ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಮಹಿಂದ್ರಾ ಎಕ್ಸ್‌ಯುವಿ 700 ಲಾಂಚ್ ದಿನಾಂಕ ಖಚಿತವಾಗಿದೆ. ಸ್ವಾತಂತ್ರೋತ್ಸವ ಮುನ್ನಾ ದಿನ ಅಂದರೆ, ಆಗಸ್ಟ್ 14ರಂದು ಕಂಪನಿ ಈ ಹೊಸ ಎಕ್ಸ್‌ಯುವಿಯನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ತನ್ನ ಅತ್ಯಾಧುನಿಕ ಫೀಚರ್‌ಗಳು, ಆಕರ್ಷಕ ಶೈಲಿ ಹಾಗೂ ಪವರ್‌ಫುಲ್ ಎಂಜಿನಿಂದಾಗಿ ಹೆಚ್ಚು ಗಮನ ಸೆಳೆದಿದೆ.
ದೇಶೀಯ ಕಾರು ಉತ್ಪಾದಕ ಕಂಪನಿ ಮಹೀಂದ್ರಾದ ಭಾರೀ ನಿರೀಕ್ಷೆಯ ಮಹೀಂದ್ರಾ ಎಕ್ಸ್‌ಯುವಿ ಬಿಡುಗಡೆಯ ದಿನಾಂಕ ಪಕ್ಕಾ ಆಗಿದೆ. ಸ್ವಾತಂತ್ರೋತ್ಸವ ದಿನಕ್ಕಿಂತ ಒಂದು ದಿನ ಮುಂಚೆ ಎಕ್ಸ್‌ಯುವಿ 700 ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ಒಲಿಂಪಿಕ್ಸ್‌ನಲ್ಲಿ ಭರ್ಜಿ ಎಸೆತದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ನೀರಜ್ ಚೋಪ್ರಾಗೆ ಕಾರ್ ಗಿಫ್ಟ್ ನೀಡುವುದಾಗಿ ಕಂಪನಿ ಹೇಳಿತ್ತಲ್ಲ, ಅದೇ ವಾಹನ ಎಕ್ಸ್‌ಯುವಿ 700 ಇದು. ಆಗಸ್ಟ್ 14ಕ್ಕೆ ಜಾಗತಿಕ ಮಾರುಕಟ್ಟೆಗೆ ಲಾಂಚ್ ಆಗಲಿದೆ.
undefined
#IndependenceDayಯಿಂದ ಹಿಡಿದು ಬರೋ ಹಬ್ಬಕ್ಕೆ ಯಾವ ಕಾರು ಲಾಂಚ್ ಆಗುತ್ತೋ ನೋಡಿ!
ಎಕ್ಸ್‌ಯುವಿ 700 ಬಗ್ಗೆ ಅನೇಕ ದಿನಗಳಿಂದಲೂ ಕುತೂಹಲವಿತ್ತು. ಈ ಎಕ್ಸ್‌ಯುವಿ 700 ಬಗ್ಗೆ ಆಗಾಗ ಆನ್‌ಲೈನ್‌ಗಳಲ್ಲಿ ಮಾಹಿತಿ ಸೋರಿಕೆಯಾಗಿ ಗ್ರಾಹಕರಲ್ಲಿ ಕುತೂಲಹಕ್ಕೆ ಕಾರಣವಾಗಿತ್ತು. ಈ ಕುತೂಹಲಕ್ಕೆ ಆಗಸ್ಟ್ 14ಕ್ಕೆ ತೆರೆ ಬೀಳಲಿದೆ.
ಮಹಿಂದ್ರಾ ಕಂಪನಿಯ ಹೊಸ ಲೋಗೋವನ್ನು ಬಳಸಲು ಮುಂದಾಗಿದೆ. ಹಾಗಾಗಿ, ಈ ಎಕ್ಸ್‌ಯುವಿ 700 ಹೊಸ ಲೋಗೋ ಬಳಕೆಯಾದ ಮೊದಲ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ವಿಶೇಷ ಎಂದರೆ, ಅನೇಕ ಹೊಸ ಫೀಚರ್‌ಗಳು ಈ ಸೆಗ್ಮೆಂಟ್‌ನಲ್ಲಿ ಇದೇ ಮೊದಲ ಬಾರಿಗೆ ಈ ಎಕ್ಸ್‌ಯುವಿ ಮೂಲಕ ಕಂಪನಿ ಪರಿಚಯ ಮಾಡಲಿದೆ.
