ಜಾಗತಿಕ ಎನ್ಸಿಎಪಿ ಪರೀಕ್ಷೆಯಲ್ಲಿ ಕೇವಲ 1 ಸ್ವಾರ್ ರೇಟಿಂಗ್ ಪಡೆದ ಮಾರುತಿ ಸ್ವಿಫ್ಟ್, ಎಸ್-ಪ್ರೆಸ್ಸೋ, ಇಗ್ನಿಸ್

By Suvarna News  |  First Published Dec 14, 2022, 4:07 PM IST

ಇತ್ತೀಚೆಗೆ ಮಾರುತಿ ಸುಜುಕಿಯ ತನ್ನ ಎಸ್-ಪ್ರೆಸ್ಸೊ (S-Presso), ಇಗ್ನಿಸ್ (Ignis) ಮತ್ತು ಸ್ವಿಫ್ಟ್ (Swift) ಅನ್ನು ಜಾಗತಿಕ ಸುರಕ್ಷತಾ ವಾಚ್ಡಾಗ್ ಆಗಿರುವ ಗ್ಲೋಬಲ್ ಎನ್ಸಿಎಪಿ (Global NCAP) ನಲ್ಲಿ ಪರೀಕ್ಷೆಗೊಳಪಡಿಸಿದೆ. ಅದರೆ, ಈ ಮೂರು ಕಾರುಗಳು ಸುರಕ್ಷತಾ ಪರೀಕ್ಷೆಯಲ್ಲಿ ಕೇವಲ 1 ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ.


ಭಾರತದ ಪ್ರಮುಖ ಆಟೊಮೊಬೈಲ್ ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki), ಸಣ್ಣ, ಮಧ್ಯಮ ಹಾಗೂ ದೊಡ್ಡ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆಯಾದರೂ, ಅದರ ಸುರಕ್ಷತಾ ವೈಶಿಷ್ಟ್ಯಗಳ ವಿಚಾರದಲ್ಲಿ ಇತರ ತಯಾರಕ ಕಂಪನಿಗಳಿಗಿಂತ ಹಿಂದೆ ಬೀಳುತ್ತಿದೆ. ಇತ್ತೀಚೆಗೆ ಮಾರುತಿ ಸುಜುಕಿಯ ತನ್ನ ಎಸ್-ಪ್ರೆಸ್ಸೊ (S-Presso), ಇಗ್ನಿಸ್ (Ignis) ಮತ್ತು ಸ್ವಿಫ್ಟ್ (Swift) ಅನ್ನು ಜಾಗತಿಕ ಸುರಕ್ಷತಾ ವಾಚ್ ಡಾಗ್ ಆಗಿರುವ ಗ್ಲೋಬಲ್ ಎನ್ಸಿಎಪಿ (Global NCAP) ನಲ್ಲಿ ಪರೀಕ್ಷೆಗೊಳಪಡಿಸಿದೆ. ಅದರೆ, ೊೊೊೊೊೊಈ ಮೂರು ಕಾರುಗಳು ಸುರಕ್ಷತಾ ಪರೀಕ್ಷೆಯಲ್ಲಿ ಕೇವಲ 1 ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ. ಈ ಮೂರು ಕಾರುಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಮತ್ತು ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾ ಸೇರಿದಂತೆ ವಿವಿಧ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ. 

