ಪ್ರೇಮಂ ನಟ Nivin Pauly ಹೊಸ ಕಾರ್ ಹೆಂಗಿದೆ ಗೊತ್ತಾ?

By Bhavani Bhat  |  First Published May 20, 2022, 5:08 PM IST

ಪ್ರೇಮಂ ಖ್ಯಾತಿಯ ನಟ ನಿವೀನ್ ಪೌಲಿ ಇತ್ತೀಚೆಗೆ ತಾನೇ ಚಾರ್ಲಿ ಟ್ರೇಲರ್ ಲಾಂಚ್ ಮಾಡಿದ್ರು. ಈ ಮಲಯಾಳಿ ನಟ ಐಷಾರಾಮಿ ಟೊಯೋಟಾ ವೆಲ್‌ ಫೈರ್ ಕಾರು ಖರೀದಿಸಿದ್ದಾರೆ. ಫಿಲ್ಮೀ ಸ್ಲೈಲ್‌ನಲ್ಲಿರುವ ಈ ಕಾರು ಹೇಗಿದೆ ಗೊತ್ತಾ?


ನವೀನ್ ಪೌಲಿ (Nivin Pauly) ಅಂದರೆ ಮಲಯಾಳಂ ಮಾತ್ರ ಅಲ್ಲ ಕನ್ನಡಿಗರೂ ಕಣ್ಣರಳಿಸುತ್ತಾರೆ. ಅವರ ಸೂಪರ್ ಹಿಟ್ ಸಿನಿಮಾ 'ಪ್ರೇಮಂ'(Premam) ನೋಡಿ ಮೆಚ್ಚದವರಿಲ್ಲ. ನಮ್ಮ ರಕ್ಷಿತ್ ಶೆಟ್ಟಿ(Rakshit shetty) ಕ್ಲೋಸ್ ಫ್ರೆಂಡ್ ಆಗಿರುವ ಪೌಲಿ ಇದೀಗ ಸಖತ್ ಐಷಾರಾಮಿ ಕಾರು ಖರೀದಿಯ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ಖರೀದಿಸಿರುವ ಐಷಾರಾಮಿ ಕಾರು ಟೊಯೊಟಾ ವೆಲ್‌ಫೈರ್(Toyota vellfire) ಕಾರನ್ನು ಖರೀದಿಸಿದ್ದಾರೆ. ಕಡುಗಪ್ಪು ಬಣ್ಣದ ಈ ಕಾರು ಸಖತ್ ರಾಯಲ್ ಲುಕ್‌ನಲ್ಲಿದ್ದು, ರೋಡ್‌ನಲ್ಲಿ ಬರ್ತಾ ಇದ್ರೆ ಎಂಥವರೂ ಒಂದು ಕ್ಷಣ ನಿಂತು ನೋಡ್ಬೇಕು ಆ ಥರ ಇದೆ. ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅತ್ಯಂತ ಪ್ರೀಮಿಯಂ ಕಾರು ಈ ವೆಲ್‌ಫೈರ್. ಈ ಐಷಾರಾಮಿ ಟೊಯೊಟಾ ವೆಲ್‌ಫೈರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಈ ಕಾರಿನ ಎಕ್ಸ್‌ ಶೋ ರೂಮ್‌ ಬೆಲೆ ರು. 90.75 ಲಕ್ಷ, ಆನ್ ರೋಡ್‌ಗೆ(On road price) ಬಂದಾಗ ಈ ಬೆಲೆ ಕೋಟಿ ಮೇಲೆ ಒಂದಿಷ್ಟು ರುಪಾಯಿಗಳಾಗಬಹುದು.

ಈ ಐಷಾರಾಮಿ ಕಾರಿನಲ್ಲಿ ಅನೇಕ ವಿಶೇಷತೆಗಳಿವೆ. 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್(Petrol Engine) ಇದೆ. ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಇದು ಜೋಡಿಸಲ್ಪಟ್ಟಿದೆ, 198 ಬಿಹೆಚ್‍ಪಿ ಪವರ್ ಮತ್ತು 235 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ವೆಲ್‌ಫೈರ್‌ ಕಾರಿನ ಒಳಭಾಗದಲ್ಲಿ ಹಿಂಬದಿಯಲ್ಲಿ ಎರಡು ಬೆಲೆಬಾಳುವ ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಮಾಡುವಂಥಾ ವಿಐಪಿ ಸೀಟುಗಳಿವೆ. ಲೆಗ್ ರೆಸ್ಟ್ ಮತ್ತು ರೆಕ್ಲೈನಬಲ್ ಬ್ಯಾಕ್‌ರೆಸ್ಟ್ ಇರುವ ಕಾರಣ ಜರ್ನಿ ಬಹಳ ಆರಾಮವಾಗಿರುತ್ತೆ. ವೆಲ್‌ಫೈರ್‌ ಎಸ್‌ಯುವಿಯಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಇದೆ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ 13 ಇಂಚಿನ ಹಿಂಭಾಗದ ಡಿಸ್ ಪ್ಲೇಯನ್ನು ರೂಫ್ ಮೇಲೆ ನೀಡಲಾಗಿದೆ. ಇದು ನೋಡೋದಕ್ಕೆ ಭರ್ಜರಿಯಾಗಿ ಕಾಣುತ್ತೆ. ಯಾವುದೋ ಹಾಲಿವುಡ್ ಸಿನಿಮಾದಲ್ಲಿ ಬರೋ ಕಾರಿನ ಥರ ಫೀಲ್ ಕೊಡುತ್ತೆ.

