ಕೈಗೆಟುಕುವ ದರಲ್ಲಿ ಬಿಡುಗಡೆಯಾಗುತ್ತಿದೆ ರೆನಾಲ್ಟ್ ಕಿಗರ್ ಎಲೆಕ್ಟ್ರಿಕ್ ಕಾರು, ಟಾಟಾಗೆ ಪೈಪೋಟಿ!

By Suvarna NewsFirst Published Jan 9, 2023, 5:25 PM IST
Highlights

ರೆನಾಲ್ಟ್ ಕಿಗರ್ SUV ಕಾರು ಈಗಾಗಲೇ ಸಂಚಲನ ಸೃಷ್ಟಿಸಿದೆ. 5.99 ಲಕ್ಷ ರೂಪಾಯಿ ಬೆಲೆಯ SUV ಕಾರು ಇದೀಗ ಟಾಟಾಗೆ ಪೈಪೋಟಿ ನೀಡಲು ಸಜ್ಜಾಗಿದೆ. ಕಿಗರ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. ಕಡಿಮೆ ಬೆಲೆಯ SUV ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ನವದೆಹಲಿ(ಜ.09): ಭಾರತದಲ್ಲಿ ಎಲೆಕ್ಟ್ರಿಕ್ ಕಾರಿನ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಉತ್ತಮ ಇವಿ ನೀಡಿದ ಹೆಗ್ಗಳಿಕೆಗೆ ಟಾಟಾ ಪಾತ್ರವಾಗಿದೆ. ಇದೀಗ ರೆನಾಲ್ಟ್ ಭಾರತದಲ್ಲಿ ಅತೀ ಕಡಿಮೆ ಬೆಲೆಯ SUV ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ರೆನಾಲ್ಟ್ ಕಿಗರ್ SUV ಕಾರು ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗಲಿದೆ. ಸದ್ಯ ರೆನಾಲ್ಟ್ ಕಿಗರ್  SUV ಕಾರಿನ ಬೆಲೆ 5.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  SUV  ಕಾರುಗಳಿ ಪೈಕಿ ಕಿಗರ್ ಕೈಗೆಟುಕುವ ದರದ ಕಾರಾಗಿದೆ. ಇದೀಗ ಕಿಗರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿರುವ ರೆನಾಲ್ಟ್ ಹೊಸ ಸಂಚಲನಕ್ಕೆ ಸಜ್ಜಾಗಿದೆ.

ರೆನಾಲ್ಟ್ ಕಿಗರ್ ಎಲೆಕ್ಟ್ರಿಕ್ ಕಾರಿನ ಬೆಲೆ 10 ರಿಂದ 15 ಲಕ್ಷ ರೂಪಾಯಿ ಒಳಗಿರಲಿದೆ ಎಂದಿದೆ. ಈಗಾಗಲೇ ಕಿಗರ್ ಎಲೆಕ್ಟ್ರಿಕ್ ಕಾರಿನ ಟೆಸ್ಟಿಂಗ್ ನಡೆಯುತ್ತಿದೆ. ದೆಹಲಿಯಲ್ಲಿ ಈ ವಾರ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಕಿಗರ್ ಎಲೆಕ್ಟ್ರಿಕ್ ಕಾರು ಅನಾವರಣಗೊಳ್ಳಲಿದೆ. ಕಿಗರ್ ಎಲೆಕ್ಟ್ರಿಕ್ ಕಾರಿನ ಮೋಟಾರ್ ಹಾಗೂ ಬ್ಯಾಟರಿ ಪ್ಯಾಕ್ ಹೆಚ್ಚು ಕಡಿಮೆ ಚೀನಾದಲ್ಲಿ ಬಿಡುಗಡೆಯಾಗಿರುವ ರೆನಾಲ್ಟ್ ಕ್ವಿಡ್ ಕಾರಿನ ಬ್ಯಾಟರಿ ಪ್ಯಾಕ್ ಬಳಸುವ ಸಾಧ್ಯತೆ ಇದೆ.

NCAP Crash Test ಕೈಗೆಟುಕುವ ದರದ ನಿಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!

