ಟೋಯೋಟಾ ಇನ್ನೋವಾ ಆಧಾರಿತ ಇನ್‌ವಿಕ್ಟೋ ಕಾರನ್ನು ಮಾರುತಿ ಸುಜುಕಿ ಬಿಡುಗಡೆ ಮಾಡಿದೆ. ಇದು ಮಾರುತಿ ಸುಜುಕಿಯ ಪ್ರಿಮಿಯಂ ಕಾರು. ವಿನ್ಯಾಸ, ಫೀಚರ್ಸ್ ಬಹುತೇಕ ಇನ್ನೋವಾ ಕಾರಿಗಿಂತ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆದರೆ ಬೆಲೆಯಲ್ಲಿ ವ್ಯತ್ಯಾಸಗಳಿವೆ.
ನವದೆಹಲಿ(ಜು.05) ಮಾರುತಿ ಸುಜುಕಿ ಕೈಗೆಟುಕವ ದರದಲ್ಲಿ ಕಾರು ನೀಡುವ ಕಂಪನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಲವು ಮಧ್ಯಮ ವರ್ಗದ ಕಾರು ಕನಸನ್ನು ನನಸಾಗಿಸಿದ್ದು ಇದೇ ಮಾರುತಿ. ಮಾರುತಿ ಸುಜುಕಿ ಭಾರತದಲ್ಲಿ ಇದೇ ಮೊದಲ ಬಾರಿಗೆ ದುಬಾರಿ ಕಾರನ್ನು ಬಿಡುಗಡೆ ಮಾಡಿದೆ. ಟೋಯೋಟಾ ಇನ್ನೋವಾ ಕ್ರಾಸ್‌ಬ್ಯಾಡ್ಜ್ ಮೂಲಕ ಮಾರುತಿ ಸುಜುಕಿ ಇನ್‌ವಿಕ್ಟೋ ಕಾರು ಬಿಡುಗಡೆಯಾಗಿದೆ. ಟೋಯೋಟಾ ಈ ಹಿಂದೆ ಮಾರುತಿ ಬಲೆನೋ ಕಾರನ್ನು ಗ್ಲಾಂಜಾ ಕಾರಾಗಿ ಬಿಡುಗಡೆ ಮಾಡಿತ್ತು. ಇದೇ ಕ್ರಾಸ್‌ಬ್ಯಾಡ್ಜ್ ಒಪ್ಪಂದದಲ್ಲಿ ಇದೀಗ ಟೋಯೋಟಾ ಇನ್ನೋವಾ ಕಾರನ್ನು ಮಾರುತಿ ಇನ್‌ವಿಕ್ಟೋ ಕಾರಾಗಿ ಬಿಡುಗಡೆ ಮಾಡಿದೆ.
ಮಾರುತಿ ಸುಜುಕಿ ಹಾಗೂ ಟೋಯೋಟಾ ಕಿರ್ಲೋಸ್ಕರ್ ಒಪ್ಪಂದದಲ್ಲಿ ನೂತನ ಕಾರು ಬಿಡುಗಡೆಯಾಗಿದೆ. ಮಾರುತಿ ಸುಜುಕಿ ಇನ್‌ವಿಕ್ಟೋ ಮೂರು ವೇರಿಯೆಂಟ್‌ನಲ್ಲಿ ಲಭ್ಯವಿದೆ. Zeta+ ಕಾರು 7 ಸೀಟು, Zeta+ 8 ಸೀಟು ಹಾಗೂ Aplha+ 7 ಸೀಟರ್ ಕಾರು ವೇರಿಯೆಂಟ್‌ನಲ್ಲಿ ಲಭ್ಯವಿದೆ. ನೆಕ್ಸಾ ಬ್ಲೂ, ಮಿಸ್ಟಿ ವೈಟ್ ಸೇರಿದಂತೆ 4 ಬಣ್ಣದಲ್ಲಿ ನೂತನ ಕಾರು ಲಭ್ಯವಿದೆ.
undefined
ಮಾರುತಿಯಿಂದ ಮತ್ತೊಂದು ಬಂಪರ್ ಕೊಡುಗೆ, 4.80 ಲಕ್ಷ ರೂಗೆ ಟೂರ್ H1 ಕಾರು ಬಿಡುಗಡೆ!
