ಬಂದಿದೆ 8 ಆಸನಗಳ ಮಾರುತಿ 800: ಹೀಗೊಂದು ವಿಚಿತ್ರ ಮಾಡಿಫಿಕೇಷನ್!

By Suvarna News  |  First Published Mar 15, 2022, 2:05 PM IST

ಸುಜುಕಿ ಮೆಹ್ರಾನ್ (ಮಾರುತಿ 800) ಕಾರನ್ನು ವ್ಯಕ್ತಿಯೊಬ್ಬರು 8 ಸೀಟಿನ ಕಾರನ್ನಾಗಿ ಮಾರ್ಪಾಡು ಮಾಡಿದ್ದಾರೆ. ಈ ವಿಲಕ್ಷಣ ಪ್ರಯೋಗ ಮಾಡಿದ್ದು, ಸಂಯುಕ್ತ ಅರಬ್‌ ರಾಷ್ಟ್ರ (ಯುಎಐ)ನ ಹಮ್ದಾನ್ ಬಿನ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್.


Auto Desk: ಕಾರುಗಳನ್ನು ತಮ್ಮಿಚ್ಚೆಯಂತೆ ಮಾರ್ಪಾಡುವುದು ಮಾಡುವುದು ಇಂದಿನ ಯುವಜನತೆಯ ಕ್ರೇಜ್. ಅದರಲ್ಲಿ ಕೆಲವೊಂದು ಅಪರೂಪ ಹಾಗೂ ವಿಚಿತ್ರವೂ ಆಗಿರಬಹುದು. ಇದಕ್ಕೆ ಉದಾಹರಣೆಯೆಂದರೆ ಈ 8 ಆಸನಗಳ ಮಾರುತಿ 800! ಈ ಸುಜುಕಿ ಮೆಹ್ರಾನ್ (ಮಾರುತಿ 800-Maruti 800) ಕಾರನ್ನು ವ್ಯಕ್ತಿಯೊಬ್ಬರು 8 ಸೀಟಿನ ಕಾರನ್ನಾಗಿ ಮಾರ್ಪಾಡು ಮಾಡಿದ್ದಾರೆ. ಈ ವಿಲಕ್ಷಣ ಪ್ರಯೋಗ ಮಾಡಿದ್ದು, ಸಂಯುಕ್ತ ಅರಬ್ ರಾಷ್ಟ್ರ (ಯುಎಐ-UAE)ನ ಹಮ್ದಾನ್ ಬಿನ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್. 

ಶೇಖ್ ಹಮ್ದಾನ್ ಒಬ್ಬ ರಾಜಮನೆತನದ, ಎಮಿರಾಟಿ ರಾಜಕಾರಣಿಯಾಗಿದ್ದಾರೆ. ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಶೇಖ್ ಹಮ್ದಾನ್ ತಮ್ಮ ಬಳಿ ಹಲವಾರು  ಕ್ರೇಜಿ ಕಾರ್ ಕಸ್ಟಮೈಸೇಶನ್ಗಳನ್ನು (Customization) ಹೊಂದಿದ್ದಾರೆ. ಈ ಪಟ್ಟಿಗೆ ಹೊಸದಾಗಿ ಸೇರಿರುವುದು ಮಾರುತಿ 800. ಈ ಕಸ್ಟಮೈಸೇಶನ್ನ ಅತ್ಯಂತ ವಿಶಿಷ್ಟವಾದ ಅಂಶವೆಂದರೆ ಎರಡು ಕಾರುಗಳನ್ನು ಅಕ್ಕಪಕ್ಕದಲ್ಲಿ ಜೋಡಿಸಲಾಗಿದೆ. 

Tap to resize

Latest Videos

ಇದನ್ನೂ ಓದಿ: Maruti Suzuki CNG ಮಾರುತಿ ಸುಜುಕಿ ಡಿಸೈರ್ CNG ಕಾರು ಬಿಡುಗಡೆ, 32 ಕಿ.ಮೀ ಮೈಲೇಜ್!

