ಹೊಸ ವರ್ಷದಲ್ಲಿ ವಾಹನ ಖರೀದಿಸಲು ಸಕಾಲ, 5 ರಿಂದ 10 ಲಕ್ಷ ರೂಗೆ ಲಭ್ಯವಿಗೆ ಉತ್ತಮ ಕಾರು!

By Suvarna News  |  First Published Jan 10, 2023, 4:32 PM IST

ಹೊಸ ವರ್ಷದದಲ್ಲಿ ವಾಹನಗಳ ಬೆಲೆ ಏರಿಕೆಯಾಗಿದೆ. ಆದರೆ ಹಲವು ಕಾರುಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಹೀಗೆ 2023ರಲ್ಲಿ 5 ರಿಂದ 10 ಲಕ್ಷ ರೂಪಾಯಿ ಒಳಗೆ ಲಭ್ಯವಿರುವ ಅತ್ಯುತ್ತಮ ಕಾರುಗಳ ವಿವರ ಇಲ್ಲಿವೆ.
 


ಬೆಂಗಳೂರು(ಜ.10): ಕಾರು ಖರೀದಿಸಬೇಕು ಅನ್ನೋದು ಹಲವರ ಬಯಕೆ. ಇದಕ್ಕಾಗಿ ಹಲವು ವರ್ಷಗಳ ಕಾಲ ಶ್ರಮವಹಿಸಿ ಕಾರು ಖರೀದಿಸಲು ಮುಂದಾಗುತ್ತಾರೆ. ಆದರೆ ಕಾರು ಖರೀದಿಗೆ ಮನಸ್ಸು ಮಾಡಿದಾಗ ಯಾವ ಕಾರು, ನಮ್ಮ ಬಜೆಟ್ ಎಲ್ಲವೂ ಮುಖ್ಯವಾಗುತ್ತದೆ. 2023ರಲ್ಲಿ ವಾಹನ ಬೆಲೆ ಏರಿಕೆಯಾಗಿದೆ. ಆದರೂ ಹೊಸ ವರ್ಷದಲ್ಲಿ 5 ಲಕ್ಷ ರೂಪಾಯಿಂದ 10 ಲಕ್ಷ ರೂಪಾಯಿ ಒಳಗೆ ಅತ್ಯುತ್ತಮ ಕಾರು ಲಭ್ಯವಿದೆ. 

ಮಾರುತಿ ಅಲ್ಟೋ ಕೆ10 ಕಾರು ಕೈಗೆಟುಕುವ ದರದಲ್ಲಿ ಲಭ್ಯವಿರುವ ಉತ್ತಮ ಕಾರುಗಳಲ್ಲಿ ಮೊದಲ ಸ್ಥಾನದಲ್ಲಿದೆ. ನಿರ್ವಹಣೆ, ಮೈಲೇಜ್ ಹಾಗೂ ಉತ್ತಮ ಪ್ರಯಾಣವೂ ಸಿಗಲಿದೆ. ಅಲ್ಟೋ ಕೆ10 ಕಾರಿನ ಆರಂಭಿಕ ಬೆಲೆ 4.42 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟಾಪ್ ಮಾಡೆಲ್ ಬೆಲೆ 6.56 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ಅಲ್ಟೋ ಕೆ10 ಕಾರು LXi, VXi ಹಾಗೂ VXi+ ವೇರಿಯೆಂಟ್‌ನಲ್ಲಿ ಕಾರು ಲಭ್ಯವಿದೆ. 1.0 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. 66 bhp ಪವರ್ ಹಾಗೂ 89 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಮಾನ್ಯುಯೆಲ್ ಹಾಗಾ ಆಟೋಟ್ರಾನ್ಸ್‌ಮಿಶನ್ ಲಭ್ಯವಿದೆ.

Tap to resize

Latest Videos

undefined

ಹೊಚ್ಚ ಹೊಸ ಮಹೀಂದ್ರ ಥಾರ್ 2WD ಬಿಡುಗಡೆ, ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯ!

