ಬರುತ್ತಿದೆ ಟಾಟಾ ಟಿಯಾಗೋ ಪ್ರತಿಸ್ಪರ್ಧಿ ನಿಸಾನ್ ಎಲೆಕ್ಟ್ರಿಕ್ ಕಾರು, 259Km ಮೈಲೇಜ್, ಕಡಿಮೆ ಬೆಲೆ

Published : Sep 25, 2026, 03:52 PM IST
Nissan New Electric Car

ಸಾರಾಂಶ

ಟಾಟಾ ಟಿಯಾಗೋ ಇವಿಗೆ ಪ್ರತಿಸ್ಪರ್ಧಿಯಾಗಿ ಇದೀಗ ನಿಸಾನ್ ಪಿಕ್ಸೋ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ 259 ಕಿಲೋಮೀಟ್ ಮೈಲೇಜ್ ಮಾತ್ರವಲ್ಲ, ಕೈಗೆಟುಕುವ ಬೆಲೆಯಲ್ಲಿ ಈ ಕಾರು ಲಭ್ಯವಿದೆ.

ನವದೆಹಲಿ (ಸೆ.25) ನಿಸಾನ್ ಮೋಟಾರ್ ಇದೀಗ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ನಿಸಾನ್ ಪಿಕ್ಸೋ ಅನ್ನೋ ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ನೇರವಾಗಿ ಟಾಟಾ ಟಿಯೋಗೋ ಇವಿ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ನಿಸಾನ್ ಪಿಕ್ಸೋ ಹಲವು ವಿಶೇಷತೆ ಹೊಂದಿದೆ. ಪ್ರಮುಖವಾಗಿ ಒಂದು ಬಾರಿ ಚಾರ್ಜ್ ಮಾಡಿದರೆ ಈ ಕಾರು 259 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಕೈಗೆಟುಕುವ ದರದಲ್ಲಿ ಈ ಕಾರು ಲಭ್ಯವಾಗಲಿದೆ ಎಂದು ವರದಿಗಳು ಹೇಳುತ್ತಿದೆ.

28 ನಿಮಿಷದಲ್ಲಿ ಶೇಕಡಾ 80ರಷ್ಟು ಚಾರ್ಜ್

27.5kWh LFP ಬ್ಯಾಟರಿ ಬಳಸಲಾಗಿದೆ. 82hp ಮೋಟಾರ್ ಈ ಕಾರಿನಲ್ಲಿದೆ. ಈ ಕಾರನ ಚಾರ್ಜಿಂಗ್ ಕೂಡ ಸುಲಭವಾಗಿದೆ. ಶೇಕಡಾ 15 ರಿಂದ 80 ರಷ್ಟು ಚಾರ್ಜಿಂಗ್ ಮಾಡಲು ಕೇವಲ 28 ನಿಮಿಷ ಮಾತ್ರ ಸಾಕು. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 259 ಕಿಲೋಮೀಟರ್ ಮೈಲೇಜ್ ನೀಡಲಿದೆ. 50kW DC ಚಾರ್ಜರ್ ಮೂಲಕ ಅತೀ ವೇಗವಾಗಿ ಚಾರ್ಜಿಂಗ್ ಮಾಡಬಹುದು. ಇನ್ನು ಮನೆಯಲ್ಲಿ ಚಾರ್ಜ್ ಮಾಡಲು 11kW ಬೈ ಡೈರೆಕ್ಷನ್ ಎಸಿ ಚಾರ್ಜಿಂಗ್ ಯೂನಿಟ್ ಸಪೋರ್ಟ್ ಮಾಡಲಿದೆ.