ಹೀಗಾದಲ್ಲಿ ರೆನಾಲ್ಟ್ ಕಿಗರ್ 26.8 kWh ಬ್ಯಾಟರಿ ಪ್ಯಾಕ್ ಹೊಂದಿರಲಿದೆ. 44 hp ಪವರ್ ಹಾಗೂ125 Nm ಟಾರ್ಕ್  ಉತ್ಪಾದಿಸಲಿದೆ. ನೂತನ ಕಿಗರ್ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 300 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಕಿಗರ್ ಅತ್ಯಾಧುನಿಕ ಮೋಟರ್ ಹಾಗೂ ಹೆಚ್ಚುವರಿ ಬ್ಯಾಟರಿ ಪ್ಯಾಕ್ ಬಳಸಿ ಮೈಲೇಜ್ ರೆಂಜ್ 350 ಕಿ.ಮೀ ಹೆಚ್ಚಿಸುವ ಸಾಧ್ಯತೆ ಇದೆ.

ಸದ್ಯ ಭಾರತದಲ್ಲಿ 10 ಲಕ್ಷ ರೂಪಾಯಿ ಒಳಗೆ ಎಲೆಕ್ಟ್ರಿಕ್ ಕಾರು ನೀಡಿದ ಹೆಗ್ಗಳಿಕೆಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ. ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ 8.49 ಲಕ್ಷ ರೂಪಾಯಿ(ಎಕ್ಸ್ ಶೋರೂಂ). ಇನ್ನು ಟಾಟಾ ನೆಕ್ಸಾನ್ ಇವಿ, ಟಾಟಾ ನೆಕ್ಸಾನ್ ಮ್ಯಾಕ್ಸ್ , ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರುಗಳ ಮೂಲಕ ಟಾಟಾ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಅಧಿಪತ್ಯ ಸಾಧಿಸಿದೆ. ಟಾಟಾಗೆ ಎಂಜಿ ಮೋಟಾರ್, ಹ್ಯುಂಡೈ ಸೇರಿದಂತೆ ಹಲವು ಆಟೋ ಬ್ಯಾಂಡ್‌ಗಳು ಪೈಪೋಟಿ ನೀಡಿದೆ. ಆದರೆ ಟಾಟಾ ಮೊದಲ ಸ್ಥಾನದಲ್ಲಿದೆ. ಇದೀಗ ರೆನಾಲ್ಟ್ ಕಿಗರ್ ಮೂಲಕ ಗೇಮ್ ಚೇಂಜರ್ ಆಗಲು ಪ್ರಯತ್ನಿಸುತ್ತಿದೆ.

ರೆನಾಲ್ಟ್ ಕಿಗರ್ ಬಿಡುಗಡೆ; ದೇಶದ ಅತ್ಯಂತ ಕಡಿಮೆ ಬೆಲೆ ಸಬ್‍‌ಕಾಂಪಾಕ್ಟ್ SUV ಕಾರು!

ಭಾರತದಲ್ಲಿ ರೆನಾಲ್ಟ್ ಬ್ರ್ಯಾಂಡ್‌ಗೆ 2022ರ ಸಿಹಿ ಕಹಿ ತಂದ ವರ್ಷ. ಹೀಗಾಗಿ 2023ರಲ್ಲಿ ಕಿಗರ್ ಎಲೆಕ್ಟ್ರಿಕ್ ಕಾರಿನ ಮೂಲಕ ಮತ್ತೆ ಮಾರುಕಟ್ಟೆಯಲ್ಲಿ ಬಹುಪಾಲು ಪಡೆಯಲು ಮುಂದಾಗಿದೆ. 2022ರಲ್ಲಿ ರೆನಾಲ್ಟ್‌ಗೆ ಹೊಸ ಮೈಲೇಜ್ ನೀಡಿದ ಡಸ್ಟರ್ ಕಾರು ಭಾರತದಲ್ಲಿ ಸ್ಥಗಿತಗೊಂಡಿದೆ. ಇನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿದ ರೆನಾಲ್ಟಿ ಕ್ವಿಡ್ ಎಲೆಕ್ಟ್ರಿಕ್ ಕಾರು ಇನ್ನೂ ಬಿಡುಗಡೆಯಾಗಿಲ್ಲ. ಚೀನಾದಲ್ಲಿ ಮಾತ್ರ ಈ ಕಾರು ಲಭ್ಯವಿದೆ. 2022ರಲ್ಲಿ ರೆನಾಲ್ಟ್ ಕಾರುಗಳ ಮಾರಾಟ ಶೇಕಡಾ 9ರಷ್ಟು ಕುಸಿತ ಕಂಡಿದೆ. 

click me!