ಕಂಪನಿಯು S-ಪ್ರೆಸ್ಸೊ ಮತ್ತು ಸ್ವಿಫ್ಟ್‌ನ ಮೇಡ್-ಇನ್-ಇಂಡಿಯಾ (Made in India) ಮಾದರಿಗಳನ್ನು ಕ್ರ್ಯಾಶ್-ಟೆಸ್ಟ್  (Crash test) ಮಾಡಿರುವುದು ಇದೇ ಮೊದಲಲ್ಲ, ಹಿಂದಿನ ಪರೀಕ್ಷೆಯಲ್ಲಿ ಕೂಡ ಅವುಗಳ ಸುರಕ್ಷತೆಯ ರೇಟಿಂಗ್ ನಿರಾಶಾದಾಯಕವಾಗಿತ್ತು. ಆದರೆ, ಈ ಬಾರಿ ಕಾರುಗಳನ್ನು ಹೆಚ್ಚು ಕಠಿಣ ನಿಯಮಗಳು ಮತ್ತು ಮಾನದಂಡಗಳ ಅಡಿಯಲ್ಲಿ ಪರೀಕ್ಷಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ಲೋಬಲ್ ಎನ್ಸಿಎಪಿಯ ಪ್ರಧಾನ ಕಾರ್ಯದರ್ಶಿ ಅಲೆಜಾಂಡ್ರೊ ಫುರಾಸ್, 'ಹೊಸ ಮಾನದಂಡಗಳ ಅನುಸಾರ, 5 ಸ್ಟಾರ್ ರೇಟಿಂಗ್ ಪಡೆಯುವಂತೆ ಕಾರುಗಳನ್ನು ತಯಾರಿಸುತ್ತಿರುವ ತಯಾರಕರ ಬದ್ಧತೆಯನ್ನು ಜಾಗತಿಕ ಎನ್ಸಿಎಪಿ ಅಭಿನಂದಿಸುತ್ತದೆ. ಆದರೆ, ಭಾರತದಲ್ಲಿನ ಅತಿದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿರುವ ಮಾರುತಿ ಸುಜುಕಿ ಇನ್ನೂ ಇಂತಹ ಕಳಪೆ ಕಾರ್ಯಕ್ಷಮತೆ ವಾಹನಗಳನ್ನು ತಯಾರಿಸುತ್ತಿದೆ. ಇದು ದುರದೃಷ್ಟಕರ,' ಎಂದಿದ್ದಾರೆ.

40 ಕಿಮೀ ಮೈಲೇಜ್ ನೀಡಲಿವೆ ಮಾರುತಿಯ ಎರಡು ಫೇಸ್‌ಲಿಫ್ಟ್‌ ಕಾರು

ಮುಂಭಾಗದ ಆಫ್ಸೆಟ್ ರಕ್ಷಣೆಯ ಪರೀಕ್ಷೆಯಲ್ಲಿ, ಸ್ವಿಫ್ಟ್ (Swift) ಮುಂಭಾಗದ ಪ್ರಯಾಣಿಕರಿಗೆ ಸಾಕಷ್ಟು ಮಟ್ಟದ ರಕ್ಷಣೆಯನ್ನು ನೀಡಿದೆ. ಆದರೆ, ಪಾದಗಳ ರಕ್ಷಣೆ ಮತ್ತು ದೇಹದ ಸುರಕ್ಷತಾ ಸೌಲಭ್ಯಗಳು ದುರ್ಬಲವಾಗಿವೆ. ಎದೆಯ ದುರ್ಬಲ ರಕ್ಷಣೆಗೆ ಹೋಲಿಸಿದರೆ ಚಾಲಕ ಸೀಟಿನ ಫಲಿತಾಂಶಗಳು ಕಡಿಮೆ. ಅಡ್ಡ ವಿರೂಪಗೊಳಿಸಬಹುದಾದ ತಡೆಗೋಡೆ ಪರಿಣಾಮವು ತಲೆ ಮತ್ತು ಸೊಂಟದ ರಕ್ಷಣೆ ಮೂಲಕ ದುರ್ಬಲ ಎದೆಯ ರಕ್ಷಣೆಯನ್ನು ಬಹಿರಂಗಪಡಿಸಿತು. ವಾಹನದಲ್ಲಿ ಚಾಲಕರು, ಪ್ರಯಾಣಿಕರ ತಲೆಯ ರಕ್ಷಣೆಗೆ ಸೂಕ್ಷ ಸೌಕರ್ಯಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಸೈಡ್ ಪೋಲ್ ಪರೀಕ್ಷೆ ನಡೆಸಲಾಗಿಲ್ಲ. ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ, ಮಗುವಿನ ಸೀಟಿನಲ್ಲಿ ಮೂರು ವರ್ಷದ ಮಗುವಿಗೆ ಉತ್ತಮ ರಕ್ಷಣೆ ಒದಗಿಸಲಾಗಿದೆ. ಆದರೆ, ಮಕ್ಕಳ ಆಸನದಲ್ಲಿ ಪ್ರಯಾಣಿಕರ ಏರ್ಬ್ಯಾಗ್ (Air Bag) ನಿಷ್ಕ್ರಿಯಗೊಳಿಸುವ ಸ್ವಿಚ್‌ನ ಕೊರತೆ ಇದೆ ಎಂದು ಎನ್ಸಿಎಪಿ ಹೇಳಿದೆ.