ನಿಸಾನ್ ಪಿಕ್ಸೋ ಎಲೆಕ್ಟ್ರಿಕ್ ಕಾರು 3796ಎಂಎಂ ಉದ್ದ, 1790 ಎಂಎಂ ಅಗಲ ಹಾಗೂ 2492 ಎಂಎಂ ವ್ಹೀಲ್ ಬೇಸ್ ಹೊಂದಿದೆ. 140ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದು ಎಸ್‌ಯುವಿ ಕಾರಲ್ಲ, ಆದರೆ ಗ್ರಾಮೀಣ ರಸ್ತೆಗಳಿಗೂ ಹೇಳಿ ಮಾಡಿಸಿದ ಗ್ರೌಂಡ್ ಕ್ಲಿಯರೆನ್ಸ್ ಸಿಗಲಿದೆ. ಉತ್ತಮ ಸ್ಥಳವಾಕಾಶವೂ ಈ ಕಾರಿನಲ್ಲಿದೆ.

ಕಾರಿನ ಬೆಲೆ ಎಷ್ಟು?

ಸದ್ಯ ಈ ಕಾರು ಯೂರೋಪ್‌ನಲ್ಲಿ ಬಿಡುಗಡೆಯಾಗಿದೆ. 2027ರ ಆರಂಭದಲ್ಲಿ ಡೆಲಿವರಿ ಆರಂಭಗೊಳ್ಳಲಿದೆ. ಯೂರೋಪ್‌ ಮಾರುಕಟ್ಟೆ ಬಳಿಕ ಭಾರತ ಸೇರಿದಂತೆ ಇತರ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸದ್ಯ ಈ ಕಾರಿನ ಬೆಲೆ ಬಹಿರಂಗವಾಗಿಲ್ಲ. ಭಾರತದಲ್ಲಿ ನಿಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದೆ. ಹೀಗಾಗಿ ಆರಂಭದಲ್ಲಿ ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ನಿಸಾನ್ ಮುಂದಾಗಿದೆ. ಈ ಮೂಲಕ ಭಾರತದಲ್ಲಿ ಟಾಟಾ ಟಿಯಾಗೋ, ಎಂಜಿ ಕಾಮೆಟ್ ಸೇರಿದಂತೆ ಹಲವು ಸಣ್ಣ ಇವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಬರಲಿದೆ. ಹಂತ ಹಂತವಾಗಿ ನಿಸಾನ್ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ವಿಸ್ತರಿಸುವ ಸಾಧ್ಯತೆ ಇದೆ.

ಕಾರಿನಲ್ಲಿ 7 ಇಂಚಿನ ಡ್ರೈವರ್ ಡಿಸ್‌ಪ್ಲೇ, 10 ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಮ್, 16 ಭಾಷೆಗಳಲ್ಲಿ ಜೆಮಿನಿ ವಾಯ್ಸ್ ಅಸಿಸ್ಟೆನ್ಸ್, ಡ್ರೈವರ್ ಅಸಿಸ್ಟೆನ್ಸ್ ಸೇರಿದಂತೆ ಹಲವು ತಂತ್ರಜ್ಞಾನ ಆಧಾರಿತ ಫೀಚರ್ ಇದರಲ್ಲಿದೆ.ಕ್ರೂಸ್ ಕಂಟ್ರೋಲ್, ಲೇನ್ ಕಂಟ್ರೋಲ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಇದರಲ್ಲಿದೆ.

PREV
Read more Articles on
click me!

Recommended Stories

ಮಾರುತಿ ಡಿಸೈರ್ ಸೇರಿ ಸೆಡಾನ್ ಕಾರುಗಳಿಗೆ ಟಾಟಾ ಶಾಕ್ , ಕೇವಲ 5.29 ಲಕ್ಷಕ್ಕೆ ಏರಿಸ್ ಕಾರು ಲಾಂಚ್
ಕೇವಲ 11 ಸಾವಿರ ರೂ.ಗೆ ಬುಕ್ ಮಾಡಿ ಹೊಸ ಹ್ಯುಂಡೈ ಬೆಯಾನ್ ಕಾರು, ಇದು ಮಿಡ್‌ ಸೈಜ್ SUV