ನ್ಯಾನೋ ಕಾರಿನ ಪಾರ್ಕಿಂಗ್‌ಗೆ 91,000 ರೂ ದಂಡ; ಕೋರ್ಟ್ ಆದೇಶಕ್ಕೆ ಕಂಗಾಲಾದ ಒಡತಿ!

By Suvarna News  |  First Published Jan 30, 2021, 3:57 PM IST

ಕಾರು ಸರ್ವೀಸ್ ಸರಿಯಾಗಿಲ್ಲ, ಹೊಸ ಕಾರು ಡೆಲಿವರಿ ವೇಳೆ ಡ್ಯಾಮೇಜ್,  ಡೀಲರ್ ಜೊತೆಗೆ ಕಿರಿಕ್ ಸೇರಿದಂತೆ ಹಲವು ಪ್ರಕರಣಗಳು ಗ್ರಾಹಕರ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ಬಹುತೇಕ ಪ್ರಕರಣಗಳು ಗ್ರಾಹಕರ ಪರವಾಗಿಯೇ ಬಂದಿದೆ. ಇದೇ ರೀತಿ ಈ ಪ್ರಕರಣವನ್ನೂ ಗೆಲ್ಲಬಹುದು ಎಂಬ ಅಹಂನಿಂದ ಹೋದ ಮಹಿಳಾ ವಕೀಲೆಗೆ ಕೋರ್ಟ್ ತಿರುಗೇಟು ನೀಡಿದೆ. 


ಗುಜರಾತ್(ಜ.30):  ವಕೀಲೆಯಾಗಿರುವ ಕಾರಣ ಯಾವುದೇ ಕೇಸ್ ವಾದಿಸಿ ಗೆಲ್ಲಬಹುದು ಎಂದುಕೊಂಡರೆ ತಪ್ಪು. ಗುಜರಾತ್‌ನಲ್ಲಿ ನಡೆದ ಪ್ರಕರಣವೇ ಸಾಕ್ಷಿ. ಕಾರು ಸರ್ವೀಸ್ ನೀಡಿ, ಬಳಿಕ ಕೋರ್ಟ್ ಕೇಸ್ ದಾಖಲಿಸಿದ ಮಹಿಳಾ ವಕೀಲೆ ಸೋನಾ ಸಾಗರ್‌ಗೆ 91,000 ರೂಪಾಯಿ ಪಾರ್ಕಿಂಗ್ ಚಾರ್ಚ್ ದಂಡ ವಿಧಿಸಿದೆ.

ಟ್ರಾಫಿಕ್ ಜಾಗೃತಿ ಮೂಡಿಸುತ್ತಿದ್ದ MLA ಕಾರಿಗೆ ದಂಡ!

Latest Videos

undefined

ಗಾಂಧಿನಗರದಲ್ಲಿರುವ ಟಾಟಾ ಡೀಲರ್ ಹರ್‌ಸೊಲಿಯಾ ಬ್ರದರ್ಸ್ ವರ್ಕ್‌ಶಾಪ್‌ ಮೇಲೆ ಪ್ರಕರಣ ದಾಖಲಿಸಿದ ವಕೀಲೆ ಸೋನಾ ಸಾಗರ್‌ಗೆ ಹಿನ್ನಡೆಯಾಗಿದೆ. 2018ರಲ್ಲಿ ವಕೀಲೆ ತಮ್ಮ ಟಾಟಾ ನ್ಯಾನೋ ಕಾರು ಸರ್ವೀಸ್‌ಗೆ ನೀಡಿದ್ದರು. ಸರ್ವೀಸ್ ಮಾಡಿದ ಡೀಲರ್ ಸೋನಾ ಸಾಗರ್‌ಗೆ ಕರೆ ಮಾಡಿ 9,900 ರೂಪಾಯಿ ಬಿಲ್ ಆಗಿರುವುದಾಗಿ ಹೇಳಿದ್ದಾರೆ.

ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣ; ಕಾರಿನ ಹಿಂಬದಿ ಸೀಟ್ ಬೆಲ್ಟ್ ಹಾಕದಿದ್ರೂ ದಂಡ!.

ಕಾರು ಪಡೆಯಲು ಬಂದ ಸೋನಾ ಸಾಗರ್, ತನ್ನ ಕಾರಿನ ಮ್ಯೂಸಿಕ್ ಸಿಸ್ಟಮ್, ಏರ್ ಕಂಡೀಷನರ್ ಸೇರಿದಂತೆ ಹಲವು ಭಾಗಗಳು ಡ್ಯಾಮೇಜ್ ಆಗಿವೆ. ಹೀಗಾಗಿ ಕಾರು ಸ್ವೀಕರಿಸಲು ಸೋನಾ ಸಾಗರ್ ನಿರಾಕರಿಸಿದ್ದಾರೆ. ಬಳಿಕ ಗ್ರಾಹಕರ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇತ್ತ ಡೀಲರ್ 50ಕ್ಕೂ ಹೆಚ್ಚು ಇ ಮೇಲ್ ಕಳುಹಿಸಿದ್ದಾರೆ. ಪೂರಕ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ, ಡೀಲರ್ ಬಳಿಯಿಂದ ಯಾವುದೇ ತಪ್ಪಾಗಿಲ್ಲ ಎಂಬುದನ್ನು ವಿವರಿಸುವು ಪ್ರಯತ್ನ ಮಾಡಿದ್ದಾರೆ. ಆದರೆ ಇದ್ಯಾವುದು ಕೇಳದ ವಕೀಲೆ ಸೋನಾ ಸಾಗರ್ ತಮ್ಮ ವಾದ ಮುಂದುವರಿಸಿದ್ದರು. ಕಳೆದೆರಡು ವರ್ಷದಿಂದ ಪ್ರಕರಣ ವಿಚಾರಣೆ ನಡೆಯುತ್ತಲೇ ಇತ್ತು.

ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಗ್ರಾಹಕರ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ. ಡೀಲರ್ ಕಡೆಯಿಂದ ಯಾವುದೇ ತಪ್ಪಾಗಿಲ್ಲ ಎಂದು ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ಸರ್ವೀಸ್ ಚಾರ್ಜ್ ಹಾಗೂ 910 ದಿನ ಟಾಟಾ ನ್ಯಾನೋ ಕಾರನ್ನು ಡೀಲರ್ ಬಳಿ ಪಾರ್ಕ್ ಮಾಡಿದ ಕಾರಣಕ್ಕೆ  91,000 ರೂಪಾಯಿ ದಂಡ ವಿಧಿಸಿದೆ

click me!