ಮಾರುತಿಗೆ ಮುಂದಿನ 3 ವರ್ಷಗಳಲ್ಲಿ 20,000 ಕೋಟಿ ರೂ. ಮೌಲ್ಯದ ಕಾರು ರಫ್ತು ಗುರಿ

By Suvarna NewsFirst Published Sep 20, 2022, 12:34 PM IST
Highlights

ಮಾರುತಿ ಸುಜುಕಿ (Maruti Suzuki) ಮುಂದಿನ ಮೂರು ವರ್ಷಗಳಲ್ಲಿ 20,000 ಕೋಟಿ ರೂ. ಮೌಲ್ಯದ ವಾಹನಗಳನ್ನು ರಫ್ತು ಮಾಡುವ ಗುರಿ ಹೊಂದಿದೆ.

ಮಾರುತಿ ಸುಜುಕಿ (Maruti Suzuki) ಮುಂದಿನ ಮೂರು ವರ್ಷಗಳಲ್ಲಿ 20,000 ಕೋಟಿ ರೂ. ಮೌಲ್ಯದ ವಾಹನಗಳನ್ನು ರಫ್ತು ಮಾಡುವ ಗುರಿ ಹೊಂದಿದೆ. ಕಂಪನಿಯು ತನ್ನ ಜಪಾನಿನ ಪಾಲುದಾರ ಕಂಪನಿ ಸುಜುಕಿ ಮೋಟಾರ್ಸ್ (Suzuki Motors)  ಮತ್ತು  ಟೊಯೋಟಾ ಮೋಟಾರ್ (Toyoto Motors) ಜೊತೆಗೆ, ತನ್ನ ಸಾಗರೋತ್ತರ ರಫ್ತನ್ನು ಹೆಚ್ಚಿಸಲು ಯೋಜಿಸುತ್ತಿದೆ.  ಸದ್ಯ ಮಾರುತಿಯ ಭಾರತದ ರಫ್ತು ಪ್ರಮಾಣ ಒಟ್ಟು ರಫ್ತಿನ ಸುಮಾರು ಶೇ.40ರಷ್ಟಿದೆ. ವರದಿಯ ಪ್ರಕಾರ ಭಾರತವು, ಟೊಯೊಟಾ (Toyoto) ಮತ್ತು ಸುಜುಕಿ (Suzuki) ವಾಹನಗಳಿಗೆ ಮಾತ್ರವಲ್ಲ, ಎಲೆಕ್ಟ್ರಿಕ್ ವಾಹನಗಳಿಗೆ ಲಿಥಿಯಂ-ಐಯಾನ್ ಸೆಲ್ಗಳಂತಹ ಘಟಕಗಳಿಗೆ ಪ್ರಮುಖ ಸೋರ್ಸಿಂಗ್ ಹಬ್ ಆಗುವ ಸಾಧ್ಯತೆಯಿದೆ.

20,000 ಕೋಟಿ ರಫ್ತು ವಹಿವಾಟು ಎಂದರೆ ಸುಮಾರು 3.5 ಲಕ್ಷ ವಾಹನಗಳಿಗಿಂತ ಹೆಚ್ಚು. ಪ್ರತಿ ವಾಹನಕ್ಕೆ ಸರಾಸರಿ 5.5 ಲಕ್ಷ ರೂ. ವೆಚ್ಚವಾಗುತ್ತದೆ. ಇದು 2025 ರ ಆರ್ಥಿಕ ವರ್ಷದಲ್ಲಿ ಅಂದಾಜು ಮಾಡಲಾದ ಭಾರತದ ಪ್ರಯಾಣಿಕ ವಾಹನ ರಫ್ತಿನ ಅರ್ಧದಷ್ಟಿದೆ. 2022 ರ ಆರ್ಥಿಕ ವರ್ಷದಲ್ಲಿ ಭಾರತದಿಂದ ರಫ್ತು ಮಾಡಲಾದ 5,70,000 ವಾಹನಗಳಲ್ಲಿ 2,38,000 ಕ್ಕಿಂತ ಹೆಚ್ಚು ವಾಹನಗಳನ್ನು ರಫ್ತು ಮಾಡುವ ಮೂಲಕ ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್ ಇಂಡಿಯಾವನ್ನು ಹಿಂದಿಕ್ಕಿದೆ. ಕಳೆದ ಆರ್ಥಿಕ ವರ್ಷದಲ್ಲಿ ರಫ್ತು ಮೂಲಕ ಮಾರುತಿಗೆ 12,000 ಕೋಟಿ ರೂ. ಆದಾಯ ಗಳಿಸಿದೆ. ಇದು 2016ರ  ಆರ್ಥಿಕ ವರ್ಷ ಮತ್ತು 2021ರ ಆರ್ಥಿಕ ವರ್ಷದ ನಡುವಿನ ಸರಾಸರಿ ರಫ್ತು ಗಳಿಕೆ ದುಪ್ಪಟ್ಟಾಗಿತ್ತು. ಆಗ ಮಾರುತಿ ವರ್ಷಕ್ಕೆ ಸರಾಸರಿ 1,00,000 ವಾಹನಗಳನ್ನು ರಫ್ತು ಮಾಡುತ್ತಿತ್ತು. ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. 

