ಮೇಡ್ ಇನ್ ಇಂಡಿಯಾ ಮೊದಲ ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆ, 857 ಕಿ.ಮೀ ಮೈಲೇಜ್!

By Contributor Asianet  |  First Published Sep 30, 2022, 3:23 PM IST

ಭಾರತದ ಮೊದಲ ಮೇಡ್ ಇನ್ ಇಂಡಿಯಾ ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಮರ್ಸಿಡೀಸ್ ಬೆಂಜ್ EQS 580 ಎಲೆಕ್ಟ್ರಿಕ್ ಕಾರು ಸಂಪೂರ್ಣವಾಗಿ ಭಾರತದಲ್ಲಿ ಉತ್ಪಾದನೆಯಾಗಿದೆ.  ವಿಶೇಷ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ 857 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಕಾರಿನ ಬೆಲೆ, ಬುಕಿಂಗ್ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.


ನವದೆಹಲಿ(ಸೆ.30): ಭಾರತದಲ್ಲಿ ಈಗಾಗಲೇ ಹಲವು ಬ್ರ್ಯಾಂಡ್ ಎಲೆಕ್ಟ್ರಿಕ್ ಕಾರುಗಳು ಲಭ್ಯವಿದೆ. ಕೈಗೆಟುಕುವ ದರದಿಂದ ಆರಂಭಗೊಳ್ಳುವ ಎಲೆಕ್ಟ್ರಿಕ್ ಕಾರುಗಳು, ಐಷಾರಾಮಿ ಇವಿಗಳು ಲಭ್ಯವಿದೆ. ಇದೀಗ ಭಾರತದಲ್ಲಿ ಸಂಪೂರ್ಣವಾಗಿ ತಯಾರಿಸಲಾದ ಮೊದಲ ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಮರ್ಸಿಡೀಸ್ ಬೆಂಜ್ ನೂತನ ಕಾರು ಬಿಡುಗಡೆ ಮಾಡಿದೆ. ಭಾರತದ ಘಟಕದಲ್ಲಿ ಮರ್ಸಿಡೀಸ್ ಬೆಂಜ್ EQS 580 ಎಲೆಕ್ಟ್ರಿಕ್ ಐಷಾರಾಮಿ ಕಾರು ಬಿಡುಗಡೆಯಾಗಿದೆ. ನೂತನ ಮರ್ಸಡೀಸ್ ಬೆಂಜ್ EQS 580 ಎಲೆಕ್ಟ್ರಿಕ್ ಕಾರು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 857 ಕಿಲೋಮೀಟರ್ ಮೈಲೇಜ್ ನೀಡಲಿದೆ. ಭಾರತದಲ್ಲೇ ನಿರ್ಮಾಣವಾಗಿರುವ ನೂತನ ಕಾರಿನ ಬೆಲೆ 1.55 ಕೋಟಿ ರೂಪಾಯಿ. ಇನ್ನು 25 ಲಕ್ಷ ರೂಪಾಯಿ ಪಾವತಿಸಿ ನೂತನ ಕಾರು ಬುಕ್ ಮಾಡಿಕೊಳ್ಳಬುಹುದು.

ಮರ್ಸಡೀಸ್ ಬೆಂಜ್ EQS 580 ಎಲೆಕ್ಟ್ರಿಕ್ ಕಾರು ಪುಣೆಯ ಚಕನ್ ಘಟಕದಲ್ಲಿ ಉತ್ಪಾದನೆ ಮಾಡಲಾಗಿದೆ. ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಮರ್ಸಡೀಸ್ ಬೆಂಜ್ EQS 580 ಎಲೆಕ್ಟ್ರಿಕ್ ಕಾರು ಗರಿಷ್ಠ ಮೈಲೇಜ್ ನೀಡುವ ಕಾರು ಅನ್ನೋ ಹೆಗಗಳಿಕೆಗೆ ಪಾತ್ರವಾಗಿದೆ. 

Latest Videos

undefined

ಹೊಸ ತಲೆಮಾರಿನ ಮರ್ಸಿಡೀಸ್ ಬೆಂಝ್ ಮೇಬ್ಯಾಕ್‌ ಎಸ್ ಕ್ಲಾಸ್ ಬಿಡುಗಡೆ

ನೂತನ ಕಾರು 107.8 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಇದರೊಂದಿಗೆ 385 kW ಪವರ್ ಹಾಗೂ 885 nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ 15 ನಿಮಿಷ  ಚಾರ್ಜ್ ಮಾಡಿದರೆ 300 ಕಿ.ಮೀ ಮೈಲೇಜ್ ನೀಡಲಿದೆ. 4.1 ಸೆಕೆಂಡ್‌ನಲ್ಲಿ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯ ಹೊಂದಿದೆ. 

