ದುಬಾರಿ ಇನ್‌ವಿಕ್ಟೋ ಕಾರು ಬಿಡುಗಡೆ ಬೆನ್ನಲ್ಲೇ ದಾಖಲೆ ಬರೆದ ಮಾರುತಿ ಸುಜುಕಿ!

By Suvarna News  |  First Published Jul 7, 2023, 3:54 PM IST

ಮಾರುತಿ ಸುಜುಕಿ ಹೊಚ್ಚ ಹೊಸ ಇನ್‌ವಿಕ್ಟೋ ಕಾರು ಬಿಡುಗಡೆ ಮಾಡಿದೆ. ಇದು ಮಾರುತಿಯ ಅತ್ಯಂತ ದುಬಾರಿ ಕಾರಾಗಿದೆ. ಟೋಯೋಟಾ ಇನ್ನೋವೋ ಹೈಕ್ರಾಸ್ ಕಾರಿನ ಕ್ರಾಸ್‌ಬ್ಯಾಡ್ಜ್ ಕಾರು ಇದಾಗಿದೆ. ಆದರೆ ಬಿಡುಗಡೆಯಾದ ಬೆನ್ನಲ್ಲೇ ಮಾರುತಿ ಸುಜುಕಿ ಷೇರುಗಳು ದಾಖಲೆಯ ಏರಿಕೆ ಕಂಡಿದೆ.


ನವದೆಹಲಿ(ಜು.07) ಮಾರುತು ಸುಜುಕಿ ಭಾರತದಲ್ಲಿ 7 ಸೀಟರ್ ಇನ್‌ವಿಕ್ಟೋ ಕಾರು ಬಿಡುಗಡೆ ಮಾಡಿದೆ. ಇದು ಮಾರುತಿ ಸುಜುಕಿ ಸಂಸ್ಥೆಯ ಅತ್ಯಂತ ದುಬಾರಿ ಕಾರಾಗಿದೆ. ಆರಂಭಿಕ 24.8 ಲಕ್ಷ ರೂಪಾಯಿ ಬೆಲೆಯಿಂದ ಆರಂಭಗೊಳ್ಳುತ್ತಿದೆ. ಗರಿಷ್ಠ 28.4 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಕಾರು ಬಿಡುಗಡೆ ಬೆನ್ನಲ್ಲೇ ಮಾರುತಿ ಸುಜುಕಿ ಷೇರುಗಳು ದಾಖಲೆಯ ಏರಿಕೆ ಕಂಡಿದೆ. ಇದೇ ಮೊದಲ ಬಾರಿಗೆ 10,000 ರೂಪಾಯಿ ಗಡಿ ದಾಟಿದೆ. ಕಾರು ಬಿಡುಗಡೆಯಾದ ದಿನವೇ ಮಾರುತಿ ಸುಜುಕಿ ಷೇರುಗಳು ಶೇಕಡಾ 4 ರಷ್ಟು ಏರಿಕೆ ಕಂಡಿತ್ತು.

ನಿಫ್ಟಿ ಸ್ಟಾಕ್ ಶೇಕಡಾ 4 ರಷ್ಟು ಏರಿಕೆ ಕಾಣುವ ಮೂಲಕ ದಿನದಂತ್ಯಕ್ಕೆ 10,036.95(NSE) ರೂಪಾಯಿಗೆ ಏರಿಕೆ ಕಂಡಿತ್ತು. ಒಂದೆಡೆ ಷೇರುಗಳ ಬೆಲೆ ಏರಿಕೆ ಕಾಣುತ್ತಿದ್ದರೆ, ಮತ್ತೊಂದಡೆ ಇನ್‌ವಿಕ್ಟೋ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಭಾರತದ ಕಾರು ಮಾರುಕಟ್ಟೆಯಲ್ಲಿ ಶೇಕಡಾ 50 ರಷ್ಟು ಎಂಪಿವಿ ಪಾಲನ್ನು ಮಾರುತಿ ಸುಜುಕಿ ಹೊಂದಿದೆ. ಇದೀಗ 7 ಸೀಟರ್ ಇನ್‌ವಿಕ್ಟೋ ಈ ಪಾಲುದಾರಿಕೆಯನ್ನು ಹೆಚ್ಚಿಸಲಿದೆ. ಟೋಯೋಟಾ ಇನ್ನೋವಾ ಹೈಕ್ರಾಸ್ ಕಾರು ಇದೀಗ ಮಾರುತಿ ಬ್ಯಾಡ್ಜ್‌ನಲ್ಲಿ ಬಿಡುಗಡೆಯಾಗಿದೆ.

Tap to resize

Latest Videos

undefined

ಮಾರುತಿ ಸುಜುಕಿಯ ಬಹುನಿರೀಕ್ಷಿತ ಇನ್‌ವಿಕ್ಟೋ ಕಾರು ಬಿಡುಗಡೆ, ಇಲ್ಲಿದೆ ಬೆಲೆ ಪಟ್ಟಿ! 

