Thar catches fire ಚಲಿಸುತ್ತಿರುವ ಮಹೀಂದ್ರ ಥಾರ್‌ಗೆ ಹೊತ್ತಿಕೊಂಡ ಬೆಂಕಿ, ವಾಹನ ಸಂಪೂರ್ಣ ಭಸ್ಮ!

By Suvarna News  |  First Published Jun 11, 2022, 4:08 PM IST
  • ಹೊತ್ತಿ ಉರಿದ ಹೊಚ್ಚ ಹೊಸ ಮಹೀಂದ್ರ ಥಾರ್
  • ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿ, ಪ್ರಾಣ ಉಳಿಸಿಕೊಂಡ ಚಾಲಕ
  • ಗ್ರಾಹಕರಲ್ಲಿ ಆತಂಕ, ತನಿಖೆಗೆ ಆದೇಶ

ನವದೆಹಲಿ(ಜೂ.11): ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ಪ್ರಕರಣ, ಎಲೆಕ್ಟ್ರಿಕ್  ವಾಹನ ಘಟಕದಲ್ಲಿ ಬೆಂಕಿ ಸೇರಿದಂತೆ ಹಲವು ಘಟನೆಗಳು ಈಗಾಗಲೇ ಗ್ರಾಹಕರ ಆತಂಕ ಹೆಚ್ಚಿಸಿದೆ. ಇದೀಗ ಹೊಚ್ಚ ಹೊಸ ಮಹೀಂದ್ರ ಥಾರ್ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. 

ದೆಹಲಿ-ಪಾಣಿಪತ್ ನಡುವಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ಸಲೀಸಾಗಿ ಚಲಿಸುತ್ತಿದ್ದ ಥಾರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆರಂಭಿಕ ಹಂತದಲ್ಲಿ ಚಾಲಕನಿಗೆ ಬೆಂಕಿ ಕಾಣಿಸಿಕೊಂಡಿರುವುದು ತಿಳಿದಿಲ್ಲ. ಕೆಲವೇ ಕ್ಷಣಗಲ್ಲಿ ಕಾರು ಧಗಧಗನೆ ಹೊತ್ತಿ ಉರಿಯಲು ಆರಂಭಿಸಿದೆ.

Latest Videos

undefined

ಬೆಂಗಳೂರು ಮೂಲದ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಕೇಂದ್ರದಲ್ಲಿ ಬೆಂಕಿ!

ಹೆದ್ದಾರಿಯಲ್ಲೇ ಕಾರು ನಿಲ್ಲಿಸಿದ ಚಾಲಕ, ಪ್ರಾಣ ಉಳಿಸಿಕೊಳ್ಳಲು ಜಿಗಿದು ಹೊರಬಂದಿದ್ದಾನೆ. ಹೆದ್ದಾರಿ ಕಾರಣ ಬೆಂಕಿ ನಂದಿಸಲು ಯಾವುದೇ ನೆರವು ಸಿಗಲಿಲ್ಲ. ಹೀಗಾಗಿ ಕೆಲವೇ ಕ್ಷಣಗಳಲ್ಲಿ ಥಾರ್ ಕಾರು ಹೊತ್ತಿ ಉರಿದು ಭಸ್ಮವಾಗಿದೆ. ಅದೃಷ್ಠವಶಾತ್ ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಕಾರಿನಲ್ಲಿ ಚಾಲಕ ಹೊರತು ಪಡಿಸಿ ಇನ್ಯಾರು ಇರಲಿಲ್ಲ.

ಥಾರ್ ವಾಹನ ಹೊತ್ತಿ ಉರಿಯಲು ನಿರ್ದಿಷ್ಟ ಕಾರಣ ತಿಳಿದಿಲ್ಲ. ಶಾರ್ಟ್ ಸರ್ಕ್ಯೂಟ್ ಅಥವಾ ಇನ್ಯಾವುದೇ ಕಾರಣಕ್ಕೆ ಬೆಂಕಿ ಕಾಣಿಸಿಕೊಂಡಿದೆಯಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಮಹೀಂದ್ರ ಕಾರುಗಳ ಮೇಲೆ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಮಹೀಂದ್ರ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಗಳು ತೀರಾ ವಿರಳ.

ಹೆಚ್ಚುವರಿ ಆ್ಯಕ್ಸಸರಿ, ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚುವರಿ ಲ್ಯಾಂಪ್ಸ್, ಇನ್ಫೋಟೈನ್ಮೆಂಟ್, ವೈರಿಂಗ್ ಮಾಡುವುದರಿಂದ ಶಾರ್ಟ್ ಸರ್ಕ್ಯೂಟ್ ಸಾಧ್ಯತೆಗಳು ಹೆಚ್ಚಾಗಿದೆ. ಅಧಿಕೃತ ಡೀಲರ್‌ಬಳಿ ಕಾರಿನ ಹೆಚ್ಚುವರಿ ಆಕ್ಸಸರಿ ಹಾಕುವುದು ಉಚಿತ. ಇದರಿಂದ ಸಮಸ್ಯೆಗಳು ಕಡಿಮೆ. 

