ಚಾರ್ಜಿಂಗ್ ಮೂಲಸೌಕರ್ಯದ ಕೊರತೆಯಿಂದ ಇವಿ ವಲಯಕ್ಕೆ ಮಾರುತಿ ಲೇಟ್ ಎಂಟ್ರಿ

By Suvarna NewsFirst Published Apr 19, 2022, 7:26 PM IST
Highlights

2025 ರಲ್ಲಿ ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ಹೊರತರಲಿದೆ.

ಭಾರತೀಯ ಆಟೊಮೊಬೈಲ್ ವಲಯದಲ್ಲಿ ಎಲ್ಲಾ ಕಾರು ತಯಾರಕರು ಎಲೆಕ್ಟ್ರಿಕ್ ವಾಹನಗಳನ್ನು(Electric vehicle) ಬಿಡುಗಡೆಗೊಳಿಸುತ್ತಿರುವ ಬೆನ್ನಲ್ಲೇ, ದೇಶದ ಪ್ರಮುಖ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ( Maruti Suzuki) ಕೂಡ ಹಿಂದೆ ಬಿದ್ದಿಲ್ಲ. 2025ರ ವೇಳೆ ಹೊಸ ಇವಿ ವಾಹನ ಬಿಡುಗಡೆಗೆ ಮಾರುತಿ ಮುಂದಾಗಿದೆ. ಪ್ರಸ್ತುತ, ಭಾರತದಲ್ಲಿ ಟಾಟಾ ಮೋಟಾರ್ಸ್ (Tata motors) ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. 
ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಾರುತಿ ಸುಜುಕಿಯ ಹೊಸ ವ್ಯವಸ್ಥಾಪಕ ನಿರ್ದೇಶಕ ಹಿಸಾಶಿ ಟಕೆಯುಚಿ, 2025 ರಲ್ಲಿ ಕಂಪನಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ಹೊರತರಲಿದೆ ಎಂದರು. ಕಳೆದ ತಿಂಗಳು, ಸುಜುಕಿ ಮೋಟಾರ್ ಕಾರ್ಪೊರೇಷನ್, ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಲು 10,000 ಕೋಟಿಗಳಷ್ಟು ಹೂಡಿಕೆ ಮಾಡುವುದಾಗಿ ಘೋಷಿಸಿತ್ತು.

2025 ರಲ್ಲಿ ಮೊದಲ ಎಲೆಕ್ಟ್ರಿಕ್ ವಾಹನವನ್ನು ಗುಜರಾತ್ ಸ್ಥಾವರದಿಂದ ಹೊರತರಲಾಗುವುದು. ಭಾರತೀಯ ಮಾರುಕಟ್ಟೆಗೆ (EV) ಮಾದರಿಯನ್ನು ಪರಿಚಯಿಸುವಲ್ಲಿ ನಾವು ನಮ್ಮ ಪ್ರತಿಸ್ಪರ್ಧಿಗಳಿಗಿಂತ ಸ್ವಲ್ಪ ಹಿಂದೆ ಇದ್ದೇವೆ, ಆದರೆ ಆ EV ಗಳಿಗೆ ಮಾರುಕಟ್ಟೆಯ ಬೇಡಿಕೆಯು ಇನ್ನೂ ಸೀಮಿತವಾಗಿದೆ. ನಾವು ಅಸ್ತಿತ್ವದಲ್ಲಿರುವ ಇವಿ ಮಾದರಿಗಳನ್ನು ಗಮನಿಸುತ್ತಿದ್ದು, ಮಾರುತಿಯ ಇವಿ ವಾಹನಗಳು ವಿನೂತನವಾಗಿ ತಯಾರಿಸಲು ಸಿದ್ಧತೆ ಆರಂಭಿಸಿದ್ದೇವೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ಯಾಟರಿ ಪ್ಯಾಕ್ಗಳು ಮತ್ತು ಮೋಟಾರ್ಗಳನ್ನು ಮಾತ್ರ ಬಲಸಲಾಗುತ್ತದೆ ಎಂದರು.

ತಯಾರಕರು ಕಳೆದ ಒಂದು ವರ್ಷದಲ್ಲಿ ಅನೇಕ ಕಾರುಗಳಲ್ಲಿ ಇದೇ ರೀತಿಯ ಪರೀಕ್ಷೆಗಳನ್ನು ಮಾಡಿದ್ದಾರೆ. ಇವಿ ವಲಯದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಕಂಪನಿ ಯೋಜನೆ ರೂಪಿಸಲಿದೆ. ಮಾರುತಿ ಸುಜುಕಿ ಭಾರತೀಯ ವಾಹನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಬಯಸುತ್ತದೆ, ಇದು ಕೇವಲ ಎಲೆಕ್ಟ್ರಿಕ್ ಮಾತ್ರವಲ್ಲದೆ, ಎಲ್ಲಾ ವಲಯಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದರು.

