ಬ್ರಿಟನ್‌ನಲ್ಲಿ ಅತ್ಯಾಧುನಿಕ ಅಡ್ವಾನ್ಸ್ ಡಿಸೈನ್ ಕೇಂದ್ರ ಉದ್ಘಾಟಿಸಿದ ಮಹೀಂದ್ರ!

By Suvarna News  |  First Published Aug 16, 2022, 8:52 PM IST

ಭವಿಷ್ಯದ ಸಾರಿಗೆಯನ್ನು ರೂಪಿಸುವಲ್ಲಿ ಮಹೀಂದ್ರ ಮಹತ್ವದ ಹೆಜ್ಜೆ ಇಟ್ಟಿದೆ. ಇವಿ ಉತ್ಪನ್ನಗಳ ಪೋರ್ಟ್ ಫೋಲಿಯೋಗೆ ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ


ಲಂಡನ್(ಆ.16): ಭಾರತದ ಮುಂಚೂಣಿ ಎಸ್ ಯುವಿ ಉತ್ಪಾದಕರಾದ ಮಹೀಂದ್ರಾ ಅಂಡ್ ಮಹೀಂದ್ರಾ, ತನ್ನ ನೂತನ ಶ್ರೇಷ್ಠತಾ ವಿನ್ಯಾಸ ಕೇಂದ್ರವಾದ  ಮಹೀಂದ್ರಾ ಅಡ್ವಾನ್ಸ್ಡ್ ಡಿಸೈನ್ (ಎಂ.ಎ.ಡಿ.ಇ) ಕೇಂದ್ರವನ್ನು ಯುರೋಪ್‌ನಲ್ಲಿ ಉದ್ಘಾಟಿಸಿದೆ. ಕಂಪನಿಯ ಇವಿ ಉತ್ಪನ್ನಗಳ ಪೋರ್ಟ್ ಫೋಲಿಯೋಗೆ ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.   ಎಂ.ಎ.ಡಿ.ಇ. ಆಕ್ಸ್ ಫರ್ಡ್ ಷೈರ್ ಬ್ಯಾನ್ ಬರಿಯಲ್ಲಿರುವ ಆಟೋಮೋಟಿವ್ ಮತ್ತು ಇವಿ ಕೇಂದ್ರದಲ್ಲಿ ಇದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯವಿರುವ ಈ ಪ್ರದೇಶವು ಉನ್ನತ ಸಂಶೋಧನಾ ಮತ್ತು ಅಕಾಡೆಮಿಕ್ ಸಂಸ್ಥೆಗಳಿಗೆ ಪ್ರಖ್ಯಾತವಾಗಿದೆ. ಬಹುಮುಖ್ಯವಾಗಿ, ಭವಿಷ್ಯದ ಸಾರಿಗೆಯನ್ನು ರೂಪಿಸುವಲ್ಲಿ ಭರವಸೆ ಮೂಡಿಸಿರುವ ಕೃತಕ ಬುದ್ಧಿಮತ್ತೆ, ಆಟೋನಾಮಿಕ್ಸ್, ಸುಧಾರಿತ ರೊಬಾಟಿಕ್ಸ್ ಮುಂತಾದ ಹೊಸ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳಿಗೆ ಕೂಡ ಆಕ್ಸ್ ಫರ್ಡ್ ಷೈರ್ ಅವಕಾಶ ಕಲ್ಪಿಸುತ್ತದೆ.

