ಹುಂಡೈನ ಆಯ್ದ ಕಾರು ಖರೀದಿ ಮೇಲೆ ಗರಿಷ್ಟ 50000 ರೂ.ವರೆಗೆ ಲಾಭ

By Suvarna News  |  First Published Sep 13, 2021, 5:43 PM IST

ಹುಂಡೈ ತನ್ನ ಆಯ್ದ ಕಾರುಗಳ ಮೇಲೆ ಈ ಸೆಪ್ಟೆಂಬರ್‌ ತಿಂಗಳಲ್ಲಿ ಮೆಗಾ ಬೆನೆಫಿಟ್ಸ್ ಘೋಷಿಸಿದೆ. ಹುಂಡೈ ಸ್ಯಾಂಟ್ರೋ, ಹುಂಡೈ ಐ10 ನಿಯೋಸ್, ಹುಂಡೈ ಔರಾ ಮತ್ತು ಹುಂಡೈ ಕೋನ ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಸಾಕಷ್ಟು ಲಾಭ ಸಿಗಲಿದೆ. ಗ್ರಾಹಕರು ಗರಿಷ್ಠ 50 ಸಾವಿರ ರೂ.ವರೆಗೆ ಲಾಭ ಪಡೆದುಕೊಳ್ಳಬಹುದು.
 


ದೇಶದ ಪ್ರಮುಖ ಕಾರ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಹುಂಡೈ ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಆಯ್ದ ಕಾರುಗಳ ಮೇಲೆ ವಿಶೇಷ ಬೆನೆಫಿಟ್ಸ್ ಘೋಷಿಸಿದೆ. ಹುಂಡೈ ಕಾರುಗಳನ್ನು ಖರೀದಿಸಲು ಯೋಜಿಸಿದ್ದರೆ, ವಿಶೇಷ ರಿಯಾಯ್ತಿಗಳೊಂದಿಗೆ ಖರೀದಿಸಲು ಇದು ಸೂಕ್ತ ಸಮಯವಾಗಿದೆ. ಹುಂಡೈ ಕಾರುಗಳ ಖರೀದಿ ಮೇಲೆ ಸಿಗುವ ಬೆನೆಫಿಟ್ಸ್ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಕಂಪನಿಯು ತನ್ನ ಸ್ಯಾಂಟ್ರೋ, ಗ್ರ್ಯಾಂಡ್ ಐ10 ನಿಯೋಸ್, ಸೆಡಾನ್ ಔರಾ ಮತ್ತು ಹುಂಡೈ ಐ20, ಹುಂಡೈ ಕೋನ ಎಲೆಕ್ಟ್ರಿಕ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ಸ್ ನೀಡುತ್ತಿದೆ. ಈ ಮೆಗಾ ಆಫರ್‌ಗಳು ಸೆಪ್ಟೆಂಬರ್ ತಿಂಗಳಿಗೆ ಮಾತ್ರವೇ ಸೀಮಿತವಾಗಿವೆ. ಅಂದರೆ, ಸೆಪ್ಟೆಂಬರ್ 30ರವರೆಗೆ ಮಾತ್ರವೇ ಸಿಂಧುವಾಗಿರುತ್ತವೆ. ಕೋನಾ ಎಲೆಕ್ಟ್ರಿಕ್ ಹೊರತುಪಡಿಸಿ ಗರಿಷ್ಠ 50 ಸಾವಿರ ರೂ.ವರೆಗೂ ರಿಯಾಯ್ತಿ  ಪಡೆಯಬಹುದು. ಹುಂಡೈ ಕೋನ ಎಲೆಕ್ಟ್ರಿಕ್ ಕಾರ್ ಖರೀದಿ  ಮೇಲೆ ಗ್ರಾಹಕರಿಗೆ 1.50 ಲಕ್ಷ ರೂ.ವರೆಗೂ ಬೆನೆಫಿಟ್ ಸಿಗಲಿದೆ. 

