ನವದೆಹಲಿ(ಜ.10): ಭಾರತದ ಅತೀ ದೊಡ್ಡ ಆಟೋ ಕಂಪನಿ ಮಾರುತಿ ಸುಜುಕಿ, ಮಾರಾಟದಲ್ಲೂ ನಂಬರ್ 1 ಸ್ಥಾನ ಅಲಂಕರಿಸಿದೆ. ಗರಿಷ್ಠ ಮಾರಾಟವಾಗುವ ಟಾಪ್ 10 ಪಟ್ಟಿಯಲ್ಲಿ ಕನಿಷ್ಠ 6 ರಿಂದ 8 ಕಾರುಗಳು ಸದಾ ಸ್ಥಾನ ಪಡೆದಿರುತ್ತದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚಗಳಿಂದ ಮಾರುತಿ ಸುಜುಕಿ ಭಾರತದ ಮನೆಮಾತಾಗಿದೆ. ಇದೀಗ ಹೊಸ ವರ್ಷದಲ್ಲಿ ಮಾರಾಟ ದಾಖಲೆ(Car Sales) ಮತ್ತಷ್ಟು ಉತ್ತಪಡಿಸಿಕೊಳ್ಳಲು ಹಾಗೂ ಮಾರುಕಟ್ಟೆಯಲ್ಲಿ ಅಗ್ರಜನಾಗಿ ಮುಂದುವರಿಯಲು ಹೊಸ ವರ್ಷ ಮೊದಲ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.
ಮಾರುತಿ ಸುಜುಕಿ ಡಿಸ್ಕೌಂಟ್ ಆಫರ್(Maruti Suzuki Disconts) ಜನವರಿ 31, 2022ರ ವರೆಗೆ ಮಾತ್ರ ಲಭ್ಯವಿದೆ. ಅಲ್ಟೋ, ವ್ಯಾಗನ್ಆರ್, ಡಿಸೈರ್, ಸ್ವಿಫ್ಟ್, ವಿಟಾರ ಬ್ರೆಜಾ, ನ್ಯೂ ಜನರೇಶನ್ ಸೆಲೆರಿಯೋ ಕಾರಿಗೂ ಡಿಸ್ಕೌಂಟ್ ಆಫರ್ ಲಭ್ಯವಿದೆ. ಆದರೆ ಸಿಎನ್‌ಜಿ ಕಾರುಗಳಿಗೆ ಮಾತ್ರ ಡಿಸ್ಕೌಂಟ್ ಆಫರ್ ಲಭ್ಯವಿಲ್ಲ.
Tata Car Offers ಟಾಟಾ ಕಾರು ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್, ಜನವರಿ ತಿಂಗಳ ಆಫರ್ ಘೋಷಣೆ!
ಮಾರುತಿ ಅಲ್ಟೋ:
ಮಾರುತಿ ಅಲ್ಟೋ(Maruti Alto) ಕಾರಿಗೆ ಒಟ್ಟು 33,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್ 15,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 15,000 ರೂಪಾಯಿ ಹಾಗೂ ಕಾರ್ಪೋರೇಟ್ ಡಿಸ್ಕೌಂಟ್ 3,000 ರೂಪಾಯಿ ನೀಡಲಾಗಿದೆ. ಮಾರುತಿ ಅಲ್ಟೋ ಕಾರಿನ ಬೆಲೆ 3.15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) 4.82 ಲಕ್ಷ ರೂಪಾಯಿ(ಎಕ್ಸ್ ಶೋರೂಂ).
Renault Car Discount ಜನವರಿ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಿದ ರೆನಾಲ್ಟ್, ಕಾರು ಖರೀದಿ ಈಗ ಸುಲಭ!
ಮಾರುತಿ ಎಸ್ ಪ್ರೆಸ್ಸೋ:
ಮಾರುತಿ ಎಸ್ ಪ್ರೆಸ್ಸೋ(Maruti S-Presso) ಕಾರಿಗೆ ಒಟ್ಟು 33,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್ 15,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 15,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 3,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಮಾರುತಿ ಎಸ್ ಪ್ರೆಸ್ಸೋ ಕಾರಿನ ಬೆಲೆ 3.78 ಲಕ್ಷ ರೂಪಾಯಿಯಿಂದ 5.43 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಮಾರುತಿ ಇಕೋ:
ಮಾರುತಿ ಇಕೋ(Maruti Eeco) ಕಾರಿಗೆ ಒಟ್ಟು 23,000 ರೂಪಾಯಿ ರಿಯಾಯಿತಿ ನೀಡಲಾಗಿದೆ. ಕ್ಯಾಶ್ ಡಿಸ್ಕೌಂಟ್ 10,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 10,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 3,000 ರೂಪಾಯಿ ನೀಡಲಾಗಿದೆ. ಅತ್ಯಂತ ಕಡಿಮೆ ಬೆಲೆ MPV ಕಾರಾಗಿರುವ ಮಾರಿತಿ ಇಕೋ ಬೆಲೆ 4.38 ಲಕ್ಷ ರೂಪಾಯಿಯಿಂದ 7.37 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
Mahindra Car Offers ಆಯ್ದ ಕಾರಿನ ಮೇಲೆ ಗರಿಷ್ಠ 82,000 ರೂ ಡಿಸ್ಕೌಂಟ್ ಘೋಷಿಸಿದ ಮಹೀಂದ್ರ!