Tap to resize

Latest Videos

undefined

TVS iQube ಹೊಸ ಫೀಚರ್ಸ್, ಗರಿಷ್ಠ ಮೈಲೇಜ್, ಟಿವಿಎಸ್ iಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ಪನೋರಮಿಕ್ ವ್ಯೂ ಮಾನಿಟರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳಿವೆ. ಎಬಿಎಸ್ ವಿಥ್ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಹೋಲ್ಡ್, ಎ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹೀಗೆ ಇನ್ನಷ್ಟು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ನೀಡಿದೆ.

ಟೆಸ್ಲಾ ಸಿಇಓ ಎಲಾನ್ ಮಸ್ಕ್ಗೆ ವ್ಯಂಗ್ಯವಾಡಿದ ಫೋರ್ಡ್ ಜಾಹೀರಾತು

ಈ ಟೊಯೊಟಾ ವೆಲ್‌ಫೈರ್ ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್(Benz v class) ಕಾರಿಗೆ ಪೈಪೋಟಿ ನೀಡುತ್ತದೆ. ಈ ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಸೆಲಬ್ರಿಟಿಗಳ ಮೆಚ್ಚಿನ ಅಯ್ಕೆಗಳಲ್ಲಿ ಒಂದಾಗಿದೆ.

ಮಲಯಾಳಂ ಜನಪ್ರಿಯ ನಟರಾದ ಮೋಹನ್ ಲಾಲ್(Mohanlal), ಸುರೇಶ್ ಗೋಪಿ ಮತ್ತು ಫಹಾದ್ ಫಾಜಿಲ್ (Fahad Fazil) ಅವರು ಕೂಡ ಈ ಟೊಯೊಟಾ ವೆಲ್‌ಫೈರ್ ಕಾರನ್ನು ಹೊಂದಿದ್ದಾರೆ. ನಿವೀನ್ ಪೌಲಿ ಈ ಕಾರನ್ನು ಕೊಚ್ಚಿಯಲ್ಲಿರುವ ಟೊಯೊಟಾ ಡೀಲರ್ ಶಿಪ್ ಖರೀದಿಸಿದ್ದಾರೆ. ನಟ ಖರೀದಿಸಿದ ಟೊಯೊಟಾ ವೆಲ್‌ಫೈರ್ ಕಾರು ಇದೀಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಏಷ್ಯಾದ ಅತೀ ದೊಡ್ಡ EXCON 2022ನಲ್ಲಿ ಟಾಟಾ ಮೋಟರ್ಸ್ ವಾಣಿಜ್ಯ ವಾಹನ ಪ್ರದರ್ಶನ!

ಸದಾ ಕ್ರಿಯೇಟಿವ್ ಕತೆಗಳ ಬೇಟೆಯಲ್ಲಿರುವ ನಿವೀನ್ ಪೌಲಿ ಕಾರಿನ ಆಯ್ಕೆಯಲ್ಲೂ ಭಲೇ ಹುಷಾರು. ಅನೇಕ ಐಷಾರಾಮಿ ಕಾರುಗಳು ಇವರ ಸಂಗ್ರಹದಲ್ಲಿದೆ. ಅದಕ್ಕೀಗ ಮತ್ತೊಂದು ಬ್ಲ್ಯಾಕ್ ಕಿಂಗ್ ಸೇರ್ಪಡೆಯಾಗಿದೆ. 37ರ ಹರೆಯ ಈ ನಟ ಇದೀಗ ಮಹಾ ವೀರ್ಯರ್, ಮದವೆಟ್ಟು ಹಾಗೂ ಅನೇಕ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕೈ ತುಂಬ ದುಡ್ಡೂ ಎಣಿಸ್ತಿದ್ದಾರೆ ಅನ್ನೋದಕ್ಕೆ ಈ ಕಾರೇ ಸಾಕ್ಷಿ.

click me!