ದೀಪಾವಳಿ ಆಫರ್, ಮಾರುತಿ ಸುಜುಕಿ ಆಯ್ದ ಕಾರುಗಳಿಗೆ 1.50 ಲಕ್ಷ ರೂಪಾಯಿ ಡಿಸ್ಕೌಂಟ್

Published : Nov 05, 2026, 01:30 PM IST
maruti grand vitara

ಸಾರಾಂಶ

ದೀಪಾವಳಿ ಹಬ್ಬಕ್ಕೆ ಮಾರುತಿ ಸುಜುಕಿ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಕಾರು ಖರೀದಿಸುವ ಗ್ರಾಹಕರಿಗೆ ಹಲವು ಪ್ರಯೋಜನಗಳನ್ನು ಘೋಷಣೆ ಮಾಡಿದೆ. ಯಾವ ಕಾರಿಗೆ ಎಷ್ಟು ರೂಪಾಯಿ ಡಿಸ್ಕೌಂಟ್ ಇಲ್ಲಿದೆ.

ನವದೆಹಲಿ (ನ.05) ದೀಪಾವಳಿ ಹಬ್ಬಕ್ಕೆ ಮಾರುತಿ ಸುಜುಕಿ ಭರ್ಜರಿ ಆಫರ್ ಘೋಷಿಸಿದೆ. ಆಯ್ದ ಕಾರುಗಳಿಗೆ ಬರೋಬ್ಬರಿ 1.50 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಮಾರುತಿ ಸುಜುಕಿ ಅಧಿಕೃತ ಡೀಲರ್ ನೆಕ್ಸಾ ಶೋರೂಂಗಳಲ್ಲಿ ಈ ಆಫರ್ ಲಭ್ಯವಿದೆ. ಗ್ರ್ಯಾಂಡ್ ವಿಟಾರ ಕಾರಿಗೆ ಬರೋಬ್ಬರಿ 1.36 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇತರ ಕೆಲ ಕಾರುಗಳ ಮೇಲೂ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದರ ಜೊತೆಗೆ ಕೆಲ ಪ್ರಯೋಜನಗಳನ್ನು ಘೋಷಿಸಲಾಗಿದೆ.

ಲಿಮಿಟೆಡ್ ಪಿರೆಯೆಡ್ ಆಫರ್

ದೀಪಾವಳಿ ಹಬ್ಬ ಈ ಆಫರ್ ಸದ್ಯ ಚಾಲ್ತಿಯಲ್ಲಿದೆ. ನವೆಂಬರ್ 11ರ ವರೆಗೆ ಈ ಆಫರ್ ಮೂಲಕ ಕಾರು ಖರೀದಿಗೆ ಅವಕಾಶವಿದೆ. ಇಷ್ಟೇ ಅಲ್ಲ ನವೆಂಬರ್ 1 ರಿಂದ ನವೆಂಬರ್ 6ರವರೆಗೆ ಕಾರು ಬುಕ್ ಮಾಡುವ ಗ್ರಾಹಕರಿಗೆ ವಿಶೇಷ ಆಫರ್ ಕೂಡ ಲಭ್ಯವಾಗಲಿದೆ. ಈ ಗ್ರಾಹಕರಿಗೆ ಪ್ರತ್ಯೇಕ ದೀಪಾವಳಿ ಆಫರ್ ಕೂಡ ಲಭ್ಯವಾಗಲಿದೆ. ಇದರಿಂದ ಅತೀ ಸುಲಭವಾಗಿ ಕಾರು ಖರೀದಿ ಸಾಧ್ಯವಾಗಲಿದೆ. ಕಾರುಗಳ ಮಾಡೆಲ್, ವೇರಿಯೆಂಟ್, ಗ್ರಾಹಕರ ರಿಯಾಯಿತಿ, ಎಕ್ಸ್‌ಚೇಂಜ್ ಬೋನಸ್, ಸ್ಕ್ರ್ಯಾಪೇಜ್ ಆಫರ್, ಲಾಯಲ್ಟಿ ಬೋನಸ್ ಹಾಗೂ ಕಾರ್ಪೊರೇಟ್ ರಿಯಾಯಿತಿಗಳ ಆಧಾರದ ಮೇಲೆ ಈ ಕೊಡುಗೆಗಳು ಸಿಗಲಿವೆ.

ಗ್ರಾಂಡ್ ವಿಟಾರಾಗೆ ಭರ್ಜರಿ ಆಫರ್

ಈ ಬಾರಿಯ ದೀಪಾವಳಿ ಹಬ್ಬಕ್ಕೆ ಅತ್ಯಂತ ಗರಿಷ್ಠ ರಿಯಾಯಿತಿ ಗ್ರಾಂಡ್ ವಿಟಾರಾ ಕಾರಿಗೆ ಸಿಗಲಿದೆ. ಸಿಗ್ಮಾ (Sigma) ಪೆಟ್ರೋಲ್ ವೇರಿಯೆಂಟ್ ಖರೀದಿದಾರರು ₹1.36 ಲಕ್ಷದವರೆಗೆ ಪ್ರಯೋಜನ ಪಡೆಯಬಹುದು. ಡೆಲ್ಟಾ (Delta) ಪೆಟ್ರೋಲ್ ಆವೃತ್ತಿಗೆ ₹1.26 ಲಕ್ಷ ಹಾಗೂ ಝೀಟಾ, ಆಲ್ಫಾ ಮತ್ತು AWD ಆವೃತ್ತಿಗಳಿಗೆ ₹1.15 ಲಕ್ಷ ಡಿಸ್ಕೌಂಟ್ ಜೊತೆಗೆ 5 ವರ್ಷಗಳ ವಿಸ್ತರಿತ ವಾರಂಟಿ (Extended Warranty) ದೊರೆಯಲಿದೆ. ಗ್ರಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ (Strong Hybrid) ಮಾಡೆಲ್‌ಗೆ ₹1.20 ಲಕ್ಷದವರೆಗೆ ಕೊಡುಗೆ ಹಾಗೂ 5 ವರ್ಷಗಳ ವಾರಂಟಿ ಲಭ್ಯವಿದ್ದರೆ, ಅರ್ಹ ರಾಜ್ಯಗಳಲ್ಲಿ ₹1.85 ಲಕ್ಷದವರೆಗೆ ಜೀರೋ ರೋಡ್ ಟ್ಯಾಕ್ಸ್ (Zero Road-Tax) ಲಾಭ ಪಡೆಯಬಹುದು. ಸಿಎನ್‌ಜಿ (CNG) ಆವೃತ್ತಿಗಳಿಗೆ ₹90,000 ದಿಂದ ₹1 ಲಕ್ಷದವರೆಗೆ ರಿಯಾಯಿತಿ ಇದೆ.

