ಎಂಜಿ ಸೈಬರ್‌ಸ್ಟಾರ್ ಕೌಚರ್ ಎಡಿಶನ್ ಕಾರು ಭಾರತದಲ್ಲಿ ಲಾಂಚ್, ಇದರ ಬೆಲೆ ಎಷ್ಟು?

Published : Aug 03, 2026, 05:06 PM IST
MG Launches Cyberster Couture Edition

ಸಾರಾಂಶ

ಭಾರತದಲ್ಲಿ ಎಂಜಿ ಮೋಟಾರ್ಸ್ ಎರಡು ಕಾರುಗಳನ್ನು ಬಿಡುಗಡೆ ಮಾಡಿದೆ. ಫ್ಯಾಷನ್ ಡಿಸೈನರ್ ಗೌರವ್ ಗುಪ್ತಾ ಸಹಯೋಗದಲ್ಲಿ ಅತ್ಯಾಕರ್ಷಕ ವಿನ್ಯಾಸದ ಎಂಜಿ ಸೈಬರ್‌ಸ್ಟಾರ್ ಹಾಗೂ ಎಂದಿ ಎಂ9 ಕಾರು ಬಿಡುಗಡೆಯಾಗಿದೆ.

ನವದೆಹಲಿ (ಆ.03) ಜೆಎಸ್‌ಡಬ್ಲೂ ಹಾಗೂ ಎಂಜಿ ಮೋಟಾರ್ಸ್ ಭಾರತದಲ್ಲಿ ಎರಡು ಐಷಾರಾಮಿ ಕಾರು ಬಿಡುಗಡೆ ಮಾಡಿದೆ. ಎಂಜಿ ಸೆಲೆಕ್ಟ್ ವಿನ್ಯಾಸಗೊಳಿಸಿರುವ ಎಂಜಿ ಸೈಬರ್‌ಸ್ಟಾರ್ ಕೌಚರ್ ಎಡಿಶನ್ ಹಾಗೂ ಎಂದಿ ಎಂ9 ಕೌಚರ್ ಎಡಿಶನ್ ಕಾರು ಬಿಡುಗಡೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಪ್ರಸಿದ್ಧ ಫ್ಯಾಷನ್ ಡಿಸೈನರ್ ಗೌರವ್ ಗುಪ್ತಾ ಸಹಯೋಗದಲ್ಲಿ ರೂಪಗೊಂಡ ಈ ಕಾರು ವಿಶೇಷ ಕರಕುಶಲತೆ ಹೊಂದಿದೆ.

ಹೊಸ ಕಾರಿನ ಬೆಲೆ ಎಷ್ಟು?

ಎಂಜಿ ಎಂ9 (MG M9) ಕೌಚರ್ ಎಡಿಷನ್‌ ಕಾರು 84.94 ಲಕ್ಷ ರೂಪಾಯಿ ಹಾಗೂ ಎಂಜಿ ಸೈಬರ್‌ಸ್ಟಾರ್‌ (MG Cyberster) ಕೌಚರ್ ಎಡಿಷನ್‌ ಕಾರು 87.49 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಆ ವೇಳೆ ಮೊದಲ ಬಾರಿಗೆ ಪ್ರದರ್ಶಿಸಲಾಗಿದ್ದ ಎಂಜಿ ಸೈಬರ್‌ಸ್ಟಾರ್‌ನ ಕಲಾತ್ಮಕ ಮಾದರಿಯು, ಫ್ಯಾಷನ್ ಕೌಚರ್ ಎಲ್ಲರ ಗಮನಸೆಳೆಯುತ್ತಿದೆ. ಗೌರವ್ ಗುಪ್ತಾ ತಮ್ಮ 'ಲೈಟ್ ಸಾಂಗ್' (Light Song) ಎಂಬ ಇತ್ತೀಚಿನ ಕೌಚರ್ ಕಲೆಕ್ಷನ್ ಪ್ರದರ್ಶಿಸಿದ್ದರು. ಈ ಪ್ರದರ್ಶನದ ಅಧಿಕೃತ ಆಟೋಮೊಬೈಲ್ ಪಾರ್ಟ್ನರ್ ಎಂಜಿ ಸೆಲೆಕ್ಟ್, ಎಂಜಿ ಎಂ9 ಮತ್ತು ಎಂಜಿ ಸೈಬರ್‌ಸ್ಟಾರ್‌ ಕೌಚರ್ ಎಡಿಷನ್‌ಗಳನ್ನು ಅನಾವರಣಗೊಳಿಸಿದೆ.