ದೇಶದ ಮುಂಚೂಣಿ ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿ, ಇದೇ ಮೊದಲ ಬಾರಿ 20 ಲಕ್ಷ ರು.ಗಿಂತ ಹೆಚ್ಚಿನ ಬೆಲೆಯ ಕಾರು ಪರಿಚಯಿಸಿದೆ. ಇನ್‌ವಿಕ್ಟೋ ಕಾರು 3 ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇನ್‌ವಿಕ್ಟೋ ಬಿಡುಗಡೆ ಮೂಲಕ ಮಾರುತಿ ಇದೇ ಮೊದಲ ಬಾರಿಗೆ 20 ಲಕ್ಷ ರು.ಗಿಂತ ಮೇಲ್ಪಟ್ಟದರದ ಪ್ರೀಮಿಯಂ ವಲಯವನ್ನೂ ಪ್ರವೇಶಿಸಿದಂತಾಗಿದೆ. ಇದು ಟೊಯೋಟಾ ಇನ್ನೋವಾ ಹೈ ಕ್ರಾಸ್‌ ಮಲ್ಟಿಪರ್ಪಸ್‌ ವೆಹಿಕಲ್‌ನ ರೂಪಾಂತರವಾಗಿದೆ.

ಇನ್‌ವಿಕ್ಟೋ ಝೆಟಾ ಪ್ಲಸ್‌ (7 ಸೀಟು), ಝೆಟಾ ಪ್ಲಸ್‌ (8 ಸೀಟು) ಮತ್ತು ಆಲ್ಫಾ (7 ಸೀಟು) ಎಂಬ ಮೂರು ಮಾದರಿ ಹೊಂದಿದ್ದು, ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಈ ಕಾರುಗಳು ನೆಕ್ಸಾ ಪ್ರೀಮಿಯಂ ರಿಟೇಲ್‌ ನೆಟ್‌ವರ್ಕ್ನಲ್ಲಿ ಲಭ್ಯವಿರಲಿವೆ.

ಒಂದೆಡೆ ಮಾರುತಿ ಸುಜುಕಿ ಷೇರುಗಳ ಬೆಲೆ ಏರಿಕೆ ಕಂಡಿದ್ದರೆ, ಇತ್ತ ವಿದೇಶಿ ಬಂಡಾವಳ ಒಳಹರಿವಿನಿಂದ ಭಾರತದ ಷೇರು ಮಾರುಕಟ್ಟೆ ಏರಿಕೆ ಕಂಡಿತ್ತು.ಸಂವೇದಿ ಸೂಚ್ಯಂಕ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.  ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 339.6 ಅಂಕಗಳ ಏರಿಕೆಯೊಂದಿಗೆ ದಿನದಂತ್ಯಕ್ಕೆ 65,785.64 ಅಂಕಗಳಲ್ಲಿ ಹಾಗೂ 98.8 ಅಂಕಗಳ ಏರಿಕೆ ಕಂಡಿರುವ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ19,497.3 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಸಾರ್ವಕಾಲಿಕ ಗರಿಷ್ಠಕ್ಕೆ ತಲುಪಿವೆ. ವಿದೇಶಿ ಹೂಡಿಕೆದಾರರು ಹೆಚ್ಚು ಬಂಡವಾಳದ ಹೂಡಿಕೆ ಮಾಡಿರುವುದು ಹಾಗೂ ವಿದೇಶಿ ಮಾರುಕಟ್ಟೆಗಳು ಉತ್ತಮ ಪ್ರದರ್ಶನ ನೀಡಿರುವುದು ಮಾರುಕಟ್ಟೆಯ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.

ಮಾರುತಿಯಿಂದ ಮತ್ತೊಂದು ಬಂಪರ್ ಕೊಡುಗೆ, 4.80 ಲಕ್ಷ ರೂಗೆ ಟೂರ್ H1 ಕಾರು ಬಿಡುಗಡೆ!

ಶೇ.5ರಷ್ಟುಏರಿಕೆ ಕಾಣುವ ಮೂಲಕ ಮಹೀಂದ್ರಾ ಅಂಡ್‌ ಮಹೀಂದ್ರಾದ ಷೇರುಗಳು ಅತಿಹೆಚ್ಚು ಗಳಿಕೆ ಕಂಡಿದ್ದು, ಉಳಿದಂತೆ ಪವರ್‌ ಗ್ರಿಡ್‌, ಟಾಟಾ ಮೋಟ​ರ್‍ಸ್, ರಿಲಯನ್ಸ್‌ ಇಂಡಸ್ಟ್ರೀಸ್‌, ಎನ್‌ಸಿಪಿಸಿ, ಆಕ್ಸಿಕ್‌ ಬ್ಯಾಂಕ್‌, ನೆಸ್ಲೇ, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಏಶಿಯನ್‌ ಪೇಯಿಂಟ್ಸ್‌ ಮತ್ತು ವಿಪ್ರೋ ಷೇರುಗಳು ಲಾಭ ಗಳಿಸಿವೆ.

click me!