ಭವಿಷ್ಯದ ಎಲ್ಲ ಮಹೀಂದ್ರಾ ಇವಿಗಳ ಪರಿಕಲ್ಪನೆ ಮಾಡುವುದು ಹಾಗೂ ಸುಧಾರಿತ ವಾಹನ ವಿನ್ಯಾಸ ಪರಿಕಲ್ಪಿಸುವುದು ಮುಂಬೈಯಲ್ಲಿರುವ ಮಹೀಂದ್ರಾ ಇಂಡಿಯಾ ಡಿಸೈನ್ ಸ್ಟುಡಿಯೋ ಸೇರಿದಂತೆ ಮಹೀಂದ್ರಾ ಜಾಗತಿಕ ವಿನ್ಯಾಸ ಜಾಲದ ಭಾಗವಾಗಿರುವ ಎಂ.ಎ.ಡಿ.ಇ.ಯ ಮುಖ್ಯ ಉದ್ದೇಶವಾಗಿದೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ ಮಹೀಂದ್ರಾ ಅವರು ಬ್ರಿಟನ್ನ ಅಂತಾರಾಷ್ಟ್ರೀಯ ವಾಣಿಜ್ಯ ಸಚಿವ ರನಿಲ್ ಜಯವರ್ದನೆ ಅವರೊಂದಿಗೆ ಸೇರಿ ಎಂ.ಎ.ಡಿ.ಇ. ಉದ್ಘಾಟಿಸಿದರು.   3ಡಿ ಡಿಜಿಟಲ್ ಮತ್ತು ದೈಹಿಕ ಮಾಡೆಲಿಂಗ್, ಕ್ಲಾಸ್-ಎ ಸರ್ಫೇಸಿಂಗ್, ಡಿಜಿಟಲ್ ದೃಶ್ಯೀಕರಣ ಮತ್ತು ಹ್ಯುಮನ್-ಮೆಷಿನ್ ಇಂಟರ್ಫೇಸ್ (ಎಚ್ಎಂಐ) ವಿನ್ಯಾಸ ಸೇರಿದಂತೆ ಎಂಡ್-ಟು-ಎಂಡ್ ವಿನ್ಯಾಸ ಚಟುವಟಿಕೆಗಳನ್ನು ನಿರ್ವಹಿಸಲು ನೆರವಾಗುವಂತೆ ಎಂ.ಎ.ಡಿ.ಇ ಸಜ್ಜಿತವಾಗಿದೆ. ಸಂಪೂರ್ಣ ದೃಶ್ಯೀಕರಣ ಸಂಪುಟ (ವಿಜುವಲೈಸೇಶನ್ ಸೂಟ್), ಜೇಡಿಮಣ್ಣಿನ ಮಾದರಿ (ಕ್ಲೇ ಮಾಡೆಲಿಂಗ್) ಸ್ಟುಡಿಯೋ ಮತ್ತು ಡಿಜಿಟಲ್ ಹಾಗೂ ದೈಹಿಕ ಪ್ರಸ್ತುತೀಕರಣ ವಲಯಗಳನ್ನೂ ಅದು ಒಳಗೊಂಡಿದೆ.

Latest Videos

undefined

 

ಹಿರಿಯ ದಂಪತಿಯ ಧ್ವಜಾರೋಹಣ ಫೋಟೋ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ: ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮಹೀಂದ್ರಾ ಅಡ್ವಾನ್ಸ್ಡ್ ಡಿಸೈನ್ ಯುರೋಪ್ ನಮ್ಮ ಆವಿಷ್ಕಾರ ನರ ಜಾಲದ ಇನ್ನೊಂದು ಮಹತ್ವದ ನೋಡ್ ಆಗಿದೆ. 15 ತಿಂಗಳಷ್ಟು ಕಡಿಮೆ ಅವಧಿಯಲ್ಲಿ ಅವರ ಕೆಲಸವು ಈಗಾಗಲೇ ಅದ್ಭುತವಾದ ಭವಿಷ್ಯದ ನೀಲನಕ್ಷೆಯನ್ನು ರೂಪಿಸಿದೆ. ನಾವು ಇಂದು ಆಡುವ ಆಟವು ಜಗತ್ತಿನ ನಾಳೆಯ ಭವಿಷ್ಯದ ನಡೆಯನ್ನು ನಿರ್ಧರಿಸುತ್ತದೆ ಎಂದು ಆನಂದ ಮಹೀಂದ್ರಾ ಹೇಳಿದ್ದಾರೆ.

ಬ್ರಿಟನ್ ನಲ್ಲಿ ಬಂಡವಾಳ ಹೂಡಿಕೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ, ವೇತನ ಹೆಚ್ಚಳಕ್ಕೆ ನೆರವಾಗುತ್ತದೆ ಮತ್ತು ನಮ್ಮ ಆರ್ಥಿಕತೆ ಬೆಳೆಯುತ್ತದೆ. ಈ ರೀತಿಯಾಗಿ ನಮ್ಮ ಜನರು ಈಗ ಮತ್ತು ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಲು ನಾವು ನೆರವಾಗುತ್ತೇವೆ. ಹೀಗಾಗಿ ಆಕ್ಸ್ ಫರ್ಡ್ ಷೈರ್ ನಲ್ಲಿ ಮಹೀಂದ್ರಾ ಹೂಡಿಕೆ ಒಂದು ಅದ್ಭುತವಾಗಿದೆ. ಮುಂದಿನ ಒಂದು ದಶಕದಲ್ಲಿ ಆಂಗ್ಲೋ-ಭಾರತ ವಾಣಿಜ್ಯ ದುಪ್ಪಟ್ಟುಗೊಳ್ಳುವುದನ್ನು ನಾವು ಬಯಸುತ್ತೇವೆ ಹಾಗೂ ಮುಕ್ತ ವಾಣಿಜ್ಯ ಒಪ್ಪಂದವು ಅದನ್ನು ಸಾಧಿಸಲು, ವಾಣಿಜ್ಯ ಅಡೆತಡೆ ನಿಭಾಯಿಸಲು ಹಾಗೂ ಎರಡೂ ದೇಶಗಳಲ್ಲಿ ಹೊಸ ಅವಕಾಶಗಳನ್ನು ಪಡೆಯಲು ನೆರವಾಗುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಬ್ರಿಟನ್ ಅಂತಾರಾಷ್ಟ್ರೀಯ ವಾಣಿಜ್ಯ ಮಂತ್ರಿ ಜಯವರ್ದನ ಹೇಳಿದ್ದಾರೆ.

