ನವದೆಹಲಿ(ಜ.13): ಭಾರತದಲ್ಲಿ ಪೆಟ್ರೋಲ್ ಡೀಸೆಲ್(Petrol Diesel) ಕಾರುಗಳ ಕಾರುಗಳ ಅಬ್ಬರ ಕಡಿಮೆಯಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ(Electric Vehicle) ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಜೊತೆಗೆ CNG ಕಾರುಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಇದರ ನಡುವೆ ಹೊಸ ವರ್ಷದಲ್ಲಿ ಮಾರುತಿ ಸುಜುಕಿ(Maruti Suzuki) ಮೊದಲ ಕಾರಾಗಿ ಸೆಲೆರಿಯೋ CNG ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ಸೆಲೆರಿಯೋ(Celerio) CNG ಕಾರು ಬಿಡುಗಡೆಗೂ ಮುನ್ನವೇ ಮಾರುತಿ ಸುಜುಕಿ ಡೀಲರ್‌ಶಿಪ್ ಬಳಿ ಬುಕಿಂಗ್ ಆರಂಭಿಸಿದೆ.
ಭಾರತದ ಎಲ್ಲಾ ಮಾರುತಿ ಸುಜುಕಿ ಅಧಿಕೃತ ಡೀಲರ್ ಬಳಿ ನೂತನ ಸೆಲೆರಿಯೋ CNG ಕಾರನ್ನು ಬುಕ್(Bookings Open) ಮಾಡಿಕೊಳ್ಳಬಹುದು. ಡೀಲರ್ ಮಾಹಿತಿ ಪ್ರಕಾರ ಇದೇ ತಿಂಗಳ(ಜನವರಿ) ಅಂತ್ಯದಲ್ಲಿ ನೂತನ ಸೆಲೆರಿಯೋ CNG ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಇದೀಗ ಕಾರುಗಳ ನಿರ್ವಹಣೆ ದುಬಾರಿಯಾಗಿದೆ. ಆದರೆ CNG ಕಾರು ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ.
Year End 2021 ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ಟಾಪ್ 5 ಕಾರು!
ಸೆಕೆಂಡ್ ಜನರೇಶನ್ ಮಾರುತಿ ಸುಜುಕಿ ಸೆಲೆರಿಯೋ ಕಾರು ನವೆಂಬರ್ 2021ರಲ್ಲಿ ಬಿಡುಗಡೆಯಾಗಿದೆ. ಹೊಸ ರೂಪ, ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ. ಕಳೆದ ವರ್ಷ ನೂತನ ಸೆಲೆರಿಯೋ CNG ರೂಪದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕೇಳಿಬಂದಿತ್ತು. ಆದರೆ ಮಾರುತಿ ಸುಜುಕಿ ಶೀಘ್ರದಲ್ಲೇ ಸೆಲೆರಿಯೋ CNG ಕಾರು ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿತ್ತು.
ಸೆಕೆಂಡ್ ಜನರೇಶ್ ಸೆಲೆರಿಯೋ ಕಾರಿಗಿಂತ ಮೊದಲು ಬಿಡುಗಡೆಯಾಗಿದ್ದ ಸೆಲೆರಿಯೋ ಕಾರು CNG ವೇರಿಯೆಂಟ್‌ನಲ್ಲಿ ಬಿಡುಗಡೆಯಾಗಿತ್ತು. ಆದರೆ ಆ ಸಂದರ್ಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸರಿಸುಮಾರು CNG ಬೆಲೆ ಒಂದೇ ಆಗಿತ್ತು. ಹೀಗಾಗಿ CNG ಕಾರುಗಳತ್ತ ಜನರು ಒಲವು ತೋರಿರಲಿಲ್ಲ. ಇದೀಗ ಇಂಧನ ಬೆಲೆಗಳ ನಡುವೆ ಭಾರಿ ಅಂತರವಿದೆ.