ಜೆಟಾ ಪ್ಲಸ್ (7 ಸೀಟರ್): 24.79 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಜೆಟಾ ಪ್ಲಸ್ ( 8 ಸೀಟರ್): 24.84 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಆಲ್ಫಾ ಪ್ಲಸ್ (7 ಸೀಟರ್): 28.42 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮಾರುತಿ ಸುಜುಕಿ ಇನ್‌ವಿಕ್ಟೋ ಕಾರು 2.0 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ ಹೈಬ್ರಿಡ್ ಎಂಜಿನ್ ಮೋಟಾರ್ ಲಭ್ಯವಿದೆ. 172bhp ಪವರ್ ಹಾಗೂ 188Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಮಾರುತಿ ಸುಜುಕಿ ತನ್ನ ಪ್ರೀಮಿಯಂ ಕಾರಿಗೆ ಇನ್‌ವಿಕ್ಟೋ ಎಂದು ಹೆಸರಿಟ್ಟಿದೆ. ಇದೇ ವರ್ಶನ್ ಟೋಯೋಟಾ ಕಾರು ಇನ್ನೋವಾ. ಇನ್ನೋವಾ ಕಾರಿನಿಂದ ಆರಂಭಗೊಳ್ಳುವ ಅಕ್ಷರದಿಂದಲೇ ಹೆಸರು ಹುಡುಕಲಾಗಿದೆ. ಇದೀಗ ಇನ್‌ವಿಕ್ಟೋ ಲ್ಯಾಟಿನ್ ಪದವಾಗಿದೆ. ಅಂದರೆ ಸೋಲಿಲ್ಲದ ಸರದಾರ ಎಂದರ್ಥ.
ಕೈಗೆಟುಕುವ ಬೆಲೆಯಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ SUV ಕಾರು ಬಿಡುಗಡೆ!
ನೂತನ ಇನ್‌ವಿಕ್ಟೋ ಕಾರು ಟೋಯೋಟಾ ಇನ್ನೋವಾ ಹೈಕ್ರಾಸ್ ಕಾರಿನ ವಿನ್ಯಾಸದಲ್ಲೇ ಉತ್ಪಾದನೆಯಾಗಿದೆ. ಮುಂಭಾಗದಲ್ಲಿ ಮಾರುತಿ ಸುಜುಗಿ ನೂತನ ಸಿಗ್ನೇಚರ್ ಗ್ರಿಲ್ ಹಾಗೂ ಸುಜುಕಿ ಲೋಗೋ ಬಳಸಲಾಗಿದೆ. ಹಿಂಭಾಗದಲ್ಲಿ ಎಲ್‌ಇಡಿ ಡಿಆರ್‌ಎಲ್, ಎಲ್‌ಇಡಿ ಟೈಲ್ ಲೈಟ್ಸ್, ಮುಂಭಾಗದಲ್ಲಿ ಟ್ವಿನ್ ಬ್ಯಾರೆಲ್ ಹೆಡ್‌ಲ್ಯಾಂಪ್ಸ್, ಬ್ಲಾಕ್ ಥೀಮ್, ಲೆಥರ್ ಇಂಟಿಯರ್, ಸ್ಟಿಚ್ ಲೈನ್ ಸೇರಿದಂತೆ ಹಲವು ವಿಶೇಷಗಳು ಈ ಕಾರಿನಲ್ಲಿದೆ.
ಟ್ವಿನ್ ಪನೋರಮಿಕ್ ಸನ್‌ರೂಫ್, 8 ರೀತಿಯಲ್ಲಿ ಸೀಟ್ ಎಡ್ಜಸ್ಟ್‌ಮೆಂಟ್ ಫೀಚರ್, ವೆಂಟಿಲೇಶನ್ ಸೀಟ್, 3 ಸ್ಟೇಜ್ ಸ್ಪೀಡ್ ಕಂಟ್ರೋಲ್, ಮಲ್ಟಿ ಜೋನ್ ಟೆಂಪರೇಚರ್ ಕಂಟ್ರೋಲ್, 10.1 ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್ಮೆಂಟ್, 6 ಸ್ಪೀಕರ್ ಸಿಸ್ಟಮ್, ಮಲ್ಟಿ ಚಾರ್ಜರ್ ಪಾಯಿಂಟ್, ಇನ್‌ಬಿಲ್ಟ್ ಸುಜುಕಿ ಕನೆಕ್ಟ್ ಫೀಚರ್ಸ್, 7 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೋರೇಜ್ ಸ್ಪೇಸ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.