ನಮ್ಮ ಬಾರ್ನ್ ಇಲೆಕ್ಟ್ರಿಕ್ ದೂರದೃಷ್ಟಿಗೆ ಅಭಿವ್ಯಕ್ತಿ ನೀಡುವುದು ಎಂ.ಎ.ಡಿ.ಇಯಲ್ಲಿರುವ ನಮ್ಮ ಮುಖ್ಯ ಉದ್ದೇಶವಾಗಿದೆ. ಇಲ್ಲಿ ನೆರೆದಿರುವ ಎಲ್ಲ  ತಂತ್ರಜ್ಞಾನ, ಎಲ್ಲ ಆಟೋಮೋಟಿವ್ ವಿನ್ಯಾಸ ಪ್ರತಿಭೆ, ಎಲ್ಲ ಅತ್ಯಾಧುನಿಕ ಸಲಕರಣೆಗಳನ್ನು ಆ ಉದ್ದೇಶ ಸಾಧನೆಯತ್ತ ಬಳಸಲಾಗುತ್ತದೆ –ಅಂದರೆ ಯಥಾಸ್ಥಿತಿಯನ್ನು ಪುಡಿಗಟ್ಟಿ ಮಹೀಂದ್ರಾ ಇವಿ ವಿನ್ಯಾಸ ಮತ್ತು ಆವಿಷ್ಕಾರದ ಒಳಿತಿಗಾಗಿ ಬಳಸುವುದೇ ಆ ಉದ್ದೇಶ ಎಂದು ಮಹೀಂದ್ರಾ ಅಂಡ್ ಮಹೀಂದ್ರಾ ಚೀಫ್ ಡಿಸೈನ್ ಆಫೀಸರ್ ಪ್ರತಾಪ್ ಬೋಸ್ ಹೇಳಿದ್ದಾರೆ.

ಅತ್ಯಾಕರ್ಷಕ, ಐಕಾನಿಕ್ ಬ್ರ್ಯಾಂಡ್ ಮಹೀಂದ್ರ ಸ್ಕಾರ್ಪಿಯೋ ಕ್ಲಾಸಿಕ್ ಬಿಡುಗಡೆ!

ಜಾಗತಿಕ ಆಟೋಮೋಟಿವ್ ವಿನ್ಯಾಸದ ಪ್ರತಿಭಾನ್ವಿತ ಹಾಗೂ ಅನುಭವಿಯಾದ 30 ಉದ್ಯೋಗಿಗಳ ಬಲದ ಎಂ.ಎ.ಡಿ.ಇ ಪ್ರಶಸ್ತಿ ಪುರಸ್ಕೃತ ಜಾಗತಿಕ ಆಟೋಮೋಟಿವ್ ವಿನ್ಯಾಸಕಾರ ಕೊಸಿಮೋ ಅಮದೇ ಅವರ ನಾಯಕತ್ವ ಹೊಂದಿದೆ. ಮಹೀಂದ್ರಾದ ಬಾರ್ನ್ ಇಲೆಕ್ಟ್ರಿಕ್ ಆರಂಭದ ಭಾಗವಾಗಿ ಪ್ರದ ರ್ಶಿಸುವ ಐದು ಇ-ಎಸ್ ಯುವಿಗಳಲ್ಲಿ ಮೂರನ್ನು ಎಂ.ಎ.ಡಿ.ಇ ಅಭಿವೃದ್ಧಿಪಡಿಸಿದೆ.  

click me!