Tap to resize

Latest Videos

undefined

3 ಲಕ್ಷ ಮಾರಾಟ ಕಂಡ ಮಾರುತಿಯ ಸೆಡಾನ್ ಸಿಯಾಜ್!

ಹುಂಡೈನ ಎಂಟ್ರಿ ಲೆವಲ್‌ ಕಾಲ್ ಸೆಗ್ಮೆಂಟ್‌ನಲ್ಲಿ ಹೆಚ್ಚು ಪ್ರಸಿದ್ಧಯಾಗಿರುವ ಸ್ಯಾಂಟ್ರೋ ಕಾರ್ ಮೇಲೆ ಬಂಪರ್ ರಿಯಾಯ್ತಿ ನೀಡಲಾಗುತ್ತಿದೆ. ಈ ಕಾರ್ ಮಾರುತಿ ಕಂಪನಿಯು ವ್ಯಾಗನ್ಆರ್ ಮತ್ತು ಟಾಟಾ ಕಂಪನಿಯ ಟಿಯಾಗೋ ಕಾರಿಗೆ ಭಾರಿ ಪೈಪೋಟಿ ನೀಡುತ್ತಿದೆ. ಸ್ಯಾಂಟ್ರೋ ಕಾರ್ ಖರೀದಿ ಮೇಲೆ 25 ಸಾವಿರ ರೂ.ವರೆಗೂ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನ್ 10 ಸಾವಿರ ಮತ್ತು ಕಾರ್ಪೊರೇಟ್ ರಿಯಾಯ್ತಿ 5 ಸಾವಿರ ಸೇರಿ ಒಟ್ಟು 40 ಸಾವಿರ ರೂಪಾಯಿವರೆಗೂ ಲಾಭವಾಗಲಿದೆ. 

ಅದೇ ರೀತಿ ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ ಕೂಡ  ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎನಿಸಿಕೊಂಡಿರುವ ಈ ಕಾರ್ ಖರೀದಿ ಮೇಲೆ ಗ್ರಾಹಕರಿಗೆ ಗರಿಷ್ಠ 50 ಸಾವಿರ ರೂ.ವರೆಗೂ ಲಾಭ ಸಿಗಲಿದೆ. ಮಾರುತಿ ಸುಜುಕಿಯ ಸ್ವಿಫ್ಟ್‌ ಕಾರಿಗೆ ನಿಯೋಸ್ ತೀವ್ರ ಪ್ರತಿಸ್ಪರ್ಧಿ ಕಾರ್ ಆಗಿದೆ.

ಹುಂಡೈ ಐ10 ನಿಯೋಸ್ ಕಾರ್‌ ಖರೀದಿ ಮೇಲೆ 50 ಸಾವಿರ ರೂಪಾಯಿರವೆಗೂ ಲಾಭವಾಗಲಿದೆ. ಇದರಲ್ಲಿ 35 ಸಾವಿರ ರೂ.ವರೆಗೆ ಡಿಸ್ಕೌಂಟ್, 10 ಸಾವಿರ ರೂ. ಎಕ್ಸ್‌ಚೇಂಜ್ ಬೋನಸ್ ಮತ್ತು ಕಾರ್ಪೊರೇಟ್ ಬೋನಸ್ 5 ಸಾವಿರ ರೂಪಾಯಿ ಸೇರಿಕೊಂಡಿದೆ.

1,81,754 ಸಿಯಾಜ್, ಎರ್ಟಿಗಾ, ವಿಟಾರಾ ಬ್ರೆಜಾ, ಎಸ್ ಕ್ರಾಸ್, ಎಕ್ಸ್ಎಲ್6 ಕಾರ್ ರಿಕಾಲ್ ಮಾಡಿದ ಮಾರುತಿ ಸುಜುಕಿ!

