ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ನಿಸಾನ್ ಮ್ಯಾಗ್ನೈಟ್ ಭಾರಿ ಸಂಚಲನ ಸೃಷ್ಟಿಸಿದೆ. ಕೈಗೆಟುಕುವ ದರ, ಅತ್ಯಾಕರ್ಷ ಡಿಸೈನ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಇದೀಗ ಕಾರು ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದ್ದು, SUV ವಿಭಾಗದ ಎಲ್ಲಾ ದಾಖಲೆ ಪುಡಿ ಮಾಡಿದೆ
ನವದೆಹಲಿ(ಜ.05): ನಿಸಾನ್ ಮ್ಯಾಗ್ನೈಟ್ SUV ಕಾರು ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದೆ. ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಗೊಂಡ ನಿಸಾನ್ ಮ್ಯಾಗ್ನೈಟ್ ಇದೀಗ ಒಂದು ತಿಂಗಳಲ್ಲಿ 38,000 ಕಾರುಗಳು ಬುಕ್ ಆಗಿವೆ. ಈ ಮೂಲಕ SUV ಸಬ್ ಕಾಂಪಾಕ್ಟ್ ಕಾರುಗಳಲ್ಲಿ ಗರಿಷ್ಠ ಎನಿಸಿಕೊಂಡಿದೆ.
ಬಹುಬೇಡಿಕೆಯ, ಅಗ್ಗದ ದರದ ನಿಸಾನ್ ಮ್ಯಾಗ್ನೈಟ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!
undefined
ನಿಸಾನ್ ಮ್ಯಾಗ್ನೈಟ್ ಕಾರಿಗೆ ಬೇಡಿಕೆ ಹೆಚ್ಚಾದ ಕಾರಣ ವಿತರಣೆ ಕೂಡ ವಿಳಂಭವಾಗುತ್ತಿದೆ. ಇನ್ನು ಬಿಡುಗಡೆಯಾದ ಮೊದಲ ತಿಂಗಳು ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ್ದ ನಿಸಾನ್ ಇದೀಗ ಮ್ಯಾಗ್ನೈಟ್ MI XE ವೇರಿಯೆಂಟ್ ಬೆಲೆ 4.99 ಲಕ್ಷ ರೂಪಾಯಿಂದ 5.49 ಲಕ್ಷ ರೂಪಾಯಿಗೆ(ಎಕ್ಸ್ ಶೋರೂಂ) ಹೆಚ್ಚಿಸಲಾಗಿದೆ.
ಹೆಚ್ಚಾಯ್ತು ನಿಸಾನ್ ಮ್ಯಾಗ್ನೈಟ್ ಬೇಡಿಕೆ; ನಿರ್ವಹಣೆ ವೆಚ್ಚ ಪ್ರತಿ ಕಿ.ಮೀಗೆ 29 ಪೈಸೆ ಮಾತ್ರ
ಭಾರತದಲ್ಲಿ ನಿರ್ಮಾಣವಾಗುತ್ತಿರುವ ನಿಸಾನ್ ಮ್ಯಾಗ್ನೈಟ್ ಕಾರು ಸದ್ಯದಲ್ಲೇ ಇಂಡೋನೇಷಿಯಾ ಹಾಗೂ ಸೌತ್ಆಫ್ರಿಕಾಗೆ ರಫ್ತಾಗಲಿದೆ. ಭಾರತದಲ್ಲಿ ನಿಸಾನ್ ಕಾರುಗಳ ಬೇಡಿಕೆ ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ ಮ್ಯಾಗ್ನೈಟ್ ಕಾರಿನ ಮೂಲಕ ಮತ್ತೆ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ನಿಸಾನ್ ಕಾರುಗಳ ಪೈಕಿ ಮ್ಯಾಗ್ನೈಟ್‌ಗೆ ಅತೀ ಹೆಚ್ಚು ಬೇಡಿಕೆ ಬರುತ್ತಿದೆ