 ಎಸ್-ಪ್ರೆಸ್ಸೊ ಕೂಡ ಚಾಲಕ ಎದೆ ಭಾಗದ ಸುರಕ್ಷತೆಯಲ್ಲಿ ಕಳಪೆ ಪ್ರದರ್ಶನ ತೋರಿದೆ. ಇದರಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಸೈಡ್ ಪೋಲ್ ಪರೀಕ್ಷೆಯನ್ನು ನಡೆಸಲಾಗಿಲ್ಲ. ಜೊತೆಗೆ, ಇದರಲ್ಲಿ ಮಕ್ಕಳಿಗೆ ಚೈಲ್ಡ್ ರಿಸ್ಟ್ರಂಟ್ ಸಿಸ್ಟಮ್ (CRS) ಅನ್ನು ಅಳವಡಿಸಿಲ್ಲ ಎಂಬುದನ್ನು ಗ್ಲೋಬಲ್ ಎನ್ಸಿಎಪಿ ಗಮನಿಸಿದೆ.  ಹೀಗಾಗಿ ಯಾವುದೇ ಡೈನಾಮಿಕ್ ಪಾಯಿಂಟ್ಸ್‌ಗಳನ್ನು ನೀಡಲಾಗಿಲ್ಲ. 
ಇಗ್ನಿಸ್‌ನ ಪರೀಕ್ಷೆಯಲ್ಲಿಯೂ ಮೇಲೆ ಉಲ್ಲೇಖಿಸಿದ ಸಮಸ್ಯೆಗಳೇ ಕಾಣಿಸಿಕೊಂಡಿವೆ. ಇದರಲ್ಲಿ ಸಿಆರ್‌ಎಸ್ (CRS) ಕೊರತೆಯನ್ನು ಗ್ಲೋಬಲ್ NCAP ಗಮನಿಸಿದೆ. ಆದರೆ, ಇದು 3 ವರ್ಷ ವಯಸ್ಸಿನ ಮಗು ಮತ್ತು 18 ತಿಂಗಳ ಮಗುವಿಗೆ ಹಿಂಬದಿ ಆಸನವು ಸುರಕ್ಷತೆ ಒದಗಿಸುತ್ತದೆ ಎಂದು ಈ ಏಜೆನ್ಸಿ ತನ್ನ ವರದಿಯಲ್ಲಿ ತಿಳಿಸಿದೆ. ಮಾರುತಿ ಸುಜುಕಿಯ ಅತಿ ಹೆಚ್ಚು ಬೇಡಿಕೆ ಇರುವ ಕಾರುಗಳಲ್ಲಿ ಮಾರುತಿ ಸ್ವಿಫ್ಟ್ ಕೂಡ ಒಂದು. 

ಮಾರುತಿಗೆ ಮುಂದಿನ 3 ವರ್ಷಗಳಲ್ಲಿ 20,000 ಕೋಟಿ ರೂ. ಮೌಲ್ಯದ ಕಾರು ರಫ್ತು ಗುರಿ

Tap to resize

Latest Videos

 

click me!