ಸಣ್ಣ ಹಾಗೂ ಕೈಗೆಟುಕುವ ದರದ ಕಾರುಗಳ ಪೈಕಿ ರೆನಾಲ್ಟ್ ಕ್ವಿಡ್ ಕಾರು ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಮಾರುತಿ ಸುಜುಕಿ ಅಲ್ಟೋಗೆ ಪ್ರತಿಸ್ಪರ್ಧಿಯಾಗಿರುವ ಆಲ್ಟೋ ಕ್ವಿಡ್ 10 ವೇರಿಯೆಂಟ್‌ನಲ್ಲಿ ಲಭ್ಯವಿದೆ. ಕ್ವಿಡ್ ಕಾರಿನ ಆರಂಭಿಕ ಬೆಲೆ 5.24 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಟಾಪ್ ಮಾಡೆಲ್ ಬೆಲೆ 6.93 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).ಕ್ವಿಡ್ ಕಾರು ಎರಡು ಎಂಜಿನ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. 1.0 ಲೀಟರ್ ಹಾಗೂ 0.8 ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ ಲಭ್ಯವಿದೆ. ಇದರಲ್ಲಿ 0.8 ಲೀಟರ್ ಕಾರು  53 bhp ಟಾರ್ಕ್ ಹಾಗೂ 72 Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 1.0 ಲೀಟರ್ ಪೆಟ್ರೋಲ್ ಎಂಜಿನ್ ಕಾರು 67 bhp ಪವರ್ ಹಾಗೂ 91 Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಮಾರುತಿ ಸುಜುಕಿ ಸೆಲೆರಿಯೋ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಮಾರುತಿ ಕಾರುಗಳ ಪೈಕಿ ಸೆಲೆರಿಯೋ ಕಾರು ಅತೀ ಹೆಚ್ಚಿನ ಬೇಡಿಕೆ ಪಡೆದಿದೆ. ಸೆಲೆರಿಯೋ LXi, VXi ಹಾಗೂ ZXi ವೇರಿಯೆಂಟ್ ಲಭ್ಯವಿದೆ. ಇದರಲ್ಲಿ ಸಿಎನ್‌ಜಿ ವೇರಿಯೆಂಟ್ ಕೂಡ ಲಭ್ಯವಿದೆ. ಸಿಎನ್‌ಜಿ ಕಾರಿನ ಬೆಲೆ 5.82 ಲಕ್ಷ ರೂಪಾಯಿ(ಎಕ್ಸ್‌ಶೋರೂಂ) ನಿಂದ ಆರಂಭಗೊಳ್ಳುತ್ತಿದೆ. ಟಾಪ್ ಮಾಡೆಲ್ ಬೆಲೆ 7.81 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ಕೈಗೆಟುಕುವ ದರಲ್ಲಿ ಬಿಡುಗಡೆಯಾಗುತ್ತಿದೆ ರೆನಾಲ್ಟ್ ಕಿಗರ್ ಎಲೆಕ್ಟ್ರಿಕ್ ಕಾರು, ಟಾಟಾಗೆ ಪೈಪೋಟಿ!

ಮಾರುತಿ, ರೆನಾಲ್ಟ್, ಹ್ಯುಂಡೈ ಸೇರಿದಂತೆ ಸಣ್ಣ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಟಾಟಾ ಮೋಟಾರ್ಸ್ ತೀವ್ರ ಪೈಪೋಟಿ ನೀಡುತ್ತಿದೆ. ಟಾಟಾ ಟಿಯಾಗೋ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ವಿಶೇಷ ಅಂದರೆ ಟಾಟಾ ಟಿಯಾಗೋ ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವೇರಿಯೆಂಟ್ ಕೂಡ ಲಭ್ಯವಿದೆ. ಟಾಟಾ ಟಿಯಾಗೋ ಸಿಎನ್‌ಜಿ ವೇರಿಯೆಂಟ್ ಕಾರಿನ ಆರಂಭಿಕ ಬೆಲೆ 6.12 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇನ್ನು 
ಟಾಪ್ ಮಾಡೆಲ್ ಬೆಲೆ 8.91 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಹೊಂದಿದೆ. ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬೆಲೆ 8.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.

ಇದರ ಜೊತೆಗೆ ಹ್ಯುಂಡೈ ನಿಯೋಸ್, ಹ್ಯುಂಡೈ ಐ10, ಮಾರುತಿ ಸುಜುಕಿ ಸ್ವಿಫ್ಟ್ ಸೇರಿದಂತೆ ಹಲವು ಕಾರುಗಳ ಕೈಗೆಟುಕುವ ದರದಲ್ಲಿ ಲಭ್ಯವಿದೆ

click me!