ಕಚ್ಚಾ ವಸ್ತುಗಳ, ವಿಶೇಷವಾಗಿ ಬ್ಯಾಟರಿಯ ಬೆಲೆ ಏರಿಕೆಯಿಂದ EV ಗಳ ತಯಾರಿಕೆ ಇನ್ನೂ. ಎಲೆಕ್ಟ್ರಿಕ್ ಕಾರಿನಲ್ಲಿ ಬಳಸುವ ಬ್ಯಾಟರಿ ಪ್ಯಾಕ್ ಚಿಕ್ಕದಾಗಿದ್ದರೆ ಅದರ ಬೆಲೆ ಕಡಿಮೆಯಾಗುತ್ತದೆ. ಸಣ್ಣ ಬ್ಯಾಟರಿ ಪ್ಯಾಕ್ (Small Battery pack) ಹೊಂದಿರುವ ಕಾರು ಕಡಿಮೆ ಚಾಲನಾ ಶ್ರೇಣಿಯನ್ನು ಹೊಂದಿರುತ್ತದೆ. ಇದು ಮಾಲೀಕರಲ್ಲಿ ಬ್ಯಾಟರಿ ಹಾಗೂ ಶ್ರೇಣಿಯ ಆತಂಕಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಉತ್ತಮ ಗುಣಮಟ್ಟದ ಕಾರುಗಳಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಮಾರುತಿ ಸುಜುಕಿಯ ಎಲೆಕ್ಟ್ರಿಕ್ ವಾಹನವು 10 ಲಕ್ಷ ರೂ.ಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿರುವುದಿಲ್ಲ ಎಂದರು.

ಇದನ್ನೂ ಓದಿ: Vehicle Re Registration ಹಳೇ ವಾಹನ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದ ಹೈಕೋರ್ಟ್!

ಮಾರುತಿ ಸುಜುಕಿ ಆರಂಭದಲ್ಲಿ ವ್ಯಾಗನ್ಆರ್ (WagonR) ಆಧಾರಿತ ಎಲೆಕ್ಟ್ರಿಕ್ ವಾಹನಗಳ ಪರೀಕ್ಷೆಯನ್ನು ಮಾರುಕಟ್ಟೆಯಲ್ಲಿ ಆರಂಭಿಸಿದೆ.ಈ ಹಿಂದೆ  2020 ರ ವೇಳೆಗೆ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆ ಕಂಪನಿಗಿತ್ತು. ಆದರೆ, ದೇಶದಲ್ಲಿ ಎದುರಾಗಿರುವ ಚಾರ್ಜಿಂಗ್ ಮೂಲಸೌಕರ್ಯಗಳ (Charging infrastructure) ಕೊರತೆ ಹಿನ್ನೆಲೆಯಲ್ಲಿ ಅದನ್ನು ತಡೆಹಿಡಿಯಲಾಗಿದೆ. ಮಾರುತಿ ಸುಜುಕಿಯ ವ್ಯಾಗನ್ಆರ್ ಇವಿ  (WagonR EV) ಭಾರತದಲ್ಲಿ ಪರೀಕ್ಷೆಗೆ ಒಳಪಟ್ಟಿರುವ ವಾಹನಗಳಲ್ಲಿ ಒಂದಾಗಿದೆ. ತಯಾರಕರು ಹಲವಾರು ವರ್ಷಗಳಿಂದ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. 

ಇದನ್ನೂ ಓದಿ: Maruti Ertiga 11 ಸಾವಿರ ರೂಗೆ ಬುಕ್ ಮಾಡಿ 2022ರ ಹೊಚ್ಚ ಹೊಸ ಮಾರುತಿ ಎರ್ಟಿಗಾ!

ಇತ್ತೀಚೆಗೆ ಮಾರುತಿ ಸುಜುಕಿ, ವ್ಯಾಗನ್ ಆರ್ ಹಾಗೂ ಎರ್ಟಿಗಾದ (Ertiga) ಫೇಸ್ಲಿಫ್ಟ್ (Facelift) ಅನ್ನು ಬಿಡುಗಡೆಗೊಳಿಸಿದೆ. ಮಾರುತಿ ವ್ಯಾಗನ್ ಆರ್ ಬೆಂಗಳೂರಿನಲ್ಲಿ ಆರಂಭಿಕ ಬೆಲೆ  5.39 ಲಕ್ಷ ರೂ.ಗಳಷ್ಟಿದೆ. ಕಡಿಮೆ ಬೆಲೆಯ ಮಾದರಿ ಮಾರುತಿ ವ್ಯಾಗನ್ ಆರ್ ಎಲ್ಎಕ್ಸ್ಐ ಮತ್ತು ಮಾರುತಿ ವ್ಯಾಗನ್ ಆರ್ ಝಡ್ಎಕ್ಸ್ಐ ಪ್ಲಸ್ ಎಟಿ ಡ್ಯುಯಲ್ ಟೋನ್ (dual tone) ಮಾದರಿಗಳಲ್ಲಿ ಲಭ್ಯವಿದೆ.

click me!