ಅಮೆರಿಕದ ಆಟೋ ಮೇಜರ್ ಫೋರ್ಡ್ ಮೋಟಾರ್ (Ford Motor)ಕಂಪನಿಯ ಇತ್ತೀಚೆನ ಜಾಹೀರಾತು ಟೆಸ್ಲಾ ಇಂಕ್ನ ಸಿಇಒ ಎಲೋನ್ ಮಸ್ಕ್ ಅವರನ್ನು ಕೆಣಕುವಂತಿದೆ.
ಅಮೆರಿಕದ ಆಟೋ ಮೇಜರ್ ಫೋರ್ಡ್ ಮೋಟಾರ್ (Ford Motor)ಕಂಪನಿ, ಇತ್ತೀಚೆಗೆ ತನ್ನ ಯುಟ್ಯೂಬ್ ಚಾನೆಲ್ನಲ್ಲಿ ಜಾಹೀರಾತನ್ನು ಬಿಡುಗಡೆ ಮಾಡಿದ್ದು, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಟೆಸ್ಲಾ ಇಂಕ್ನ ಸಿಇಒ (Tesla Inc CEO) ಎಲೋನ್ ಮಸ್ಕ್ (Elon musk) ಅವರನ್ನು ಕೆಣಕುವಂತಿದೆ. ಒಂದು ನಿಮಿಷದ ಅವಧಿಯ ಜಾಹೀರಾತು, ಇತ್ತೀಚೆಗೆ ಅಮೆರಿಕನ್ ಕುದುರೆ ರೇಸ್ - ದಿ ಕೆಂಟುಕಿ ಡರ್ಬಿಯ ವಾರ್ಷಿಕ ಅವಧಿಯಲ್ಲಿ ಪ್ರಸಾರವಾಯಿತು. ಈ ವೀಡಿಯೊದಲ್ಲಿ, ಕೆಲವು ದೃಶ್ಯಗಳಲ್ಲಿ ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್ನಲ್ಲಿ ವಾಯ್ಸ್ಓವರ್ (Voice over) ಕೆಲವು ಸೂಕ್ಷ್ಮವಾಗಿ ತರಾಟೆಗೆ ತೆಗೆದುಕೊಂಡಂತೆ ತೋರುತ್ತಿದೆ.
ವೀಡಿಯೊದ ಮೊದಲ ದೃಶ್ಯದಲ್ಲಿ ಒಬ್ಬ ವ್ಯಕ್ತಿಯು ಸ್ಮಾರ್ಟ್ಫೋನ್ ಮೂಲಕ ಸ್ಕ್ರೋಲ್ ಮಾಡುವುದು ಕಾಣುತ್ತಿದೆ. ನಂತರ ಒಬ್ಬ ವ್ಯಕ್ತಿಯು ವಾಯ್ಸ್ಓವರ್ನಲ್ಲಿ ಮಾತನಾಡುತ್ತಾ, “ಸದ್ಯಕ್ಕೆ ಜೋರಾಗಿ ಮಾತನಾಡುವವರು, ಪರಿಸ್ಥಿತಿಯನ್ನು ಹಾಳುಮಾಡುವವರೇ ಪ್ರಮುಖ ಎಂಬಂತೆ ತೋರುತ್ತದೆ. ಆದರೆ ಇದೇ ವ್ಯಕ್ತಿಗಳು ವಿಷಯಗಳು ಕಷ್ಟಕರವಾದಾಗ ಅವರು ತಮ್ಮದೇ ಆದ ಬಾಹ್ಯಾಕಾಶ ನೌಕೆಗಳಲ್ಲಿ ಹಾರಿ ಹೋಗುತ್ತಾರೆ" ಎಂದು ವ್ಯಂಗ್ಯವಾಡಿದ್ದಾನೆ.
undefined
ಈ ವೀಡಿಯೊ ನಂತರ ರಾಕೆಟ್ ಉಡಾವಣೆಯನ್ನು ಕೂಡ ತೋರಿಸಲಾಗಿದೆ. ಇದು ಬಾಹ್ಯಾಕಾಶ ಸಾರಿಗೆ ಸೇವೆಗಳ ಪೂರೈಕೆದಾರರಾದ ಸ್ಪೇಸ್ಎಕ್ಸ್ನ (Space X) ಮುಖ್ಯಸ್ಥರೂ ಆಗಿರುವ ಟೆಸ್ಲಾ ಸಿಇಒ (Tesla CEO) ಅವರನ್ನು ಉದ್ದೇಶಿಸಿ ಹೇಳಿದಂತಿದೆ.