New Car Launch: ಗರಿಷ್ಠ ಮೈಲೇಜ್, ಕನಿಷ್ಠ ಬೆಲೆಯ ಹೊಸ ಮಾರುತಿ ಸುಜುಕಿ ಸೆಲೆರಿಯೋ ಮಾರುಕಟ್ಟೆಗೆ!
ಮಾರುತಿ ಸುಜುಕಿ CNG ಕಾರಿನ ಎಂಜಿನ್ ಹಾಗೂ ಪವರ್:
1.0 ಲೀಟರ್ 3 ಸಿಲಿಂಡರ್ K10C ಡ್ಯುಯೆಲ್ ಜೆಟ್ ಎಂಜಿನ್ ಹೊಂದಿರುವ ಹೊಸ ಸೆಲೆರಿಯೋ ಕಾರಿಗೆ CNG ಕಿಟ್ ಅಳವವಡಿಸಲಾಗುತ್ತದೆ. ಇದರಿಂದ ಕಾರಿನ ಬೂಟ್ ಸ್ಪೇಸ್ ಸಂಪೂರ್ಣವಾಗಿ CNG ಕಿಟ್ ಆಕ್ರಮಿಸಿಕೊಳ್ಳಲಿದೆ. ಪೆಟ್ರೋಲ್ ಎಂಜಿನ್ ಸೆಲೆರಿಯೋ ಕಾರು 67 bhp ಪವರ್ ಹಾಗೂ 89 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ CNG ಸೆಲೆರಿಯೋ ಕಾರು ಈ ಪವರ್ ಹಾಗೂ ಟಾರ್ಕ್ ಸಾಮರ್ಥ್ಯ ಹೊಂದಿರುವುದಿಲ್ಲ. ಕೊಂಚ ಕಡಿಮೆಯಾಗಲಿದೆ.
ಮೈಲೇಜ್ ಸಾಮರ್ಥ್ಯ:
ಸೆಕೆಂಡ್ ಜನರೇಶ್ ಸೆಲೆರಿಯೋ AMT ಕಾರು ಪ್ರತಿ ಲೀಟರ್ ಇಂಧನಕ್ಕೆ 26.68 km/l ಮೈಲೇಜ್ ನೀಡುತ್ತಿದೆ. ಇನ್ನು ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರು 25.24 kmpl ಮೈಲೇಜ್ ನೀಡುತ್ತಿದೆ. ಆದರೆ CNG ಸೆಲೆರಿಯೋ ಕಾರು ಪ್ರತಿ ಕೆಜಿ CNGಗೆ 30.47 ಮೈಲೇಜ್ ನೀಡಲಿದೆ.
Top Cars of 2021: ಇಲ್ಲಿದೆ ಈ ವರ್ಷದ ಟಾಪ್ ಕಾರುಗಳ ಪಟ್ಟಿ: ನಿಮ್ಮ ಆಯ್ಕೆ ಯಾವುದು?
ಸೆಲೆರಿಯೋ CNG ಕಾರು ಬಿಡುಗಡೆಯಾದ ಬೆನ್ನಲ್ಲೇ ಮಾರುತಿ ಸುಜುಕಿ ವ್ಯಾಗನ್ಆರ್ ಹಾಗೂ ಎಸ್ ಪ್ರೆಸ್ಸೋ ಕಾರುಗಳನ್ನು CNG ರೂಪದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದಕ್ಕೆ ಕಾರಣ ಭಾರತದಲ್ಲಿ CNG ಕಾರುಗಳ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಟಾಟಾ ಮೋಟಾರ್ಸ್ ತನ್ನ ಮೊದಲ CNG ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಸದ್ಯದಲ್ಲೇ ಟಾಟಾ ಟಿಯಾಗೋ ಹಾಗೂ ಟಾಟಾ ಟಿಗೋರ್ CNG ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಇನ್ನು ಹ್ಯುಂಡೈ ಸ್ಯಾಂಟ್ರೋ ಈಗಾಗಲೇ CNG ಕಿಟ್ ಮೂಲಕ ಮಾರುಕಟ್ಟೆಯಲ್ಲಿ ಲಭ್ಯವಿದೆ.