ಹಳೇ ಸ್ವಿಫ್ಟ್ ಕಾರನ್ನು ಲ್ಯಾಂಬೋರ್ಗಿನಿಯಾಗಿ ಪರಿವರ್ತಿಸಿದ ಯುವಕ, ಸಿಎಂ ಹಿಮಂತ ಶರ್ಮಾಗೆ ಗಿಫ್ಟ್!

By Suvarna News  |  First Published Dec 4, 2022, 4:57 PM IST

31ರ ಹರೆಯದ ಯುವಕ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನ ರೀತಿಯಲ್ಲಿ ಹೊಸ ಕಾರು ನಿರ್ಮಿಸಿದ್ದಾನೆ. ತಾನೆೇ ಖುದ್ದಾಗಿ ಡಿಸೈನ್ ಮಾಡಿ, ಸಂಪೂರ್ಣ ಕೆಲಸವನ್ನು ಮಾಡಿ ಮುಗಿಸಿದ್ದಾನೆ. ಈ ಕಾರನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾಗೆ ಉಡುಗೊರೆಯಾಗಿ ನೀಡಿದ್ದಾನೆ. ಯುವಕನ ಕೌಶಲ್ಯಕ್ಕೆ ಸಿಎಂ ಮನಸೋತಿದ್ದಾರೆ


ಗುವ್ಹಾಟಿ(ಡಿ.04); ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಭಾರತದಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದೆ. ಭಾರತದಲ್ಲಿ ಗರಿಷ್ಠ ಲ್ಯಾಂಬೋರ್ಗಿನಿ ಕಾರುಗಳು ಬೆಂಗಳೂರಲ್ಲಿ ಮಾರಾಟವಾಗುತ್ತಿದೆ. ಕೋಟಿ ಕೋಟಿ ರೂಪಾಯಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಎಲ್ಲರಿಗೂ ಕೈಗೆಟುವುದಿಲ್ಲ. ಇಲ್ಲೊಬ್ಬ 31ರ ಹರೆಯ ಯುವಕ ನರೂಲ್ ಹಖ್ ಲ್ಯಾಂಬೋರ್ಗಿನಿ ರೀತಿಯ ಕಾರು ತಯಾರಿಸಿದ್ದಾನೆ. ಹಳೇ ಮಾರುತಿ ಸ್ವಿಫ್ಟ್ ಕಾರನ್ನು, ಐಷಾರಾಮಿ ಲ್ಯಾಂಬೋರ್ಗಿನಿ ಕಾರಾಗಿ ಪರಿವರ್ತಿಸಿದ್ದಾನೆ. ಇಷ್ಟೇ ಅಲ್ಲ ಈ ಕಾರನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರ್ಮಾಗೆ ಉಡುಗೊರೆಯಾಗಿ ನೀಡಿದ್ದಾನೆ. ಯುವಕನ ಪ್ರತಿಭೆ, ಕೌಶಲ್ಯಕ್ಕೆ ಮನಸೋತಿರುವ ಹಿಮಂತ ಬಿಸ್ವಾ ಶರ್ಮಾ, ಲ್ಯಾಂಬೋರ್ಗಿನಿ ರೀತಿಯ ಕಾರನ್ನು ಆವಿಷ್ಕರಿಸಿದ ನರೂಲ್ ಹಖ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಅನಿಪುರ ನರೂಲ್ ಹಖ್ ಮೋಟರ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ಕಾರುಗಳ ರಿಪೇರಿ, ಮಾಡಿಫಿಕೇಶನ್ ಕೆಲಸದಲ್ಲಿ ತೊಡಗಿದ್ದ ನರೂಲ್ ಹಖ್, ಲ್ಯಾಂಬೋರ್ಗಿನಿ ರೀತಿಯ ಕಾರು ನಿರ್ಮಿಸಲು ಪ್ಲಾನ್ ಮಾಡಿದ್ದಾನೆ. ಇದಕ್ಕಾಗಿ ಹಳೇ ಮಾರುತಿ ಸ್ವಿಫ್ಟ್ ಕಾರನ್ನು ಕಡಿಮೆ ಬೆಲೆ ಖರೀದಿಸಿದ್ದಾನೆ. ಬಳಿಕ ಸ್ವಿಫ್ಟ್ ಕಾರಿನ ಎಂಜಿನ್ ಕೆಲಸ ಮಾಡಿ ಮುಗಿಸಿದ್ದಾನೆ.

