ಬ್ರೆಜ್ಜಾ ಬೆನ್ನಲ್ಲೇ ವ್ಯಾಗನ್ಆರ್ ಕಾರಿನಿಂದಲೂ ಈ ಫೀಚರ್ಸ್ ತೆಗೆದ ಮಾರುತಿ ಸುಜುಕಿ!

By Suvarna News  |  First Published Jul 22, 2023, 7:01 PM IST

ಮಾರುತಿ ಸುಜುಕಿ ಇದೀಗ ವ್ಯಾಗನಆರ್ ಕಾರಿನ ಕೆಲ ವೇರಿಯೆಂಟ್‌ನಲ್ಲಿ ಫೀಚರ್ಸ್ ತೆಗೆದುಹಾಕಿದೆ. ಕೇವಲ ಟಾಪ್ ಮಾಡೆಲ್ ಕಾರಿನಲ್ಲಿ ಮಾತ್ರ ಕೆಲ ಫೀಚರ್ಸ್ ಇರಲಿದೆ. ಇತ್ತೀಚೆಗೆ ಬ್ರೆಜ್ಜಾ ಕಾರಿನಿಂದಲೂ ಮಾರುತಿ ಇದೇ ರೀತಿ ಫೀಚರ್ಸ್ ತೆಗೆದಿತ್ತು. ಯಾವ ವೇರಿಯೆಂಟ್‌ನಿಂದ ಯಾವ ಫೀಚರ್ಸ್ ತೆಗೆಯಲಾಗಿದೆ? ಇಲ್ಲಿದೆ.
 


ನವದೆಹಲಿ(ಜು.22) ಭಾರತದ ಕಾರು ಮಾರುಕಟ್ಟೆಯಲ್ಲಿ ಗರಿಷ್ಠ ಗ್ರಾಹಕರನ್ನು ಹೊಂದಿರುವ ಮಾರುತಿ ಸುಜುಕಿ ಇದೀಗ ಗ್ರಾಹಕರಿಗೆ ಶಾಕ್ ನೀಡಿದೆ. ಮಾರುತಿ ಸುಜುಕಿ ಬ್ರೆಜ್ಜಾ ಬೆನ್ನಲ್ಲೇ ಇದೀಗ ವ್ಯಾಗನಆರ್ ಕಾರಿನ ಕೆಲ ಮಾಡೆಲ್ ಕಾರುಗಳಿಂದ ಫೀಚರ್ಸ್ ತೆಗೆಯಲಾಗಿದೆ. ವ್ಯಾಗನಆರ್ ಕಾರಿನಲ್ಲಿ ಡಿಫಾಗರ್ ಫೀಚರ್ಸ್ ಬೇಕು ಎಂದರೆ ಗ್ರಾಹಕರು ಟಾಪ್ ಮಾಡೆಲ್ ZXi ಪ್ಲಸ್ ವೇರಿಯೆಂಟ್ ಆಯ್ಕೆ ಮಾಡಿಕೊಳ್ಳಬೇಕು. ಇತರ ವೇರಿಯೆಂಟ್‌ಗಳಲ್ಲಿ ಡಿಫಾಗರ್ ಲಭ್ಯವಿರುವುದಿಲ್ಲ.

ಕಾರಿನ ಹಿಂಭಾಗದ ಗಾಜಿನ ಮೇಲೆ ಗೆರೆಯ ರೂಪದಲ್ಲಿ ಕಾಣುವ ಡಿಫಾಗರ್, ಮಳೆಗಾಲ, ಚಳಿಗಾಲದಲ್ಲಿ ಅತೀ ಅವಶ್ಯಕ. ಕಾರಿನ ಮುಂಭಾಗದ ಗಾಜಿನ ಮೇಲೆ ಮಂಜು ಕುಳಿತು ಸ್ಪಷ್ಟ ವೀಕ್ಷಣೆಗೆ ಅಡ್ಡಿಯಾಗುವುದನ್ನು ತಡೆಯಲು ವಿಂಡ್‌ಶೀಲ್ಡ್‌ಗೆ ಎಸಿ ಹಾಕಲಾಗುತ್ತದೆ. ಇದೇ ರೀತಿ ಹಿಂಭಾಗದ ವಿಂಡ್‌ಶೀಲ್ಡ್‌ಗೆ ಡಿಫಾಗರ್ ಫೀಚರ್ಸ್ ಅಳವಡಿಸಲಾಗುತ್ತದೆ. ಡಿಫಾರ್ ಸ್ವಿಚ್ ಹಾಕಿದ ಬೆನ್ನಲ್ಲೇ ವಿಂಡ್‌ಶೀಲ್ಡ್‌ನಲ್ಲಿ ಅಂಟಿಸಿರುವ ಡಿಫಾಗರ್ ಬಿಸಿಯಾಗಲು ಆರಂಭಿಸುತ್ತದೆ. ಇದರಿಂದ ಗಾಜು ಬಿಸಿಯಾಗಿ ಮಂಜು ಸರಿಯಲಿದೆ. ಇದರಿಂದ ಸ್ಪಷ್ಟ ನೋಟ ಚಾಲಕನಿಗೆ ಸಿಗಲಿದೆ. ಸುಗಮ ಚಾಲನೆಗೆ ನೆರವಾಗಲಿದೆ. ಆದರೆ ಬೇಸ್ ಮಾಡೆಲ್ ವ್ಯಾಗನಆರ್ ಕಾರಿನಲ್ಲಿ ಡಿಫಾಗರ್ ಫೀಚರ್ ಇರುವುದಿಲ್ಲ. ಇದನ್ನು ತೆಗೆಯಲಾಗಿದೆ. 

