ನೀವು ಕಾರು ಚಲಾಯಿಸುವವರಾದರೆ ಹ್ಯಾಂಡ್‌ಬ್ರೇಕ್ ಬಳಕೆಯ ಬಗ್ಗೆ ತಿಳಿದೇ ಇರುತ್ತದೆ. ಆದರೆ ಹಿಲ್ ಸ್ಟೇಶನ್‌ಗಳಿಗೆ ವಾಹನ ಚಾಲನೆ ಮಾಡುವುದಿದ್ದರೆ ಹ್ಯಾಂಡ್‌ಬ್ರೇಕ್ ಬಗ್ಗೆ ಕೆಲವು ಅಂಶಗಳನ್ನು ನಿಮ್ಮ ಅರಿವಿನಲ್ಲಿ ಇರಲಿ.
ನೀವು ಕಾರು ಚಾಲನೆ ಮಾಡುವವರಾದರೆ ಹ್ಯಾಂಡ್‌ಬ್ರೇಕ್ ಬಳಕೆಯ ಬಗ್ಗೆ ನಿಮಗೆ ತಿಳಿದಿರುತ್ತದೆ. ಆದರೆ ಹ್ಯಾಂಡ್‌ಬ್ರೇಕ್‌ಗಳ ಸುರಕ್ಷತೆಯೂ ಅತ್ಯಂತ ಅಗತ್ಯ. ಇವುಗಳನ್ನು ಬಳಸುವುದರ ಜೊತೆಗೆ, ಕ್ಲಚ್‌ನಂತೆಯೇ ಇವುಗಳನ್ನು ಆರೋಗ್ಯಕರವಾಗಿ ಮೇಂಟೇನ್ ಮಾಡುವುದೂ ಅಗತ್ಯ. ಈ ಕೆಳಗಿನ ಅಂಶಗಳು ನಿಮಗೆ ಗೊತ್ತಿರಲಿ.
- ಘಾಟಿ ರಸ್ತೆಗಳಲ್ಲಿ ಏರು ತಗ್ಗುಗಳ ಸಾಮಾನ್ಯ. ಇಲ್ಲಿ ಎಲ್ಲಿಯೇ ನಿಲ್ಲಿಸುವುದಾದರೂ, ಹ್ಯಾಂಡ್‌ಬ್ರೇಕ್ ಹಾಕದೇ ನಿಲ್ಲಿಸಬೇಡಿ. ಒಂದು ವೇಳೆ ನೆಲ ಸಪಾಟಾಗಿದೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ, ಹಾಗಿರುವುದಿಲ್ಲ. ಸ್ವಲ್ಪ ಇಳಿಜಾರು ಇದ್ದರೂ ಗ್ರಾವಿಟಿ ಬಲದಿಂದ ಅದು ಮುಂದೆ ಜಾರಬಲ್ಲದು.
undefined
- ಏರುದಾರಿಯಲ್ಲಿ ನಿಲ್ಲಿಸುವಾಗಲೂ ಹ್ಯಾಂಡ್‌ಬ್ರೇಕ್ ಬಳಸಿ.
- ಘಾಟಿ ರಸ್ತೆಯಲ್ಲಿ ಡ್ರೈವ್ ಮಾಡುವಾಗ ಟ್ರಾಫಿಕ್ ಜಾಮ್ ಆಗಿದ್ದರೆ, ಕಾಲಿನ ಬ್ರೇಕ್‌ಗಳ ಬಲವನ್ನೇ ನಂಬಿ ತುಂಬಾ ಹೊತ್ತು ನಿಲ್ಲಿಸಲಾಗುವುದಿಲ್ಲ. ಆಗ ಹ್ಯಾಂಡ್‌ಬ್ರೇಕ್ ಬಳಸಬೇಕು.