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿರುವ ಹುಂಡೈ ಐ20 ಖರೀದಿಯ ಮೇಲೂ ಗ್ರಾಹಕರಿಗೆ  40 ಸಾವಿರ ರೂ.ವರೆಗ ಲಾಭ ಸಿಗಲಿದೆ. ಟಾಟಾ ಕಂಪನಿಯ ಅಲ್ಟ್ರೋಜ್ ಮತ್ತು ಮಾರುತಿ ಸುಜುಕಿಯ ಬಲೆನೋ ಕಾರಿಗ ತೀವ್ರ ಪ್ರತಿಸ್ಪರ್ಧಿಯಾಗಿರುವ ಹುಂಡೈ ಐ20 ಕಾರ್ ಖರೀದಿಯ ನಾಲ್ಕಾರು ಡಿಸ್ಕೌಂಡ್ ಹಾಗೂ ರಿಯಾಯ್ತಿಗಳನ್ನು ಒಳಗೊಂಡಿದೆ.  ಈ ಕಾರ್ ಖರೀದಿಯ ಒಟ್ಟು 40 ಸಾವಿರ  ರೂಪಾಯಿ ಲಾಭದಲ್ಲಿ  25 ಸಾವಿರ ರೂ.ವರೆಗೆ ಡಿಸ್ಕೌಂಟ್ ದೊರೆತರೆ, 10 ಸಾವಿರ ರೂ.ವರೆಗೆ ಎಕ್ಸ್‌ಚೇಂಜ್  ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ 5  ಸಾವಿರ ರೂಪಾಯಿ ಕೂಡ ಇದರಲ್ಲಿ ಸೇರಿದೆ. 
 

ಮಿಡ್ ಸೈಜ್ ಸೆಡಾನ್ ಹುಂಡೈ ಔರಾ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ. ಈ ಸೆಡಾನ್ ಕಾರ್ ಖರೀದಿಯ ಮೇಲೂ ಕಂಪನಿಯು ರಿಯಾಯ್ತಿಗಳನ್ನು ಈ ಸೆಪ್ಟೆಂಬರ್‌ ತಿಂಗಳ ಮಟ್ಟಿಗೆ ಘೋಷಿಸಿದೆ. 5,99,900 ರೂ.ನಿಂದ 9,36,300 ರೂ.ವರೆಗೂ(ದಿಲ್ಲಿ ಶೋರೂಮ್ )  ಬೆಲೆಯನ್ನು ಹೊಂದಿರುವ ಹುಂಡೈ ಔರಾ ಖರೀದಿ ಮೇಲೆ ಗ್ರಾಹಕರಿಗೆ ಒಟ್ಟು 50 ಸಾವಿರ ರೂಪಾಯಿವರೆಗೂ ಲಾಭವಾಗಲಿದೆ. 

ರೆನೋಗೆ 10 ವರ್ಷ: ಹೊಸ 2021 ಕ್ವಿಡ್ ಲಾಂಚ್, ವಿಶೇಷ ಆಫರ್ಸ್!

ಈ 50 ಸಾವಿರ ರೂ. ಬೆನೆಫಿಟ್‌ನಲ್ಲಿ 35 ಸಾವಿರ ರೂಪಾಯಿವರೆಗೆ ಡಿಸ್ಕೌಂಟ್, 10 ಸಾವಿರ ರೂಪಾಯಿ ಎಕ್ಸ್‌ಚೇಂಜ್ ಆಫರ್, 5 ಸಾವಿರ ರೂಪಾಯಿ ಕಾರ್ಪೊರೇಟ್ ಡಿಸ್ಕೌಂಡ್ ಸೇರಿದೆ. ಈ ಕಾರ್ ಹೋಂಡಾ ಅಮೇಜ್, ಮಾರುತಿಯ ಡಿಸೈರ್‌ಗೆ ಪ್ರತಿಸ್ಪರ್ಧಿಯಾಗಿದೆ. ಇನ್ನು ಕಂಪನಿಯು ಎಲೆಕ್ಟ್ರಿಕ್ ವಾಹನ ಎನಿಸಿಕೊಂಡಿರುವ ಕೋನಾ ಎಲೆಕ್ಟ್ರಿಕ್ ಖರೀದಿ ಮೇಲೆ ಗರಿಷ್ಠ 1,50,000 ರೂ.ವರೆಗೂ ಲಾಭ ಸಿಗಲಿದೆ.

click me!