8 ವರ್ಷದಲ್ಲೇ ಅತ್ಯಧಿಕ ಟಾಟಾ ಪ್ರಯಾಣಿಕ ವಾಹನಗಳ ಮಾರಾಟ!

By Suvarna News  |  First Published Jan 4, 2021, 6:37 PM IST

ಟಾಟಾ ಮೋಟಾರ್ಸ್ ಅತಿ ಹೆಚ್ಚು ಪ್ರಯಾಣಿಕ ವಾಹನಗಳ ಮಾರಾಟ ಮಾಡುವುದರ ಮೂಲಕ ದಾಖಲೆ ಸೃಷ್ಟಿಸಿದೆ. ಕಳೆದ 8 ವರ್ಷಗಳಲ್ಲಿ ಅತ್ಯಧಿಕ ಟಾಟಾ ವಾಹನಗಳು ಮಾರಾಟವಾಗಿವೆ. ಟಿಯಾಗೋ, ಟಿಗೋರ್, ನೆಕ್ಸಾನ್‌ನಂಥ ಬ್ರಾಂಡ್‌ಗಳು ಕಂಪನಿಯ ಬೆಳವಣಿಗೆಯಲ್ಲಿ ಹೆಚ್ಚಿನ ಕೊಡುಗೆ ನೀಡಿವೆ.


ಭಾರತದ ವಾಹನ ತಯಾರಿಕಾ ಕಂಪನಿ ಟಾಟಾ ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕ ಕಾರು ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. 2020ರ ಡಿಸೆಂಬರ್ ತಿಂಗಳು ಹಾಗೂ ತ್ರೈಮಾಸಿಕ ಮಾರಾಟದ ವರದಿಯನ್ನು ಬಹಿರಂಗಗೊಳಿಸಿರುವ ಟಾಟಾ ಕಂಪನಿ, ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಒಟ್ಟು 68,803 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. 2020ರ ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.89ರಷ್ಟು ಬೆಳವಣಿಗೆಯಾಗಿದೆ. ಆ ಅವಧಿಯಲ್ಲಿ ಕಂಪನಿ 36,354 ವಾಹನಗಳನ್ನು ಮಾರಾಟ ಮಾಡಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

90 ಲಕ್ಷಕ್ಕೂ ಅಧಿಕ ಮಾರಾಟ, ದಾಖಲೆ ಬರೆದ ಹೋಂಡಾ ಶೈನ್

Tap to resize

Latest Videos

undefined

ಕಳೆದ 8 ವರ್ಷಗಳಲ್ಲಿ  ಟಾಟಾ ಕಂಪನಿ ತೋರಿದ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಮೊತ್ತೊಂದೆಡೆ, 2020 ಡಿಸೆಂಬರ್‌ನಲ್ಲಿ ಟಾಟಾ ಕಂಪನಿ ಒಟ್ಟು 23454 ವಾಹನಗಳನ್ನು ಮಾರಾಟ ಮಾಡಿದೆ. 2029ರ ಡಿಸೆಂಬರ್ ಹೋಲಿಕೆ ಮಾಡಿದರೆ ಶೇ.84ರಷ್ಟು ಬೆಳವಣಿಗೆ ಕಂಡಿದೆ. ಆಗ ಕಂಪನಿ ಒಟ್ಟು 12,785 ವಾಹನಗಳು ಮಾರಾಟವಾಗಿದ್ದವು.

ದೇಶಿಯ ಮಾರುಕಟ್ಟೆಯಲ್ಲಿ ಕಂಪನಿ, ಡಿಸೆಂಬರ್ ತಿಂಗಳಲ್ಲಿ ಒಟ್ಟು 53,430 ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಮಾರಿದ್ದು, ಶೇ.21ರಷ್ಟು ಹೆಚ್ಚಳವನ್ನು ದಾಖಲಿಸಿದೆ. 2019ರ ಡಿಸೆಂಬರ್‌ನಲ್ಲಿ ಕಂಪನಿ 44,254 ವಾಹನಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿತ್ತು. ಅದೇ ರೀತಿ, ಮೂರನೇ ತ್ರೈಮಾಸಿಕದಲ್ಲಿ ಒಟ್ಟು 150,958 ವಾಹನಗಳು ಮಾರಾಟವಾಗಿದೆ. ಕಳೆದ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.24ರಷ್ಟು ಹೆಚ್ಚಳವಾಗಿದೆ. ಆಗ ಕಂಪನಿ 121,463 ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿತ್ತು.