ಕಾರಿನ ಕ್ಲಚ್ ಬಳಸುವಾಗ ಎಚ್ಚರವಿರಲಿ, ಈ ತಪ್ಪುಗಳನ್ನು ಮಾಡಬೇಡಿ
- ಹ್ಯಾಂಡ್‌ಬ್ರೇಕ್ ಹಾಕಿಕೊಂಡೇ ಇದ್ದರೂ ಕೆಲವು ಅಡಿಗಳ ದೂರಕ್ಕೆ ಕಾರು ಚಲಿಸಬಲ್ಲದು ಎಂಬುದು ಗೊತ್ತಿರಲಿ. ಹೀಗಾಗಿ ಮುಂದೆ ಚಲಾಯಿಸುವಾಗ ಹ್ಯಾಂಡ್‌ಬ್ರೇಕ್ ತೆಗೆಯುವುದು ಅಗತ್ಯ. ಪದೇ ಪದೇ ಹ್ಯಾಂಡ್‌ಬ್ರೇಕ್ ಹಾಕಿಕೊಂಡೇ ಮುಂದಕ್ಕೆ ಚಲಾಯಿಸಿದರೆ ಅದರ ಪರಿಣಾಮ ಕಡಿಮೆಯಾಗುತ್ತದೆ.
- ತೀರಾ ಕಡಿದಾದ ತಿರುವು ಹಾಗೂ ಏರು ಎರಡೂ ಒಟ್ಟಿಗೇ ಬಂದರೆ, ಫಸ್ಟ್ ಗೇರ್‌ಗೆ ವಾಹನವನ್ನು ಇಳಿಸಬೇಕು. ಇಂಥ ಕಡೆ ಹ್ಯಾಂಡ್‌ಬ್ರೇಕ್ ಬಳಸುವುದರ ಸಮರ್ಪಕ ಅಭ್ಯಾಸ ಮಾಡಿಕೊಳ್ಳಿ.
- ಕಾರುಗಳನ್ನು ಸರ್ವೀಸ್ ಮಾಡಿಸುವ ಸಂದರ್ಭದಲ್ಲಿ ಅವುಗಳ ಬ್ರೇಕಿಂಗ್ ಬಗ್ಗೆಯೂ ಗಮನ ಹರಿಸಬೇಕು. ಹ್ಯಾಂಡ್ ಬ್ರೇಕ್'ಗಳು ಕೂಡ ವೈಫಲ್ಯ ಕಾಣುವ ಸಾಧ್ಯತೆಗಳಿರುತ್ತವೆ.
- ಹ್ಯಾಂಡ್ ಬ್ರೇಕ್ ಅಸಹಜವಾಗಿದ್ದರೆ, ಬಿಗಿಯಾಗಿದ್ದರೆ ಅದರಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ. ಇದು ಬ್ರೇಕ್ ವೈರ್‌ನಲ್ಲಿ ಅಸಮರ್ಪಕ ಕಾರ್ಯವನ್ನು ಸೂಚಿಸುತ್ತದೆ. ತುಂಬಾ ಬಿಗಿಯಾಗಿರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ಹ್ಯಾಂಡ್ ಬ್ರೇಕ್'ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಇದರಿಂದ ಅನಗತ್ಯ ತೊಂದರೆಗಳು ಉಂಟಾಗಬಹುದು.
- ಇದರ ಜೊತೆಗೆ ಹ್ಯಾಂಡ್ ಬ್ರೇಕ್‌ಗಳು ತೀರಾ ಸಡಿಲವಾಗಿಯೂ ಕಾರ್ಯನಿರ್ವಹಿಸಬಾರದು. ಹ್ಯಾಂಡ್ ಬ್ರೇಕ್'ಗಳು ತೀರಾ ಸಡಿಲವಾಗಿದ್ದರೆ ವೈರ್ ಗಳು ಜೋಡಣೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಇದರಿಂದ ಕೆಲವೊಮ್ಮೆ ಹ್ಯಾಂಡ್ ಬ್ರೇಕ್ ಗಳು ನಿಷ್ಕ್ರಿಯವಾಗುತ್ತವೆ. ಈ ಕಾರಣಕ್ಕೆ ಹ್ಯಾಂಡ್ ಬ್ರೇಕ್ ಅಸಹಜವಾಗಿ ಹಗುರವಾಗಿ ಕೆಲಸ ಮಾಡಿದರೂ ಸಹ ತಕ್ಷಣವೇ ಅದನ್ನು ಸರಿ ಪಡಿಸುವುದು ಉತ್ತಮ.