ಎಲೆಕ್ಟ್ರಿಕ್‌ ಕಾರುಗಳ ಬುಕ್ಕಿಂಗ್‌ 
ತನ್ನ ಲಕ್ಸೂರಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನಿಸಿ ಮರ್ಸಿಡಿಸ್‌ ಬೆನ್‌್ಝ ಇದೀಗ ಎರಡನೇ ಹಂತದಲ್ಲಿ ಎಲೆಕ್ಟ್ರಿಕ್‌ ಕಾರುಗಳ ಮಾರಾಟ ವಿಸ್ತರಿಸಲು ನಿರ್ಧರಿಸಿದೆ. 50 ನಗರಗಳಲ್ಲಿ ಕಂಪೆನಿಯ 94 ಹೊಸ ಔಟ್‌ಲೆಟ್‌ಗಳು ಆರಂಭವಾಗಲಿವೆ. ಇನ್ನೊಂದೆಡೆ ಹೊಸ ಮರ್ಸಿಡಿಸ್‌ ಬೆನ್‌್ಝ ಇಸಿಕ್ಯೂಗೆ ಬುಕ್ಕಿಂಗ್‌ ಶುರುವಾಗಿದೆ. ಮುಂದಿನ ತಿಂಗಳಿಂದ ಹೊಸ ಎಲೆಕ್ಟ್ರಿಕ್‌ ಕಾರುಗಳ ಆಗಮನವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಹೊಸ ಬೆನ್‌್ಝ ಇಸಿಕ್ಯೂನಲ್ಲಿ 80 ಕಿಲೊ ವ್ಯಾಟ್‌ನ ಆನ್‌ ಬೋಡ್‌ ಚಾರ್ಜರ್‌ ಇದ್ದು, ಏಳೂವರೆ ಗಂಟೆಯಲ್ಲಿ ಕಂಪ್ಲೀಟ್‌ ಚಾಜ್‌ರ್‍ ಆಗಲಿದೆ. ಹೊಸ ಚಾರ್ಜರ್‌ನಲ್ಲಿ ಹಿಂದಿಗಿಂತ ಮೂರೂವರೆ ಗಂಟೆಗೂ ಮೊದಲು ಚಾರ್ಜಿಂಗ್‌ ಕಂಪ್ಲೀಟ್‌ ಆಗಲಿದೆ ಎಂದು ಕಂಪೆನಿ ಹೇಳಿದೆ.

 

ಮನೆ ಬಣ್ಣಕ್ಕೆ 3 ಕಾರು ರೀ-ಪೇಂಟ್‌ ಮಾಡಿಸಿದ ನಟಿ: ವ್ಯಯಿಸಿದ್ದು ಬರೋಬ್ಬರಿ 75 ಲಕ್ಷ ರೂ.!

ಮರ್ಸಿಡೀಸ್ ಬೆಂಜ್  ‘ಇ 220 ಡಿ’ ಹಾಗೂ ‘ಇ 200 ಡಿ’ ಎಂಬ ಯಲ್ಲಿ ‘ಎಕ್ಸ್‌ಪ್ರೆಶನ್‌’ ಹಾಗೂ ‘ಎಕ್ಸ್‌ಕ್ಲೂಸಿವ್‌’ ಎಂಬ ಎರಡು ಕಾರುಗಳಿವೆ. 1950ಸಿಸಿ ಸಾಮರ್ಥ್ಯದ ಈ ಕಾರುಗಳು ಇನ್‌ಲೈನ್‌4 ಸಿಲಿಂಡರ್‌ನ ಡಿಸೆಲ್‌ಎಂಜಿನ್‌ ಹೊಂದಿದ್ದು, 192 ಬಿಎಚ್‌ಪಿ ಸಾಮರ್ಥ್ಯ ಹೊಂದಿವೆæ. 400ಎನ್‌ಎಂ ಟಾರ್ಕ್ ಹೊಂದಿರುವ ಇದರ ಗರಿಷ್ಠ ಸ್ಪೀಡ್‌ ಗಂಟೆಗೆ 240 ಕಿಲೋಮೀಟರ್‌ಗಳು. ‘ಇ 200’ ಮಾದರಿಯ ಇನ್ನೆರಡು ಕಾರುಗಳು ಎಂ 264 ಇಂಜಿನ್‌ ಹೊಂದಿದ್ದು 1991 ಸಿಸಿ ಸಾಮರ್ಥ್ಯದವು. ಇವು 195 ಬಿಎಚ್‌ಪಿ ಹೊಂದಿದ್ದು, ಟಾರ್ಕ್ 320 ಎನ್‌ಎಂ ಇದೆ. ಈ ಕಾರ್‌ನಲ್ಲಿ ಎಂಟು ಸೆಕೆಂಡ್‌ನಲ್ಲಿ 100 ಕಿಮೀ ಸ್ಪೀಡ್‌ ತಲುಪಬಹುದು. ಗಂಟೆಗೆ 236 ಸ್ಪೀಡ್‌ ಲಿಮಿಟ್‌ ಹೊಂದಿವೆ.

click me!