ಟಾಟಾ ಕಂಪನಿ ಜನಪ್ರಿಯ ಬ್ರಾಂಡ್‌ಗಳಾದ ಟಿಯಾಗೋ, ಟಿಗೋರ್ ಮತ್ತು ನೆಕ್ಸಾನ್‌ ಫೇಸ್‌ಲಿಫ್ಟ್ ಮಾರಾಟ ಹೆಚ್ಚಳಕ್ಕೆ ಹೆಚ್ಚು ಕಾರಣವಾಗಿವೆ. ಜೊತೆಗೆ, ಹೊಸ ಮಾಡೆಲ್‌ಗಳಾದ ಹ್ಯಾರಿಯರ್ ಮತ್ತು ಅಲ್ಟ್ರೋಜ್ ಕೂಡ ಮಾರುಕಟ್ಟೆಯಲ್ಲಿ ಹೆಚ್ಚು ಗಮನಸೆಳೆದಿದ್ದು, ಜನರು ಅವುಗಳತ್ತ ಆಕರ್ಷಿತರಾಗುತ್ತಿದ್ದಾರೆ.
ವಿಶೇಷ ಎಂದೆರ, ಮೂರನೇ ತ್ರೈಮಾಸಿಕದಲ್ಲಿ ನೆಕ್ಸಾನ್ ಇವಿ ಅತಿ ಹೆಚ್ಚಿನ ಮಾರಾವಾಗಿವೆ. ಮೂರನೇ ತ್ರೈಮಾಸಿಕದಲ್ಲಿ 1253 ವಾಹನಗಳು ಮಾರಾಟವಾಗಿವೆ. 2020ರ ಡಿಸೆಂಬರ್‌ ತಿಂಗಳವೊಂದರಲ್ಲೇ 418 ನೆಕ್ಸಾನ್ ಇವಿ ವಾಹನಗಳು ಸೇಲ್ ಆಗಿವೆ.

ದೇಶದ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್ ಸೋನಾಲಿಕಾ ‘ಟೈಗರ್’ ಬಿಡುಗಡೆ

ಎಲ್ಲರೂ ವೈಯಕ್ತಿಕ ಪ್ರಯಾಣಕ್ಕೆ ಆದ್ಯತೆ ನೀಡುತ್ತಿರುವುದು ಮತ್ತು ಹಬ್ಬದ ಪರಿಣಾಮ ಪ್ರಯಾಣಿಕ ವಾಹನಗಳ ಉದ್ಯಮ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬೆಳವಣಿಗೆ ಕಾಣುತ್ತಿದೆ. ಟಾಟಾ ಮೋಟಾರ್ಸ್ ಅತ್ಯುತ್ತಮ ಮಾರಾಟವನ್ನೇ ಕಂಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರಯಾಣಿಕ ವಾಹನ ಮಾರಾಟದಲ್ಲಿ ಹಿಂದಿನ ಆರ್ಥಿಕವರ್ಷಕ್ಕೆ ಹೋಲಿಸಿದರೆ ಶೇ.89ರಷ್ಟು ಏರಿಕೆಯಾಗಿದೆ ಮತ್ತು ಕಳೆದ 33 ತ್ರೈಮಾಸಿಕಗಳಲ್ಲಿ ಇದು ಅತಿ ಹೆಚ್ಚು ಟಾಟಾ ಮೋಟಾರ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕಮರ್ಷಿಯಲ್ ವಾಹನಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಅತ್ಯುತ್ತಮ ಸಾಧನೆಯನ್ನು ತೋರಿದೆ. ಮಧ್ಯಮ ಮತ್ತು ಭಾರಿ ಕಮರ್ಷಿಯಲ್ ವಾಹನಗಳ ಮಾರಾಟದಲ್ಲಿ ಶೇ.20ರಷ್ಟು ಮಾರಾಟ ಕಂಡಿದೆ. ಕಳೆದ ತಿಂಗಳ 8377 ವಾಹನಗಳನ್ನು ಮಾರಟ ಮಾಡಲಾಗಿದೆ. 2019ರ ಡಿಸೆಂಬರ್ 69,57 ವಾಹನಗಳು ಮಾರಾಟವಾಗಿದ್ದವು. ಇಂಟರ್‌ಮೀಡಿಯೆಟ್ ಮತ್ತು ಲಘ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಕಂಪನಿ ಡಿಸೆಂಬರ್ ತಿಂಗಳಲ್ಲಿ 4619 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ 4290 ವಾಹನಗಳನ್ನು ಮಾರಾಟ ಮಾಡಿತ್ತು.

ಇತ್ತೀಚಿನ ವರ್ಷಗಳಲ್ಲಿ ಟಾಟಾ ಮೋಟಾರ್ಸ್ ಭಾರತೀಯ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದೆ. ವಿಶೇಷವಾಗಿ ಪ್ರಯಾಣಿ ವಾಹನಗಳ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಮಾರಾಟ ಮಾಡಿದೆ. ಆ ಮೂಲಕ ಗ್ರಾಹಕರ ವಿಶ್ವಾಸವನ್ನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ.

7000 ರಾಯಲ್ ಎನ್‌ಫೀಲ್ಡ್ ಮಿಟಿಯರ್ ಸೋಲ್ಡ್, ಕ್ಲಾಸಿಕ್ 350 ಮಾರಾಟವಾಗಿದ್ದೆಷ್ಟು?

click me!