
ಚೀನಾದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಯಾದ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್, ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಇದರಲ್ಲಿ ತುಂಬಾನೇ ಸ್ಪೆಷಲ್ ಅಂದ್ರೆ ಸೈಬರ್‌ಸ್ಟರ್ ಸ್ಪೋರ್ಟ್ಸ್ ಕಾರ್ ಮತ್ತು ಒಂದು ಎಲೆಕ್ಟ್ರಿಕ್ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರ್. ಈ 2 ಕಾರುಗಳು ಈ ವರ್ಷದ ಮೊದಲಾರ್ಧದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿತ್ತು. ಸೈಬರ್‌ಸ್ಟರ್ ಮತ್ತು ಎಂ9 ಬ್ರಾಂಡ್‌ನ ಹೊಸ ಪ್ರೀಮಿಯಂ ರೀಟೈಲ್ ನೆಟ್‌ವರ್ಕ್ ಆದ ಎಂಜಿ ಸೆಲೆಕ್ಟ್ ಮೂಲಕ ಮಾರಾಟ ಮಾಡಲಿದೆ. ಲಾಂಚ್ ಮಾಡೋಕೆ ಮುಂಚೆ, ಎಂಜಿ ಇಂಡಿಯಾದಲ್ಲಿರೋ 12 ಡೀಲರ್ ಪಾರ್ಟನರ್‌ಗಳ ಜೊತೆ ಅಗ್ರಿಮೆಂಟ್ ಸೈನ್ ಮಾಡಿದೆ.
ಈಗ ಎಂಜಿ ಸೈಬರ್‌ಸ್ಟರ್ ಮತ್ತು ಎಂ9 ಅನ್ನು ಮುಂಚಿತವಾಗಿಯೇ ಬುಕ್ ಮಾಡಬಹುದು. ಎಂಜಿ ಎಂ9-ನಲ್ಲಿ 90kWh ಬ್ಯಾಟರಿ ಪ್ಯಾಕ್ ಇದೆ. ಇದರಲ್ಲಿ 245 bhp ಪವರ್ ಮತ್ತು 350 Nm ಟಾರ್ಕ್ ಅನ್ನು ಈ ಎಂಪಿವಿ-ನಲ್ಲಿ ನಾವು ಪಡೆಯಬಹುದು. ಒಂದು ಚಾರ್ಜ್‌ನಲ್ಲಿ ಅಂದಾಜು 430 ಕಿಲೋಮೀಟರ್ ವರೆಗೂ ಈ ಎಲೆಕ್ಟ್ರಿಕ್ ಗಾಡಿಯಲ್ಲಿ ಹೋಗಬಹುದು. ಈ ಎಲೆಕ್ಟ್ರಿಕ್ ಗಾಡಿಯ ಎಕ್ಸ್-ಶೋರೂಮ್ ಬೆಲೆ 65 ಲಕ್ಷ ರೂಪಾಯಿ ಇರಬಹುದು ಅಂತ ಅಂದಾಜಿಸಿದ್ದಾರೆ.
ಡ್ಯುಯಲ್ ಸನ್‌ರೂಫ್ ಸೆಟಪ್, ವೆಂಟಿಲೇಟೆಡ್ ಸೀಟ್ಸ್, ಪವರ್ಡ್ ಸ್ಲೈಡಿಂಗ್ ರಿಯರ್ ಡೋರ್, ರಿಯರ್ ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್ ಇದೆಲ್ಲಾ ಎಂಜಿ ಎಂ9-ನಲ್ಲಿರೋ ಸ್ಪೆಷಲ್ ಸೌಲಭ್ಯಗಳು. ಇದಲ್ಲದೆ, ಟ್ರಿಪಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್, ADAS, 360-ಡಿಗ್ರಿ ಕ್ಯಾಮೆರಾ, ಇಎಸ್‌ಪಿ, ಆಟೋ ಹೋಲ್ಡ್, ಟಿಪಿಎಂಎಸ್ ಇದೆಲ್ಲಾ ಈ ಇವಿಯ ಸ್ಪೆಷಲ್ ಅಂಶಗಳು.
ಎಂಜಿ ಮೋಟಾರ್ಸ್, ಜೆಎಸ್‌ಡಬ್ಲ್ಯೂನ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ
ಅದೇ ಸಮಯದಲ್ಲಿ ಎಂಜಿ ಸೈಬರ್‌ಸ್ಟರ್ ಜಿಟಿ-ನಲ್ಲಿ 510 ಬಿಎಚ್‌ಪಿ ಪವರ್ ಮತ್ತು 725 ಎನ್ಎಂ ಪೀಕ್ ಟಾರ್ಕ್ ಅನ್ನು ತೆಗಿಯೋಕೆ ಸಾಧ್ಯವಾಗೋ ತರ ಡ್ಯುಯಲ್-ಮೋಟಾರ್ ಕಾನ್ಫಿಗರೇಶನ್ ಇದೆ. ಈ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಬರೀ 3.2 ಸೆಕೆಂಡ್‌ಗಳಲ್ಲಿ ಜೀರೋದಿಂದ 100 ಕಿಲೋಮೀಟರ್ ವೇಗವನ್ನು ತಲುಪುತ್ತೆ. ಫುಲ್ಲಾ ಚಾರ್ಜ್ ಮಾಡಿದ್ರೆ 443 ಕಿಲೋಮೀಟರ್ ವರೆಗೂ ಈ ಎಲೆಕ್ಟ್ರಿಕ್ ಕಾರ್‌ನಲ್ಲಿ ಹೋಗಬಹುದು.
Halo car 800 ಕಿ.ಮೀ ಮೈಲೇಜ್, ಎಂಜಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ತಯಾರಿ