ಎಂಜಿ ಎಂ9 ಹಾಗೂ ಸೈಬರ್‌ಸ್ಟಾರ್‌ - ಎರಡೂ ಕಾರುಗಳಲ್ಲಿ ಗೌರವ್ ಗುಪ್ತಾ ಅವರ ಸಿಗ್ನೇಚರ್ 'ಸರ್ಪೆಂಟ್ ಇನ್ಫಿನಿಟಿ' (Serpent Infinity) ಲೋಗೋ ಬಳಸಲಾಗಿದೆ. ನಿರಂತರತೆ, ಪರಿವರ್ತನೆ ಮತ್ತು ಸೌಮ್ಯ ಶಕ್ತಿಯ ಸಂಕೇತವಾಗಿರುವ ಈ ಸರ್ಪೆಂಟ್ ಲಾಂಛನವನ್ನು ಹ್ಯಾಂಡ್ ಎಂಬ್ರಾಯ್ಡರಿ (ಹಸ್ತಕುಶಲ ಕಸೂತಿ), ಟೋನಲ್ ಲೇಯರಿಂಗ್ ಹಾಗೂ ಕೈಚಳಕದ ಡಿಟೇಲಿಂಗ್ ಮೂಲಕ ರೂಪಿಸಲಾಗಿದೆ. 'ಲೈಟ್ ಸಾಂಗ್' ಫ್ಯಾಷನ್ ಶೋನಲ್ಲಿ ರ‍್ಯಾಂಪ್ ಮೇಲಿನ ಬಟ್ಟೆಗಳಿಗೆ ಜೀವ ನೀಡಿದ್ದ ಕರಕುಶಲತೆಯೇ ಕಾರಿನ ಮೇಲೂ ಮೂಡಿಬಂದಿದೆ.

ಪ್ರಸ್ತುತ ಎಂಜಿ ಸೆಲೆಕ್ಟ್‌ನ ಅಧಿಕೃತ ವೆಬ್‌ಸೈಟ್‌ ಮೂಲಕ ಬುಕಿಂಗ್‌ಗಳು ಆರಂಭವಾಗಿದ್ದು, ಆಗಸ್ಟ್ 10 ರಿಂದ ಗ್ರಾಹಕರಿಗೆ ಈ ಐಷಾರಾಮಿ ಕಾರುಗಳ ವಿತರಣೆ (Deliveries) ಆರಂಭವಾಗಲಿದೆ. ಸೈಬರ್‌ಸ್ಟಾರ್ ಮತ್ತು ಎಂ9 ಕಾರುಗಳು ತಮ್ಮ ಪ್ರಮುಖ ವಿಭಾಗಗಳಲ್ಲಿ ಅತ್ಯಂತ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಾಗಿ ಹೊರಹೊಮ್ಮಿವೆ ಎಂದು ಎಂಜಿ ಸೆಲೆಕ್ಟ್ ವಿಭಾಗದ ಮುಖ್ಯಸ್ಥ ಮಿಲಿಂದ್ ಶಾ ಹೇಳಿದ್ದಾರೆ. ಇವುಗಳಿಗೆ 'ಕೌಚರ್ ವಿನ್ಯಾಸದ ಸ್ಪರ್ಶ' ನೀಡುವ ಮೂಲಕ, ಈ ಅಪರೂಪದ ಹಾಗೂ ಕಲೆಕ್ಟಬಲ್ ಆವೃತ್ತಿಯ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದೇವೆ ಎಂದಿದ್ದಾರೆ.

PREV
Read more Articles on
click me!

Recommended Stories

ಟೊಯೋಟಾ ಫಾರ್ಚುನರ್ ಕಾರಿಗೆ ಹೊಡೆತ, ಹೊಸ ಕಿಯಾ ಸೊರೆಂಟೋ ಹೈಬ್ರಿಡ್ ಬುಕಿಂಗ್ ಆರಂಭ
ಭಾರತದ ಟಾಪ್-10 ಸುರಕ್ಷಿತ ಕಾರುಗಳು: ಹಣಕ್ಕಿಂತ ಕುಟುಂಬವೇ ಮುಖ್ಯ ಎನ್ನೋರಿಗೆ ಇವೇ ಬೆಸ್ಟ್ ಚಾಯ್ಸ್!