ಲಿಮೋಸಿನ್ ಲುಕ್ ಮತ್ತು ಫೀಲ್ ಪಡೆಯಲು ಎರಡು ಕಾರುಗಳು ಒಂದರ ನಂತರ ಒಂದರಂತೆ ಸೇರಿಸಲಾಗಿದೆ. ಆದರೆ, ಇದು ಮಾಮೂಲಿ ವೆಲ್ಡಿಂಗ್ ಮಾಡಿರುವ ಮಾರ್ಪಾಡಲ್ಲ. ಹೊರನೋಟಕ್ಕೆ ಹಾಗೆ ಕಾಣಿಸಿದರೂ, ಅದರ ಬಾನೆಟ್ ವಿಭಾಗಗಳನ್ನು ಶೀಟ್ ಮೆಟಲ್ ಬಳಸಿ ಒಟ್ಟಿಗೆ ಹೊಲಿಯಲಾಗಿದೆ. ಮೇಲ್ಛಾವಣಿಯ ಪ್ರದೇಶವನ್ನು ಲೋಹದ ಬಾರ್ಗಳು ಮತ್ತು ಗಾಜುಗಳನ್ನು ಬಳಸಿ ಒಟ್ಟಿಗೆ ಜೋಡಿಸಲಾಗಿದೆ. 

ಮಾರ್ಪಡಿಸಿದ ಕಾರು ಹೆಚ್ಚುವರಿ ಉದ್ದದ ಮುಂಭಾಗ ಮತ್ತು ಹಿಂಭಾಗದ ಬಂಪರ್ ಮತ್ತು ಮಧ್ಯದಲ್ಲಿ ಸುಜುಕಿ ಲೋಗೋದೊಂದಿಗಿನ ಗ್ರಿಲ್ ಹೊಂದಿದೆ. ಕಾರಿನ ಸಂಪೂರ್ಣ  ಅಗಲಕ್ಕೆ ಹೊಂದಿಕೊಳ್ಳುವಂತಹ ಸಿಂಗಲ್ ಬಾನೆಟ್ (Single bonet) ಬಳಸಿರುವುದು ವಿಶೇಷವಾಗಿದೆ.

ಮಾರ್ಪಡಿಸಿದ ಮಾರುತಿ 800  ಇತರ ಕಾರಿನಂತೆ ನಾಲ್ಕು ಚಕ್ರಗಳನ್ನಷ್ಟೇ ಹೊಂದಿದೆ. ಅಂದರೆ ಕೋರ್ ಹಾರ್ಡ್ವೇರ್ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಇದು ಆಕ್ಸಲ್, ಸಸ್ಪೆನ್ಷನ್, ಬ್ರೇಕ್ ಇತ್ಯಾದಿ ಯುನಿಟ್ಗಳನ್ನು ಒಳಗೊಂಡಿದೆ. ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ, ಎಡಭಾಗದಲ್ಲಿರುವ ಕಾರ್ ಮಾತ್ರ ಸ್ಟೀರಿಂಗ್ ಚಕ್ರವನ್ನು ಹೊಂದಿದೆ. ಎರಡೂ ಎಂಜಿನ್ಗಳು ಸಕ್ರಿಯವಾಗಿವೆಯೇ ಅಥವಾ ಒಂದೇ ಎಂಜಿನ್ ಅನ್ನು ಬಳಸಲಾಗುತ್ತಿದೆಯೇ ಎಂಬುದು ಖಚಿತವಾಗಿಲ್ಲ.

ಇದನ್ನೂ ಓದಿ: Maruti WagonR Launch ಹೊಚ್ಚ ಹೊಸ ಮಾರುತಿ ಸುಜುಕಿ ವ್ಯಾಗನರ್ ಕಾರು ಬಿಡುಗಡೆ, ಕೇವಲ 5.39 ಲಕ್ಷ ರೂ!

