್ಲಿ ಟಾಪ್ ಸುರಕ್ಷತಾ ಕಾರು:
ಭಾರತದಲ್ಲಿ ಗರಿಷ್ಠ ಸುರಕ್ಷತೆ ಕಾರುಗಳನ್ನು ನೀಡುತ್ತಿರುವ ಹೆಗ್ಗಳಿಕಗೆ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಗಿದೆ. ಟಾಟಾ ಹಾಗೂ ಮಹೀಂದ್ರ ಬಹುತೇಕ ಎಲ್ಲಾ ಕಾರುಗಳು 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ. ಕೈಗೆಟುಕುವ ದರಲ್ಲಿ ಅತ್ಯುತ್ತಮ ಕಾರುಗಳನ್ನು ನೀಡುತ್ತಿರುವ ಕೀರ್ತಿ ಭಾರತದ ಈ ಎರಡು ಸಂಸ್ಥೆಗಳಿಗಿದೆ.