ಕೇವಲ 11 ಸಾವಿರ ರೂ.ಗೆ ಬುಕ್ ಮಾಡಿ ಹೊಸ ಹ್ಯುಂಡೈ ಬೆಯಾನ್ ಕಾರು, ಇದು ಮಿಡ್‌ ಸೈಜ್ SUV

Published : Sep 24, 2026, 06:44 PM IST
New Hyundai Bayon Booking Starts

ಸಾರಾಂಶ

ಹ್ಯುಂಡೈ ಇದೀಗ ಹೊಚ್ಚ ಹೊಸ ಬೆಯಾನ್ ಕಾರು ಬಿಡುಗಡೆ ಮಾಡುತ್ತಿದೆ. ಕೇವಲ 11 ಸಾವಿರ ರೂಪಾಯಿಗೆ ಈ ಕಾರು ಬುಕಿಂಗ್ ತೆರೆದಿದೆ. ಅತ್ಯಂತ ಆಕರ್ಷಕ ವಿನ್ಯಾಸ, ಹೊಸ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು (ಸೆ.24) ಭಾರತದ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ ಪ್ರಮುಖ ಸ್ಥಾನ ಪಡೆದಿದೆ. ಹ್ಯುಂಡೈ ಕ್ರೆಟಾ, ವೆನ್ಯೂ, ಐ20, ಐ10 ಸೇರಿದಂತೆ ಹಲವು ಕಾರುಗಳ ಮೂಲಕ ಗ್ರಾಹಕರ ಕೈಗೆಟುಕುವ ದರದ ಪ್ರೀಮಿಯಂ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಹ್ಯುಂಡೈ ತನ್ನ ಎಸ್‌ಯುವಿ ಕಾರುಗಳ ಬೇಡಿಕೆಗೆ ಅನುಗುಣವಾಗಿ ಹೊಸ ಮಾದರಿ ಕಾರು ಬಿಡುಗಡೆ ಮಾಡುತ್ತಿದೆ. ಹ್ಯುಂಡೈ ಬೆಯಾನ್ ಮಿಡ್ ಸೈಜ್ ಎಸ್‌ಯುವಿ ಕಾರು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದೆ. ಇದಕ್ಕೂ ಮೊದಲು ಬುಕಿಂಗ್ ಆರಂಭಿಸಿದೆ. ಕೇವಲ 11,000 ರೂಪಾಯಿ ನೀಡಿ ಹೊಸ ಬೇಯಾನ್ ಕಾರು ಬುಕಿಂಗ್ ಮಾಡಿಕೊಳ್ಳಬಹುದು.

ಅತ್ಯಂತ ಆಕರ್ಷಕ ಕಾರು

ಬೇಯಾನ್ ಅತ್ಯಂತ ಆಕರ್ಷಕ ಕಾರು ಅನ್ನೋದರಲ್ಲಿ ಎರಡು ಮಾತಿಲ್ಲ. ಇನ್ನು ಹ್ಯುಂಡೈ ಸಿಗ್ನೇಚರ್ ಡ್ಯಾಶ್‌ಬೋರ್ಡ್, ಟಚ್‌ಸ್ಕ್ರೀನ್, ಎಐ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆ ಈ ಕಾರಿನಲ್ಲಿದೆ. ಬೇಯಾನ್ ಕುರಿತು ಹಲವು ಟೀಸರ್ ಬಿಡುಗಡೆ ಮಾಡಲಾಗಿದೆ. ಸ್ಪೋರ್ಟ್ ಸ್ಪ್ಲಿಟ್ ಹೆಡ್‌ಲ್ಯಾಂಪ್ಸ್, ಹೆಚ್ ಶೇಪ್ ಡೇ ಟೈಮ್ ಎಲ್‌ಇಡಿ ರನ್ನಿಂಗ್ ಲೈಟ್, ರೂಫ್ ರೈಲ್ಸ್, ರೂಫ್ ಸ್ಪಾಯ್ಲರ್ ಸೇರಿದಂತೆ ಹಲವು ಆಕರ್ಷಣೆಗಳೂ ಇದರಲ್ಲಿದೆ.