ಒಂದು ವೇಳೆ ಇದರಲ್ಲಿ ಎರಡೂ ಎಂಜಿನ್ಗಳನ್ನು ಬಳಸುತ್ತಿದ್ದರೆ, ಎಲ್ಲಾ ಸಂಪರ್ಕಿತ ಭಾಗಗಳು ಪರಿಪೂರ್ಣ ಸಿಂಕ್ ಆಗಿರಬೇಕು. ಇಲ್ಲದಿದ್ದಲ್ಲಿ, ಕಾರು ಕೇವಲ ಒಂದು ಶೋ ಪೀಶ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಜೊತೆಗೆ, ಎರಡೂ ಇಂಜಿನ್ಗಳನ್ನು ಸಿಂಕ್ ಮಾಡಿದ್ದಲ್ಲಿ, ಇದು ಕಾರ್ಯಗತಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. 

ಕಸ್ಟಮೈಸ್ ಮಾಡಿದ ಮಾರುತಿ ಸುಜುಕಿ 800  ಜನರ ಗಮನ ಸೆಳೆಯುತ್ತಿದೆಯಾದರೂ, ಇದರ ಬೆನ್ನಲ್ಲೇ ಹಲವು ಪ್ರಶ್ನೆಗಳು ಎದುರಾಗಿವೆ. ಕಾನೂನುಬದ್ಧವಾಗಿ ರಸ್ತೆಗಳಲ್ಲಿ ಇದರ ಚಾಲನೆಗೆ ಅವಕಾಶವಿದೆಯೇ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ದೊರೆತಿಲ್ಲ. ಈ  ಕಾರು ಒಂದೇ ನಂಬರ್ ಪ್ಲೇಟ್ ಅನ್ನು ಹೊಂದಿದೆ, ಆದರೆ ಅದನ್ನು ಸಾಮಾನ್ಯ ರಸ್ತೆಗಳಲ್ಲಿ ಓಡಿಸಬಹುದೇ ಎಂಬುದು ಖಚಿತವಾಗಿಲ್ಲ. ಮಾರುತಿ 800  1,405 ಮಿಮೀ ಅಗಲ ಮತ್ತು ಎರಡು ಮೂರು ಮೀಟರ್ಗಳಷ್ಟು ಅಳತೆ  ಹೊಂದಿದೆ ಎನ್ನಲಾಗುತ್ತಿದೆ.

ಆದ್ದರಿಂದ ಈ ಕಾರು ಸುಲಭವಾಗಿ ಟ್ರಾಫಿಕ್ ಜಾಮ್ ಗೆ ಕಾಋಣವಾಗಬಹುದು. ವಿಶೇಷವಾಗಿ ಕಿರಿದಾದ ರಸ್ತೆಗಳಲ್ಲಿ ಇದು ಚಾಲನೆಗೆ ಯೋಗ್ಯವಾಗಿರುವುದಿಲ್ಲ.  ಖಾಸಗಿಯಾಗಿ ನಡೆಸುವ ಪ್ರದರ್ಶನಗಳು, ರೋಡ್ ಶೋಗಳು, ಕಾರ್ಯಕ್ರಮಗಳು ಇತ್ಯಾದಿಗಳಲ್ಲಿ ಸೀಮಿತ ಬಳಕೆಗಾಗಿ ಈ ಮಾರ್ಪಡಿಸಿದ ಕಾರಿಗೆ ವಿಶೇಷ ಪರವಾನಗಿ ನೀಡಿರಬಹುದು. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಇದೇ ರೀತಿಯ ಪರವಾನಗಿಗಳು ಲಭ್ಯವಿದೆ. ಶೇಖ್ ಹಮ್ದಾನ್ ಅತ್ಯಂತ ಶ್ರೀಮಂತರಾಗಿರುವುದರಿಂದ ಈ ರೀತಿಯ ವಿಲಕ್ಷಣ ಮಾರ್ಪಾಡಾಗಿರುವ ಕಾರುಗಳ ಪರವಾನಗಿ ಮತ್ತು ನಿರ್ವಹಣೆಯ ವೆಚ್ಚವನ್ನು ಸುಲಭವಾಗಿ ಭರಿಸಬಲ್ಲರು.

click me!