ಎಲೆಕ್ಟ್ರಿಕ್ ಕಾರುಗಳು ಭಾರತೀಯ ಮಾರುಕಟ್ಟೆಯ ಭವಿಷ್ಯವಲ್ಲ: Maruti Suzuki President RC Bhargav

2022ರ ಆರ್ಥಿಕ ವರ್ಷದಲ್ಲಿ ಭಾರತದ ರಫ್ತು ಮಾರುಕಟ್ಟೆಯು ಶೇ.42 ರಷ್ಟು ಬೆಳೆದಿದೆ ಮತ್ತು ಮಾರುತಿ ಸುಜುಕಿಯ ಸಾಗರೋತ್ತರ ಪ್ರಮಾಣವು ಶೇ.147ರಷ್ಟು ಪ್ರಗತಿಯಾಗಿದೆ. ಮಾರುತಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ (Maruti Dezire compact sedan), ಮಾರುತಿಯ ಅತಿ ಹೆಚ್ಚು ರಫ್ತು ಮಾಡಿದ ವಾಹನವಾಗಿದೆ.  ಬಲೆನೊ (Baleno) ಮತ್ತು ಸ್ವಿಫ್ಟ್ (Swift) ಹ್ಯಾಚ್ಬ್ಯಾಕ್ಗಳು ನಂತರದ ಸ್ಥಾನ ಪಡೆದುಕೊಂಡಿವೆ.

ಈ ಹೊಸ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಮಾರುತಿ ಸುಜುಕಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಹುಲ್ ಭಾರ್ತಿ, "ಕೋವಿಡ್ನ ಮೊದಲ ಅಲೆಯ ನಂತರ ಆಟೊಮೊಬೈಲ್‌ ಕಂಪನಿಗಳು ತಮ್ಮ ರಫ್ತು ಪ್ರಮಾಣ ಹೆಚ್ಚಿಸಲು ಪರದಾಡುತ್ತಿದ್ದಾರೆ. ಅಂತಹ ಮಾರುಕಟ್ಟೆಯಲ್ಲಿ ನಿರೀಕ್ಷೆಗೆ ಮೀರಿ ಪ್ರಗತಿ ಸಾಧಿಸಿರುವುದು ಸಂತಸ ತಂದಿದೆ. ಇದಕ್ಕೆ ಕಂಪನಿಯ ಯೋಜನಾತ್ಮಕ ಹೆಜ್ಜೆ ಹಾಗೂ ಚುರುಕು ಕಾರ್ಯವೈಖರಿಯೇ ಕಾರಣ' ಎಂದರು. ಈ ತಿಂಗಳ ಆರಂಭದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಮಾರುತಿ ಸುಜುಕಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ, ಕಾರುಗಳ ಪೈಕಿ SUV ವಿಭಾಗ ದೇಶದಲ್ಲಿ ತನ್ನ ಒಟ್ಟಾರೆ ಮಾರುಕಟ್ಟೆ ಪಾಲನ್ನು ಎತ್ತುವ ಪ್ರಮುಖ ಕ್ಷೇತ್ರವಾಗಿ ಪರಿಗಣಿಸಲಾಗುತ್ತಿದೆ. ಪ್ರಸ್ತುತ, ಕಂಪನಿಯ ಒಟ್ಟಾರೆ ಮಾರುಕಟ್ಟೆ ಪಾಲು ಶೇ. 45 ಕ್ಕೂ ಕಡಿಮೆಯಿದೆ. ಅದನ್ನು ಶೇ. 50 ಕ್ಕೆ ಏರಿಸುವ ಗುರಿ ಇದೆ ಎಂದಿದ್ದರು.

ಮಾರುತಿ 800 ಗೆ 39 ವರ್ಷ: ಮಾರುತಿ ಸುಜುಕಿ ಕಂಪನಿ ಗೌರವಿಸಿದ್ದು ಹೀಗೆ..

'SUV ವಿಭಾಗ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿದೆ ಮತ್ತು ಮಾರುತಿಯು ಇದರಲ್ಲಿ ಉತ್ತಮ ಮಾರುಕಟ್ಟೆ ಪಾಲನ್ನು ಹೊಂದಿರಲಿದೆ. ಪ್ರವೇಶ ಹಂತದ ಎಸ್‌ಯುವಿ ವಿಭಾಗದಲ್ಲಿ, ವಾರ್ಷಿಕವಾಗಿ ಮಾರಾಟವಾಗುತ್ತಿರುವ 6.6 ಲಕ್ಷ ಕಾರುಗಳಲ್ಲಿ ಮಾರುತಿಯ ಪಾಲು ಶೇ. 20ರಷ್ಟಿದೆ. ಆದರೆ ಮಾರುತಿ, 5.5 ಲಕ್ಷ ರೂ.ಮೌಲ್ಯದ ಮಧ್ಯಮ-ಎಸ್ಯುವಿ ವಿಭಾಗದ ಕಾರನ್ನು ಹೊಂದಿಲ್ಲ,' ಎಂದು ಶ್ರೀವಾತ್ಸವ್ ಹೇಳಿದ್ದರು.

 

 

click me!