
ನವದೆಹಲಿ (ಜು.25) ಮಾರುತಿ ಸುಜುಕಿಗೆ ಭಾರತದಲ್ಲಿ ಮತ್ತೆ ಭಾರಿ ಸಂಚಲನ ಸೃಷ್ಟಿಸಿದೆ. ಕೇವಲ 7.39 ಲಕ್ಷ ರೂಪಾಯಿ ಬೆಲೆಯಲ್ಲಿ ಹೊಸ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡಿದೆ. ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರುಗಳ ಪೈಕಿ ಮಾರುತಿ ಬ್ರೆಜಾ ಫೇಸ್‌ಲಿಫ್ಟ್ ಅತೀ ಕಡಿಮೆ ದರದಲ್ಲಿ ಲಭ್ಯವಿರು ಕಾರು. ವಿಶೇಷ ಅಂದರೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಮಾರುತಿ ಬ್ರೇಜಾ ಕಾರಿನ ಬೆಲೆಗಿಂತ ಹೊಸ ಕಾರಿನ ಬೆಲೆ ಕಡಿಮೆ. ಜೊತೆಗೆ 5 ಸ್ಟಾರ್ ಸೇಫ್ಟಿ ಈ ಕಾರು ನೀಡುತ್ತಿದೆ. ಇಷ್ಟೇ ಅಲ್ಲ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಫೀಚರ್ ಈ ಕಾರಿನಲ್ಲಿದೆ.
ಹೊಸ ಮಾರುತಿ ಬ್ರೆಜಾ ಫೇಸ್‌ಲಿಫ್ಟ್ ಕಾರಿನ ಮೈಲೇಜ್ ಒಂದು ಲೀಟರ್ ಪೆಟ್ರೋಲ್‌ಗೆ 21.09 ಕಿಲಮೀಟರ್. ಇದು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರಿನ ಮೈಲೇಜ್. ಇನ್ನು ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರಿನ ಮೈಲೇಜ್ 20.47 ಕಿಲೋಮೀಟರ್. ಈ ಮೂಲಕ ಅತೀ ಕಡಿಮೆ ಬೆಲೆ, ದೊಡ್ಡ ಕಾರು, ಅತ್ಯಾಕರ್ಷಕ ವಿನ್ಯಾಸ, ಸೇಫ್ಟಿ ಜೊತೆಗೆ ಉತ್ತಮ ಮೈಲೇಜ್ ಕೂಡ ಈ ಕಾರು ನೀಡುತ್ತದೆ.
ವಿಶೇಷ ಅಂದರೆ ಹೊಸ ಫೇಸ್‌ಲಿಫ್ಟ್ ಬ್ರೆಜಾ ಕಾರು ಸಿಎನ್‌ಜಿ ವೇರಿಯೆಂಟ್‌ನಲ್ಲೂ ಲಭ್ಯವಿದೆ. ಇಧರ ಮೈಲೇಜ್ ಒಂದು ಕೇಜಿಗೆ 26.9 ಕಿಲೋಮೀಟರ್. ಇನ್ನು ಸಿಎನ್‌ಜಿ ಟ್ಯಾಂಕ್ ಅಂಡರ್ ಬಾಡಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಕಾರಿನ ಬೂಟ್ ಸ್ಪೇಸ್‌ಗೆ ಯಾವುದೇ ಸಮಸ್ಯೆ ಇಲ್ಲ.
7,39,900 ರೂಪಾಯಿ ಆರಂಭಿಕ ಬೆಲೆಯಲ್ಲಿ ಹೊಸ ಬ್ರೆಜಾ ಫೇಸ್‌ಲಿಫ್ಟ್ ಕಾರು ಲಭ್ಯವಿದೆ. ಹೊಸ ಬ್ರೆಝಾ ಟರ್ಬೋ ಬೂಸ್ಟರ್‌ಜೆಟ್ ಮಾದರಿಯು 6-ಸ್ಪೀಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಹಾಗೂ ಪ್ರೋಗ್ರೆಸಿವ್ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಂದಿದೆ. ಕಾರು 997 ಸಿಸಿ ಸಾಮರ್ಥ್ಯದ ಈ ಎಂಜಿನ್ ಹೊಂದಿದೆ. 110.2 PS ಪವರ್ ಹಾಗೂ 170 Nm ಟಾರ್ಕ್ ಸಾಮರ್ಥ್ಯ ಹೊಂದಿದೆ. ಇನ್ನು 10.1 ಇಂಚು) ಸ್ಮಾರ್ಟ್‌ಪ್ಲೇ ಪ್ರೋ ಎಕ್ಸ್ (SmartPlay Pro X) ಟಚ್‌ಸ್ಕ್ರೀನ್, ಬಿಲ್ಟ್-ಇನ್ ಅಲೆಕ್ಸಾ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್ ಮಾಡಲಿದೆ.
ಮಾರುತಿ ಸುಜುಕಿ ಹೆಚ್ಚು ಕೈಗೆಟುಕುವ ದರದ ಕಾರುಗಳನ್ನು ಭಾರತದ ಮಾರುಕಟ್ಟೆ ನೀಡಿದೆ. ಈ ವೇಳೆ ಕ್ರಾಶ್ ಟೆಸ್ಟ್ ರೇಟಿಂಗ್‌ಗಿಂತ ಅತೀ ಕಡಿಮೆ ನಿರ್ವಹಣೆ ವೆಚ್ಚದಲ್ಲಿ ಕಾರು ನೀಡಿದೆ. ಇದೀಗ ಮಾರುತಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಹೊಸ ಫೇಸ್‌ಲಿಫ್ಟ್ ಕಾರು Bharat NCAP ಸುರಕ್ಷತಾ ರೇಟಿಂಗ್ ಸಂಸ್ಥೆಯಿಂದ 5 ಸ್ಟಾರ್ ಪಡೆದುಕೊಂಡಿದೆ.