ಮಾರುತಿ ಸುಜುಕಿ ಕಾರು ಉತ್ಪಾದನೆ ಐದು ಪಟ್ಟು ಹೆಚ್ಚಳ, ಮತ್ತೆ ಮರಳಿತಾ ಟ್ರ್ಯಾಕ್‌ಗೆ?

By Suvarna News  |  First Published Jun 7, 2022, 9:44 AM IST

ದೇಶದ ಅತಿ ದೊಡ್ಡ ಕಾರು ತಯಾರಕರು ಮಾರುತಿ ಸುಜುಕಿ ಇಂಡಿಯಾ (Maruti Suzuki India) ಕಳೆದೊಂದು ತಿಂಗಳಲ್ಲಿ ಮೂರು ಪಟ್ಟು ಉತ್ಪಾದನೆ ಹೆಚ್ಚಳವನ್ನು ಕಂಡಿದೆ.


ದೇಶದ ಅತಿ ದೊಡ್ಡ ಕಾರು ತಯಾರಕರು ಮಾರುತಿ ಸುಜುಕಿ ಇಂಡಿಯಾ (Maruti Suzuki India) ಕಳೆದೊಂದು ತಿಂಗಳಲ್ಲಿ ಮೂರು ಪಟ್ಟು ಉತ್ಪಾದನೆ ಹೆಚ್ಚಳವನ್ನು ಕಂಡಿದೆ. ಈ ಕುರಿತ ವರದಿಯಲ್ಲಿ ಕಂಪನಿ, ಕಳೆದ ತಿಂಗಳು 1,64,859 ವಾಹನಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ. 2021ರ ಮೇ ತಿಂಗಳಲ್ಲಿ ಇದು 40,924ರಷ್ಟಿತ್ತು. 
ಆಟೊಮೊಬೈಲ್ ವಲಯವನ್ನು ಕಾಡುತ್ತಿರುವ ಚಿಪ್ ಕೊರತೆಯ ನಡುವೆಯೂ ಕಂಪನಿ ಈ ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದು ಕಾರು ತಯಾರಕರು ಹೇಳಿದ್ದಾರೆ. ಕಳೆದ ತಿಂಗಳಲ್ಲಿ ಚಿಪ್ ಕೊರತೆ ಉತ್ಪಾದನೆಯ ಮೇಲೆ ಕನಿಷ್ಠ ಪರಿಣಾಮ ಬೀರಿದೆ. ಜೊತೆಗೆ, 2021ರ ಮಾರಾಟವನ್ನು ಈ ವರ್ಷಕ್ಕೆ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ, 2021ರ ಮೇ ತಿಂಗಳಲ್ಲಿ ಕೋವಿಡ್-19 ಕಾರಣದಿಂದ ಮಾರಾಟ ಸಂಪೂರ್ಣ ಕುಸಿದಿತ್ತು ಎಂದು ಕಂಪನಿ ಪ್ರಕಟಣೆ ತಿಳಿಸಿದೆ.
ಕಳೆದ ತಿಂಗಳು ಒಟ್ಟು 1,60,459 ಪ್ರಯಾಣಿಕ ವಾಹನಗಳು ಮಾರಾಟ ದಾಖಲಾಗಿವೆ. 2021ರ ಮೇ ತಿಂಗಳಲ್ಲಿ ಅದು 40,628 ವಾಹನಗಳು ಮಾರಾಟವಾಗಿದ್ದವು.
ಸಣ್ಣ ವಾಹನಗಳಾದ ಆಲ್ಟೋ (Alto) ಹಾಗೂ ಎಸ್-ಪ್ರೆಸೋ (S-presso) ಮಾದರಿಗಳು 26,199 ರಷ್ಟು ತಯಾರಾಗಿವೆ. ಕಳೆದ ವರ್ಷ ಇದು ಕೇವಲ 4.896ರಷ್ಟಿತ್ತು. 
ವ್ಯಾಗನ್ ಆರ್ (Wagon R), ಸೆಲೆರಿಯೋ (Celereo), ಇಗ್ನಿಸ್ (Ignis), ಸ್ವಿಫ್ಟ್ (Swift), ಬಲೆನೋ (Baleno) ಮತ್ತು ಡಿಸೈರ್ (Dezire)ನಂತಹ ಕಾಂಪ್ಯಾಕ್ಟ್ ಕಾರುಗಳು ಒಟ್ಟು 84,810 ಉತ್ಪಾದನೆಯಾಗಿತ್ತು. ಇದು ಕಳೆದ ವರ್ಷ 25,130ರಷ್ಟಿತ್ತು. 