Get ready to feel the rush this freedom weekend.
Catch the debut of the Mahindra XUV700 on 14th August at 4 PM.https://t.co/Udw1r5ZJ5G pic.twitter.com/jLNCM1dpuJ
ಎಕ್ಸ್‌ಯುವಿ 700 ಸಂಬಂಧ ಮಹಿಂದ್ರಾ ಕಂಪನಿಯು ಅನೇಕ ಟೀಸರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ. ಈ ಟೀಸರ್ ಮೂಲಕ ಕಂಪನಿಯ ಎಕ್ಸ್‌ಯುವಿ ಹೊಂದಿರುವ ಫೀಚರ್‌ಗಳನ್ನು ಪರಿಚಯಿಸುವ ಕೆಲಸ ಮಾಡಿದೆ. ಈ ಪೈಕಿ, ಅತಿದೊಡ್ಡ ಪನೋರಮಿಕ್ ಸನ್ ರೂಫ್, ಆಯಾಸ ಎಚ್ಚರಿಕೆ, ಇನ್‌ಸ್ಟ್ರುಮೆಂಟ್ ಕನ್ಸೋಲ್‌ಗಾಗಿ ಡ್ಯುಯಲ್ ಸ್ಕ್ರೀನ್‌ಗಳು ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ ಅಡ್ರಿನೊಎಕ್ಸ್ ಬಳಕೆದಾರ ಇಂಟರ್‌ಫೇಸ್ ಅನ್ನು ನಡೆಸುವ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮಾಹಿತಿ ಸೇರಿದೆ.
ಜಿಪ್ , ಜ್ಯಾಪ್, ಜೂಮ್ ಮತ್ತು ವೈಯಕ್ತಿಕ ಹೆಸರಿನ ಬಹು ಡ್ರೈವಿಂಗ್ ಮೋಡ್‌ಗಳೊಂದಿಗೆ ಅಮೆಜಾನ್ ಅಲೆಕ್ಸಾ ವರ್ಚುವಲ್ ಅಸಿಸ್ಟೆಂಟ್ ನಿರ್ವಹಿಸುವ ಧ್ವನಿ ಆಜ್ಞೆಗಳನ್ನು ಸಹ ಕಾರು ಪಡೆಯುತ್ತದೆ. ಎಕ್ಸ್‌ಯುವಿ 700 ಗ್ರಾಹಕರಿಗೆ ಆರು ಮತ್ತು ಏಳು ಸೀಟರ್ ಆಕೆಯಲ್ಲಿ ಸಿಗಲಿದೆ.
ಇ ವಾಹನ ಖರೀದಿಸಿದ್ರೆ ನೋಂದಣಿ ಸರ್ಟಿಫಿಕೇಟ್ ಶುಲ್ಕ ಕೊಡಬೇಕಿಲ್ಲ!
ಎಕ್ಸ್‌ಯುವಿ700 ವಾಹನದ ಹೊರ ವಿನ್ಯಾಸದ ಮಾಹಿತಿ ಇತ್ತೀಚೆಗಷ್ಟೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿತ್ತು. ಸಿ ಆಕಾರದ ಎಲ್‌ಇಡಿ ಡಿಆರ್‌ಎಲ್‌ಎಸ್, ಪಾಪ್ ಔಟ್ ಶೈಲಿಯ ಡೋರ್ ಹ್ಯಾಂಡಲ್ಸ್, ವರ್ಟಿಕಲ್ ಕ್ರೋಮ್ ಸ್ಟಾಟ್‌ಗಳೊಂದಿಗೆ ಬೃಹತ್ತಾದ ಗ್ರಿಲ್ ಇತ್ಯಾದಿ ವಿನ್ಯಾಸವು ಗಮನಾರ್ಹವಾಗಿದೆ. ಹಿಂಬದಿಯಲ್ಲಿ ನೀವು ಬೂಮ್‌ರಾಂಗ್ಡ್ ಆಕಾರದ ಟೇಲ್ ಲೈಟ್ ಮತ್ತುಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಕಾಣಬಹುದು.
