ಹೊಸವರ್ಷಕ್ಕೆ ಬಹುತೇಕ ಕಾರುಗಳ ಬೆಲೆ ದುಬಾರಿ

By Kannadaprabha NewsFirst Published Dec 8, 2022, 8:26 AM IST
Highlights

ಹೊಸ ವರ್ಷಕ್ಕೆ ಬಹುತೇಕ ಕಂಪನಿಗಳು ಕಾರುಗಳ ಬೆಲೆ ಏರಿಸಲು ನಿರ್ಧರಿಸಿವೆ. ಕಾರಿನ ಬಿಡಿಭಾಗಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಕಾರು ತಯಾರಕ ಕಂಪನಿಗಳಾದ ಮರ್ಸಿಡಿಸ್‌ ಬೆಂಜ್‌, ಆಡಿ, ರೆನಾಲ್ಟ್‌, ಕಿಯಾ ಇಂಡಿಯಾ ಮತ್ತು ಎಂಜಿ ಮೋಟರ್‌ಗಳು ಜನವರಿಯಿಂದ ಕಾರುಗಳ ಬೆಲೆ ಏರಿಕೆ ಮಾಡಲು ನಿರ್ಧರಿಸಿವೆ.

ನವದೆಹಲಿ: ಹೊಸ ವರ್ಷಕ್ಕೆ ಬಹುತೇಕ ಕಂಪನಿಗಳು ಕಾರುಗಳ ಬೆಲೆ ಏರಿಸಲು ನಿರ್ಧರಿಸಿವೆ. ಕಾರಿನ ಬಿಡಿಭಾಗಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಕಾರು ತಯಾರಕ ಕಂಪನಿಗಳಾದ ಮರ್ಸಿಡಿಸ್‌ ಬೆಂಜ್‌, ಆಡಿ, ರೆನಾಲ್ಟ್‌, ಕಿಯಾ ಇಂಡಿಯಾ ಮತ್ತು ಎಂಜಿ ಮೋಟರ್‌ಗಳು ಜನವರಿಯಿಂದ ಕಾರುಗಳ ಬೆಲೆ ಏರಿಕೆ ಮಾಡಲು ನಿರ್ಧರಿಸಿವೆ.

ಈ ಮೂಲಕ ಈ ಕಂಪನಿಗಳು ಸಹ ಬೆಲೆ ಏರಿಕೆಯಲ್ಲಿ ಮಾರುತಿ ಸುಜುಕಿ ಮತ್ತು ಟಾಟಾ ಮೋಟ​ರ್ಸ್‌ಗಳ ಗುಂಪನ್ನು ಸೇರಿಕೊಂಡಿವೆ. ಎಲ್ಲಾ ಮಾಡೆಲ್‌ ಕಾರುಗಳ ಬೆಲೆಯನ್ನು ಜ.1ರಿಂದ ಶೇ.1.7ರಷ್ಟುಏರಿಕೆ ಮಾಡುವುದಾಗಿ ಆಡಿ ಹಾಗೂ ಶೇ.5ರಷ್ಟುಏರಿಕೆ ಮಾಡುವುದಾಗಿ ಬೆಂಜ್‌ ಕಂಪನಿಗಳು ಘೋಷಿಸಿವೆ. ಮಾಡೆಲ್‌ ಆಧರಿಸಿ ಕಾರಿನ ಬೆಲೆ 50 ಸಾವಿರ ರು.ನಷ್ಟು ಏರಿಕೆ ಮಾಡಲಾಗುವುದು ಎಂದು ಕಿಯಾ ಹೇಳಿದೆ. ಎಂಜಿ ಮೋಟ​ರ್ಸ್ ಸಹ ಶೇ.3ರಿಂದ 5ರಷ್ಟುದರ ಏರಿಕೆ ಮಾಡುವುದಾಗಿ ಹೇಳಿದೆ.

ಸ್ಟಾಕ್ ಕ್ಲೀಯರೆನ್ಸ್ ಆಫರ್, ಭರ್ಜರಿ ರಿಯಾಯಿತಿ ಘೋಷಿಸಿದ ಮಾರುತಿ ಸುಜುಕಿ!

19 ಸಾವಿರ XUV 700 ಹಾಗೂ ಸ್ಕಾರ್ಪಿಯೋN ಕಾರು ಹಿಂಪಡೆದ ಮಹೀಂದ್ರ!

click me!