ಇದನ್ನೂ ಓದಿ: ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟ ಯೋಜನೆ ಕೈಬಿಟ್ಟ ಟೆಸ್ಲಾ: ವರದಿ
ಮುಂದಿನ ದೃಶ್ಯಗಳಲ್ಲಿ, ಈ ಜಾಹೀರಾತು ತನ್ನ ಗಮನವನ್ನು ಕಂಪನಿಯ ಉದ್ಯೋಗಿಗಳತ್ತ ಹರಿಸಿದೆ. ಕಂಪನಿಯ 182,000 ಜನರ ಕಾರ್ಯಪಡೆಯ "ದೊಡ್ಡ ಹಾಗೂ ಹೊಸ ಉತ್ಪನ್ನಗಳನ್ನು ನಿರ್ಮಿಸುತ್ತಿದ್ದಾರೆ. ನಾವು ಕೆಲಸ ಮಾಡುವ ರೀತಿಯಿಂದ ಪರಿಸ್ಥಿತಿಗಳು ಬದಲಾಗುತ್ತವೆ ಎಂಬ ಸಂದೇಶಗಳನ್ನು ನೀಡುವ ಮೂಲಕ ಇದು ಫೋರ್ಡ್ ಮೋಟಾರ್ ಕಂಪನಿಯ ಉದ್ಯೋಗಿಗಳ ಪ್ರಯತ್ನಗಳನ್ನು ಹೊಗಳುವ ದೃಶ್ಯಗಳನ್ನು ಒಳಗೊಂಡಿದೆ. ಈ ಹೊಸ ಜಾಹೀರಾತು ಪ್ರಚಾರದಲ್ಲಿ ಫೋರ್ಡ್, ಅಮೆರಿಕದಲ್ಲಿ ಇತರ ವಾಹನ ತಯಾರಕರಿಗಿಂತ ಹೆಚ್ಚಿನ ವಾಹನಗಳನ್ನು ಉತ್ಪಾದಿಸಿರುವುದಾಗಿ ಘೋಷಿಸಿದೆ.ಜೊತೆಗೆ, ಎಲೆಕ್ಟ್ರಿಕ್ ವಾಹನಗಳಲ್ಲಿ 50 ಶತಕೋಟಿ ಡಾಲರ್ ಹೂಡಿಕೆಯ ಬದ್ಧತೆಯನ್ನೂ ಘೋಷಿಸಿತು.
ಜಾಹೀರಾತಿನ ಕುರಿತು ವಿವರಿಸಿದ ಫೋರ್ಡ್ನ ವಕ್ತಾರರು, " ಎಲ್ಲಾ ಕೆಲಸಗಾರರ ಶ್ರಮವನ್ನು ಸಂಭ್ರಮಿಸುವುದು ಜಾಹೀರಾತಿನ ಉದ್ದೇಶ. ಫೋರ್ಡ್ ಅಮೆರಿಕದಲ್ಲಿ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ನೀಡಿದೆ ಮತ್ತು ಇತರ ವಾಹನ ತಯಾರಕರಿಗಿಂತ ಹೆಚ್ಚಿನ ವಾಹನಗಳನ್ನು ನಿರ್ಮಿಸುತ್ತದೆ.ಮಾರುಕಟ್ಟೆ ವಿಸ್ತರಿಸಲು ಟೆಕ್ ಗುರುಗಳು, ಸಿಇಒಗಳು ಮತ್ತು ಸೆಲೆಬ್ರಿಟಿಗಳನ್ನು ಬಳಸಿಕೊಳ್ಳಲಾಗುವುದು” ಎಂದರು.
ಇದನ್ನೂ ಓದಿ: Range Rover Sport ನಾಲೆ ನೀರಿನಲ್ಲಿ ಯಶಸ್ವಿಯಾಗಿ ಮುನ್ನುಗ್ಗಿದ ರೇಂಜ್ ರೋವರ್
ಎಲಾನ್ ಮಸ್ಕ್ ವಿರುದ್ಧದ ಟೀಕೆ ಆಕಸ್ಮಿಕವಾಗಿ ಆಗಿರುವುದಲ್ಲ. ಬದಲಿಗೆ, ಫೋರ್ಡ್ ಮೊದಲಿನಿಂದಲೂ ಟೆಸ್ಲಾ ಅನ್ನು ಹಿಂದಿಕ್ಕಲು ಯತ್ನಿಸುತ್ತಿದೆ. ಪ್ರಸ್ತುತ, ಟೆಸ್ಲಾ US ನಲ್ಲಿ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿದೆ ಮತ್ತು ಈಗ ಈ ಆಟೊಮೊಬೈಲ್ ತಯಾರಕರು ಇವಿ ಮಾರುಕಟ್ಟೆ ಪ್ರಯತ್ನಿಸಿದ್ದು, ಟೆಸ್ಲಾಗೆ ಸೆಡ್ಡು ಹೊಡೆಯಲು ಸರ್ವ ಸನ್ನದ್ಧವಾಗಿವೆ.
ಟೆಸ್ಲಾ ವಿರುದ್ಧ ವಾಹನ ತಯಾರಕರು ಟೀಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಹಿಂದಿನ ಕಾರು ತಯಾರಕರಾದ ಪೋಲೆಸ್ಟಾರ್, ಸ್ವೀಡಿಷ್ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಮತ್ತಿತರರು ಟೆಸ್ಲಾ ಸಿಇಒಗೆ ನೇರ ಟೀಕೆ ಮಾಡಿದ್ದಾರೆ. ಕಂಪನಿ ತನ್ನ "ನೋ ಕಾಂಪ್ರೊಮೈಸಸ್" ಸೂಪರ್ ಬೌಲ್ ಜಾಹೀರಾತಿನಲ್ಲಿ ಕಂಪನಿಯು "ಮಂಗಳಗ್ರಹವನ್ನು ಆಕ್ರಮಿಸಿಕೊಳ್ಳಬೇಕಿಲ್ಲ" ಎಂದು ವ್ಯಂಗ್ಯವಾಡಿದೆ. ಈ ಮೂಲಕ ಹಲವು ಬಾರಿ ಮಂಗಳಗ್ರಹವನ್ನು ತಲುಪುವ ಕುರಿತು ಸ್ಪೇಸ್ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದ ಮಾತುಗಳಿಗೆ ಪರೋಕ್ಷವಾಗಿ ಟೀಕಿಸಿವೆ.