ಭಾರತಕ್ಕೆ ಗುಡ್ ಬೈ; ನಷ್ಟ ತಾಳಲಾರದೆ ಕಾರು ಉತ್ಪಾದನೆ ಸ್ಥಗಿತಗೊಳಿಸಿದ ಫೋರ್ಡ್!
- ಕಾರಿನಲ್ಲಿರುವ ಹ್ಯಾಂಡ್‌ಬ್ರೇಕ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಕಾರನ್ನು ಕಡಿದಾದ ಅಥವಾ ಇಳಿಜಾರು ಪ್ರದೇಶಗಳಲ್ಲಿ ಹ್ಯಾಂಡ್‌ಬ್ರೇಕ್ ಹಾಕಿ ನಿಲ್ಲಿಸಬೇಕು. ಕಾರು ಸ್ವಲ್ಪವೂ ಚಲಿಸದಿದ್ದರೆ ಕಾರಿನ ಹ್ಯಾಂಡ್ ಬ್ರೇಕ್ ಉತ್ತಮ ಸ್ಥಿತಿಯಲ್ಲಿದೆ ಎಂದರ್ಥ. ವಿರುದ್ಧವಾಗಿ ಕಾರು ಸ್ವಲ್ಪ ಚಲಿಸಿದರೂ ಹ್ಯಾಂಡ್ ಬ್ರೇಕ್ ನಿಷ್ಕ್ರಿಯವಾಗಿದೆ ಎಂದರ್ಥ.
- ಆಕಸ್ಮಿಕವಾಗಿ ಹ್ಯಾಂಡ್ ಬ್ರೇಕ್‌ನಲ್ಲಿರುವ ಕಾರ್ ಅನ್ನು ಚಲಿಸಿದರೆ ಕೆಲವು ಅಡೆ ತಡೆಗಳು ಎದುರಾಗುತ್ತವೆ. ಒಂದು ವೇಳೆ ಹ್ಯಾಂಡ್ ಬ್ರೇಕ್ ಹಾಕಿ ಕಾರ್ ಅನ್ನು ಮುಂದಕ್ಕೆ ಚಲಿಸಿಯೂ ಯಾವುದೇ ಪ್ರತಿರೋಧ ಕಂಡು ಬರದಿದ್ದರೆ ಹ್ಯಾಂಡ್ ಬ್ರೇಕ್‌ನಲ್ಲಿ ಏನೋ ತಪ್ಪಾಗಿದೆ ಎಂದರ್ಥ. ಇದೇ ವೇಳೆ ಹ್ಯಾಂಡ್‌ಬ್ರೇಕ್ ಹಾಕಿರುವಾಗ ಕಾರ್ ಅನ್ನು ಬಳಸುವುದರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು. ಕಾರು ಒತ್ತಡವಿಲ್ಲದೆ ಪ್ರಯಾಣಿಸುತ್ತಿದ್ದರೆ ಯಾವುದೇ ಸಮಯದಲ್ಲಿಯೂ ಹ್ಯಾಂಡ್ ಬ್ರೇಕ್ ಅನ್ನು ಬಳಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.
- ಕಾರ್ ಅನ್ನು ದೀರ್ಘಕಾಲ ನಿಲ್ಲಿಸಿದಾಗ ಹ್ಯಾಂಡ್ ಬ್ರೇಕ್ ಬಳಸುವುದರಿಂದ ಈ ಸ್ಥಿತಿ ಉಂಟಾಗಬಹುದು. ಅದಕ್ಕಾಗಿಯೇ ಆಟೋ ಪರಿಣಿತರು ದೀರ್ಘಾವಧಿಯವರೆಗೆ ಪಾರ್ಕಿಂಗ್ ಮಾಡುವ ಸಂದರ್ಭ ಎದುರಾದಾಗ ಆಗಾಗ ಕಾರ್ ಅನ್ನು ಚಲಾಯಿಸುವಂತೆ ಅಥವಾ ಹ್ಯಾಂಡ್‌ಬ್ರೇಕ್ ತೆಗೆದಿರುವಂತೆ ಸಲಹೆ ನೀಡುತ್ತಾರೆ.
ನಟಿ ರಾಧಿಕಾ ಆಪ್ಟೆಯ ಲಕ್ಷುರಿಯಸ್ ಕಾರು ಕಲೆಕ್ಷನ್ !