ಅತೀ ಕಡಿಮೆ ಬೆಲೆಗೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು, ಹೊಸ ಇತಿಹಾಸ ರಚಿಸಿದ ಟಾಟಾ ಮೋಟಾರ್ಸ್!

By Suvarna News  |  First Published Sep 28, 2022, 5:28 PM IST

ಭಾರತದಲ್ಲಿ ಹಲವು ಬ್ರ್ಯಾಂಡ್ ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಎಲೆಕ್ಟ್ರಿಕ್ ಕಾರುಗಳ ಪೈಕಿ ಟಾಟಾ ಮೋಟಾರ್ಸ್ ಅತೀ ಹೆಚ್ಚಿನ ಮಾರುಕಟ್ಟೆ ಪಾಲು ಹೊಂದಿದೆ. ಇದೀಗ ಟಾಟಾ ಮತ್ತೊಂದು ಇತಿಹಾಸ ರಚಿಸಿದೆ. ಅತೀ ಕಡಿಮೆ ಬೆಲೆಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ನೂತನ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. 


ಮುಂಬೈ(ಸೆ.28): ಭಾರತದಲ್ಲಿ ಟಾಟಾ ಮೋಟಾರ್ಸ್ ಹಲವು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಅಗ್ರಪಾಲು ಪಡೆದಿದೆ. ಇದರ ಜೊತೆಗೆ ಹ್ಯುಂಡೈ, ಎಂಜಿ ಮೋಟಾರ್ಸ್ ಕೂಡ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಇನ್ನು ಮಹೀಂದ್ರ ಕೂಡ ಎಲೆಕ್ಟ್ರಿಕ್ ಕಾರು ಬಿಡುಗಡೆಯ ಹಂತದಲ್ಲಿದೆ. ಆದರೆ ಎಲ್ಲಾ ಕಾರುಗಳು ಬೆಲೆ 10 ಲಕ್ಷ ರೂಪಾಯಿಗಿಂತ ಮೇಲ್ಪಟ್ಟಿದೆ. ಆದರೆ ಇದೇ ಮೊದಲ ಬಾರಿಗೆ ಟಾಟಾ ಮೋಟಾರ್ಸ್ ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಹೊಚ್ಚ ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ 8.49 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಇದು ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂತನ ಕಾರು 5 ಬಣ್ಣಗಳಲ್ಲಿ ಲಭ್ಯವಿದೆ.

ನೂತನ ಕಾರನ್ನು 21,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು. ಟಾಟಾ ಮೋಟಾರ್ಸ್ ಡೀಲರ್‌ಶಿಪ್ ಹಾಗೂ ಅಧಿಕೃತ ವೆಬ್‌ಸೈಟ್ ಮೂಲಕ ಕಾರನ್ನು ಬುಕ್ ಮಾಡಿಕೊಳ್ಳಬುಹುದು. ನೂತನ ಟಾಟಾ ಟಿಯಾಗೋ ಕಾರು ಎರಡು ಬ್ಯಾಟರಿ ಪ್ಯಾಕ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. 24kWh ಬ್ಯಾಟರಿ ಪ್ಯಾಕ್ ಹಾಗೂ 19.2kWh  ಬ್ಯಾಟರಿ ಪ್ಯಾಕ್ ಲಭ್ಯವಿದೆ. 19.2kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು 24kWh ಬ್ಯಾಟರಿ ಪ್ಯಾಕ್ ಕಾರು 315 ಕಿಲೋಮೀಟರ್ ಮೈಲೇಜ್ ನೀಡಲಿದೆ. ನೂತನ ಟಾಟಾ ಟಿಯೋಗೋ ಎಲೆಕ್ಟ್ರಿಕ್ ಕಾರು 7 ವೇರಿಯೆಂಟ್‌ನಲ್ಲಿ ಲಭ್ಯವಿದೆ.  

Tap to resize

Latest Videos

ಹಬ್ಬದ ಋತುವಿಗೆ ಟಾಟಾದಿಂದ ಭರ್ಜರಿ ಕೊಡುಗೆ, JET ಎಡಿಶನ್ ಕಾರು ಬಿಡುಗಡೆ!

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ವೇರಿಯೆಂಟ್ ಹಾಗೂ  ಬೆಲೆ ವಿವರ ಇಲ್ಲಿದೆ(ಎಕ್ಸ್ ಶೋ ರೂಂ)
XE : 8.49 ಲಕ್ಷ ರೂಪಾಯಿ 
XT: 9.09  ಲಕ್ಷ ರೂಪಾಯಿ
XT: 9.99  ಲಕ್ಷ ರೂಪಾಯಿ
XZ+ : 10.79  ಲಕ್ಷ ರೂಪಾಯಿ
XZ+ Tech LUX : 11.29  ಲಕ್ಷ ರೂಪಾಯಿ
XZ+ : 11.29  ಲಕ್ಷ ರೂಪಾಯಿ
XZ+ Tech LUX:  11.79  ಲಕ್ಷ ರೂಪಾಯಿ

ಟಾಟಾ ಟಿಯಾಗೋ ಎಲೆಕ್ಟ್ರಿಕಿಕ್ ಕಾರು  ಜಿಪ್ಟ್ರಾನ್ ತಂತ್ರಜ್ಞಾನವನ್ನು ಆಧರಿಸಿದೆ. ಟಾಟಾ ಮೋಟಾರ್ಸ್‌ನ ಆಂತರಿಕವಾಗಿ ಅಭಿವೃದ್ಧಿಪಡಿಸಿದ ಜಾಗತಿಕವಾಗಿ ಸ್ಪರ್ಧಾತ್ಮಕ ಹೈ ವೋಲ್ಟೇಜ್ ಆರ್ಕಿಟೆಕ್ಚರ್ ಕಾರು ಇದಾಗಿದೆ. ಈ ಕಾರನ್ನು ಭಾರತೀಯ ಡ್ರೈವಿಂಗ್ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.  ಕಾರ್ಯಕ್ಷಮತೆ, ತಂತ್ರಜ್ಞಾನ, ವಿಶ್ವಾಸಾರ್ಹತೆ, ಚಾರ್ಜಿಂಗ್ ಮತ್ತು ಸೌಕರ್ಯಗಳ ಮೇಲೆ ಪ್ರಬಲವಾಗಿದೆ.  ಟಾಟಾ ಮೋಟಾರ್ಸ್‌ನ ನೆಕ್ಸಾನ್, ಟಿಗೋರ್ ಕಾರುಗಳು ಇದೇ Ziptron ಟೆಕ್ನಾಲಜಿ ಆಧರಿಸಿದೆ.

ಹಬ್ಬದ ಪ್ರಯುಕ್ತ ಟಾಟಾ ಎಲೆಕ್ಟ್ರಿಕ್ ಕಾರು ಡೀಲರ್ಸ್‌ಗೆ ವಿಶೇಷ ಆಫರ್, ಆ್ಯಕ್ಸಿಸ್ ಬ್ಯಾಂಕ್ ಜೊತೆ ಒಪ್ಪಂದ!

15A ಪ್ಲಗ್ ಪಾಯಿಂಟ್ ಮೂಲಕ ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದು.  ಫಾಸ್ಟ್ ಚಾರ್ಜರ್ ಮೂಲಕ 30 ನಿಮಿಷದಲ್ಲಿ 110 ಕಿಲೋಮೀಟರ್ ಕ್ರಮಿಸಲಿದೆ. 57 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಮಾಡಲಿದೆ.  

click me!