
ನವದೆಹಲಿ(ಮಾ.13): ಭಾರತದಲ್ಲಿ ವಿದೇಶಿ ಕಾರುಗಳಿಗಿಂತ ಭಾರತದ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಕೈಗೆಟುಕುವ ದರದಲ್ಲಿ ಅತ್ಯುತ್ತಮ ಹಾಗೂ ಗರಿಷ್ಠ ಸುರಕ್ಷತೆಯ ಕಾರನ್ನು ಭಾರತೀಯ ಆಟೋ ಕಂಪನಿಗಳು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಮಹೀಂದ್ರ ಮುಂಚೂಣಿಯಲ್ಲಿದೆ. ಇದೀಗ ಮಹೀಂದ್ರ ಹೋಳಿ ಹಬ್ಬಕ್ಕೆ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಮಹೀಂದ್ರ ಕಾರು ಖರೀದಿ ಮೇಲೆ ಗರಿಷ್ಠ 3 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ.
ಮಹೀಂದ್ರ XUV100, ಮಹೀಂದ್ರ XUV300, ಮಹೀಂದ್ರ ಸ್ಕಾರ್ಪಿಯೋ, ಮಹೀಂದ್ರ ಬೊಲೆರೋ ನಿಯೋ, ಮಹೀಂದ್ರ ಮೊರಾಜೋ ಹಾಗೂ ಮಹೀಂದ್ರ ಅಲ್ಟುರಾಸ್ G4 ಕಾರುಗಳಿಗೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಆದರೆ ಮಹೀಂದ್ರ XUV700 ಹಾಗೂ ಮಹೀಂದ್ರ ಥಾರ್ ವಾಹನಕ್ಕೆ ಯಾವುದೇ ರಿಯಾಯಿತಿ ನೀಡಿಲ್ಲ.
ಮಹೀಂದ್ರ KUV100 NXT
ಮಹೀಂದ್ರ KUV100 NXT ಕಾರಿಗೆ 38,055 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಕಾರ್ಪೋರೇಟ್ ಡಿಸ್ಕೌಂಟ್ 3,000 ಹಾಗೂ ಕಾರ್ ಎಕ್ಸ್‌ಚೇಂಜ್ ಆಫರ್ 20,000 ರೂಪಾಯಿ ಒಳಗೊಂಡಿದೆ.
ಮಹೀಂದ್ರ XUV300
ಸಬ್ ಕಾಂಪಾಕ್ಟ್ XUV ಕಾರುಗಳಲ್ಲಿ ಭಾರಿ ಬೇಡಿಕೆ ಪಡೆದಿರುವ ಮಹೀಂದ್ರ XUV300 ಕಾರಿಗೆ ಒಟ್ಟು 30,000 ರೂಪಾಯಿ ನೀಡಲಾಗಿದೆ. ಇದು 10,000 ರೂಪಾಯಿ ಫ್ರೀ ಎಕ್ಸಸರಿ, 25,000 ರೂಪಾಯಿ ಎಕ್ಸ್‌ಜೇಂಜ್ ಬೋನಸ್ ಹಾಗೂ 4,000 ರೂಪಾಯಿ ಕಾರ್ಪೋರೇಟ್ ಬೋನಸ್ ಒಳಗೊಂಡಿದೆ. ಇನ್ನುಳಿದ ಹಣ ನೇರವಾಗಿ ಕ್ಯಾಶ್ ಡಿಸ್ಕೌಂಟ್ ಆಗಿದೆ.
ಮಹೀಂದ್ರ ಸ್ಕಾರ್ಪಿಯೋ
ಮಹೀಂದ್ರ ಸ್ಕಾರ್ಪಿಯೋ ಕಾರಿಗೆ ಯಾವುದೇ ಕ್ಯಾಶ್ ಡಿಸ್ಕೌಂಟ್ ಘೋಷಿಸಿಲ್ಲ. ಆದರೆ 15,000 ರೂಪಾಯಿ ಮೌಲ್ಯದ ಫ್ರೀ ಅ್ಯಕ್ಸಸರಿ, 4,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಹಾಗೂ 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಸೇರಿದೆ.
Auto PLI Scheme ಪ್ರೋತ್ಸಾಹ ಧನಕ್ಕೆ ಟಾಟಾ, ಮಹೀಂದ್ರಾ, ಹ್ಯುಂಡೈ ಆಯ್ಕೆ: ಮಾರುತಿ ಪಟ್ಟಿಯಿಂದ ಹೊರಗೆ!
ಮಹೀಂದ್ರ ಅಲ್ಟುರಾಸ್
ಮಹೀಂದ್ರ ಅಲ್ಟುರಾಸ್ ಕಾರಿಗೆ ಒಟ್ಟು 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಈ ರಿಯಾಯಿತಿಯಲ್ಲಿ 50,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್, 11,5000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಹಾಗೂ 2,000 ರೂಪಾಯಿ ಮೌಲ್ಯದ ಉಚಿತ ಆ್ಯಕ್ಸಸರಿ ಒಳಗೊಂಡಿದೆ.
