ಲಾಸ್ ವೆಗಾಸ್(ಜ.09): ಆಟೋಮೊಬೈಲ್ ಕ್ಷೇತ್ರದಲ್ಲಿ(Automobile Sector) ಪ್ರತಿ ದಿನ ಹೊಸ ಆವಿಷ್ಕಾರ, ತಂತ್ರಜ್ಞಾನ ಅಭಿವೃದ್ಧಿಗಳಲು ನಡೆಯುತ್ತಲೇ ಇದೆ. ಇದರ ಭಾಗವಾಗಿ ಇದೀಗ ಅತ್ಯಾಧುನಿಕ ತಂತ್ರಜ್ಞಾನದ ವಿಶನ್ ಕಾರನ್ನು ಮರ್ಸಿಡಿಸ್ ಬೆಂಜ್ ಅನಾವರಣ ಮಾಡಿದೆ. ವಿಶ್ವವೇ ಇದೀಗ ಎಲೆಕ್ಟ್ರಿಕ್ ಕಾರಿನತ್ತ ವಾಲುತ್ತಿದೆ. ಇದರ ನಡುವೆ ಮರ್ಸಿಡಿಸ್ ಬೆಂಜ್(Mercedes-Benz) ಸೌರಶಕ್ತಿ(Solar) ಚಾಲಿತ ವಿಶನ್ EQXX ಕಾರು ಅನಾವರಣ ಮಾಡಿದೆ. ಲಾಸ್ ವೆಗಾಸ್‌ನಲ್ಲಿ ನಡೆಯುತ್ತಿರುವ CES ಎಕ್ಸ್‌ಪೋದಲ್ಲಿ ನೂತನ ಕಾರು ಅನಾವರಣ ಮಾಡಲಾಗಿದೆ.
ಇದು ಸೋಲಾರ್ ಚಾಲಿತ ಕಾರು. ಸೋಲಾರ್ ಶಕ್ತಿಯಿಂದ ಚಾರ್ಜ್ ಮಾಡಬಲ್ಲ ಕಾರಾಗಿದ್ದು, ಸಂಪೂರ್ಣ ಚಾರ್ಜ್‌ಗೆ ಬರೋಬ್ಬರಿ 1,000 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಈ ಮೂಲಕ ಇದೀಗ ಮರ್ಸಿಡೀಸ್ ಬೆಂಜ್(Mercedes-Benz Vision EQXX) ವಿಶ್ವವನ್ನೇ ತನ್ನತ್ತ ತಿರುಗುವಂತೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಈ ಕಾರು(Car) ಇದೀಗ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಕಾರು ವಿದ್ಯುತ್ ಮೂಲಕ ಅಥವಾ ಸೋಲಾ ಚಾರ್ಚಿಂಗ್ ಮೂಲಕ ಚಾರ್ಜ್ ಮಾಡಬೇಕು. ಕಾರಿನ ಸನ್‌ರೂಫ್ ಮೇಲೆ ಸೋಲಾರ್ ಸೆಲ್ಸ್ ಅಳವಡಿಸಲಾಗಿದೆ.
undefined
Narendra Modi New Car: ಶಸ್ತ್ರಸಜ್ಜಿತ ಮರ್ಸಿಡೀಸ್ ಮೇಬ್ಯಾಕ್ ಎಸ್ 650 ಗಾರ್ಡ್ಗೆ ಬದಲಾದ ಪ್ರಧಾನಿ!
ಮರ್ಸಿಡಿಸ್ ಬೆಂಜ್ ವಿಶನ್ EQXX ಕಾರು 1750 ಕೆಜಿ ತೂಕ ಹೊಂದಿದೆ. ಈ ಕಾರಿನ ಸನ್‌ರೂಪ್ ಮೇಲೆ 117 ಸೋಲಾರ್ ಸೆಲ್ಸ್ ಅಳವಡಿಸಲಾಗಿದೆ. ಈ ಸೋಲಾರ್ ಸೆಲ್ಸ್ ಮೂಲಕ ಕಾರಿನ ಬ್ಯಾಟರಿ ಚಾರ್ಜ್ ಆಗಲಿದೆ. ವಿಶೇಷ ಅಂದರೆ ಲಾಂಗ್ ಡ್ರೈವ್ ವೇಳೆ ಕಾರಿನ ರೂಫ್ ಸೋಲಾರ್ ಸೆಲ್ಸ್(Solar Cels) ಮೂಲಕ ಕಾರು 25 ಕಿ.ಮೀ ಮೈಲೇಜ್(Mileage) ಹೆಚ್ಚುವರಿಯಾಗಿ ಪಡೆಯಲಿದೆ. ಇನ್ನು ಸೋಲಾರ್ ಸೆಲ್ಸ್‌ನಿಂದ ಬಿಸಿಲಿನಲ್ಲಿ ಕಾರು ನಿಲ್ಲಿಸಿ ಚಾರ್ಜ್ ಆನ್ ಮಾಡಿದರೆ ಸಾಕು, ಆಟೋಮ್ಯಾಟಿಕ್ ಆಗಿ ಕಾರು ಚಾರ್ಜ್ ಆಗಲಿದೆ.
ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿದ ಕಾರು. ಮೊದಲ ನೋಟಕ್ಕೆ ಮನೆಸೂರೆಗೊಳ್ಳುವಂತೆ ಲುಕ್, ಹೊಸ ಶೈಲಿಯಲ್ಲಿ ಕಾರನ್ನು ವಿನ್ಯಾಸ ಮಾಡಲಾಗಿದೆ. ಕಾರಿನ ಇಂಟಿರಿಯರ್ ಕೂಡ ಅಷ್ಟೇ ಆಕರ್ಷಕವಾಗಿದೆ. ವಿಶೇಷ ಅಂದರೆ ಕಾರಿನಷ್ಟೆ ಅಗಲವಾದ 47.5 ಇಂಚಿನ 8K OLED ಸ್ಕ್ರೀನ್ ಇದೆ. 3ಡಿ ಮ್ಯಾಪಿಂಗ್ ಸಿಸ್ಟಮ್, NAVIS ಆಟೋಮೇಟಿವ್ ಸಿಸ್ಟಮ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.
ಸ್ವಾತಂತ್ರ್ಯ ದಿನಕ್ಕೂ ಮೊದಲು ರಾಷ್ಟ್ರಪತಿ ಕೋವಿಂದ್‌ಗೆ VR9 ಭದ್ರತೆಯ ಹೊಸ ಮರ್ಸಿಡಿಸ್ ಕಾರು!
ಮರ್ಸಿಡಿಸ್ ಬೆಂಜ್ ವಿಶನ್ EQXX ಕಾರಿನ ಬೆಲೆ:
ಲಾಸ್ ವೆಗಾಸ್ CES ಎಕ್ಸ್‌ಪೋದಲ್ಲಿ ಈ ಕಾನ್ಸೆಪ್ಟ್ ಕಾರನ್ನು ಅನಾವರಣ ಮಾಡಲಾಗಿದೆ. ಇದು ಕಾನ್ಸೆಪ್ಟ್ ಕಾರು. ಸದ್ಯ ಈ ಕಾರಿನ ಬೆಲೆ ಕುರಿತ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಹೆಚ್ಚಿನ ಬದಲಾವಣೆಗಳಿಲ್ಲದೆ ಮರ್ಸಿಡಿಸ್ ಬೆಂಜ್ ವಿಶನ್ EQXX ಕಾರು ಬಿಡುಗಡೆಯಾಗಲಿದೆ ಅನ್ನೋ ಮಾಹಿತಿಯನ್ನು ಬೆಂಜ್ ನೀಡಿದೆ
ಮರ್ಸಿಡಿಸ್ ಬೆಂಜ್ ವಿಶನ್ EQXX ಬಿಡುಗಡೆ:
ನೂತನ ಕಾರು ಹೊಸ ವರ್ಷದ ಆರಂಭದಲ್ಲೇ ಅನಾವರಣಗೊಂಡಿದೆ. ಈ ಮೂಲಕ 2022ನೇ ವರ್ಷವನ್ನು ಮರ್ಸಿಡೀಸ್ ಬೆಂಜ್ ಅದ್ಧೂರಿಯಾಗಿ ಆರಂಭಿಸಿದೆ. ನೂತನ ಕಾರು 2023ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಐಷಾರಾಮಿ ಕಾರುಗಳಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡೀಸ್ ಬೆಂಜ್ ಕಾರು ಭಾರತದಲ್ಲೂ ಅತ್ಯುತ್ತಮ ಮಾರಾಟ ದಾಖಲೆ ಹೊಂದಿದೆ. ಗರಿಷ್ಠ ಸುರಕ್ಷತೆ, ಐಷಾರಾಮಿ ಪ್ರಯಾಣಕ್ಕೆ ಬಹುತೇಕರಿಗೆ ಜರ್ಮನ್ ಮೂಲದ ಮರ್ಸಿಡೀಸ್ ಬೆಂಜ್ ಮೊದಲ ಆಯ್ಕೆಯಾಗಿದೆ. 2021ರಲ್ಲಿ ಬೆಂಜ್ ಭಾರತದಲ್ಲಿ ಹೊಸ ಅಧ್ಯಾಯ ಬರೆದಿದೆ. ಇದೀಗ 2022ರಲ್ಲೂ ಅದೇ ಮಾರಾಟ ದಾಖಲೆ ಮುಂದುವರಿಸಲು ಬೆಂಜ್ ಮುಂದಾಗಿದೆ.