ಮಾರುತಿ ಇನ್ವಿಕ್ಟೋ ಮತ್ತು XL6

ಪ್ರೀಮಿಯಂ ಎಂಪಿವಿ ಇನ್ವಿಕ್ಟೋ ಕಾರಿನ ಮೇಲೆ ಲಾಯಲ್ಟಿ ನವೀಕರಣ ಬೋನಸ್, ಎಕ್ಸ್‌ಚೇಂಜ್ ಆಫರ್ ಹಾಗೂ ಕಾರ್ಪೊರೇಟ್ ಡಿಸ್ಕೌಂಟ್ ಸೇರಿದಂತೆ ಒಟ್ಟು ₹95,000 ವರೆಗೆ ಪ್ರಯೋಜನ ಸಿಗಲಿದೆ. ನೆಕ್ಸಾ ಎಕ್ಸ್‌ಎಲ್‌6 (XL6) ಪೆಟ್ರೋಲ್ ವೇರಿಯೆಂಟ್‌ಗಳಿಗೆ ಗ್ರಾಹಕ ರಿಯಾಯಿತಿ ಹಾಗೂ ದೀಪಾವಳಿ ಬುಕಿಂಗ್ ಬೆನಿಫಿಟ್ ಸೇರಿ ₹61,000 ವರೆಗೆ ಹಾಗೂ ಸಿಎನ್‌ಜಿ ಆವೃತ್ತಿಗಳಿಗೆ ₹50,000 ದವರೆಗೆ ಆಫರ್ ನೀಡಲಾಗಿದೆ.

ಫ್ರಾಂಕ್ಸ್, ಜಿಮ್ನಿ ಮತ್ತು ಇ-ವಿಟಾರಾ

ಮಾರುತಿ ಫ್ರಾಂಕ್ಸ್ (Fronx) ಟರ್ಬೋ ಆವೃತ್ತಿಗೆ ₹27,100, 1.2 ಲೀಟರ್ ಪೆಟ್ರೋಲ್ ಮಾಡೆಲ್‌ಗೆ ₹22,100 ಹಾಗೂ ಸಿಎನ್‌ಜಿ ಆವೃತ್ತಿಗೆ ₹15,000 ವರೆಗೆ ಪ್ರಯೋಜನ ಸಿಗಲಿದೆ. ಆಫ್-ರೋಡರ್ ಜಿಮ್ನಿ (Jimny) ಪ್ರತಿಯೊಂದು ಮಾಡೆಲ್‌ ಮೇಲೂ ₹35,000 ರಷ್ಟು ನೇರ ಫ್ಲ್ಯಾಟ್ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಮಾರುತಿಯ ಎಲೆಕ್ಟ್ರಿಕ್ ಇ-ವಿಟಾರಾ (e-Vitara) ಕಾರು ಖರೀದಿಸುವವರಿಗೆ ಉಚಿತ ಹೋಮ್ ಚಾರ್ಜರ್ (Free Home Charger) ಹಾಗೂ ಉಚಿತ ಇನ್‌ಸ್ಟಾಲೇಶನ್ ಜೊತೆಗೆ ₹30,000 ವರೆಗೆ ಎಕ್ಸ್‌ಚೇಂಜ್ ಬೋನಸ್ ದೊರೆಯಲಿದೆ.

ಸೂಚನೆ: ಡಿಸ್ಕೌಂಟ್ ಹಾಗೂ ಆಫರ್ ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ಬದಲಾಗಲಿದೆ. ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಹಾಗೂ ರಿಯಾಯಾತಿ ಖಚಿತಪಡಿಸಿಕೊಳ್ಳಿ

PREV
Read more Articles on
click me!

Recommended Stories

ಬೆಂಗಳೂರಲ್ಲಿ ಶೀಘ್ರವೇ ಗ್ರೀನ್ ಎಸ್‌ಎಂ ಸೇವೆ, ಕೆಂಗೇರಿ ಬಳಿ ಸದ್ದಿಲ್ಲದೆ ಸಾಲುಕಟ್ಟಿ ನಿಂತ ಕಾರು, ಕ್ಯಾಬ್ ಚಾಲಕರಲ್ಲಿ ಆತಂಕ!
ಭಾರತದಲ್ಲೇ ತಯಾರಾಗಲಿದೆ ಹೋಂಡಾದ ಮೊದಲ ಇವಿ ಕಾರು: 'ಹೋಂಡಾ ಆಲ್ಫಾ' ಹೆಸರು ಅಧಿಕೃತ ಘೋಷಣೆ