ಮಾರುತಿ ವ್ಯಾಗನ್ಆರ್
ಮಾರುತಿ ವ್ಯಾಗನ್ ಆರ್(Maruti Wagon R) ಕಾರು ಹೊಸ ರೂಪದಲ್ಲಿ ಬಿಡುಗಡೆಯಾದ ಬಳಿಕ ಹೆಚ್ಚಿನ ಮಾರಾಟ ಕಂಡಿದೆ. ಇದೀಗ ಹೊಸ ವರ್ಷದಲ್ಲಿ ವ್ಯಾಗನ್ಆರ್ ಕಾರಿಗೆ ಒಟ್ಟು 23,000 ರೂಪಾಯಿ ಆಫರ್ ನೀಡಲಾಗಿದೆ. 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಹಾಗೂ 3,000 ರೂಪಾಯಿ ಕಾರ್ಪೋರೇಟ್ ಆಫರ್ ಒಳಗೊಂಡಿದೆ. ವ್ಯಾಗನ್ಆರ್ ಕಾರಿನ ಬೆಲೆ 4.93 ಲಕ್ಷ ರೂಪಾಯಿಯಿಂದ 6.45 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಮಾರುತಿ ಸೆಲೆರಿಯೋ:
ನ್ಯೂ ಜನರೇಶನ್ ಮಾರುತಿ ಸೆಲೆರಿಯೋ(Maruti Celerio) ಕಾರು ಭಾರಿ ಸಂಚಲನ ಸೃಷ್ಟಿಸಿದ ಹೊಸ ವಿನ್ಯಾಸ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಕಾರು ಬಿಡುಗಡೆಯಾಗಿದೆ. ನೂತ ಕಾರಿಗೆ ಒಟ್ಟು 13,000 ರೂಪಾಯಿ ಘೋಷಿಸಲಾಗಿದೆ. 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಹಾಗೂ 3,000 ರೂಪಾಯಿ ಕಾರ್ಪೋರೇಟ್ ಆಫರ್ ನೀಡಲಾಗಿದೆ. ಮಾರುತಿ ಸೆಲೆರಿಯೋ ಕಾರಿನ ಬೆಲೆ 4.99 ಲಕ್ಷ ರೂಪಾಯಿಂದ 6.44 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಮಾರುತಿ ಸ್ವಿಫ್ಟ್ ಹಾಗೂ ಡಿಸೈರ್:
ದೇಶದಲ್ಲಿ ಗರಿಷ್ಠ ಗ್ರಾಹಕರನ್ನು ಮೋಡಿ ಮಾಡಿರು ಮಾರುತಿ ಸ್ವಿಫ್ಟ್ ಕಾರು ಡಿಸೈರ್(Maruti Swift/Dzire) ಕಾರಿನ ಮೇಲೂ ಆಫರ್ ನೀಡಲಾಗಿದೆ. ಈ ಕಾರಗಳಿಗೆ ಒಟ್ಟು 23,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಕ್ಯಾಶ್ ಡಿಸ್ಕೌಂಟ್ 10,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 10,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 3,000 ರೂಪಾಯಿ ಒಳಗೊಂಡಿದೆ. ಮಾರುತಿ ಸ್ಪಿಫ್ಟ್ ಕಾರಿನ ಬೆಲೆ 5.85 ಲಕ್ಷ ರೂಪಾಯಿಂದ 8.53 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಡಿಸೈರ್ ಕಾರಿನ ಬೆಲೆ 5.99 ಲಕ್ಷ ರೂಪಾಯಿಯಿಂದ 9.08 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಮಾರುತಿ ವಿಟಾರ ಬ್ರೆಜಾ
SUV ಕಾರುಗಳ ಪೈಕಿ ಮೊದಲ ಸ್ಥಾನದಲ್ಲಿರುವ ಮಾರುತಿ ವಿಟಾರ ಬ್ರೆಜಾ(Maruti Vitara Brezza) ಕಾರಿಗೂ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಒಟ್ಟು 18,000 ರೂಪಾಯಿ ಆಫರ್ ನೀಡಲಾಗಿದೆ. ಕ್ಯಾಶ್ ಡಿಸ್ಕೌಂಟ್ 55,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 10,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 3,000 ರೂಪಾಯಿ ಒಳಗೊಂಡಿದೆ. ಬ್ರೆಜಾ ಕಾರಿನ ಬೆಲೆ 7.62 ಲಕ್ಷ ರೂಪಾಯಿಂದ 11.11 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).