Tap to resize

Latest Videos

ದುಬಾರಿ ಇನ್‌ವಿಕ್ಟೋ ಕಾರು ಬಿಡುಗಡೆ ಬೆನ್ನಲ್ಲೇ ದಾಖಲೆ ಬರೆದ ಮಾರುತಿ ಸುಜುಕಿ!

ವ್ಯಾಗನಆರ್ ಮ್ಯಾನ್ಯುಯೆಲ್(6.75 ಲಕ್ಷ ರೂಪಾಯಿ, ಎಕ್ಸ್ ಶೋ ರೂಂ), ಆಟೋಮ್ಯಾಟಿಕ್(7.30 ಲಕ್ಷ ರೂಪಾಯಿ, ಎಕ್ಸ್ ಶೋ ರೂಂ) ವೇರಿಯೆಂಟ್ ಕಾರಿನಲ್ಲೂ ಡಿಫಾಗರ್ ಫೀಚರ್ಸ್ ಲಭ್ಯವಿಲ್ಲ.  ZXi ಪ್ಲಸ್ ವೇರಿಯೆಂಟ್‌ನಲ್ಲಿ ಗ್ರಾಹಕರಿಗೆ ಡಿಫಾಗರ್ ಆಯ್ಕೆ ಲಭ್ಯವಾಗಲಿದೆ. ಟಾಪ್ ವೇರಿಯೆಂಟ್  ZXi ಪ್ಲಸ್ ಕಾರು 1.2 ಲೀಟರ್ ಎಂಜಿನ್‌ನಲ್ಲಿ ಮಾತ್ರ ಲಭ್ಯವಿದೆ. ಈ ಕಾರು 88.5 ಬಿಹೆಚ್‌ಪಿ ಪವರ್ ಹಾಗೂ 113 ಎನಎಂ ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಬೇಸ್ ಮಾಡೆಲ್ ವ್ಯಾಗನಆರ್ ಕಾರು 1.0 ಲೀಟರ್ ಎಂಜಿನ್‌ನಲ್ಲಿ ಮಾತ್ರ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಕಾರು ಇದಾಗಿದ್ದು, 66 ಬಿಹೆಚ್‌ಪಿ ಪವರ್ ಹಾಗೂ 89 ಎನಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯವಿದೆ. ಸಿಎನ್‌ಜಿ ವೇರಿಯೆಂಟ್ ಕಾರಿನಲ್ಲಿ 56 ಬಿಹೆಚ್‌ಪಿ ಪವರ್ ಹಾಗೂ 82 ಎನ್ಎಂ ಪೀಕ್ ಟಾರ್ಕ್ ಜನರೇಟ್ ಮಾಡಲಿದೆ

ಮಾರುತಿ ಸುಜುಕಿಯ ಬಹುನಿರೀಕ್ಷಿತ ಇನ್‌ವಿಕ್ಟೋ ಕಾರು ಬಿಡುಗಡೆ, ಇಲ್ಲಿದೆ ಬೆಲೆ ಪಟ್ಟಿ!

ಇನ್ನು ಬ್ರೆಜ್ ಮಾನ್ಯುಯೆಲ್ ವೇರಿಯೆಂಟ್ ಕಾರಿನಿಂದ ಮಾರುತಿ ಮೈಲ್ಡ್ ಹೈಬ್ರಿಡ್ ಆಯ್ಕೆ ತೆಗೆದು ಹಾಕಿದೆ. ಇನ್ನು ಸಿಎನ್‌ಜಿ ಬ್ರೆಜ್ಜಾ ಕಾರಿನಿಂದ ಹಿಲ್ ಹೋಲ್ಡ್ ಹಾಗೂ ಸ್ಟೆಬಿಲಿಟಿ ಕಂಟ್ರೋಲ್ ಕೂಡ ತೆಗೆಯಲಾಗಿದೆ. 

ಮಾರುತಿ ಸುಜುಕಿಯಲ್ಲಿ ಇದೀಗ ಬ್ರೆಜ್ಜಾ ಹಾಗೂ ವ್ಯಾಗನಆರ್ ಕಾರಿನಲ್ಲಿ ಎಲ್ಲಾ ಫೀಚರ್ಸ್ ಬೇಕು ಎಂದರೆ ಟಾಪ್ ಮಾಡೆಲ್ ಕಾರಿನ ಮೊರೆ ಹೋಗಬೇಕು. ಖಡ್ಡಾಯವಾಗಿ ಇರಲೇಬೇಕಾದ ಫೀಚರ್ಸ್ ಹೊರತುಪಡಿಸಿ ಡಿಫಾಗರ್, ಹೈಬ್ರಿಡ್ ಸೇರಿದಂತೆ ಇತರ ಆಯ್ಕೆಗಳನ್ನು ಮಾರುತಿ ತೆಗೆದು ಹಾಕಿದೆ. ಕಾರಿನ ಬೆಲೆ ಏರಿಕೆಯಾಗುತ್ತಿರುವುದರಿಂದ ಮಾರಾಟದಲ್ಲಿ ಕುಸಿತ ಕಾಣುತ್ತಿದೆ. ಹೀಗಾಗಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಕಾರುಗಳನ್ನು ಒದಗಿಸಲು ಮಾರುತಿ ಈ ಪ್ರಯೋಗ ಮಾಡಿದೆ.

click me!