Tap to resize

Latest Videos

undefined

ಗುಜರಿಯಿಂದ ಬುಗ್ಗಾಟಿ ಸ್ಪೋರ್ಟ್ಸ್‌ ಕಾರು ನಿರ್ಮಿಸಿದ ವಿಯೆಟ್ನಾಂ ಸ್ನೇಹಿತರು... ವಿಡಿಯೋ ನೋಡಿ

ಲ್ಯಾಂಬೋರ್ಗಿನಿ ಕಾರು ರೀತಿಯ ಕಾರು ನಿರ್ಮಾಣಕ್ಕೆ ಸ್ಕೆಚ್ ರೆಡಿ ಮಾಡಿದೆ. ವಿನ್ಯಾಸವನ್ನೂ ಪೂರ್ಣಗೊಳಿಸಿ, ವೆಲ್ಡಿಂಗ್ ಕೆಲಸ ಆರಂಭಿಸಿದ್ದಾನೆ. ಮಾರುತಿ ಕಾರಿನ ಎಂಜಿನ್, ಚಾರ್ಸಿಗಳನ್ನು ಬಳಸಿ ಅತ್ಯಾಕರ್ಷಕ ಕಾರನ್ನು ನಿರ್ಮಾಣ ಮಾಡಿದ್ದಾನೆ. ಸಂಪೂರ್ಣ ಕಾರನ್ನು ನರೂಲ್ ಹಖ್ ನಿರ್ಮಿಸಿದ್ದಾನೆ. 

ಅನಿಪುರದಿಂದ ಈ ಕಾರಿನಲ್ಲೇ ಗುವ್ಹಾಟಿಗೆ ಆಗಮಿಸಿದ ನರೂಲ್ ಹಖ್, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ಆಹ್ವಾನ ನೀಡಿದ್ದಾನೆ. ಯುವಕನ ಆಹ್ವಾನ ಸ್ವೀಕರಿಸಿದ ಹಿಮಂತ ಬಿಸ್ವಾ ಶರ್ಮಾ ಆಗಮಿಸಿದ್ದಾರೆ. ಕಾರು ನೋಡಿ ಅಚ್ಚರಿಪಟ್ಟಿದ್ದಾರೆ. ಯುವಕನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

 

Delighted to receive a modified Lamborghini lookalike car from innovator Nurul Haque of Anipur, Karimganj.

My best wishes to him in all his future endeavours. pic.twitter.com/TWAJ8o9AqV

— Himanta Biswa Sarma (@himantabiswa)

 

ಹಿಮಂತ ಬಿಸ್ವಾ ಶರ್ಮಾ ಸಿಲ್ಚಾರ್ ಭೇಟಿ ವೇಳೆ ನರೂಲ್ ಹಖ್ ಲ್ಯಾಂಬೋರ್ಗಿನಿ ರೀತಿಯ ಕಾರನ್ನು ನೋಡಿ ಖುಷಿಪಟ್ಟಿದ್ದರು. ಇಷ್ಟೇ ಅಲ್ಲ ಈ ಕುರಿತು ಟ್ವೀಟ್ ಮಾಡಿ ಯುವಕನ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ಇದರಿಂದ ಸಂತಸಗೊಂಡ ಯುವಕ ಹಿಮಂತ ಬಿಸ್ವಾ ಶರ್ಮಾಗೆ ಮಾಡಿಫೈಡ್ ಕಾರನ್ನು ಉಡುಗೊರೆಯಾಗಿ ನೀಡಲು ನಿರ್ಧರಿದ್ದನು. ಬಳಿಕ ಮುಖ್ಯಮಂತ್ರಿ ಕಾರ್ಯಲಯ ಸಂಪರ್ಕಿಸಿ ಮಾಹಿತಿ ನೀಡಿದ್ದಾನೆ. ಇತ್ತ ಹಿಮಂತ ಬಿಸ್ವಾ ಶರ್ಮಾ ಯುವಕನ ಮನವಿ ಸ್ವೀಕರಿಸಿ ಇದೀಗ ಕಾರು ಪಡೆದಿದ್ದಾರೆ.

Gujarat Elections: ಮೋದಿಯನ್ನು ಗೆಲ್ಲಿಸಿ, ಇಲ್ದಿದ್ರೆ ಪ್ರತಿ ನಗರದಲ್ಲೂ ಅಫ್ತಾಬ್‌ ಇರ್ತಾನೆ, ಅಸ್ಸಾಂ ಸಿಎಂ ಹೇಳಿಕೆ!

ಈ ಕಾರು ನಿರ್ಮಾಣಕ್ಕೆ ನರೂಲ್ ಹಖ್‌ಗೆ 10 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಕಡಿಮೆ ಬೆಲೆ ಸ್ಪೋರ್ಟ್ಸ್ ಕಾರು ನಿರ್ಮಿಸಿದ್ದಾನೆ. ಇದೀಗ ಈತನಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ನಾಲ್ಕು ತಿಂಗಳ ಸತತವಾಗಿ ಸ್ವಿಫ್ಟ್ ಕಾರನ್ನು ಲ್ಯಾಂಬೋರ್ಗಿನಿಯಾಗಿ ಪರಿವರ್ತಿಸಲು ಕೆಲಸ ಮಾಡಿದ್ದಾನೆ. ಕೊನೆಯ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಸ್ಪಂದನೆ ವ್ಯಕ್ತವಾಗಿದೆ.
 

click me!