ಲೋವರ್ ಬಂಪರ್‌ನಲ್ಲಿ ಹೆಡ್‌ಲ್ಯಾಂಪ್ಸ್ ನೀಡಲಾಗಿದೆ. ಜೊತೆಗೆ ರಗಡ್ ಲುಕಿಂಗ್ ಸ್ಕಿಡ್ ಪ್ಲೇಟ್ ನೀಡಲಾಗಿದೆ. ಪುಲ್ ಟೈಪ್ ಡೋರ್ ಹ್ಯಾಂಡಲ್ಸ್, ರೇರ್‌ನಲ್ಲಿ ಸ್ಲಿಮ್ ಎಲ್‌ಇಡಿ ಲೈಟ್ಸ್ ಸೇರಿದಂತೆ ಕೆಲ ಹೊಸತನಗಳು ಈ ಕಾರಿನಲ್ಲಿದೆ. ಕಾರಿನ ಉದ್ದ, ಆಗಲ, ಎತ್ತರ ಕುರಿತ ನಿಖರ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

ಸ್ಮೂತ್ ಎಂಜಿನ್ ಹಾಗೂ ಬೆಸ್ಟ್ ಪರ್ಫಾಮೆನ್ಸ್

ಹ್ಯುಂಡೈ ಕಾರಿನ ಎಂಜಿನ್ ಅತ್ಯಂತ ಸ್ಮೂತ್, ಗೇರ್ ಶಿಫ್ಟಿಂಗ್ ಸೇರಿದಂತೆ ಡ್ರೈವಿಂಗ್ ಹೆಚ್ಚು ಆರಾಮದಾಯಕ. ಕಾರು ಚಲಿಸುತ್ತಿದ್ದರೂ ಹೊರಗಿನವರಿಗೂ, ಕಾರಿನಲ್ಲಿ ಪ್ರಯಾಣ ಮಾಡುತ್ತಿರುವವರಿಗೂ ಕಾರಿನ ಶಬ್ದ ಕೇಳಿಸುವುದಿಲ್ಲ. ಇದು ಹ್ಯುಂಡೈ ಎಂಜಿನ್ ವಿಶೇಷತೆ. ಈ ಹೊಸ ಬೇಯಾನ್ ಕಾರಿನಲ್ಲೂ ಎಂಜಿನ್ ಮತ್ತಷ್ಟು ಸ್ಮೂತ್ ನೀಡಲಾಗಿದೆ. 1.5 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಎಂದು ನಿರೀಕ್ಷಿಸಲಾಗಿದೆ. ಮ್ಯಾನ್ಯುಯೆಲ್ ಹಾಗೂ ಸಿವಿಟಿ ಟ್ರಾನ್ಸ್‌ಮಿಶನ್ ಆಯ್ಕೆ ಇರಲಿದೆ.

ಹೊಸ ಹ್ಯುಂಡೈ ಬೆಯಾನ್ ಕಾರಿನ ಬೆಲೆ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಅಂದಾಜಿನ ಪ್ರಕಾರ ಹ್ಯುಂಡೈ ಬೆಯಾನ್ ಕಾರಿನ ಬೆಲೆ 9 ರಿಂದ 14 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಹೇಳಲಾಗುತ್ತಿದೆ. ಇದು ಮಿಡ್ ಸೈಜ್ ಎಸ್‌ಯುವಿ ಕಾರಣ ಹೆಚ್ಚಿನ ಸ್ಥಳವಕಾಶ, ಬೂಟ್ ಸ್ಪೇಸ್, ಹೆಡ್‌ರೂಂ ಸ್ಪೇಸ್ ಸಿಗಲಿದೆ. ಭಾರತದ ಯಾವುದೇ ರಸ್ತೆಗಳಿಗೂ ಸೈ ಎನಿಸಿಕೊಳ್ಳಲಿದೆ.

PREV
Read more Articles on
click me!

Recommended Stories

27ನೇ ಹುಟ್ಟುಹಬ್ಬಕ್ಕೆ ತನ್ನ ವೀಡಿಯೋ ಎಡಿಟರ್‌ ವಿನೋದ್‌ಗೆ ಬಂಪರ್ ಸರ್ಪ್ರೈಸ್; ಮಧು ಗೌಡ ಕೊಟ್ಟ ಗಿಫ್ಟ್ ವೈರಲ್!
ಟೆಸ್ಲಾ ಸೇರಿ ಪ್ರತಿಷ್ಠಿತ ಕಂಪನಿಗಳನ್ನೇ ನಡುಗಿಸಿದ ಸೌದಿ ಅರೆಬಿಯಾ, 670KM ಮೈಲೇಜ್‌ನ ಸೀರ್ ಕಾರು ಲಾಂಚ್