ಉದ್ಯಮಿ ಬಳಿ ಇದೆ ಅತೀ ದುಬಾರಿ ಪ್ಯೂರ್ ವೈಟ್ ಗೋಲ್ಡ್ ಬೆಂಜ್ ಕಾರು, ಇದರ ಬೆಲೆ 20.91 ಕೋಟಿ!

By Suvarna NewsFirst Published Apr 17, 2024, 3:52 PM IST
Highlights

ತೈಲ ಉದ್ಯಮಿ ಬಳಿ ಇರುವ ವಿಶ್ವದ ಅತ್ಯಂತ ದುಬಾರಿ ಪ್ಯೂರ್ ವೈಟ್ ಗೋಲ್ಡ್ ಬೆಂಜ್ ಕಾರು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಇದರ ಲುಕ್ ಹಾಗೂ ಬೆಲೆ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ.
 

ದುಬೈ(ಏ.17)  ಉದ್ಯಮಿಗಳು ಅತ್ಯಂತ ದುಬಾರಿ ಐಷಾರಾಮಿ ಕಾರುಗಳನ್ನು ಖರೀದಿಸುವುದು ಹೊಸದೇನಲ್ಲ. ರೋಲ್ಸ್ ರಾಯ್ಸ್, ಬುಗಾಟಿ, ಬೆಂಟ್ಲೆ ಸೇರಿದಂತೆ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಕಾರುಗಳನ್ನು ಖರೀದಿಸುತ್ತಾರೆ. ಇದೇ ವೇಳೆ ಕೆಲವರು ದುಬಾರಿ ಕಾರು ಖರೀದಿಸಿ ಮತ್ತಷ್ಟು ಖರ್ಚು ಮಾಡಿ ತಮಗೆ ಬೇಕಾದಂತೆ ಮಾಡಿಫಿಕೇಶನ್ ಮಾಡುತ್ತಾರೆ. ಗೋಲ್ಡ್ ಕೋಟೆಡ್ ಕಾರುಗಳು ಸುದ್ದಿಯಾಗಿದೆ. ಆದರೆ ದುಬೈನ ಬಿಲೇನಿಯರ್ ಮರ್ಸಿಡೀಸ್ ಬೆಜ್ ಕಾರನ್ನು ಸಂಪೂರ್ಣ ಪ್ಯೂರ್ ವೈಟ್ ಗೋಲ್ಡ್‌ನಿಂದ ಕಸ್ಟಮೈಸೇಶನ್ ಮಾಡಿಸಿದ್ದಾರೆ. ಈ ವೈಟ್ ಗೋಲ್ಡ್  ಬೆಂಜ್ ಕಾರಿನ ಬೆಲೆ ಬರೋಬ್ಬರಿ 20.91 ಕೋಟಿ ರೂಪಾಯಿ.

ದುಬೈ ತೈಲ ಉದ್ಯಮಿ ಈ ಕಾರು ಕಸ್ಟಮೈಸ್ ಮಾಡಿಸಿದ್ದಾರೆ. 18k ಪ್ಯೂರ್ ವೈಟ್ ಗೋಲ್ಡ್ ಮೂಲಕ ಈ ಕಾರಿನ ಎಕ್ಸ್‌ಟೀಯರ್ ನಿರ್ಮಾಣಗೊಂಡಿದೆ. ಈ ಕಾರನ್ನು ಕಾಯಲು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಕಾರಣ ಪ್ಯೂರ್ ವೈಟ್ ಗೋಲ್ಡ್ ಕಾರಾಗಿರುವ ಕಾರಣ ಕಾರಿನಿಂದ ಸಣ್ಣ ತುಣುಕು ಕದ್ದರೂ ಅಪಾರ ನಷ್ಟವಾಗಲಿದೆ. 

ಹೊಸ BMW X1 ಖರೀದಿಸಿದ ನಟ ನಿರ್ದೇಶಕ ತರುಣ್ ಸುಧೀರ್, ತಾಯಿ ಜೊತೆ ಮೊದಲ ರೌಂಡ್!

ಉದ್ಯಮಿ ಶಾಪಿಂಗ್ ಸೇರಿದಂತೆ ಈ ಕಾರಿನಲ್ಲಿ ಎಲ್ಲೇ ಹೋದರು ಸೆಕ್ಯೂರಿ ಸಿಬ್ಬಂದಿ ಮತ್ತೊಂದು ಕಾರಿನಲ್ಲಿ ಬೆಂಗಾವಲಾಗಿ ತೆರಳುತ್ತಾರೆ. ಉದ್ಯಮಿ ಭದ್ರತೆಗೆ ಬೇರೆ ಭದ್ರತಾ ಸಿಬ್ಬಂದಿಗಳಿದ್ದಾರೆ. ಕಾರು ಕಾಯಲು ಮತ್ತೊಂದು ಭದ್ರತಾ ಸಿಬ್ಬಂದಿ ಪಡೆಯನ್ನು ನೇಮಕ ಮಾಡಲಾಗಿದೆ.

ದುಬೈನಲ್ಲಿ ಈಗಾಗಲೇ ಈ ಕಾರು ಬಾರಿ ಸಂಚಲನ ಸೃಷ್ಟಿಸಿದೆ. ತೈಲ ಉದ್ಯಮದಿಂದಲೇ ದುಬೈ ಹಾಗೂ ಯುನೈಟೆಡ್ ಅರಬ್ ಎಮಿರೈಟ್ಸ್ ಶ್ರೀಮಂತ ರಾಷ್ಟ್ರವಾಗಿದೆ. ಇಲ್ಲಿ ತೈಲ ಉದ್ಯಮ ನಡೆಸುತ್ತಿರುವ ಉದ್ಯಮಿಗಳು ಕೂಡ ಬಿಲೇನಿಯರ್. ಹೀಗಾಗಿ ಈ ಉದ್ಯಮಿಗಳು ದುಬಾರಿ ಕಾರು ಮಾತ್ರವಲ್ಲ, ಕಾರುಗಳನ್ನು ಅಷ್ಟೇ ಖರ್ಚು ಮಾಡಿ ಕಸ್ಟಮೈಸೇಶನ್ ಮಾಡಿಸುತ್ತಾರೆ.

ಮರ್ಸಿಡಿಸ್ ಬೆಂಜ್ V10 ಕ್ವಾಡ್ ಟರ್ಬ್ ಎಂಜಿನ್ ಕಾರು ಇದಾಗಿದೆ.  1,600 ಹೆಚ್‌ಪಿ ಪವರ್ ಹಾಗೂ 2800 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೆಚ್ಚು ಶಕ್ತಿಶಾಲಿ ಎಂಜಿನ್ ಈ ಕಾರಿನಲ್ಲಿ ಬಳಸಲಾಗಿದೆ. ಹೀಗಾಗಿ 0-100 ಕಿ.ಮೀ ವೇಗವನ್ನು ಕೇವಲ 2 ಸೆಕೆಂಡ್‌ಗಳಲ್ಲಿ ಪಡೆದುಕೊಳ್ಳಲಿದೆ.

ಭಾರತದ ರಸ್ತೆಗಿಳಿದ ವಿಶ್ವದ ಮೊದಲ ಸೂಪರ್ ಟೂರರ್‌ , ಬೆಂಗಳೂರಿನಲ್ಲಿ ಆಸ್ಟನ್ ಮಾರ್ಟಿನ್ ಡಿಬಿ12 ಲಾಂಚ್!
 

click me!