ಮಹೀಂದ್ರ ಮರಾಜೋ
ಮಹೀಂದ್ರ ಮರಾಜೋ ಬೇಸ್ ಎಂ2 ಟ್ರಿಮ್ ವಾಹನಕ್ಕೆ 20,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಲಾಗಿದೆ. ಇತರ ಟ್ರಿಮ್ ವೇರಿಯೆಂಟ್ ಮಾಡೆಲ್ ಕಾರಿಗೆ 15,000 ರೂಪಾಯಿ ನಗದು ಡಿಸ್ಕೌಂಟ್ ಘೋಷಿಸಲಾಗಿದೆ. 15,000 ರೂಪಾಯಿ ಎಕ್ಸ್‌ಜೇಂಚ್ ಬೋನಸ್ ಹಾಗೂ5,200 ರೂಪಾಯಿ ಕಾರ್ಪೋರೇಟ್ ಬೋನಸ್ ಘೋಷಿಸಲಾಗಿದೆ.
ಮಹೀಂದ್ರಾ ಫೈನಾನ್ಸ್‌ನಿಂದ ವಾಹನ ಲೀಸ್ ಮತ್ತು ಚಂದಾದಾರಿಕೆ
ಮಹೇಂದ್ರ ಫೈನಾನ್ಸ್ ಸಂಸ್ಥೆ ತನ್ನ ಗ್ರಾಹಕರಿಗೆ ವಾಹನ ಲೀಸ್ ಹಾಗೂ ಸಬ್‌ಸ್ಕಿ್ರಪ್ಶನ್ ನೀಡುವ ಸಂಸ್ಥೆಯನ್ನು ಆರಂಭಿಸಿದೆ. ಅದರ ಹೆಸರು ಕ್ವಿಕ್‌ಲಿಜ್. ಈ ಕ್ವಿಕ್‌ಲಿಜ್ ಮೂಲಕ ನಿರ್ದಿಷ್ಟಕಾಲಾವಧಿಗೆ ಮಾಲೀಕತ್ವ ಇಲ್ಲದೇ ವಿವಿಧ ಬ್ರ್ಯಾಂಡ್‌ಗಳ ಹೊಸ ವಾಹನಗಳನ್ನು ಲೀಸ್ ಅಥವಾ ಸಬ್‌ಸ್ಕಿ್ರಪ್ಶನ್ ಮೇಲೆ ಪಡೆಯಬಹುದು. ಬಳಿಕ ಹಿಂತಿರುಗಿಸಬಹುದು. ಇದರ ನೋಂದಣಿ, ವಿಮೆ, ನಿರ್ವಹಣೆ, ರೋಡ್ ಸೈಡ್ ಅಸಿಸ್ಟೆನ್ಸ್ ಇತ್ಯಾದಿ ನೆರವುಗಳನ್ನು ಕಂಪನಿಯೇ ನೀಡುತ್ತದೆ. ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್ ಸೇರಿದಂತೆ 30 ಕಡೆ ಈ ಸೇವೆಯನ್ನು ಕಂಪನಿ ನೀಡಲಿದೆ.
ಮಹೀಂದ್ರಾ ಸವೀರ್‍ಸ್ ವರ್ಕ್ಶಾಪ್ ಬೆಂಗಳೂರಲ್ಲಿ ಆರಂಭ
ಆಟೋಮೋಟಿವ್ ಮ್ಯಾನ್ಯುಫ್ಯಾಕ್ಚರರ್ಸ್ ಪ್ರೈ ಲಿ ಇದೀಗ 35 ವಿಭಾಗಗಳಿರುವ ಬೃಹತ್ ಮಹೀಂದ್ರ ಸವೀರ್‍ಸ್ ವರ್ಕ್ಶಾಪ್‌ಅನ್ನು ಬೆಂಗಳೂರಿನ ನಾಗವಾರದಲ್ಲಿ ಆರಂಭಿಸಿದೆ. 58,000 ಚದರ ಅಡಿ ವಿಸ್ತೀರ್ಣದ ಈ ಜಾಗದಲ್ಲಿ ಸವೀರ್‍ಸ್ ಹಾಗೂ ವಾಹನದ ಬಿಡಿ ಭಾಗಗಳ ಪೂರೈಕೆಯನ್ನು ನಿರ್ವಹಿಸಲಾಗುತ್ತದೆ. 5 ಕೋಟಿ ರು. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಪ್ರತಿ ತಿಂಗಳು 2000ಕ್ಕೂ ಹೆಚ್ಚು ಗ್ರಾಹಕರು ಮಹೀಂದ್ರಾ ಎಸ್‌ಯುವಿಗಳನ್ನು ಸವೀರ್‍ಸ್ ಮಾಡಿಸಿಕೊಳ್ಳುವ ವ್ಯವಸ್ಥೆ ಇದೆ ಎಂದು ಕಂಪನಿ ತಿಳಿಸಿದೆ.