ಈ ಮಹಿಂದ್ರಾ ಎಕ್ಸ್‌ಯುವಿ 700 2.0 ಲೀಟರ್ ಟರ್ಬೋ ಪೆಟ್ರೋಲ್ ಜೊತೆಗೆ 2.2 ಲೀಟ್ ಎಂಹಾಕ್ ಡಿಸೇಲ್ ಎಂಜಿನ್ ಕೂಡ ಹೊಂದಿದೆ. ಗ್ರಾಹಕರಿಗೆ ಈ ಎಕ್ಸ್‌ಯುವಿ 700 ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸಿಮಿಷನ್ ಆಯ್ಕೆಗಳಲ್ಲಿ ಸಿಗಲಿದೆ. ಹಾಗೆಯೇ, ಎಕ್ಸ್‌ಯುವಿ 500ಗಿಂತೂಲ ಎಕ್ಸ್‌ಯುವಿ 700 ಕ್ಯಾಬಿನ್ ಹೆಚ್ಚು ಐಷಾರಾಮಿಯಾಗಿದೆ ಎನ್ನಲಾಗುತ್ತಿದೆ. ಈ ಎಕ್ಸ್‌ಯುವಿ ಸಂಪೂರ್ಣ ಫೀಚರ್‌ಗಳು ಆಗಸ್ಟ್ 14 ಪೂರ್ಣವಾಗಿ ಗೊತ್ತಾಗಲಿದೆ.
ಚಿನ್ನ ಗೆದ್ದ ಚೋಪ್ರಾಗೆ ಎಕ್ಸ್‌ಯುವಿ 700 ಗಿಫ್ಟ್:
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತೊಡಿಸಿದ ಜಾವಲಿನ್ ಪಟು ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಇಡೀ ದೇಶವೇ ಕ್ರೀಡಾಪಟುವನ್ನು ಕೊಂಡಾಡುತ್ತಿದೆ. ಭಾರತೀಯ ಸೇನೆಯಲ್ಲಿಯೂ ಸೇವೆ ಸಲ್ಲಿಸುತ್ತಿರುವ ಚೋಪ್ರಾ ಸಾಧನೆಯನ್ನು ಇಡೀ ದೇಶವೇ ಮೆಚ್ಚಿದೆ ಮಹೀಂದ್ರಾ ಕಂಪನಿಯ ಚೇರ್ ಮನ್ ಆನಂದ್ ಮಹೀಂದ್ರಾ XUV 700 ಕಾರು ಗಿಫ್ಟ್ ನೀಡುವುದಾಗಿ ಘೋಷಿಸಿದ್ದಾರೆ. ಇನ್ನೊಂದು ಕಡೆ ಹರ್ಯಾಣ ಸರ್ಕಾರ 6 ಕೋಟಿ ರೂ. ಮೊತ್ತದ ಬಹುಮಾನ ಘೋಷಣೆ ಮಾಡಿದೆ.
ಜುಲೈನಲ್ಲಿ 1.36 ಲಕ್ಷ ವಾಹನ ಮಾರಾಟ ಮಾಡಿದ ಮಾರುತಿ!
ಜಾವಲಿನ್ ಫೈನಲ್ ಸ್ಪರ್ಧೆಯಲ್ಲಿ ಬರೋಬ್ಬರಿ 87.58 ಮೀಟರ್ ಎಸೆಯುವ ಮೂಲಕ ಪದಕ ಜಯಿಸಿದ್ದಾರೆ. ಭಾರತ ಸ್ವಾತಂತ್ರ್ಯಗೊಂಡ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಥ್ಲೀಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ನೀರಜ್ ಚೋಪ್ರಾ ಮೊದಲ ಪದಕ ಗೆದ್ದು ಕೊಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಉದ್ಯೋಗಿಯಾಗಿರುವ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲಿ ನೀರಜ್ ಚೋಪ್ರಾ ಬರೋಬ್ಬರಿ 87.03 ಮೀಟರ್ ದೂರ ಎಸೆಯುವ ಮೂಲಕ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ದಿಗ್ಗಜ ಮಿಲ್ಖಾ ಸಿಂಗ್ ಕನಸನ್ನು ನೀರಜ್ ನನಸು ಮಾಡಿದ್ದಾರೆ.