ನಡುರಸ್ತೆಯಲ್ಲಿ ಹೊತ್ತಿ ಉರಿದ ಬಿಎಂಟಿಸಿ ಬಸ್‌: ನಷ್ಟ ತುಂಬಿ ಕೊಡುವಂತೆ ಸಿಬ್ಬಂದಿಗಳಿಗೆ ನೊಟೀಸ್

ಕಾರಿನ ನಿರ್ವಹಣೆ ಸರಿಯಾಗಿ ಮಾಡದಿದ್ದರೂ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ತಕ್ಕ ಸಮಯಕ್ಕೆ ಸರ್ವೀಸ್, ಕಾರಿನ ಚೆಕಪ್ ಮಾಡಬೇಕು. ಆಯಿಲ್ ಲೀಗ್, ಇಂಧನ ಲೀಕ್ ಸೇರಿದಂತೆ ಕೆಲ ಸಮಸ್ಯೆಗಳು ಬೆಂಕಿ ಸೇರಿದಂತೆ ಹಲವು ಅವಘಡಗಳಿಗೆ ಕಾರಣವಾಗಲಿದೆ.

ಚಾರ್ಜಿಂಗ್‌ ವೇಳೆ ಎಲ್ಟೆಕ್ಟ್ರಿಕ್‌ ಸ್ಕೂಟರ್‌ ಬೆಂಕಿಗಾಹುತಿ
ಮಂಗಳೂರು ನಗರದ ಬೊಂದೇಲ್‌ನ ಕೆ.ಎಚ್‌.ಕಾಲನಿಯಲ್ಲಿ ಚಾಜ್‌ರ್‍ಗೆ ಇರಿಸಿದ ಎಲೆಕ್ಟ್ರಿಕ್‌ ಸ್ಕೂಟರ್‌ ಬೆಂಕಿಗೆ ಆಹುತಿಯಾದ ಘಟನೆ ಭಾನುವಾರ ಸಂಭವಿಸಿದೆ.ಕೊಮಾಕಿ ಕಂಪನಿಗೆ ಸೇರಿದ ಎಲೆಕ್ಟ್ರಿಕ್‌ ಸ್ಕೂಟರ್‌ನ್ನು ಸವಾರ ಮನೆಯ ಅಂಗಳದಲ್ಲಿ ಚಾಜ್‌ರ್‍ ಇರಿಸಿದ್ದರು. ಚಾಜ್‌ರ್‍ಗೆ ಇರಿಸಿದ ಕೆಲವೇ ಗಂಟೆಗಳಲ್ಲಿ ಸ್ಕೂಟರ್‌ಗೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಹತ್ತಿಕೊಂಡ ತಕ್ಷಣ ಸ್ಕೂಟರ್‌ ಸ್ಫೋಟಗೊಂಡಿದೆ. ಸ್ಕೂಟರ್‌ನ ಯಂತ್ರ, ಬಿಡಿಭಾಗ ಸೇರಿದಂತೆ ಸಂಪೂರ್ಣ ಸ್ಕೂಟರ್‌ ಭಸ್ಮವಾಗಿದೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ. ಕಾವೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಹಠಾತ್‌ ಬೆಂಕಿಗೆ ಆಹುತಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಚಲಿಸುತ್ತಿದ್ದ ಎಲೆಕ್ಟ್ರಿಕ್‌ ಬೈಕ್‌ಗೆ ಬೆಂಕಿ:
ಎಲೆಕ್ಟ್ರಿಕ್‌ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುವ ಘಟನೆಗಳು ಮುಂದುವರಿದಿವೆ. ತಮಿಳುನಾಡಿನ ಗಡಿ ಭಾಗದಲ್ಲಿ ಶನಿವಾರ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸವಾರ ಸ್ವಲ್ಪದರಲ್ಲೇ ಪಾರಾದ ಘಟನೆ ವರದಿಯಾಗಿದೆ.ಬೆಂಗಳೂರು ನಗರದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಸೂಪರ್‌ವೈಸರ್‌ ಆಗಿರುವ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ನಿವಾಸಿ ಸತೀಶ್‌ ಕುಮಾರ್‌ ಸ್ವಲ್ಪದರಲ್ಲೇ ಪಾರಾದ ಸವಾರ. ಅವರು ತಮಿಳುನಾಡಿನ ಜೂಜುವಾಡಿಯಲ್ಲಿ ಬರುತ್ತಿದ್ದಾಗ ಏಕಾಏಕಿ ಎಲೆಕ್ಟ್ರಿಕ್‌ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅವರು ಬೈಕ್‌ನಿಂದ ಜಿಗಿದು ತಪ್ಪಿಸಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಆದರೂ ವಾಹನದ ಹಿಂಭಾಗ ಪೂರ್ಣವಾಗಿ ಸುಟ್ಟು ಹೋಗಿದೆ. ಎಲೆಕ್ಟ್ರಿಕ್‌ ಶಾರ್ಚ್‌ ಸಕ್ರ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

click me!