ಸುರಕ್ಷತಾ ಟೆಸ್ಟ್‌ನಲ್ಲಿ 4 ಸ್ಟಾರ್ ಪಡೆದ 2024ರ ಹೊಸ ಮಾರುತಿ ಸ್ವಿಫ್ಟ್, 11,000 ರೂಗೆ ಬುಕಿಂಗ್ ಆರಂಭ!

By Suvarna News  |  First Published Apr 19, 2024, 3:42 PM IST

ಕಡಿಮೆ ನಿರ್ವಹಣಾ ವೆಚ್ಚ, ಗರಿಷ್ಠ ಮೈಲೇಜ್ ಹಾಗೂ ಕೈಗೆಟುಕುವ ದರದಲ್ಲಿ ಮಾರುತಿ ಸುಜುಕಿ ಕಾರುಗಳನ್ನು ನೀಡುತ್ತಿದೆ. ಆದರೆ ಸುರಕ್ಷತಾ ವಿಷಯದಲ್ಲಿ ಮಾರುತಿ ಸುಜುಕಿ ವಾಹನ ಹಿಂದೆ ಬಿದ್ದಿದೆ. ಇದೀಗ ಬಿಡುಗಡೆಗೆ ಸಜ್ಜಾಗಿರುವ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಸುರಕ್ಷತಾ ಪರೀಕ್ಷೆಯಲ್ಲಿ 4 ಸ್ಟಾರ್ ಪಡೆದಿದೆ.
 


ನವದೆಹಲಿ(ಏ.19) ಮಾರುತಿ ಸುಜುಕಿ ಶೀಘ್ರದಲ್ಲೇ 2024ರ ಹೊಚ್ಚ ಹೊಸ ಸ್ವಿಫ್ಟ್ ಕಾರು ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಈಗಾಗಲೇ ಬುಕಿಂಗ್ ಆರಂಭಗೊಂಡಿದೆ. ಅತ್ಯಾಕರ್ಷ ಲುಕ್, ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳ ನೂತನ ಸ್ವಿಫ್ಟ್ ಕಾರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ, ಭಾರತದಲ್ಲಿ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದರ ಬೆನ್ನಲ್ಲೇ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಇತಿಹಾಸ ರಚಿಸಿದೆ. 2024ರ ಸ್ವಿಫ್ಟ್ ಕಾರು ಜಪಾನ್ NCAP ಕ್ರಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ಉತ್ತಮ ಸುರಕ್ಷತೆ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ADAS ಸಿಸ್ಟಮ್ ಫೀಚರ್ ಹೊಂದಿರುವ ನೂತನ ಸ್ವಿಫ್ಟ್ ಕಾರು ಜಪಾನ್ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಭಾರತದಲ್ಲಿ ಇನ್ನು ಬಿಡುಗಡೆಯಾಗಿಲ್ಲ. ಇದೀಗ 4 ಸ್ಟಾರ್ ರೇಟಿಂಗ್ ಪಡೆದಿರುವುದು ಜಪಾನ್‌ನಲ್ಲಿ ಉತ್ಪಾದನೆಯಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಕಾರು. ಇಷ್ಟೇ ಅಲ್ಲ ಇದು ಜಪಾನ್ ಕ್ರಾಶ್ ಟೆಸ್ಟ್ ಪರೀಕ್ಷೆಯಾಗಿದೆ. ಗ್ಲೋಬಲ್ NCAP ಅಥವಾ ಭಾರತದಲ್ಲಿ ನಡಸುವ ಭಾರತ್ NCAP ಪರೀಕ್ಷೆಯಲ್ಲಿ ಈ ಕಾರು ಎಷ್ಟು ಸ್ಕೋರ್ ದಾಖಲಿಸಲಿದೆ ಅನ್ನೋ ಕುತೂಹಲ ಮನೆ ಮಾಡಿದೆ.

Latest Videos

undefined

ಮಾರುತಿ ಸುಜುಕಿಯಿಂದ ಹೊಸ ಕ್ರಾಂತಿ, ಶೀಘ್ರದಲ್ಲೇ 35 ಕಿ.ಮಿ ಮೈಲೇಜ್‌ನ ಸ್ವಿಫ್ಟ್, ಡಿಸೈರ್ ಕಾರು!

ಹೊಸ ಮಾರುತಿ ಸ್ವಿಫ್ಟ್ ಕಾರು ಈಗಾಗಲೇ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಕಾರು ಅಡ್ವಾನ್ಸ್ ಡ್ರೈವರ್  ಅಸಿಸ್ಟೆನ್ಸ್ ಸಿಸ್ಟಮ್ ಹೊಂದಿದೆ. ಇದರಿಂದ ಕಾರು ಡ್ರೈವಿಂಗ್ ಮತ್ತಷ್ಟು ಸುಲಭ ಹಾಗೂ ಸುರಕ್ಷತೆಯನ್ನು ನೀಡಲಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದ್ದು, ಹೊಸ ಆಯಾಮ ನೀಡಲಿದೆ.

ಭಾರತದಲ್ಲಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬುಕಿಂಗ್ ತೆರೆಯಲಾಗಿದೆ. 11,000 ರೂಪಾಯಿಗೆ ನೂತನ ಕಾರು ಬುಕ್ ಮಾಡಿಕೊಳ್ಳಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ನೂತನ ಮಾರುತಿ ಸ್ವಿಫ್ಟ್ ಕಾರು 1.2 ಲೀಟರ್ Z12E ಪೆಟ್ರೋಲ್ ಎಂಜಿನ್ ಹೊಂದಿದೆ. ಆದರೆ ಭಾರತದಲ್ಲಿ ಏಂಜಿನ್ ಹಾಗೂ ಎಮಿಶನ್‌ನಲ್ಲೂ ಕೆಲ ಬದಲಾವಣೆಯಾಗುವ ಸಾಧ್ಯತೆ ಇದೆ.  

ಹೊಸ ಮಾರುತಿ ಸ್ವಿಫ್ಟ್ ಕಾರಿನ ಬೆಲೆ ಬಹಿರಂಗವಾಗಿಲ್ಲ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ವಿಫ್ಟ್ ಕಾರಿನ ಬೆಲೆ 5.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ 8.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ.

ಟಾಟಾ ಸಫಾರಿಗೆ 1 ಕೋಟಿ , ಮಾರುತಿ ಸ್ವಿಫ್ಟ್ 27 ಲಕ್ಷ ರೂ; ಭಾರತದ ಕಾರಿಗೆ ವಿದೇಶದಲ್ಲಿ ಬೆಂಕಿ ಬೆಲೆ!
 

click me!