ನವದೆಹಲಿ(ಮಾ.22): ಹೊಚ್ಚ ಹೊಸ ಮಾರುತಿ ಬಲೆನೋ ಕಾರು ಈಗಾಲೇ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಕಳೆದ ತಿಂಗಳು ಬಿಡುಗಡೆಯಾದ ನ್ಯೂ ಏಜ್ ಬೆಲೆನೋ ಕಾರು ಇದೀಗ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ ಒಂದು ತಿಂಗಳಲ್ಲಿ 50,000 ಬುಕಿಂಗ್ ಕಂಡಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಕಾರು ಬುಕಿಂಗ್ ಸಾಧನೆ ಮಾಡಿದೆ.
ಟಾಟಾ ಅಲ್ಟ್ರೋಜ್, ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಮಾರುತಿ ಬಲೆನೋ, 2022ರಲ್ಲಿ ಹೊಸ ರೂಪ,ಹೊಸ ವಿನ್ಯಾಸ, ಮತ್ತಷ್ಟು ದಕ್ಷ ಎಂಜಿನ್‌ನೊಂದಿಗೆ ಬಿಡುಗಡೆಯಾಗಿತ್ತು. ಬಿಡುಗಡೆ ಮೊದಲೇ ಬುಕಿಂಗ್ ಆರಂಭಿಸಿತ್ತು. ಈ ವೇಳೆ 25,000 ಕಾರುಗಳು ಬುಕ್ ಆಗಿತ್ತು.
ನೂತನ ಬಲೆನೋ ಕಾರಿನ ಬೆಲೆ 6.35 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಿಕ ಬೆಲೆ ಹೊಂದಿದೆ. ಗರಿಷ್ಠ ಬೆಲೆ 9.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಮಾನ್ಯುಯೆಲ್ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 22.3 ಮೈಲೇಜ್ ನೀಡಲಿದೆ. ಇನ್ನು ಆಟೋಮ್ಯಾಟಿಕ್ ಕಾರು 22.9 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು ಸಿವಿಟಿ ಕಾರು 19 ಕಿಮೀ ಮೈಲೇಜ್ ನೀಡಲಿದೆ.
2022 Maruti Baleno ಚಿತ್ರಗಳು ಬಹಿರಂಗ: ಹೆಚ್ಚು ಕ್ಯಾಬಿನ್ ಸ್ಪೇಸ್ ಲಭ್ಯ!
ನೂತನ ಬಲೆನೋ ಕಾರು 1.3 ಲೀಟರ್ ಡ್ಯುಯೆಲ್ ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. ಸ್ಮಾರ್ಟ್ ಹೈಬ್ರಿಡ್ ಸಿಸ್ಟಮ್ ಹೊಂದಿದೆ. 90 Ps ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ 5 ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆ ಹೊಂದಿದೆ.
ಮಾರುತಿ ಜಿಮ್ನಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಪ್ಲಾನ್!
ಭಾರತ ಖ್ಯಾತ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ, ತನ್ನ ಜಿಮ್ನಿ ಎಸ್‌ಯುವಿಯನ್ನು ಜನರ ಅಭಿಪ್ರಾಯ ಆಧರಿಸಿ ಭಾರತದ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ. ಈ ಮೂಲಕ ದೇಶದಲ್ಲಿ ತನ್ನ ಎಸ್‌ಯುವಿ ಕ್ಷೇತ್ರವನ್ನು ಬಲಪಡಿಸಿಕೊಳ್ಳಲು ಯೋಜನೆ ರೂಪಿಸಿದೆ. ಕಳೆದ 50 ವರ್ಷಗಳಿಂದಲೂ ಮಾರುತಿ ಜಿಮ್ನಿ ಜಾಗತಿಕ ಮಾರುಕಟ್ಟೆಯಲ್ಲಿದೆ. ಗುರುಗ್ರಾಮದಲ್ಲಿರುವ ತನ್ನ ಕಾರ್ಖಾನೆಯಲ್ಲಿ ಈ ಕಾರನ್ನು ತಯಾರಿಸಿ ಮಧ್ಯ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. ಇದು ಎಸ್‌ಯುವಿಗಳಲ್ಲೇ ಚಿಕ್ಕದಾಗಿದ್ದರೂ ತನ್ನ ಆಫ್‌ರೋಡ್ ಕ್ಷಮತೆಯಿಂದ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. 2020ರ ಆಟೋ ಎಕ್ಸೊ$್ಪೕದಲ್ಲಿ ಪ್ರದರ್ಶನಗೊಂಡ ನಂತರ ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಗಾಗಿ ಭಾರತದಲ್ಲೂ ಈ ಕಾರನ್ನು ಬಿಡುಗಡೆ ಮಾಡುವ ಯೋಚನೆ ಮಾಡಲಾಗಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.
Upcoming Car ಗ್ರಾಹಕರಿಗೆ ಗುಡ್ ನ್ಯೂಸ್, 11 ಸಾವಿರಕ್ಕೆ ಬುಕ್ ಮಾಡಿ ಹೊಸ ಮಾರುತಿ ಬಲೆನೋ ಕಾರು!
ಮಾರುತಿ ಕಾರುಗಳ ದರ ಏರಿಕೆ
ದೇಶದ ಮುಂಚೂಣಿ ಕಾರು ತಯಾರಕ ಕಂಪನಿ ಮಾರುತಿ ಸುಝಕಿ ತನ್ನ ಕಾರುಗಳ ಬೆಲೆಯನ್ನು ಮುಂದಿನ ಜನವರಿಯಿಂದ ಹೆಚ್ಚಳ ಮಾಡಲು ತೀರ್ಮಾನ ಮಾಡಿದೆ. ಕಾರು ತಯಾರಿಕೆಗೆ ಬಳಸುವ ಸ್ಟೀಲ್, ಅಲ್ಯುಮಿನಿಯಂ, ಪ್ಲಾಸ್ಟಿಕ್ ವಸ್ತುಗಳ ಬೆಲೆ ಅಧಿಕವಾಗಿರುವುದರಿಂದ ಕಂಪನಿಗೆ ಹೊರೆಯಾಗುತ್ತಿದೆ. ಹಾಗಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಹೆಚ್ಚಳ ಮಾಡೆಲ್ ಇಂದ ಮಾಡೆಲ್‌ಗೆ ವ್ಯತ್ಯಾಸವಾಗಿರುತ್ತದೆ ಎಂದು ಕಂಪನಿ ಹೇಳಿದೆ. ಮಾರುತಿ ಸುಜುಕಿ ಕಳೆದ ವರ್ಷದ ಜನವರಿಯಲ್ಲಿ ಶೇ.1.4ರಷ್ಟು, ಏಪ್ರಿಲ್‌ನಲ್ಲಿ ಶೇ.1.6ರಷ್ಟುಮತ್ತು ಸೆಪ್ಟೆಂಬರ್‌ನಲ್ಲಿ ಶೇ.1.9ರಷ್ಟುಬೆಲೆ ಏರಿಕೆ ಮಾಡಿತ್ತು. ಹಾಗಾಗಿ ಈ ವರ್ಷದಲ್ಲಿ ಶೇ.4.9ರಷ್ಟುಬೆಲೆ ಏರಿಕೆಯಾಗಿತ್ತು.