ಇದೇ ರೀತಿ, ಯುಟಿಲಿಟಿ ವಾಹನಗಳಾದ ಜಿಪ್ಸಿ, ಎರ್ಟಿಗ, ಎಸ್-ಕ್ರಾಸ್, ವಿಟಾರ ಬ್ರೀಜಾ ಮತ್ತು ಎಕ್ಸ್ಎಲ್6 ಗಳು 36,941ರಷ್ಟು ವಾಹನಗಳು ಉತ್ಪಾದನೆಯಾಗಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ ಈ ಎಲ್ಲಾ ಮಾದರಿಗಳು ಒಟ್ಟಾಗಿ 9,106 ವಾಹನಗಳನ್ನು ಉತ್ಪಾದಿಸಲಾಗಿತ್ತು.
ಮಾರುತಿ ಈಕೋ ವ್ಯಾನ್ 10,692 ವಾಹನಗಳು ಉತ್ಪಾದನೆಯಾಗಿವೆ. 2021ರ ಮೇ ತಿಂಗಳಲ್ಲಿ ಇದು ಕೇವಲ 962 ವಾಹನಗಳು ಉತ್ಪಾದನೆಯಾಗಿದ್ದವು.
ಮಾರುತಿಯ ಜನಪ್ರಿಯ ಹ್ಯಾಚ್ಬ್ಯಾಕ್ ವ್ಯಾಗನ್ ಆರ್ ಭಾರತದಲ್ಲಿ ತನ್ನ ಅತ್ಯುತ್ತಮ ಮಾರಾಟವನ್ನು ಮುಂದುವರಿಸಿದೆ. ಕಳೆದ ತಿಂಗಳು ಒಟ್ಟು 16,814 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕೇವಲ 2,086 ವಾಹನಗಳು ಮಾರಾಟವಾಗಿದ್ದವು. ಇಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದರಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಆದರೆ, ಕಳೆದ ವರ್ಷ ಈ ಸಮಯದಲ್ಲಿ ಕೋವಿಡ್-19 ಎರಡನೇ ಅಲೆಯ ಕಾರಣದಿಂದ ಕಾರು ಉತ್ಪಾದಕರು ವಾಹನಗಳನ್ನು ಮಾರಾಟ ಮಾಡಲು ಪರದಾಡುತ್ತಿದ್ದರು. ಕಳೆದ ವರ್ಷದ ಏಪ್ರಿಲ್ಗೆ ಹೋಲಿಸಿದರೆ ಮಾರುತಿ ವ್ಯಾಗನ್ ಆರ್ ಸಾವಿರದಷ್ಟು ವಾಹನಗಳ ಮಾರಾಟ ಹೆಚ್ಚಾಗಿದೆ.
ಮಾರುತಿ ಸ್ವಿಫ್ಟ್ ಹ್ಯಾಚ್ಬ್ಯಾಕ್ ಕೂಡ ಟಾಪ್ 10 ಅತಿ ಹೆಚ್ಚಿನ ವಾಹನಗಳ ಮಾರಾಟ ಪಟ್ಟಿಯಲ್ಲಿಯೇ ಮುಂದುವರಿದಿದೆ. ಸದ್ಯ ಎಲ್ಲಾ ಕಾರುಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ಏಪ್ರಿಲ್ ತಿಂಗಳಲ್ಲಿ 9000 ವಾಹನವನ್ನು ಕೂಡ ಮಾರಾಟ ಮಾಡಲು ವಿಫಲವಾಗಿದ್ದ ಕಂಪನಿ ಮೇ ತಿಂಗಳಲ್ಲಿ ಅತಿ ಹೆಚ್ಚಿನ ಮಾರಾಟ ದಾಖಲಿಸಿದೆ. ಹ್ಯುಂಡೈ ಕ್ರೇಟಾದ ನಂತರ ಮಾರುತಿ ಸ್ವಿಫ್ಟ್ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿದೆ. 
ಮಾರುತಿ ಆಲ್ಟೋ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಕಂಪನಿ ನಿರ್ಧರಿಸಿದೆ ಎಂಬ ವದಂತಿ ಹರಿದಾಡುತ್ತಿತ್ತು. ಆದರೆ, ಭಾರತದ ಅತಿ ಹೆಚ್ಚು ಬೇಡಿಕೆಯ ಕಾರಿಗೆ ಇನ್ನೂ ಬೇಡಿಕೆ ಕಡಿಮೆಯಾಗಿಲ್ಲ. 2022ರ ಮೇ ತಿಂಗಳಲ್ಲಿ ಒಟ್ಟು 12,933 ಆಲ್ಟೋ ಕಾರುಗಳನ್ನು ಮಾರುತಿ ಮಾರಾಟ ಮಾಡಿದೆ. 
 

click me!